CrimeNEWSನಮ್ಮರಾಜ್ಯ

ಈಗ ನಿಮ್ಮ ವಾಹನಗಳು ಕಳುವಾದರೆ ಪೊಲೀಸ್‌ ಠಾಣೆಗೆ ಹೋಗುವ ಅಗತ್ಯವಿಲ್ಲ!

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು : ಇನ್ನು ಮುಂದೆ ನಿಮ್ಮ ವಾಹನಗಳು ಕಳುವಾದರೆ ನೀವು ಪೊಲೀಸ್‌ ಠಾಣೆಗೆ ಹೋಗುವ ಅಗತ್ಯವಿಲ್ಲ. ಕುಂತಲ್ಲೇ ಆನ್‌ಲೈನ್‌ ಮೂಲಕ ಕಳವುವಾದ ಬಗ್ಗೆ ದೂರು ದಾಖಲಿಸಲು ಪೊಲೀಸ್‌ ಇಲಾಖೆ ವ್ಯವಸ್ಥೆ ಮಾಡಿದೆ.

ಅಷ್ಟೇ ಅಲ್ಲ ನೀವು ದಾಖಲಿಸಿದ ದೂರಿಗೆ ಪ್ರತಿಯಾಗಿ ‘ಇ-ಎಫ್‌ಐಆರ್’ ಒದಗಿಸಿ ತನಿಖೆ ಚುರುಕುಗೊಳಿಸುವ ವ್ಯವಸ್ಥೆಯನ್ನು ಜಾರಿಗೊಳಿಸಿದೆ.

ಹೌದು! ಸಾರ್ವಜನಿಕರ ವಾಹನಗಳು ಕಳುವಾದ ಸಂದರ್ಭದಲ್ಲಿ ತುರ್ತಾಗಿ ಆನ್‌ಲೈನ್ ಮೂಲಕ ದೂರು ದಾಖಲಿಸಲು ಅವಕಾಶ ಕಲ್ಪಿಸಿರುವ ಪೊಲೀಸ್‌ ಇಲಾಖೆ, ಆ ದೂರುಗಳಿಗೆ ಪ್ರತಿಯಾಗಿ ‘ಇ-ಎಫ್‌ಐಆರ್’ ಒದಗಿಸಿ ತನಿಖೆ ಚುರುಕುಗೊಳಿಸುವ ವ್ಯವಸ್ಥೆಯನ್ನು ಜಾರಿಗೆ ತಂದಿದೆ.

ರಾಜಧಾನಿ ಬೆಂಗಳೂರು ಹಾಗೂ ವಿವಿಧ ಜಿಲ್ಲೆಗಳಲ್ಲಿ ವಾಹನಗಳ ಕಳ್ಳತನ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಹೀಗಾಗಿ ವಾಹನಗಳ ಮಾಲೀಕರು ಠಾಣೆಗೆ ಅಲೆದಾಡಿ ದೂರು ದಾಖಲಿಸುತ್ತಿದ್ದಾರೆ. ಅದನ್ನು ಸರಳೀಕರಣ ಮಾಡಲು ದ್ವಿಚಕ್ರ ವಾಹನ, ಕಾರು, ಆಟೊ, ಸರಕು ಸಾಗಣೆ ವಾಹನಗಳು ಕಳುವಾದಾಗ ಆನ್‌ಲೈನ್‌ ಮೂಲಕ ದೂರು ನೀಡುವ ವ್ಯವಸ್ಥೆ ಜಾರಿಗೆ ತಂದಿದ್ದು, ರಾಜ್ಯೋತ್ಸವ ದಿನವಾದ ಮಂಗಳವಾರ ಈ ವ್ಯವಸ್ಥೆಗೆ ಅಧಿಕೃತ ಚಾಲನೆ ನೀಡಲಾಗಿದೆ.

ಕೆಲವೆಡೆ ಪ್ರಕರಣ ದಾಖಲಿಸುವ ಪ್ರಕ್ರಿಯೆ ವಿಳಂಬವಾಗುತ್ತಿದ್ದು, ಇದರಿಂದಾಗಿ ಪೊಲೀಸ್ ಇಲಾಖೆ ಬಗ್ಗೆ ಜನರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಇದಕ್ಕೆ ಪರಿಹಾರ ಕಂಡು ಕೊಳ್ಳುವುದಕ್ಕಾಗಿ ಪೊಲೀಸರು, ಆನ್‌ಲೈನ್ ವ್ಯವಸ್ಥೆ ಮೊರೆಹೋಗಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್, ‘ಸಾರ್ವಜನಿಕರ ವಾಹನಗಳು ಕಳುವಾದರೆ, ಎಫ್‌ಐಆರ್ ದಾಖಲಿಸುವುದು ಇನ್ನು ಮುಂದೆ ಸುಲಭವಾಗಲಿದೆ. ಜನರು ಆನ್‌ಲೈನ್ ಮೂಲಕ ದೂರು ನೀಡಿದರೆ, ಸಂಬಂಧಪಟ್ಟ ಠಾಣೆ ಪೊಲೀಸರು ಕ್ರಮ ಕೈಗೊಳ್ಳಲಿದ್ದಾರೆ ಎಂದು ವಿವರಿಸಿದ್ದಾರೆ.

‘ಸಾರ್ವಜನಿಕ ಸೇವಾ ಕೇಂದ್ರ ವ್ಯವಸ್ಥೆ ಮೂಲಕ ಆನ್‌ಲೈನ್ ದೂರು ಸ್ವೀಕಾರ ಪ್ರಕ್ರಿಯೆ ನಡೆಯಲಿದೆ. ವಾಹನಗಳ ಮಾಲೀಕರು ಠಾಣೆಗಳಿಗೆ ಅಲೆಯುವುದನ್ನು ತಪ್ಪಿಸುವುದು ಈ ವ್ಯವಸ್ಥೆಯ ಗುರಿಯಾಗಿದೆ’ ಎಂದು ತಿಳಿಸಿದರು.

ದೂರು ದಾಖಲಿಸುವುದು ಹೇಗೆ?: ಕರ್ನಾಟಕ ಪೊಲೀಸ್ ಇಲಾಖೆಯ  https://ksp.karnataka.gov.in/ ಜಾಲತಾಣಕ್ಕೆ ಭೇಟಿ ನೀಡಬೇಕು.

ಜಾಲತಾಣದ ಎಡಬದಿಯ ಆಯ್ಕೆಯಲ್ಲಿರುವ ‘ನಾಗರಿಕ ಕೇಂದ್ರಿತ ತಾಣ’ ಆಯ್ಕೆಯನ್ನು ಕ್ಲಿಕ್ ಮಾಡಬೇಕು. ನಂತರ, ‘ನಾಗರಿಕ ಕೇಂದ್ರಿತ ಪೋರ್ಟಲ್ ಕರ್ನಾಟಕ ರಾಜ್ಯ ಪೊಲೀಸ್’ ಪುಟ ತೆರೆದುಕೊಳ್ಳುತ್ತದೆ. ಬಳಿಕ, ಅಲ್ಲಿಯ ಲಾಗಿನ್ ಬಟನ್ ಒತ್ತಬೇಕು.

‘ನ್ಯೂ ಟು ಎಸ್‌ಎಸ್‌ಒ’ ಕ್ಲಿಕ್ ಮಾಡಿ, ಆಧಾರ್ ಸಂಖ್ಯೆ ಬಳಸಿಕೊಂಡು ಹೊಸ ಯೂಸರ್ ಐಡಿ ಹಾಗೂ ಪಾಸ್‌ವರ್ಡ್ ಸೃಷ್ಟಿಸಬೇಕು. ನಂತರ, ಕಳವಾದ ವಾಹನದ ವಿವರ ದಾಖಲಿಸಿ ದೂರು ಸಲ್ಲಿಸಬೇಕು. ಇದಾದ ಬಳಿಕ, ಸಂಬಂಧಪಟ್ಟ ಠಾಣೆಗೆ ಸಂದೇಶ ರವಾನೆಯಾಗಲಿದೆ. ನಂತರವೇ, ಸಂಬಂಧಪಟ್ಟ ಠಾಣೆಗಳ ತನಿಖಾಧಿಕಾರಿ ಸಹಿ ಸಮೇತ ‘ಇ-ಎಫ್‌ಐಆರ್’ ಪ್ರತಿ ಲಭ್ಯವಾಗಲಿದೆ.

ಈ ಎಫ್‌ಐಆರ್ ಪ್ರತಿಗೆ ಕಾನೂನುಬದ್ಧ ಮಾನ್ಯತೆ ಇದ್ದು, ಇದರಲ್ಲಿರುವ ಸಾರಾಂಶವನ್ನು ಆಧರಿಸಿ ಪೊಲೀಸರು ತನಿಖೆ ಮುಂದುವರಿಸಲಿದ್ದಾರೆ. ಕಳವಾದ ವಾಹನಗಳು ಪತ್ತೆಯಾದರೆ ಮಾಲೀಕರಿಗೆ ಪೊಲೀಸರೇ ಮಾಹಿತಿ ನೀಡಲಿದ್ದಾರೆ.

Leave a Reply

error: Content is protected !!

Discover more from VIJAYAPATHA.IN

Subscribe now to keep reading and get access to the full archive.

Continue reading

LATEST
ನಾನು ಕಾದು ಕುಳಿತಿದ್ದರೂ ಬಸ್‌ ನಿಲ್ಲಿಸಿಲ್ಲ - ಚಾಲಕ, ಕಂಡಕ್ಟರ್‌ ತಿಂಗಳ ಸಂಬಳ ನನಗೆ ನಷ್ಟಪರಿಹಾರ ಕೊಡಿ: ವಕೀಲನ ಒತ್ತ... ಕೆಎಂಎಫ್ ಸಿಬ್ಬಂದಿಗೆ 7ನೇ ವೇತನ ಆಯೋಗ ಜಾರಿ- 2024ರ ಆ.1ರಿಂದಲೇ ಪೂರ್ವಾನ್ವಯ KSRTC ಏಕಸ್ವಾಮ್ಯಕ್ಕೆ ಮೂಗುದಾರ ಹಾಕಿ- ಸರ್ಕಾರದ ಕಾಯ್ದೆ ಸರಿ ಎಂದ ಕೋರ್ಟ್ ಸ್ಮಶಾನ ಜಾಗ ಭೂಗಳ್ಳನಿಗೆ ಬಿಟ್ಟುಕೊಡಲು ಟಿಪ್ಪಣಿ ಮಂಡಿಸಿರುವ ಭ್ರಷ್ಟ ಅಧಿಕಾರಿಗಳು: ಎನ್.ಆರ್.ರಮೇಶ್ ಆರೋಪ ಕ್ರೀಡಾಪಟುಗಳಿಗೆ ಕೊಡುವ ಏಕಲವ್ಯ ಪ್ರಶಸ್ತಿ ಮುಂದುವರಿಸಲಿ: ಶೋಭಾ ನಾರಾಯಣ್ ಬಿಡದಿಯಿಂದ ಹೆದ್ದಾರಿಯಲ್ಲೇ ಮುಂದೆ ಬಂದರೆ ನಿಮಗೆ ಟೋಲ್‌ ಬರೆ ಗ್ಯಾರಂಟಿ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಹೊತ್ತಿ ಉರಿದ ಸ್ಕಾರ್ಪಿಯೋ ಕಾರು KSRTC ಕನಕಪುರ ಬಸ್‌ ನಿಲ್ದಾಣದಲ್ಲಿ ವಿಕಲ ಚೇತನರಿಂದ ₹700 ವಸೂಲಿ, ಕಂಡಕ್ಟರ್ಸ್‌ ಕೊಡಬೇಕು ₹10 : ಟಿಸಿಗೆ ಡಿಎಂ ಸಾಥ್... ಹೆಚ್ಚುವರಿ ಬಡ್ಡಿ ವಿಧಿಸುವ ನೋಂದಾಯಿತ ಲೇವಾದೇವಿಸಂಸ್ಥೆಗಳ ವಿರುದ್ಧ ದೂರು ನೀಡಿ KSRTC: 38+13 ತಿಂಗಳ ವೇತನ ಹಿಂಬಾಕಿ ಯಾವಾಗ ಬರುತ್ತದೆ ಒಕ್ಕೂಟದ ವಿರುದ್ಧ ನೌಕರರು ಕಿಡಿ