ಮೈಸೂರು: “ಕನ್ನಡಿಗರು ನಪುಂಸಕರು” ಎಂದು ಹೇಳುವ ಮೂಲಕ ಸಾಹಿತಿ ಪ್ರೊ. ಕೆ.ಎಸ್. ಭಗವಾನ್ ಮತ್ತೊಂದು ವಿವಾದ ಸೃಷ್ಟಿಸಿದ್ದಾರೆ. ಆದರೆ ಅವರು ಹೇಳಿರುವುದರ ಬಗ್ಗೆ ಗಂಭೀರವಾಗಿ ಪ್ರತಿಯೊಬ್ಬ ಕನ್ನಡಿಗನೂ ಚಿಂತಿಸಬೇಕಿದೆ.
ಮೈಸೂರು ಜಿಲ್ಲಾ ಕನ್ನಡ ಹೋರಾಟಗಾರರ ಸಂಘ ಸೋಮವಾರ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿ ಬ್ಯಾಂಕಿಂಗ್ ಪರೀಕ್ಷೆಗಳನ್ನು ಕನ್ನಡದಲ್ಲಿಯೂ ನಡೆಸಬೇಕು ಎಂದು ಆಗ್ರಹಿಸಿತ್ತು. ಈ ವೇಳೆ ಮಾತನಾಡಿದ ಪ್ರೊ. ಭಗವಾನ್ “ತಮಿಳರು ಹೋರಾಡಿ ಈ ವಿಚಾರದಲ್ಲಿ ಸಫಲರಾದರು. ಆದರೆ ಕನ್ನಡಿಗರು ನಪುಂಸಕರು, ಈ ವಿಚಾರದಲ್ಲಿ ಒಗ್ಗಟ್ಟಿಲ್ಲ. ” ಎಂದಿದ್ದಾರೆ. ಅಲ್ಲದೆ ಮೇಕೆದಾಟು ವಿಚಾರವಾಗಿ ಕೂಡ ತಮಿಳಿಗರದ್ದೇ ಮೇಲುಗೈ ಆಗಿದೆ ಎಂದು ಆರೋಪಿಸಿದರು.
”ಕನ್ನಡ ಭಾಷೆಯಲ್ಲಿ ಬ್ಯಾಂಕಿಂಗ್ ಪರೀಕ್ಷೆ ನಡೆಸಬೇಕು ಎನ್ನುವ ಬಗ್ಗೆ ಇದುವರೆಗೆ ಸಶಕ್ತ ಹೋರಾಟ ನಡೆಸಿಲ್ಲ. ಆ ರೀತಿಯಲ್ಲಿ ಕನ್ನಡಿಗರು ನಪುಂಸಕರು”ಎಂದು ಭಗವಾನ್ ಹೇಳಿದ್ದಾರೆ. ಅಲ್ಲದೆ ಮೇಕೆದಾಟು ವಿಷಯದಲ್ಲಿ ತಮಿಳುನಾಡಿನ ಎಲ್ಲಾ ರಾಜಕೀಯ ಪಕ್ಷಗಳೂ ಒಗ್ಗಟ್ಟಾಗಿ ಕೇಂದ್ರಕ್ಕೆ ಮನವಿ ಸಲ್ಲಿಸಿವೆ. ಆದರೆ ನಮ್ಮಲ್ಲಿ ಒಗ್ಗಟ್ಟಿಲ್ಲ., ರಾಜಕೀಯ ಪಕ್ಷಗಳು ಒಂದಾಗಿಲ್ಲ ಎಂದು ಕಿಡಿಕಾರಿದ್ದಾರೆ.
![](https://vijayapatha.in/wp-content/uploads/2024/02/QR-Code-VP-1-1-300x62.png)