NEWSದೇಶ-ವಿದೇಶನಮ್ಮರಾಜ್ಯ

ಡಿ.7ರಿಂದ 24ರವರೆಗೆ ದೇಶದ 78 ಲಕ್ಷ ಇಪಿಎಸ್ ಪಿಂಚಣಿದಾರರ ಬೃಹತ್‌ ಉಪವಾಸ ಸತ್ಯಾಗ್ರಹ

ವಿಜಯಪಥ ಸಮಗ್ರ ಸುದ್ದಿ

ನ್ಯೂಡೆಲ್ಲಿ: ದೇಶದ 78 ಲಕ್ಷ ಇಪಿಎಸ್ ವೃದ್ಧ ಪಿಂಚಣಿ ದಾರರಿಂದ ದೆಹಲಿ ಚಲೋ ಆಂದೋಲನವನ್ನು ಡಿಸೆಂಬರ್‌ 7ರಂದು ಹಮ್ಮಿಕೊಳ್ಳಲಾಗಿದೆ. ಪಿಂಚಣಿದಾರರ ಬೃಹತ್ ಸಂಘಟನೆಯಾದ ಕಮಾಂಡರ್ ಅಶೋಕ್ ರಾವುತ್ ಅವರ ನೇತೃತ್ವದ ರಾಷ್ಟ್ರೀಯ ಸಂಘರ್ಷ ಸಮಿತಿಯ ಇಪಿಎಸ್ 95 ಪಿಂಚಣಿದಾರರು “ದಿಲ್ಲಿ ಚಲೋ” ಕಾರ್ಯಕ್ರಮ ಹಮ್ಮಿಕೊಂಡಿದ್ದು ದೇಶದ ಎಲ್ಲ್‌ ರಾಜ್ಯಗಳ ನಿವೃತ್ತರು ಇದರಲ್ಲಿ ಭಾಗವಹಿಸಬೇಕು ಎಂದು ಕರೆ ನೀಡಿದ್ದಾರೆ.

ಡಿಸೆಂಬರ್ 7 ರಂದು ರಾಮಲೀಲಾ ಮೈದಾನದಲ್ಲಿ ಬೆಳಗ್ಗೆ 10 ಗಂಟೆಗೆ ಸಮಾವೇಶಗೊಂಡು ಅಲ್ಲಿಂದ ಸಂಸದ್‌ ಭವನದವರೆಗೆ ಲಾಂಗ್ ಮಾರ್ಚ್‌ ಮಾಡಲಿದ್ದಾರೆ. ಬಳಿಕ ಅಂದರೆ ಮರುದಿನ 8-12-2023 ರಿಂದ 24-12-2023 ರವರೆಗೆ ದೆಹಲಿಯ ಜಂತರ್ ಮಂತರ್‌ನಲ್ಲಿ ರಾಜ್ಯವಾರು ಸರತಿ ಉಪವಾಸ ಸತ್ಯಾಗ್ರಹ ನಡೆಸಲಿದ್ದಾರೆ.

ಇನ್ನು ಸರ್ಕಾರ ಇದಕ್ಕೂ ಸ್ಪಂದಿಸದಿದ್ದರೆ ಬರುವ ಲೋಕಸಭೆ ಚುಣಾವಣೆಯಲ್ಲಿ ಮತದಾನ ಬಹಿಷ್ಕಾರ, (78 ಲಕ್ಷ ಪಿಂಚಣಿ ದಾರರ ಕುಟುಂಬ ಸೇರಿ 8-10 ಕೋಟಿ ಮತದಾರರು ) ಮಾಡಲಾಗುವುದು. ಜತೆಗೆ ರಾಷ್ಟ್ರ ಪತಿಗಳಿಗೆ ದಯಾ ಮರಣ ಕೋರಿ ಅರ್ಜಿ ಸಲ್ಲಿಸಲು ಸಿದ್ಧರಾಗಿದ್ದೇವೆ. ಇದು ಬೃಹತ್ ಪ್ರಜಾಪ್ರಭುತ್ವ ದೇಶವಾದ ಭಾರತಕ್ಕೆ ಅಳಿಸಲಾಗದ ಕಪ್ಪು ಚುಕ್ಕೆಯಾಗಲಿದೆ ಎಂದು ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

500-2000 ಪಿಂಚಣಿಯಿಂದ ಜೀವನ ಸಾಧ್ಯವೇ?: 60 ರಿಂದ 85 ವಯಸ್ಸಿನ ವೃದ್ಧ ಪಿಂಚಣಿ ದಾರರು ನಮ್ಮ ಸರ್ವೀಸ್‌ನಲ್ಲಿ ನಮ್ಮದೇ ಹಣ ತೊಡಗಿಸಿ ನಿವೃತ್ತರಾಗಿದ್ದು ನಮಗೆ ಈಗ ಕೇವಲ 500-2000 ಪಿಂಚಣಿ ಫಿಕ್ಸ್ ಮಾಡಲಾಗಿದೆ. ಇದರಿಂದ ದಿನಂಪ್ರತಿ ಗಗನಕ್ಕೆ ಏರುತ್ತಿರುವ ದಿನಬಳಕೆ ವಸ್ತುಗಳನ್ನು ಕೊಳ್ಳಲು ಸಾಧ್ಯವಾಗುತ್ತಿಲ್ಲ. ನಮಗೆ ಜೀವನ ನಡೆಸುವುದಾದರು ಹೇಗೆ ಎಂಬ ಆತಂಕವಾಗುತ್ತಿದೆ.

ಹೀಗಾಗಿ ದೇಶದ ಕಾರ್ಮಿಕರ ಭವಿಷ್ಯ ರೂಪಿಸುವ ಸರ್ಕಾರ ಹಾಗೂ ಕಾರ್ಮಿಕರ/‌ ನೌಕರರ ಭವಿಷ್ಯ ರೂಪಿಸಲೆಂದೇ ಹುಟ್ಟಿದ ಭವಿಷ್ಯ ನಿಧಿ ನ್ಯಾಸ ಮಂಡಳಿಗೆ ಇಪಿಎಸ್ 95 ಪಿಂಚಣಿ ಯೋಜನೆ ಕಾನೂನು ಮಾಡುವಾಗ, ನಿವೃತ್ತರಿಗೆ ನೀಡುವ ಪಿಂಚಣಿ ಕಾಲಕಾಲಕ್ಕೆ ಪರಿಷ್ಕೃತ ವಾಗುವಂತಿರಬೇಕು ಎಂಬ ಕನಿಷ್ಠ ಚಿಂತನೆಯೂ ಇರಲಿಲ್ಲವೇ?. ನಿವೃತ್ತರನ್ನು ಶೋಷಣೆ ಮಾಡಲೆಂದೇ ಸರ್ಕಾರ/ ಭ.ನಿ.ನ್ಯಾಸ ಮಂಡಳಿ ಈ ಇಪಿಎಸ್ 95 ಪಿಂಚಣಿ ಯೋಜನೆ ಜಾರಿಗೆ ತಂದಿದೆಯಾ?

1971 ರಲ್ಲಿ ಭವಿಷ್ಯ ನಿಧಿಗೆ ಅಂತರ್ಗತವಾಗಿ ಕುಟುಂಬ ಪಿಂಚಣಿ ಯೋಜನೆ ಜಾರಿಗೆ ತಂದು ಅಂದಿನಿಂದ ಕಾರ್ಮಿಕ/ ನೌಕರನಿಂದ ವಂತಿಗೆ ಪಡೆದಿದ್ದು, ನಂತರ 16/11/1995 ರಿಂದ ಇಪಿಎಸ್ 95 ಯೋಜನೆ ಜಾರಿಗೆ ತರಲಾಗಿದೆ. ಈ ಯೋಜನೆ ರೂಪಿಸಿದವರಿಗೆ ಈ ನೀಡುವ ಪಿಂಚಣಿ ಕಾಲ ಕಾಲಕ್ಕೆ ಪರಿಷ್ಕೃತ ವಾಗಬೇಕೆಂಬ ಕನಿಷ್ಠ ಜ್ಞಾನ ಇರಬೇಕಾಗಿತ್ತಲ್ಲವೇ?

ಯೋಜನೆ ಜಾರಿಗೆ ಬಂದ ನಂತರ ಕಾರ್ಮಿಕ / ನೌಕರ ನಿವೃತ್ತನಾದಾಗ ಅವನಿಗೆ 150, 200 ,500, 1000 ಹಾಗೂ 2000 ಪಿಂಚಣಿ ಸಿಗುತ್ತಿದೆ. ಈ ಹಣದಿಂದ ವಯೋವೃದ್ಧನಿಗೆ ಜೀವನ ಸಾಗಿಸಲು ಅವನ ವಯಸ್ಸು, ದಿನಸಿಗಳ ಬೆಲೆ ನಿಂತುಕೊಂಡಿರುತ್ತದೆಯಾ, ವರ್ಷದಿಂದ ವರ್ಷಕ್ಕೆ ಪಿಂಚಣಿ ಪರಿಷ್ಕೃತ ವಾಗಬೇಕಲ್ಲವೇ? ಕೇಂದ್ರ ಸರ್ಕಾರ/ ರಾಜ್ಯ ಸರ್ಕಾರಗಳು ನೌಕರರಿಗೆ, ಮುಖ್ಯವಾಗಿ ಸಂಸದ, ಶಾಸಕ ನಾಗುವ ( ಒಂದೇ ದಿನ ಅಥವಾ ಸಂಸದ/ ಶಾಸಕ ಅವಧಿಗೆ) ರಾಜಕಾರಣಿ ಒಂದು ಪೈಸೇನು ವಂತಿಗೆ ನೀಡದಿದ್ದರೂ ಅವರ ಪಿಂಚಣಿ ಪರಿಷ್ಕೃತ ವಾಗುತ್ತಿಲ್ಲವೇ?

ವಿಪರ್ಯಾಸ ವೆಂದರೆ ಭ.ನಿ.ನ್ಯಾಸ ಮಂಡಳಿ ನೌಕರರಿಗೆ ಕೇಂದ್ರ ಸರ್ಕಾರದಂತೆ ಪಿಂಚಣಿ ಹಾಗೂ ವೈದ್ಯಕೀಯ ಸವಲತ್ತುಗಳನ್ನು ಪಡೆಯುತ್ತಾರೆ. ದೇಶದ ಕಟ್ಟಾಳು ಕಾರ್ಮಿಕ/ ನೌಕರನ ಈ ಕನಿಷ್ಠ ಪಿಂಚಣಿ ಪರಿಸ್ಥಿತಿ ನಿಭಾಯಿಸುವುದು ದೇಶದ ಪ್ರಜಾಪ್ರಭುತ್ವ ಸರ್ಕಾರದ ಜವಾಬ್ದಾರಿ ಅಲ್ಲವೇ?‌ ಕಾರ್ಮಿಕರ ಶೋಷಣೆಗೆಂದೇ ಸರ್ಕಾರ ಭ.ನಿ.ನ್ಯಾಸ ಮಂಡಳಿ ಜಂಟಿಯಾಗಿ‌ ಇಂಥ ಭೀಕರ ಪರಿಸ್ಥಿತಿ ಉಂಟು ಮಾಡಿದೆಯೇ?

ಈ ಯೋಜನೆ ಜಾರಿಗೆ ತಂದ ಮೇಲೆ ಅದರ ಸಂಪೂರ್ಣ ಮಾಹಿತಿ ಭ.ನಿ.ಚಂದಾದಾರನಿಗೆ ನೀಡುವ ಜವಾಬ್ದಾರಿಯನ್ನು ನಿರ್ವಹಿಸದೇ ತನ್ನದೇ ಅನುಕೂಲಕ್ಕಾಗಿ ತಾನೇ ಮಾಡಿಕೊಂಡಿರುವ ಪಿಂಚಣಿ ಕಾನೂನುಗಳನ್ನು ಏಕಪಕ್ಷೀಯವಾಗಿ ತಿದ್ದುಪಡಿ ಮಾಡಿಕೊಂಡು ಪಿಂಚಣಿದಾರರ ಶೋಷಣೆಯನ್ನು ನಿರಂತರವಾಗಿ ಮಾಡುತ್ತಿದ್ದರೇ ಸರ್ಕಾರಕ್ಕೆ ಅದರ ಕಾರ್ಯ ವೈಖರಿ ಪರಿಶೀಲಿಸುವ ಪ್ರಶ್ನಿಸುವ ಧೈರ್ಯವೂ ಇಲ್ಲವೇ?

ಬಡ ಕಾರ್ಮಿಕ / ನೌಕರ 30/35 ವರ್ಷ ಬೆವರಿಳಿಸಿ ದುಡಿದು ಕೂಡಿಟ್ಟ ಲಕ್ಷ ಲಕ್ಷ ಕೋಟಿ ಹಣ ಬೇರೆ ಯೋಜನೆಗಳಿಗೆ ಬಳಸಿಕೊಂಡು ಪಿಂಚಣಿದಾರರ ಕನಿಷ್ಠ ಪಿಂಚಣಿ ಹೆಚ್ಚಳ ಮಾಡಲು ಹಣ ಇಲ್ಲ ಅಂತಾ ಹೇಳುವುದು ದೇಶದ ವೃದ್ಧ ಇಪಿಎಸ್ 95 ಪಿಂಚಣಿ ದಾರನಿಗೆ ಮಾಡುತ್ತಿರುವ ಘೋರ ಅನ್ಯಾಯವಲ್ಲವೇ?.

ದೇಶವನ್ನು ಆಳುತ್ತಿರುವ ಒಂದೇ ಪಕ್ಷದ ಸರ್ಕಾರ ಒಬ್ಬನೇ ಪ್ರಧಾನಿ, ಅದೇ ಮಂತ್ರಿಗಳು, ಅದೇ ಬಹುತೇಕ ಎಲ್ಲ ಎಂಪಿಗಳು,‌ ಸತತವಾಗಿ 8/10 ವರ್ಷ ದಿಂದ ಹೋರಾಟ ಮಾಡುತ್ತಿರುವ ಇಪಿಎಸ್ 95 ಪಿಂಚಣಿ ದಾರರ ಕನಿಷ್ಠ ಪಿಂಚಣಿ ಬೇಡಿಕೆಯನ್ನು ಕೇಳಿಯೂ ಕೇಳದಂತಿದ್ದರೆ ಈ ವಯೋ ವೃದ್ಧರು ಏನು ಮಾಡಬೇಕು? ಸ್ವತಃ ಪ್ರಧಾನಿ ಯವರೇ ಬೇಡಿಕೆ ಈಡೇರಿಸುತ್ತೇನೆ ಎಂದು ಮುಖತಃ ಭರವಸೆ ಕೊಟ್ಟು 3 ವರ್ಷಗಳಾಗುತ್ತಿದೆ. ಎಲ್ಲ ಕೇಂದ್ರ ಮಂತ್ರಿಗಳು, ಬಹುತೇಕ ಎಲ್ಲ ಸಂಸದರಿಗೆ ಮನವಿ ನೀಡಿ ವಿನಂತಿಸಲಾಗಿದೆ.

ಹೀಗಿರುವಾಗ ಬೇಡಿಕೆ ಈಡೇರಿಕೆಯ ಪಿಂಚಣಿದಾರ ಯಾವ ನಿರ್ಣಯ ತೆಗೆದುಕೊಳ್ಳಬೇಕು. ದೇಹದಲ್ಲಿ ಶಕ್ತಿ ಇರುವಾಗ ದೇಶ ಕಟ್ಟುವಲ್ಲಿ ಶ್ರಮವಹಿಸಿ ದುಡಿದು, ನಿವೃತ್ತಿ ವಯಸ್ಸು ತಲುಪಿದಾಗ ನಮಗೆ ಜೀವಿಸಲು ಹಕ್ಕಿಲ್ಲವೇ? ನಾವು ನಿಷ್ಪ್ರಯೋಜಕರೆಂದು ಕೊಂಡಿರಾ ಹೇಗೆ? ಈ ಎಲ್ಲವನ್ನೂ ಸಹಿಸಿಕೊಳ್ಳಲು ಎಷ್ಟು ವರ್ಷಗಳು ಬೇಕು. ಒಂದು ಅಂದಾಜಿನಂತೆ ದೇಶಾದ್ಯಂತ ದಿನಕ್ಕೆ 200 ಪಿಂಚಣಿ ದಾರರು ಇಹಲೋಕ ಯಾತ್ರೆ ಪೂರೈಸುತ್ತಿದ್ದಾರೆ. ಹೀಗೇ ಸಾಯಲಿ ಅಂತಾ ಸರ್ಕಾರ ಬೇಡಿಕೆಗಳ ಈಡೇರಿಕೆಗೆ ವಿಳಂಬ ಮಾಡುತ್ತಿದೆಯೇ?

ಈ ಎಲ್ಲವನ್ನು ಗಮನಿಸಿ ನಾವು ಅಂತಿಮವಾಗಿ ಪಿಂಚಣಿದಾರರ ಬೃಹತ್ ಸಂಘಟನೆಯಾದ ಕಮಾಂಡರ್ ಅಶೋಕ್ ರಾವುತ್ ಅವರ ನೇತೃತ್ವದ ರಾಷ್ಟ್ರೀಯ ಸಂಘರ್ಷ ಸಮಿತಿಯ ಇಪಿಎಸ್ 95 ಪಿಂಚಣಿದಾರರು “ದಿಲ್ಲಿ ಚಲೋ” ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ ಇದರಲ್ಲಿ ಪ್ರತಿಯೊಬ್ಬರೂ ಭಾಗವಹಿಸುವ ಮೂಲಕ ನಮ್ಮ ಹಕ್ಕನ್ನು ಪಡೆದುಕೊಳ್ಳೋಣ ಎಂದು ಕರೆ ನೀಡಿದ್ದಾರೆ.

Leave a Reply

error: Content is protected !!

Discover more from VIJAYAPATHA.IN

Subscribe now to keep reading and get access to the full archive.

Continue reading

LATEST
ಬಿಡದಿಯಿಂದ ಹೆದ್ದಾರಿಯಲ್ಲೇ ಮುಂದೆ ಬಂದರೆ ನಿಮಗೆ ಟೋಲ್‌ ಬರೆ ಗ್ಯಾರಂಟಿ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಹೊತ್ತಿ ಉರಿದ ಸ್ಕಾರ್ಪಿಯೋ ಕಾರು KSRTC ಕನಕಪುರ ಬಸ್‌ ನಿಲ್ದಾಣದಲ್ಲಿ ವಿಕಲ ಚೇತನರಿಂದ ₹700 ವಸೂಲಿ, ಕಂಡಕ್ಟರ್ಸ್‌ ಕೊಡಬೇಕು ₹10 : ಟಿಸಿಗೆ ಡಿಎಂ ಸಾಥ್... ಹೆಚ್ಚುವರಿ ಬಡ್ಡಿ ವಿಧಿಸುವ ನೋಂದಾಯಿತ ಲೇವಾದೇವಿಸಂಸ್ಥೆಗಳ ವಿರುದ್ಧ ದೂರು ನೀಡಿ KSRTC: 38+13 ತಿಂಗಳ ವೇತನ ಹಿಂಬಾಕಿ ಯಾವಾಗ ಬರುತ್ತದೆ ಒಕ್ಕೂಟದ ವಿರುದ್ಧ ನೌಕರರು ಕಿಡಿ BMTC: ಅಪಘಾತದಲ್ಲಿ ಮೃತಪಟ್ಟ ನೌಕರರ ಕುಟುಂಬಕ್ಕೆ ₹1 ಕೋಟಿ ಪರಿಹಾರ ಚೆಕ್‌ ವಿತರಿಸಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸಾರಿಗೆ ನಿವೃತ್ತ ನೌಕರರಿಗೆ ಮತ್ತೊಮ್ಮೆ ಮೊಗದೊಮ್ಮೆ ನಿರಾಸೆ: ಭಾರಿ ಆಕ್ರೋಶಗೊಂಡ EPS ನಿವೃತ್ತರು ಕಾರು ಡೋರ್‌ಗೆ ಬೈಕ್‌ ಗುದ್ದಿ ಕೆಳಗೆ ಬಿದ್ದ ಮಹಿಳೆ ಮೇಲೆ ಹರಿದ ಬಿಎಂಟಿಸಿ ಬಸ್‌ ನಾಟಿ ಕೋಳಿ ಸಾರಿನ ಜತೆ ರಾಗಿಮುದ್ದೆ ನುಂಗಿದವರಿಗೆ ಗೊತ್ತು ಅದರ ಗಮ್ಮತ್ತು ನೀವು ಗಬಗಬನೆ ಊಟ ಮಾಡುವವರಿದ್ದೀರಾ? ಹಾಗಿದ್ದರೆ ನಿಮಗೆ ಈ ಸಮಸ್ಯೆ ಕಾಡದಿರದು!