VIJAYAPATHA.IN > ವಿಜಯಪಥ > NEWS > Crime > ದಾಖಲೆ ಇಲ್ಲದೆ ಸಾಗಿಸುತ್ತಿದ್ದ ₹18 ಲಕ್ಷ, ₹6 ಲಕ್ಷ ಮೌಲ್ಯದ ಬೆಳ್ಳಿ ನಾಣ್ಯಗಳ ಜಪ್ತಿ
ಬೀದರ್: ಹೈದರಾಬಾದ್‌ನಿಂದ ಬೀದರ್‌ಗೆ ದಾಖಲೆ ಇಲ್ಲದೆ ಸಾಗಿಸುತ್ತಿದ್ದ 18 ಲಕ್ಷ ರೂ. ಹಾಗೂ 6 ಲಕ್ಷ ರೂ. ಮೌಲ್ಯದ ಬೆಳ್ಳಿ ನಾಣ್ಯಗಳನ್ನು ಬೀದರ್ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಬೀದರ್ ಮತ್ತು ತೆಲಂಗಾಣ ಗಡಿಯ ಶಾಪೂರ್ ಗ್ರಾಮದ ಬಳಿಯ ಚೆಕ್ ಪೋಸ್ಟ್‌ನಲ್ಲಿ ಪೊಲೀಸರು ತಪಾಸಣೆ ನಡೆಸುತ್ತಿದ್ದ ವೇಳೆ ಕಾರಿನಲ್ಲಿ 18 ಲಕ್ಷ ರೂ. ಹಣ, 5 ಗ್ರಾಂನ 1,250 ನಾಣ್ಯಗಳು ಮತ್ತು 1 ಗ್ರಾಂನ 1,000 ಬೆಳ್ಳಿ ನಾಣ್ಯಗಳು ಪತ್ತೆಯಾಗಿವೆ.
ಯಾವುದೇ ದಾಖಲೆ ಇಲ್ಲದೆ ಸಾಗಿಸುತ್ತಿದ್ದ ಹಣದ ಜತೆಗೆ ಅಕ್ರಮ ಸಾಗಾಟ ಮಾಡಲು ಬಳಿಸಿದ್ದ ಕಾರು ಹಾಗೂ ಬೆಳ್ಳಿಯ ನಾಣ್ಯಗಳನ್ನು ವಶಕ್ಕೆ ಪಡೆದುಕೊಂಡ ಪೊಲೀಸರು ಮುಂದಿನ ಕ್ರಮ ಜರುಗಿಸಿದ್ದಾರೆ.
![](https://vijayapatha.in/wp-content/uploads/2024/02/QR-Code-VP-1-1-300x62.png)
Related
admin.savhn
Leave a reply