ಬೆಳಗಾವಿ: ನಗರದ ಕೇಂದ್ರ ಬಸ್ ನಿಲ್ದಾಣ ಮುಂಭಾಗದಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಬೈಕ್‌ನಲ್ಲಿ ಹೋಗುತ್ತಿದ್ದ ಮಹಿಳೆ ಮೃತಪಟ್ಟಿದ್ದಾರೆ.
ಧಾರವಾಡ ಮೂಲದ ವಿದ್ಯಾಶ್ರೀ (32) ಮೃತ ಮಹಿಳೆ. ನಗರದ ಕೇಂದ್ರ ಬಸ್ ನಿಲ್ದಾಣ ರಸ್ತೆ ಪಕ್ಕದಲ್ಲಿ ದಿನಸಿ ಹೊತ್ತು ಹೊರಟಿದ್ದ ವೃದ್ಧನಿಗೆ ಬೈಕ್ ಡಿಕ್ಕಿಯಾಗಿತ್ತು. ಈ ವೇಳೆ ವೃದ್ಧನ ಚೀಲಕ್ಕೆ ಬೈಕ್‌ನಲ್ಲಿ ಕುಳಿತಿದ್ದ ವಿದ್ಯಾಶ್ರೀ ಕೈ ತಾಗಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಇದೇ ವೇಳೆ ಬೈಕ್ ಹಿಂದಿನಿಂದ ಬರುತ್ತಿದ್ದ ಬಸ್ ಚಕ್ರದಡಿ ಬಿದ್ದು ಮಹಿಳೆ ಸ್ಥಳದಲ್ಲೇ ಅಸುನೀಗಿದ್ದಾರೆ.
ಅದೃಷ್ಟವಶಾತ್ ಎಂಬಂತೆ ಬೈಕ್ ಸವಾರ ಬಚಾವ್ ಆಗಿದ್ದಾರೆ. ತಲೆಗೆ ಹೆಲ್ಮೆಟ್ ಹಾಕಿದ್ದರಿಂದ ಬಸ್‌ನ ಚಕ್ರ ತಲೆಯ ಮೇಲೆ ಹರಿದಿದೆ. ಅದೃಷ್ಟವಶಾತ್ ಈ ಅಪಘಾತದಲ್ಲಿ ಬೈಕ್ ಸವಾರ ಬದುಕುಳಿದಿದ್ದಾರೆ.
ಸಂಬಂಧಿಕರ ಮನೆಗೆ ಹೋಗಿ ಬೈಕ್‌ನಲ್ಲಿ ವಿದ್ಯಾಶ್ರೀ ವಾಪಸ್ ತಮ್ಮೂರಿಗೆ ಹೋಗುತ್ತಿದ್ದ ಈ ಅವಘಡ ಸಂಭವಿಸಿದೆ. ಇದು ಎರಡು ದಿನದ ಹಿಂದೆ ನಡೆದ ಘಟನೆಯಾಘಿದ್ದು ತಡವಾಗಿ ಬೆಳಕಿಗೆ ಬಂದಿದೆ. ಮಾರ್ಕೆಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅವಘಡವಾಗಿದ್ದು ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
![](https://vijayapatha.in/wp-content/uploads/2024/02/QR-Code-VP-1-1-300x62.png)