NEWSನಮ್ಮಜಿಲ್ಲೆಮೈಸೂರು

ದಸರಾ ಮಹೋತ್ಸವ ಹಿನ್ನೆಲೆ:  ಮೇಯರ್  ಶಿವಕುಮಾರ್ ನಗರ ಪ್ರದಕ್ಷಿಣೆ

ವಿಜಯಪಥ ಸಮಗ್ರ ಸುದ್ದಿ

ಮೈಸೂರು: ನಾಡಹಬ್ಬ ದಸರಾ ಮಹೋತ್ಸವ ಪ್ರಾರಂಭಕ್ಕೆ ದಿನಗಣನೆ ಶುರುವಾಗುತ್ತಿದ್ದಂತೆ ರಾಜಮಾರ್ಗಗಳನ್ನು ಸಿಂಗರಿಸಿ ಸ್ವಚ್ಛವಾಗಿಡುವ ಕೆಲಸ ಶುರುವಾಗಿದ್ದು, ಮೇಯರ್ ಶಿವಕುಮಾರ್, ಆಯುಕ್ತ ಆಸಾದ್ ರೆಹಮಾನ್ ಷರೀಫ್ ಅಧಿಕಾರಿಗಳೊಂದಿಗೆ ರಾಜ ಮಾರ್ಗಗಳಲ್ಲಿ ಪ್ರದಕ್ಷಿಣೆ ಹಾಕಿ ಕಾಮಗಾರಿಗಳನ್ನು ವೀಕ್ಷಿಸಿ ಮಾಹಿತಿ ಪಡೆದಿದ್ದಾರೆ.

ನಗರಪಾಲಿಕೆಯ 10 ಕೋಟಿ ರೂ ಅನುದಾನದಲ್ಲಿ ನಡೆಯುತ್ತಿರುವ ವಿವಿಧ ಕಾಮಗಾರಿಗಳನ್ನು ಪರಿಶೀಲಿಸಿ ಮಾಹಿತಿ ಪಡೆದುಕೊಂಡರು. ನಗರ ಬಸ್ ನಿಲ್ದಾಣ, ಆಯುರ್ವೇದ ವೃತ್ತ, ಬಂಬೂಬಜಾರ್ ರಸ್ತೆ, ದೊಡ್ಡಗಡಿಯಾರ, ಹಾರ್ಡಿಂಜ್ ವೃತ್ತದಲ್ಲಿ ಕೈಗೆತ್ತಿಕೊಂಡಿರುವ ಕಾಮಗಾರಿಗಳನ್ನು ಅ.೧೫ರೊಳಗೆ ಮುಗಿಸುವ ಜತೆಗೆ ರಾಜಮಾರ್ಗಗಳಲ್ಲಿ ಮಳೆ ಬಂದಾಗ ನೀರು ನಿಲ್ಲದಂತೆ ಸರಾಗವಾಗಿ ಹೋಗುವುದಕ್ಕೆ ಕ್ರಮಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಅರಮನೆ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದಿಂದ ಪ್ರದಕ್ಷಿಣೆ ಆರಂಭಿಸಿದ ಮೇಯರ್ ಶಿವಕುಮಾರ್, ಡಾ.ರಾಜಕುಮಾರ್, ಡಾ.ವಿಷ್ಣುವರ್ಧನ್ ಉದ್ಯಾನ ವೀಕ್ಷಿಸಿದರಲ್ಲದೆ, ಕೂಡಲೇ ಸ್ವಚ್ಛ ಮಾಡಬೇಕು. ಪ್ಲಾಸ್ಟಿಕ್ ಮೊದಲಾದ ವಸ್ತುಗಳು ಬೀಳದಂತೆ ನೋಡಿಕೊಳ್ಳುವಂತೆ ಸಂಬಂಧಿಸಿದವರಿಗೆ ಸೂಚಿಸಿದರು.

ನಂತರ, ಪುರಭವನ ಆವರಣದಲ್ಲಿ ನಿರ್ಮಿಸಿರುವ ಮಲ್ಟಿಲೆವಲ್ ಪಾರ್ಕಿಂಗ್ ಪರಿಶೀಲಿಸಿದರಲ್ಲದೆ, ಸಣ್ಣಪುಟ್ಟ ಕೆಲಸಗಳನ್ನು ಮುಗಿಸಬೇಕು. ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಅವರು ಸಮಯ ಕೊಟ್ಟ ದಿನದಂದು ಸಾರ್ವಜನಿಕರ ಸೇವೆಗೆ ಅವಕಾಶ ಮಾಡಿಕೊಡಲಾಗುವುದು. ನೆಲಮಾಳಿಗೆಯಲ್ಲಿ ವಿದ್ಯುತ್ ಕಾಮಗಾರಿ ಮುಗಿಸಬೇಕು ಎಂದು ವಲಯ-೬ರ ಅಭಿವೃದ್ಧಿ ಅಧಿಕಾರಿ ಸೋಮಶೇಖರ್‌ಗೆ ಹೇಳಿದರು.

ನಗರ ಬಸ್ ನಿಲ್ದಾಣದ ಒಂದು ಬದಿಯಲ್ಲಿ ಫುಟ್‌ ಪಾತ್ ಹಾಳಾಗಿರುವ ಜತೆಗೆ ಯುಜಿಡಿ ಲೇನ್ ಒಡೆದು ರಸ್ತೆಯಲ್ಲಿ ನೀರು ಹರಿಯುತ್ತಿರುವುದನ್ನು ತಡೆಯಲು ಆರಂಭಿಸಿರುವ ಕಾಮಗಾರಿ ಪರಿಶೀಲಿಸಿದರು. ಯುಜಿಡಿ ಲೇನ್ ಹಾಳಾಗಿರುವುದರಿಂದ ಪುರಭವನ ಮಾರ್ಗದಿಂದ ಬರುವ ಬಸ್‌ಗಳು ಎಡಕ್ಕೆ ತಿರುಗಿಸಲು ಸಾಧ್ಯವಾಗದೆ ಕೆ.ಆರ್.ವೃತ್ತದ ಕಡೆ ಹಾದು ಒಳಗೆ ಪ್ರವೇಶ ಮಾಡಬೇಕಿರುವುದರಿಂದ ಸಂಚಾರಕ್ಕೆ ತೊಂದರೆಯಾಗಿದ್ದು, ತಕ್ಷಣವೇ ಕಾಮಗಾರಿ ಮುಗಿಸಬೇಕು. ಟೈಲ್ಸ್‌ಗಳನ್ನು ಬದಲಿಸಿ ಹೊಸದಾಗಿ ಅಳವಡಿಸಿ ಸಾರ್ವಜನಿಕರು ಓಡಾಡಲು ಅನುವು ಮಾಡುವಂತೆ ಹೇಳಿದರು.

ನಗರದ ದೇವರಾಜ ಮಾರುಕಟ್ಟೆ ಮುಂಭಾಗ ಇರುವ ಚಿಕ್ಕಗಡಿಯಾರ ವೃತ್ತವನ್ನು ಲಂಡನ್ ಮಾದರಿಯಲ್ಲಿ ಅಭಿವೃದ್ಧಿಪಡಿಸಲಾಗುವುದು. ವೃತ್ತದಲ್ಲಿ ಅಳವಡಿಸಿರುವ ಟೈಲ್ಸ್ ತೆಗೆದು ಲಂಡನ್‌ನಲ್ಲಿ ಹಾಕಿರುವಂತೆ ಹಾಕಲಾಗುವುದು. ವಾರಾಂತ್ಯದ ಶನಿವಾರ ಮತ್ತು ಭಾನುವಾರಗಳಂದು ಸಾರ್ವಜನಿಕರು ಕಾರ್ಯಕ್ರಮಗಳನ್ನು ವೀಕ್ಷಿಸುವಂತೆ ಮಾಡಲಾಗುತ್ತದೆ ಎಂದು ಆಯುಕ್ತ ಆಸಾದ್ ಉರ್ ರೆಹಮಾನ್ ಷರೀಫ್ ಹೇಳಿದರು.

ನಂತರ, ಸಬ್‌ವೇ ಒಳಗೆ ತೆರಳಿ ಸ್ವಚ್ಛತಾ ಕಾರ್ಯ ಪರಿಶೀಲಿಸಿದರಲ್ಲದೆ, ನೀರು ನಿಲ್ಲದಂತೆ ಮೋಟಾರು ಅಳವಡಿಸಲಾಗಿದೆ. ದೀಪದ ವ್ಯವಸ್ಥೆಯನ್ನು ಕಲ್ಪಿಸಿದ ಬಳಿಕ ಎರಡು ಕಡೆ ಪ್ರವೇಶದ್ವಾರದಲ್ಲಿ ಓಡಾಡಲು ಬಿಡಬೇಕು. ಎರಡು ಪಾಳಿಯಲ್ಲಿ ಭದ್ರತಾ ಕಾವಲುಗಾರರನ್ನು ನಿಯೋಜಿಸುವಂತೆ ಆಯುಕ್ತರಿಗೆ ಹೇಳಿದರು.

Leave a Reply

error: Content is protected !!

Discover more from VIJAYAPATHA.IN

Subscribe now to keep reading and get access to the full archive.

Continue reading

LATEST
ಕ್ರೀಡಾಪಟುಗಳಿಗೆ ಕೊಡುವ ಏಕಲವ್ಯ ಪ್ರಶಸ್ತಿ ಮುಂದುವರಿಸಲಿ: ಶೋಭಾ ನಾರಾಯಣ್ ಬಿಡದಿಯಿಂದ ಹೆದ್ದಾರಿಯಲ್ಲೇ ಮುಂದೆ ಬಂದರೆ ನಿಮಗೆ ಟೋಲ್‌ ಬರೆ ಗ್ಯಾರಂಟಿ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಹೊತ್ತಿ ಉರಿದ ಸ್ಕಾರ್ಪಿಯೋ ಕಾರು KSRTC ಕನಕಪುರ ಬಸ್‌ ನಿಲ್ದಾಣದಲ್ಲಿ ವಿಕಲ ಚೇತನರಿಂದ ₹700 ವಸೂಲಿ, ಕಂಡಕ್ಟರ್ಸ್‌ ಕೊಡಬೇಕು ₹10 : ಟಿಸಿಗೆ ಡಿಎಂ ಸಾಥ್... ಹೆಚ್ಚುವರಿ ಬಡ್ಡಿ ವಿಧಿಸುವ ನೋಂದಾಯಿತ ಲೇವಾದೇವಿಸಂಸ್ಥೆಗಳ ವಿರುದ್ಧ ದೂರು ನೀಡಿ KSRTC: 38+13 ತಿಂಗಳ ವೇತನ ಹಿಂಬಾಕಿ ಯಾವಾಗ ಬರುತ್ತದೆ ಒಕ್ಕೂಟದ ವಿರುದ್ಧ ನೌಕರರು ಕಿಡಿ BMTC: ಅಪಘಾತದಲ್ಲಿ ಮೃತಪಟ್ಟ ನೌಕರರ ಕುಟುಂಬಕ್ಕೆ ₹1 ಕೋಟಿ ಪರಿಹಾರ ಚೆಕ್‌ ವಿತರಿಸಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸಾರಿಗೆ ನಿವೃತ್ತ ನೌಕರರಿಗೆ ಮತ್ತೊಮ್ಮೆ ಮೊಗದೊಮ್ಮೆ ನಿರಾಸೆ: ಭಾರಿ ಆಕ್ರೋಶಗೊಂಡ EPS ನಿವೃತ್ತರು ಕಾರು ಡೋರ್‌ಗೆ ಬೈಕ್‌ ಗುದ್ದಿ ಕೆಳಗೆ ಬಿದ್ದ ಮಹಿಳೆ ಮೇಲೆ ಹರಿದ ಬಿಎಂಟಿಸಿ ಬಸ್‌ ನಾಟಿ ಕೋಳಿ ಸಾರಿನ ಜತೆ ರಾಗಿಮುದ್ದೆ ನುಂಗಿದವರಿಗೆ ಗೊತ್ತು ಅದರ ಗಮ್ಮತ್ತು