CrimeNEWSನಮ್ಮರಾಜ್ಯ

ಬಾಗಲಕೋಟೆ: ಜಮೀನಿನ ವಿಚಾರ ನಾಲ್ವರ ಭೀಕರ ಹತ್ಯೆ – ಮುಗಿಲು ಮುಟ್ಟಿದ ಆಕ್ರಂದನ

ವಿಜಯಪಥ ಸಮಗ್ರ ಸುದ್ದಿ

ಬಾಗಲಕೋಟೆ: ಜಮೀನಿನ ವಿಚಾರಕ್ಕಾಗಿ ನಡೆದ ಗಲಾಟೆಯಲ್ಲಿ ನಾಲ್ವರು ಸಹೋದರರನ್ನು ಹತ್ಯೆ ಮಾಡಿರುವ ಘಟನೆ ಮಧುರಖಂಡಿಯಲ್ಲಿ ನಡೆದಿದೆ.

ನಾಲ್ವರು ಸಹೋದರರಾದ ಮಲ್ಲಪ್ಪ, ಬಸಪ್ಪ, ಈಶ್ವರ ಹಾಗೂ ಹಣಮಂತ ಹತ್ಯೆಯಾದವರು. ಈ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ 9ಮಂದಿ ಆರೋಪಿಗಳನ್ನು ಈಗಾಗಲೇ ವಶಕ್ಕೆ ಪಡೆದು ಜಮಖಂಡಿ ಗ್ರಾಮೀಣ ಪೊಲೀಸರು ವಿಚಾರಣೆ ನಡೆಸುತ್ತಿದ್ದು, 12 ಆರೋಪಿಗಳ ಹೆಸರು ಪತ್ತೆ ಹಚ್ಚಿದ್ದಾರೆ. ಪೊಲೀಸರು ವಿಶೇಷ ತಂಡ ರಚಿಸಿ ಉಳಿದ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

ಪುಟಾಣಿ ಮನೆತನದ ನಂದೀಶ್, ನಾಗಪ್ಪ, ಪರಪ್ಪ, ಶಿವಾನಂದ, ಈರಪ್ಪ, ಶಂಕರ್, ಅಂಬವ್ವ, ರುಕ್ಮವ್ವ, ಮಾಲಾಶ್ರೀ, ಸುನಂದಾ ಹಾಗೂ ಪ್ರೇಮಾ ನಿಡೋಣಿ, ಚನ್ನಬಸಪ್ಪ ನಿಡೋಣಿ ಸೇರಿದಂತೆ ಒಟ್ಟು 12 ಮಂದಿ ಕೃತ್ಯ ಎಸಗಿರುವುದಾಗಿ ಪ್ರಕರಣ ದಾಖಲಾಗಿದೆ.

ಹತ್ಯೆ ನಡೆದ ಸ್ಥಳದಲ್ಲಿ 50ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ಭದ್ರತೆಗಾಗಿ ನಿಯೋಜಿಸಲಾಗಿದೆ. ಬ್ಯಾರಿಕೇಡ್ ಹಾಕಿ ಸ್ಪಾಟ್‌ಗೆ ಯಾರೂ ಬರದಂತೆ ತಡೆ ಹಿಡಿಯಲಾಗಿದೆ. ಜಮಖಂಡಿ ಸರ್ಕಾರಿ ಆಸ್ಪತ್ರೆಯಲ್ಲಿ ಮೃತ ಸಹೋದರರ ಮರಣೋತ್ತರ ಪರೀಕ್ಷೆ ನಡೆಯುತ್ತಿದೆ.

ಕುಟುಂಬಸ್ಥರ ಆಕ್ರಂದನ: ಮೃತರ ಮನೆಯಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ನಾಲ್ವರು ಮಕ್ಕಳನ್ನು ಕಳೆದುಕೊಂಡು ಹೆತ್ತ ತಾಯಿ ಗೋಳಾಡುತ್ತಿದ್ದಾರೆ. ಕೊಲೆಯಾಗಿರುವ ಮಲ್ಲಪ್ಪನ ಪತ್ನಿ ಭಾರತಿ ಕೊಲೆ ನಡೆದ ವೇಳೆ ಹಲ್ಲೆಯಾದರೂ ಆಗಿದ್ದರೆ ಬದುಕುಳಿಯುತ್ತಿದ್ದರು ಎಂದು ಕಣ್ಣೀರಿಟ್ಟಿದ್ದಾರೆ. ತಂದೆ, ಚಿಕ್ಕಪ್ಪ, ದೊಡ್ಡಪ್ಪನ ಕಳೆದುಕೊಂಡು ಮಕ್ಕಳು ಗೋಳಾಡಿದ್ದಾರೆ. ಕೊಲೆ ಸುದ್ದಿ ಕೇಳಿ ಮೃತರ ಮನೆಯತ್ತ ಜನರು ಆಗಮಿಸುತ್ತಿದ್ದಾರೆ.

ಘಟನೆ ವಿವರ: ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಮಧರಖಂಡಿ ಗ್ರಾಮದ ಮುದರಡ್ಡಿ ಹಾಗೂ ಪುಟಾಣಿ ಎಂಬ ಎರಡು ಕುಟುಂಬದ ಸದಸ್ಯರು ಚೆನ್ನಾಗಿಯೇ ಇದ್ದರು. ಆದರೆ, ಕೆಲ ವರ್ಷಗಳ ಹಿಂದೆ ಎರಡು ಕುಟುಂಬದ ಮಧ್ಯೆ ಆಸ್ತಿ ವಿಚಾರಕ್ಕೆ ಕಿರಿಕ್ ಆಗಿದೆ. ಅದು ಕೂಡ ಮೂರು ಎಕರೆ 21 ಗುಂಟೆ ಜಾಗದ ವಿಷಯಕ್ಕೆ ಜಿದ್ದಿಗೆ ಬಿದ್ದಿದ್ದಾರೆ.

ಅಲ್ಲಿಂದ ಶುರುವಾದ ದ್ವೇಷ ಈಗ ದೊಡ್ಡ ದುರಂತಕ್ಕೆ ಕಾರಣವಾಗಿದೆ. ನಿನ್ನೆ ರಾತ್ರಿ ಆಸ್ತಿಗಾಗಿ ಪುಟಾಣಿ ಕುಟುಂಬದ ಸದಸ್ಯರು ಮುದರಡ್ಡಿ ಕುಟುಂಬದ ನಾಲ್ವರು ಸಹೋದರನನ್ನು ಕಲ್ಲು, ಕೋಲು ಹಾಗೂ ಮಾರಕಾಸ್ತ್ರಗಳಿಂದ ಹೊಡೆದು ಬರ್ಬರವಾಗಿ ಕೊಲೆ ಮಾಡಿದ್ದಾರೆ.

ಇನ್ನು, ಈ ಎರಡು ಕುಟುಂಬಗಳ ನಡುವಿನ ಆಸ್ತಿ ವಿವಾದ ಧಾರವಾಡ ಹೈಕೋರ್ಟ್ ಮೆಟ್ಟಿಲೇರಿತ್ತು. ಆದ್ರೆ, ಅಂದುಕೊಂಡ ಸಮಯಕ್ಕೆ ಕೇಸ್ ಇತ್ಯರ್ಥವಾಗದೇ ಉಳಿದಿತ್ತು. ಇಷ್ಟೇ ಅಲ್ಲ, ಗ್ರಾಮದ ಹಿರಿಯರು ಕೂಡ ಈ ಕುಟುಂಬಗಳ ನಡುವಿನ ವಿವಾದ ಬಗೆ ಹರಿಸುವ ಪ್ರಯತ್ನ ಮಾಡಿದ್ದರು. ಹೀಗಿದ್ದರೂ ಆಸ್ತಿ ವಿವಾದ, ದ್ವೇಷದ ಜ್ವಾಲೆಯಾಗಿ ಹಬ್ಬಿತ್ತು.

ಆಸ್ತಿ ಹಂಚಿಕೆ ಮಾಡದಿದ್ದಕ್ಕೆ ಪುಟಾಣಿ ಕುಟುಂಬದವರು ತುಂಬ ತಲೆಕೆಡಿಸಿಕೊಂಡಿದ್ದರು. ಕೊನೆಗೆ ಇನ್ನೊಂದು ಹೆಜ್ಜೆ ಮುಂದೆ ಇಟ್ಟ ಪುಟಾಣಿ ಕುಟುಂಬಸ್ಥರು, ನಿನ್ನೆ ಇಡೀ ದಿನ ಸಹೋದರರನ್ನು ಫಾಲೋ ಮಾಡಿ ಸಹೋದರರು ಬೇರೆಬೇರೆ ಕಡೆ ಇರುವುದನ್ನು ಗಮನಿಸಿ ಹತ್ಯೆ ಮಾಡಿದ್ದಾರೆ.

ಅದರಲ್ಲಿ ಜಮೀನಿನಲ್ಲಿದ್ದ ಅಣ್ಣ ಹನುಮಂತ ಮೇಲೆ ದಾಳಿ ನಡೆಸಿ ಹತ್ಯೆ ಮಾಡಿದ್ದಾರೆ. ಬಳಿಕ ಅಣ್ಣನ ಹತ್ಯೆ ಸುದ್ದಿ ಕೇಳಿ ಸಹೋದರರು ಒಬ್ಬೊಬ್ಬರಾಗಿ ಜಮೀನಿಗೆ ಬರುತ್ತಿದ್ದಂತೆ ಕೊಚ್ಚಿ ಕೊಲೆ ಮಾಡಿದ್ದಾರೆ. ಸಹೋದರರ ಮೇಲೆ ಮಾರಕಾಸ್ತ್ರಗಳಿಂದ ದಾಳಿ ಮಾಡಿ, ನಾಲ್ವರನ್ನು ಕೊಚ್ಚಿ ಕೊಲೆ ಮಾಡಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ದಾವಿಸಿದ ಪೊಲೀಸರು ಮತ್ತು ಜನರು ಕೊಲೆ ಭೀಕರತೆ ಕಂಡು ಶಾಕ್ ಆಗಿದ್ದಾರೆ.

Leave a Reply

error: Content is protected !!

Discover more from VIJAYAPATHA.IN

Subscribe now to keep reading and get access to the full archive.

Continue reading

LATEST
ಕ್ರೀಡಾಪಟುಗಳಿಗೆ ಕೊಡುವ ಏಕಲವ್ಯ ಪ್ರಶಸ್ತಿ ಮುಂದುವರಿಸಲಿ: ಶೋಭಾ ನಾರಾಯಣ್ ಬಿಡದಿಯಿಂದ ಹೆದ್ದಾರಿಯಲ್ಲೇ ಮುಂದೆ ಬಂದರೆ ನಿಮಗೆ ಟೋಲ್‌ ಬರೆ ಗ್ಯಾರಂಟಿ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಹೊತ್ತಿ ಉರಿದ ಸ್ಕಾರ್ಪಿಯೋ ಕಾರು KSRTC ಕನಕಪುರ ಬಸ್‌ ನಿಲ್ದಾಣದಲ್ಲಿ ವಿಕಲ ಚೇತನರಿಂದ ₹700 ವಸೂಲಿ, ಕಂಡಕ್ಟರ್ಸ್‌ ಕೊಡಬೇಕು ₹10 : ಟಿಸಿಗೆ ಡಿಎಂ ಸಾಥ್... ಹೆಚ್ಚುವರಿ ಬಡ್ಡಿ ವಿಧಿಸುವ ನೋಂದಾಯಿತ ಲೇವಾದೇವಿಸಂಸ್ಥೆಗಳ ವಿರುದ್ಧ ದೂರು ನೀಡಿ KSRTC: 38+13 ತಿಂಗಳ ವೇತನ ಹಿಂಬಾಕಿ ಯಾವಾಗ ಬರುತ್ತದೆ ಒಕ್ಕೂಟದ ವಿರುದ್ಧ ನೌಕರರು ಕಿಡಿ BMTC: ಅಪಘಾತದಲ್ಲಿ ಮೃತಪಟ್ಟ ನೌಕರರ ಕುಟುಂಬಕ್ಕೆ ₹1 ಕೋಟಿ ಪರಿಹಾರ ಚೆಕ್‌ ವಿತರಿಸಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸಾರಿಗೆ ನಿವೃತ್ತ ನೌಕರರಿಗೆ ಮತ್ತೊಮ್ಮೆ ಮೊಗದೊಮ್ಮೆ ನಿರಾಸೆ: ಭಾರಿ ಆಕ್ರೋಶಗೊಂಡ EPS ನಿವೃತ್ತರು ಕಾರು ಡೋರ್‌ಗೆ ಬೈಕ್‌ ಗುದ್ದಿ ಕೆಳಗೆ ಬಿದ್ದ ಮಹಿಳೆ ಮೇಲೆ ಹರಿದ ಬಿಎಂಟಿಸಿ ಬಸ್‌ ನಾಟಿ ಕೋಳಿ ಸಾರಿನ ಜತೆ ರಾಗಿಮುದ್ದೆ ನುಂಗಿದವರಿಗೆ ಗೊತ್ತು ಅದರ ಗಮ್ಮತ್ತು