NEWSಆರೋಗ್ಯನಮ್ಮಜಿಲ್ಲೆ

ಬೆಂಗಳೂರಿಗೆ ಮತ್ತೆ ಕೋವಿಡ್‌ ಆತಂಕ: ವೀಕೆಂಡ್‌ ಲಾಕ್‌ಡೌನ್‌ನತ್ತ ಬಿಬಿಎಂಪಿ ಚಿತ್ತ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ನೆರೆ ರಾಜ್ಯ ಕೇರಳದಲ್ಲಿ ಕೋವಿಡ್ ಸೋಂಕಿತರ ಹೆಚ್ಚಾಗಿದ್ದು, ಲಾಕ್‍ಡೌನ್ ಘೋಷಣೆಯಾಗಿದೆ. ಇನ್ನು ರಾಜ್ಯದ ಕೋವಿಡ್ ಸೋಂಕಿತರ ಸಂಖದಯೆಯಲ್ಲಿ ನಿಧಾನವಾಗಿ ಏರಿಕೆ ಕಂಡುಬರುತ್ತಿದ್ದು, ಬೆಂಗಳೂರಿನ ಕೋವಿಡ್ ಪ್ರಕರಣಗಳಲ್ಲಿಯೂ ಟ್ರಾವೆಲ್ ಹಿಸ್ಟರಿಯಿಂದ ಕೋವಿಡ್ ತಗುಲಿರುವುದು ದೃಢಪಟ್ಟಿದೆ.

ನಗರದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿರುವುದರ ಜತೆಗೆ ಮೂರನೇ ಅಲೆ ಆರಂಭದ ಲಕ್ಷಣಗಳು ಗೋಚರಿಸುತ್ತಿವೆ. ಈ ಹಿನ್ನೆಲೆ ಬಿಬಿಎಂಪಿ ಹಾಗೂ ಬೆಂಗಳೂರು ನಗರ ಜಿಲ್ಲೆ ಕಟ್ಟುನಿಟ್ಟಾಗಿ ಕೋವಿಡ್ ನಿಯಂತ್ರಣಕ್ಕೆ ಮುಂದಾಗಿದೆ.

ಈ ಬಗ್ಗೆ ಕಂದಾಯ ವಿಭಾಗದ ಮುಖ್ಯ ಕಾರ್ಯದರ್ಶಿ ಮಂಜುನಾಥ್ ಪ್ರಸಾದ್ ಆದೇಶ ಹೊರಡಿಸಿದ್ದು, ಪ್ರಕರಣ ಹೆಚ್ಚಳದ ಬಗ್ಗೆ ಸೂಕ್ಷ್ಮವಾಗಿ ಗಮನಿಸಬೇಕು, ಮೈಕ್ರೋಕಂಟೈನ್ ಮೆಂಟ್ ಮಾಡಬೇಕು, ನಿಗದಿತ ಗುಂಪುಗಳಿಗೆ ವ್ಯಾಕ್ಸಿನೇಷನ್ ಹೆಚ್ಚಿಸಬೇಕು, ಗಡಿ ಭಾಗಗಳಲ್ಲಿಯೂ ಎಚ್ಚರಿಕೆಯಿಂದ ನಿಗಾವಹಿಸಬೇಕೆಂದು ತಿಳಿಸಿದ್ದಾರೆ.

ಬಿಬಿಎಂಪಿ ಆರೋಗ್ಯ ವಿಭಾಗದ ವಿಶೇಷ ಆಯುಕ್ತ ಡಿ.ರಂದೀಪ್ ಮಾತನಾಡಿ, ನಗರದ ಅಲ್ಲಲ್ಲಿ ಕೋವಿಡ್ ಪ್ರಕರಣ ಹೆಚ್ಚಾಗುತ್ತಿದೆ. ಕ್ಲಸ್ಟರ್ ಗಳನ್ನು ಹತ್ತು ಪ್ರಕರಣದಿಂದ ಮೂರಕ್ಕೆ ಇಳಿಸಿ, ಮೈಕ್ರೋಕಂಟೈನ್ ಮೆಂಟ್ ಮಾಡಲಾಗ್ತಿದೆ. ನೂರು ಜಾಗಗಳಲ್ಲಿ ಕ್ಲಸ್ಟರ್ಸ್ ಕಂಡುಬಂದಿದೆ. ಅದರಲ್ಲೂ ನೂರು ಮೀಟರ್ ಒಳಗೆ ಹೆಚ್ಚು ಕ್ಲಸ್ಟರ್ ಗಳು ಕಂಡುಬಂದಿವೆ ಎಂದು ತಿಳಿಸಿದ್ದಾರೆ.

ಪೂರ್ವ ವಲಯ, ಬೊಮ್ಮನಹಳ್ಳಿ, ಮಹದೇವಪುರದಲ್ಲಿ ಹೆಚ್ಚು ಕೋವಿಡ್ ಕಂಡುಬಂದಿದೆ. ಅಪಾರ್ಟ್ ಮೆಂಟ್ ಹಾಗೂ ಮನೆಗಳಲ್ಲಿ ಈ ಪ್ರಕರಣಗಳು ಹೆಚ್ಚು ಕಂಡುಬಂದಿವೆ. ಪ್ರತೀ ಕೋವಿಡ್ ಸೋಂಕಿತರ 20-30 ಕಾಂಟ್ಯಾಕ್ಟ್ ಟ್ರೇಸಿಂಗ್ ಮಾಡಲಾಗ್ತಿದೆ. ಆದರೆ ಸಂಪರ್ಕಿತರಲ್ಲೂ ಕೋವಿಡ್ ಪಾಸಿಟಿವ್ ಕಂಡುಬರುತ್ತಿದೆ. ಟಾರ್ಗೆಟ್ ಟೆಸ್ಟಿಂಗ್ ಮಾಡುವುದರಿಂದ ಕೋವಿಡ್ ಸಂಖ್ಯೆಗಳು ಹೆಚ್ಚು ಕಂಡುಬರುತ್ತಿವೆ ಎಂದರು.

ನಗರದ ಪ್ರತೀ ವಲಯಗಳಿಗೂ ಎಚ್ಚರಿಕೆ ನೀಡಲಾಗಿದೆ. ಕೆಲವು ಪ್ರಕರಣಗಳಲ್ಲಿ ಹೊರರಾಜ್ಯದಿಂದ ಪ್ರಯಾಣ ಮಾಡಿರುವ ಹಿನ್ನೆಲೆ, ಪ್ರವಾಸ ಹೋಗಿ ಬಂದಿರೋದು ಕಂಡುಬರುತ್ತಿದೆ. ತಜ್ಞರ ಸಭೆಯಲ್ಲೂ ಈ ಬಗ್ಗೆ ಮಾಹಿತಿ ಬಂದಿದ್ದು, ಕೇರಳದಿಂದ ಬಂದಿರುವವರಿಗೆ ಕಡ್ಡಾಯವಾಗಿ ಟೆಸ್ಟ್ ಮಾಡಿಸಲು ಸೂಚಿಸಿದ್ದಾರೆ.

ವ್ಯಾಕ್ಸಿನ್ ಪಡೆದಿದ್ದರೂ, ಯಾವುದೇ ವಿನಾಯಿತಿ ನೀಡದೆ ಕೇರಳ, ಮಹಾರಾಷ್ಟ್ರ ಪ್ರಯಾಣಿಕರಿಗೆ ಹೆಚ್ಚು ಟೆಸ್ಟಿಂಗ್ ಕಡ್ಡಾಯ ಮಾಡಲಾಗಿದೆ. ವ್ಯಾಕ್ಸಿನ್ ಅಭಾವ ಪಾಲಿಕೆ ಕೈಯಲ್ಲಿಲ್ಲ. ರಾಜ್ಯದಿಂದ ಎರಡು ದಿನಕ್ಕೊಮ್ಮೆ, 30-50 ಸಾವಿರ ಡೋಸ್ ಮಾತ್ರ ಬರುತ್ತಿದೆ ಎಂದರು.

ಆಗಸ್ಟ್ 10 ರಿಂದಲೇ ಅಲೆಯ ಆತಂಕ
ಮೂರನೇ ಅಲೆಯ ಆರಂಭವನ್ನು ನಿಖರವಾಗಿ ಹೇಳಲು ಸಾಧ್ಯವಿಲ್ಲ. ಎರಡನೇ ಅಲೆ ಹತ್ತು ದಿನದಲ್ಲೇ 5 ಸಾವಿರ ಪ್ರಕರಣಕ್ಕೆ ಏರಿಕೆಯಾಗಿತ್ತು. ಆಗಸ್ಟ್ 10 ರಿಂದಲೇ ಈ ನಿರೀಕ್ಷೆ ಇದ್ದು, ಹಾಸಿಗೆಗಳು, ಮಕ್ಕಳ ತಜ್ಞ ವೈದ್ಯರ ಸಿದ್ಧತೆ ಮಾಡಲಾಗ್ತಿದೆ. ಕಂಟೈನ್ ಮೆಂಟ್ ಕೂಡಾ ಹೆಚ್ಚು ಮಾಡಲಾಗ್ತಿದೆ ಎಂದರು.

ಶಾಲಾರಂಭಕ್ಕೆ ಬೇಡ ಅವಸರ
ಪಾಲಿಕೆ ವ್ಯಾಪ್ತಿಯಲ್ಲಿ ತಕ್ಷಣವೇ ಶಾಲೆಗಳನ್ನು ಆರಂಭ ಮಾಡಲು ಬದಲು, ಸ್ವಲ್ಪ ಕಾದುನೋಡಬೇಕಾಗಿದೆ. ಪ್ರಕರಣಗಳು ಹೆಚ್ಚಾಗುತ್ತಿವೆ ಎಂದು ಹೇಳಲಾಗುವುದಿಲ್ಲ, ಆದರೆ ಹೆಚ್ಚಾಗುವ ಸಂಕೇತಗಳು ಕಂಡುಬರುತ್ತಿವೆ ಎಂದು ತಿಳಿಸಿದರು.

ಬೆಂಗಳೂರು  ಜಿಲ್ಲಾಧಿಕಾರಿ ಏನು ಹೇಳುತ್ತಾರೆ
ಬೆಂಗಳೂರು ನಗರ ಜಿಲ್ಲಾಧಿಕಾರಿ ಜೆ.ಮಂಜುನಾಥ್ ಮಾತನಾಡಿ, ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಕೋವಿಡ್ ಪ್ರಕರಣಗಳ ಬಗ್ಗೆ ಜಿಲ್ಲಾಧಿಕಾರಿಗಳ ಸಭೆ ನಡೆಸಿದ್ದಾರೆ. ಕೇರಳ ಗಡಿಭಾಗದ ರಾಜ್ಯದ ಜಿಲ್ಲೆಗಳಲ್ಲಿ ಮುಂಜಾಗ್ರತ ಕ್ರಮಕೈಗೊಳ್ಳುವಂತೆ ತಿಳಿಸಿದ್ದಾರೆ ಎಂದರು.

ನಗರದ ಅತ್ತಿಬೆಲೆ, ಹೊಸೂರು ಚೆಕ್ ಪೋಸ್ಟ್ ಗಡಿಭಾಗದಲ್ಲಿ ನಿಗಾವಹಿಸಲಾಗ್ತಿದೆ. ಕೇರಳದ ವಾಹನಗಳನ್ನು ಕಡ್ಡಾಯವಾಗಿ ತಪಾಸಣೆ ಮಾಡಬೇಕು. ತಮಿಳುನಾಡು ಬಾರ್ಡರ್ ನಿಂದ ಉದ್ಯೋಗಕ್ಕಾಗಿ ನಗರಕ್ಕೆ ಬಹಳಷ್ಟು ಜನ ಬರುತ್ತಿದ್ದು, ಅವರ ಮೇಲೂ ನಿಗಾ ವಹಿಸಲು ಕಂಪನಿಗಳು, ಗಾರ್ಮೆಂಟ್ಸ್ ಗಳಿಗೆ ಸೂಚಿಸಲಾಗಿದೆ ಎಂದರು.

ಮಾಜಿ ಸಚಿವರ ಜಟಾಪಟಿ- ಅಶೋಕ್‌ ನನ್ನ ಮಧ್ಯೆ ವೈಮನಸ್ಸು ಇಲ್ಲ: ವಿ.ಸೋಮಣ್ಣ ಸ್ಪಷ್ಟನೆ

Leave a Reply

error: Content is protected !!

Discover more from VIJAYAPATHA.IN

Subscribe now to keep reading and get access to the full archive.

Continue reading

LATEST
ಕ್ರೀಡಾಪಟುಗಳಿಗೆ ಕೊಡುವ ಏಕಲವ್ಯ ಪ್ರಶಸ್ತಿ ಮುಂದುವರಿಸಲಿ: ಶೋಭಾ ನಾರಾಯಣ್ ಬಿಡದಿಯಿಂದ ಹೆದ್ದಾರಿಯಲ್ಲೇ ಮುಂದೆ ಬಂದರೆ ನಿಮಗೆ ಟೋಲ್‌ ಬರೆ ಗ್ಯಾರಂಟಿ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಹೊತ್ತಿ ಉರಿದ ಸ್ಕಾರ್ಪಿಯೋ ಕಾರು KSRTC ಕನಕಪುರ ಬಸ್‌ ನಿಲ್ದಾಣದಲ್ಲಿ ವಿಕಲ ಚೇತನರಿಂದ ₹700 ವಸೂಲಿ, ಕಂಡಕ್ಟರ್ಸ್‌ ಕೊಡಬೇಕು ₹10 : ಟಿಸಿಗೆ ಡಿಎಂ ಸಾಥ್... ಹೆಚ್ಚುವರಿ ಬಡ್ಡಿ ವಿಧಿಸುವ ನೋಂದಾಯಿತ ಲೇವಾದೇವಿಸಂಸ್ಥೆಗಳ ವಿರುದ್ಧ ದೂರು ನೀಡಿ KSRTC: 38+13 ತಿಂಗಳ ವೇತನ ಹಿಂಬಾಕಿ ಯಾವಾಗ ಬರುತ್ತದೆ ಒಕ್ಕೂಟದ ವಿರುದ್ಧ ನೌಕರರು ಕಿಡಿ BMTC: ಅಪಘಾತದಲ್ಲಿ ಮೃತಪಟ್ಟ ನೌಕರರ ಕುಟುಂಬಕ್ಕೆ ₹1 ಕೋಟಿ ಪರಿಹಾರ ಚೆಕ್‌ ವಿತರಿಸಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸಾರಿಗೆ ನಿವೃತ್ತ ನೌಕರರಿಗೆ ಮತ್ತೊಮ್ಮೆ ಮೊಗದೊಮ್ಮೆ ನಿರಾಸೆ: ಭಾರಿ ಆಕ್ರೋಶಗೊಂಡ EPS ನಿವೃತ್ತರು ಕಾರು ಡೋರ್‌ಗೆ ಬೈಕ್‌ ಗುದ್ದಿ ಕೆಳಗೆ ಬಿದ್ದ ಮಹಿಳೆ ಮೇಲೆ ಹರಿದ ಬಿಎಂಟಿಸಿ ಬಸ್‌ ನಾಟಿ ಕೋಳಿ ಸಾರಿನ ಜತೆ ರಾಗಿಮುದ್ದೆ ನುಂಗಿದವರಿಗೆ ಗೊತ್ತು ಅದರ ಗಮ್ಮತ್ತು