ಕಡಬ: ಬಸ್ಸಿನಿಂದ ಆಯತಪ್ಪಿ ಕೆಳಗೆ ಬಿದ್ದ ಕಡಬದ ಕೃಷಿಕರೊಬ್ಬರು ಮೃತಪಟ್ಟ ಘಟನೆಯಲ್ಲಿ ಬಸ್ ಚಾಲಕ ಹಾಗೂ ನಿರ್ವಾಹಕರ ವಿರುದ್ಧ ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಸ್ ನಿರ್ವಾಹಕ ಆನಂದ ನಾಯ್ಕ್ ಎಂಬವರು ಬಸ್‌ನ ಹಿಂಬದಿಯ ಬಾಗಿಲು ಹಾಕಿಕೊಳ್ಳದೆ ನಿರ್ಲಕ್ಷ್ಯ ವಹಿಸಿದ್ದರಿಂದ ಹಾಗೂ ಬಸ್ ಚಾಲಕ ಯು.ಆರ್.ಶಶಿಧರ ಎಂಬವರು ಡೋರ್ ಹಾಕಲಾಗಿದೆಯೇ ಎಂದು ಖಚಿತಪಡಿಸಿಕೊಳ್ಳದೇ ಬಸ್ ಓಡಿಸಿದ್ದರ ಪರಿಣಾಮ ಈ ಅಪಘಾತ ಸಂಭವಿಸಿದೆ ಎಂದು ದೂರಿನಲ್ಲಿ ವಿವರಿಸಲಾಗಿದೆ.
ಬಲ್ಯ ಗ್ರಾಮದ ಕಡಬ ನಿವಾಸಿ ಕೆ.ಪ್ರಶಾಂತ ಕುಮಾರ್ ಎಂಬುವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿದೆ.
ಕಡಬ ಪೇಟೆಯ ಪೋಸ್ಟ್ ಆಫೀಸ್ ಬಳಿ ಸುಬ್ರಹ್ಮಣ್ಯ ಕಡೆಯಿಂದ ಉಪ್ಪಿನಂಗಡಿ ಕಡೆಗೆ ತೆರಳುತ್ತಿದ್ದ KA19 F 3212 ಕೆಎಸ್‌ಆರ್‌ಟಿಸಿ ಬಸ್ ನಿಂದ ಇಬ್ಬರು ಬಿದ್ದಿದ್ದರು ಅವರಲ್ಲಿ ಕಳಾರ ಸಮೀಪದ ಕುದ್ಕೋಳಿ ನಿವಾಸಿ ಅಚ್ಚುತ್ತ ಗೌಡ (63) ಎಂಬುವರು ಮೃತಪಟ್ಟಿದ್ದರು. ಇನ್ನೊರ್ವ ಪ್ರಯಾಣಿಕ ಬಲ್ಯ ನಿವಾಸಿ ರುಕ್ಮಯ್ಯ ಯಾನೆ ಚಂದ್ರ ಎಂಬುವರಿಗೆ ತರಚು ಗಾಯವಾಗಿತ್ತು.
![](https://vijayapatha.in/wp-content/uploads/2024/02/QR-Code-VP-1-1-300x62.png)