NEWSನಮ್ಮಜಿಲ್ಲೆನಮ್ಮರಾಜ್ಯ

ಸರ್ಕಾರ ಬಿಡುಗಡೆ ಮಾಡಿರೊ 220 ಕೊಟಿ ರೂ. ನಿವೃತ್ತರಿಗೆ ಕೊಡೋಕೆ ಸುದೀರ್ಘ 93 ದಿನಗಳ ಕಾಲಾವಕಾಶ ಕೊಟ್ಟ KSRTC ಎಂಡಿ ನಡೆ ತೀರಾ ಹಾಸ್ಯಾಸ್ಪದ: ನಿವೃತ್ತ ಅಧಿಕಾರಿ ನಟರಾಜ್ ಆಕ್ರೋಶ

ವಿಜಯಪಥ ಸಮಗ್ರ ಸುದ್ದಿ

ಮೈಸೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳ ಅಧಿಕಾರಿಗಳು, ನೌಕರರಿಗೆ 2020ನೇ ಸಾಲಿನ ವೇತನ ಪರಿಷ್ಕರಣೆ ಆಗಿದ್ದು, ಅದರಲ್ಲಿ ನಿವೃತ್ತಿ ನೌಕರರಿಗೆ ಕೊಡಬೇಕಿರುವ ಹಿಂಬಾಕಿ ಪಾವತಿಸಲು ಆಡಳಿತ ಮಂಡಳಿ ಅನಗತ್ಯ ವಿಳಂಬ ಧೋರಣೆ ಅನುಸರಿಸುತ್ತಿದೆ ಎಂದು ನಿಗಮದ ನಿವೃತ್ತ ಅಧಿಕಾರಿ ಕೆ.ವಿ.ನಟರಾಜ ಸೇರಿದಂತೆ 20 ಹೆಚ್ಚು ನಿವೃತ್ತ ಅಧಿಕಾರಿಗಳು ನೌಕರರು ಕಿಡಿಕಾರಿದ್ದಾರೆ.

ವಾಡಿಕೆಯಂತೆ 2020ರ ಜನವರಿ 1ರಿಂದ ಜಾರಿಗೆ ಬರುವಂತೆ ವೇತನ ಪರಿಷ್ಕರಣೆಯನ್ನು ಮಾರ್ಚ್ 2023ರಲ್ಲಿ ಜಾರಿಗೆ ತಂದು ಹಾಲಿ ಕರ್ತವ್ಯ ನಿರ್ವಹಿಸುತ್ತಿದ್ದ ನೌಕರರಿಗೆ ಒಂದೇ ತಿಂಗಳ ಅವಧಿಯಲ್ಲಿ ವೇತನ ಪರಿಷ್ಕರಣೆ ಮಾಡಿ ಹೆಚ್ಚಳ ಮಾಡಿರುವ ವೇತನವನ್ನು ಕೊಡುತ್ತಿದ್ದಾರೆ. ಆದರೆ 2020ರ ನಂತರ ನಿವೃತ್ತಿಗೊಂಡ ನೌಕರರಿಗೆ ವೇತನ ಪರಿಷ್ಕರಣೆ ಮಾಡದೆ ಈವರೆಗೂ ಮುಂದೂಡಿಕೊಂಡು ಬರುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಾರಿಗೆ ಸಂಸ್ಥೆಗಳ ಆಡಳಿತ ಮಂಡಳಿಯ ಈ ಧೋರಣೆಯ ವಿರುದ್ಧ ಹಲವು ನೌಕರರ ಸಂಘಟನೆಗಳು ಅನೇಕ ಬಾರಿ ಧರಣಿ ಸತ್ಯಾಗ್ರಹಗಳನ್ನು ನಡೆಸಿವೆ. ಈ ಸಂದರ್ಭದಲ್ಲಿ ಕೆಎಸ್ಆರ್ಟಿಸಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ವಿ.ಅನ್ಬುಕುಮಾರ್‌ ಧರಣಿ ಸ್ಥಳಕ್ಕೆ ಬಂದು ವೇತನ ಹಿಂಬಾಕಿಗೆ ಚುನಾವಣಾ ನೀತಿ ಸಂಹಿತೆ ಅಡ್ಡಿ ಬರುವುದಿಲ್ಲ, ನಿಮ್ಮಗೆ ಅತಿ ಶೀಘ್ರದಲ್ಲಿ ಹಿಂಬಾಕಿ ಪಾವತಿಸಲು ಕ್ರಮ ಕೈಗೊಳ್ಳುತ್ತೇವೆ ಎಂದು ಬಣ್ಣದ ಮಾತುಗಳಿಂದ ನಂಬಿಸಿದ್ದಾರೆ.

ಆದರೆ, 15 ತಿಂಗಳುಗಳು ವಿಳಂಬ ಮಾಡಿದ್ದು ಅಲ್ಲದೆ ಈ ಹಿಂದೆ ನೌಕರರ ಹಿಂಬಾಕಿ ನೀಡಲು ಸರ್ಕಾರ ನೀಡಿದ್ದ 220 ಕೋಟಿ ರೂ.ಗಳನ್ನು ಕೊಡುವುದಕ್ಕೆ ಮೀನಮೇಷ ಎಣಿಸುತ್ತಿರುವುದು ಏತಕ್ಕೆ ಎಂದು ಎಂಡಿ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಇನ್ನು 220 ಕೋಟಿ ರೂ,ಗಳನ್ನು ಹಾಲಿ ಸರ್ಕಾರ ಬಿಡುಗಡೆ ಮಾಡಿದ್ದರೂ ಅದನ್ನು ನಿವೃತ್ತರಿಗೆ ವಿತರಣೆ ಮಾಡದೇ ಇದೇ ಜೂನ್27 ರಂದು ಆದೇಶ ಸಂಖ್ಯೆ: ಕರಾಸ/ಕೇಶ/ಲೇಪ/ವೇತನ/ಕಸಂ-24/904/24-25ರಲ್ಲಿ ಗ್ರಾಚ್ಯುಯಿಟಿ ವ್ಯತ್ಯಾಸದ ಹಿಂಬಾಕಿ ಮತ್ತು ಗಳಿಕೆ ರಜೆ ನಗದೀಕರಣದ ವ್ಯತ್ಯಾಸದ ಮೊತ್ತದಲ್ಲಿ ಲೆಕ್ಕಚಾರ ಮಾಡಿ ಮೊತ್ತವನ್ನು ನಿಗದಿಪಡಿಸಲು ಎಲ್ಲ ವಿಭಾಗಗಳಿಗೆ 30.09.2024 (3 ತಿಂಗಳ ವಿಸ್ತೃತ ಕಾಲಾವಧಿವರೆಗೆ ಧಾರಳವಾಗಿ ಕಾಲಾವಧಿ ನೀಡಿದ್ದಾರೆ. ಇದು ನಿವೃತ್ತರ ಯಾಮಾರಿಸುವ ಕೆಲಸ ಎಂದು ಹೇಳಿದ್ದಾರೆ.

ಇನ್ನು 2024-25 ರ ಆರ್ಥಿಕ ವರ್ಷದಲ್ಲಿ ಆರ್ಥಿಕ ಪರಿಸ್ಥಿತಿಯ ಅನ್ವಯ ತೀರ್ಮಾನಿಸಬಹುದೆಂದು ಕೂಡ ತಿಳಿಸಿದ್ದಾರೆ. ಆದಾಗ್ಯೂ 2020ರ ನಂತರ ನಿವೃತ್ತಿ ಹೊಂದಿದ ನಿವೃತ್ತ ನೌಕರರಿಗೆ ಮತ್ತು ಅಧಿಕಾರಿಗಳಿಗೆ 24 ರಿಂದ 30 ತಿಂಗಳುಗಳು ಕಾರ್ಯನಿರ್ವಹಿಸಿದ ಸಿಬ್ಭಂದಿಗಳಿಗೆ ವೇತನ ಹೆಚ್ಚಳ ಹಿಂಬಾಕಿಯ ಪಾವತಿ ಬಗ್ಗೆ ಇಲ್ಲಿಯವರೆಗೂ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಇದು ಸಂಸ್ಥೆಯಲ್ಲಿ ಹಿಂದೆದು ಕೂಡ ಈ ರೀತಿ ಆಗಿಲ್ಲ ಎಂದು ವಿವರಿಸಿದ್ದಾರೆ.

23.03.2023 ರಂದು ಶೇ.15ರಷ್ಟು ವೇತನ ಪರಿಷ್ಕರಣೆ ಜಾರಿಗೊಳಿಸಿ ಹಾಲಿ ಸಿಬ್ಬಂದಿಗಳಿಗೆ ಅಂದರೆ ಸುಮಾರು 33,000 ನೌಕರರಿಗೆ (ಕೆಎಸ್ಆರ್ಟಿಸಿಯಲ್ಲಿನ ನೌಕರರಿಗೆ) ಕೇವಲ 1 ತಿಂಗಳಲ್ಲಿ ವೇತನ ನಿಗದಿಪಡಿಸಿ ಪಾವತಿಸಲು ಕ್ರಮ ಕೈಗೊಳ್ಳಲಾಗಿದೆ. ಆದರೆ ಕೇವಲ 2000 ದಿಂದ 2500 ನಿವೃತ್ತ ನೌಕರರಿಗೆ ವೇತನ ಪರಿಷ್ಕರಣೆ ಗ್ರಾಚ್ಯುಯಿಟಿ/ ರಜೆ ನಗದೀಕರಣದ ವ್ಯತ್ಯಾಸದ ಹಣವನ್ನು ಲೆಕ್ಕಾಚಾರ ಮಾಡಲು ವಿಭಾಗಗಳಿಗೆ 30.09.2024 ರವರೆಗೆ ಸುದೀರ್ಘವಾಗಿ 93 ದಿನಗಳ ಕಾಲಾವಕಾಶ ನೀಡಿರುವುದು ತೀರಾ ಹಾಸ್ಯಾಸ್ಪದವಾಗಿದೆ ಹಾಗೂ ಈ ಮೊತ್ತಗಳ ನಗದು ಪಾವತಿಯ ಬಗ್ಗೆ ಯಾವುದೇ ನಿರ್ದಿಷ್ಟ ಸೂಚನೆಗಳಿಲ್ಲ. ಇದನ್ನು ನೋಡಿದರೆ ಎಂಡಿ ಅವರು ಯಾರ ಒತ್ತಡಕ್ಕೆ ಮಣಿದು ಈ ಆದೇಶ ಮಾಡಿದಾರೆ ಎಂಬ ಸಂಶಯ ಮೂಡುತ್ತಿದೆ ಎಂದು ಹೇಳಿದ್ದಾರೆ.

ಇನ್ನು ನಿವೃತ್ತ ನೌಕರರಿಗೆ ಅತೀ ಕಡಿಮೆ ಪಿಂಚಣಿ ದೊರೆಯುತ್ತಿರುವುದು ಎಲ್ಲರಿಗೂ ತಿಳಿದ ವಿಷಯ, ನೌಕರರಿಗೆ ನ್ಯಾಯವಾಗಿ ಬರಬೇಕಾಗಿರುವ ಹಣವನ್ನು ನೀಡಲು ಈ ಸಂಸ್ಥೆ ವಿಳಂಬ ಧೋರಣೆ ಮಾಡುತ್ತಿದ್ದು, ಶಕುನಿ ಬುದ್ಧಿ ತೋರುತ್ತಿರುವುದು ಈ ಸಂಸ್ಥೆಗೆ ತರವಲ್ಲ. ಆದುದರಿಂದ ನಿವೃತ್ತ ನೌಕರರಿಗೆ ಸಂದಾಯವಾಗಬೇಕಿರುವ ಎಲ್ಲ ಸೌಲಭ್ಯಗಳನ್ನು ಪ್ರಾಯೋಗಿಕವಾಗಿ ವಿಮರ್ಶಿಸಿ ಒಂದೇ ಕಂತಿನಲ್ಲಿ ತಿಂಗಳ ಒಳಗೆ ಪಾವತಿಸಲು ಕ್ರಮಕೈಗೊಂಡು ನಿಗಮದ ಘನತೆಯನ್ನು ಉಳಿಸಿಕೊಳ್ಳಬೇಕು ಎಂದು ನಟರಾಜ ಮತ್ತು ಇತರ ನಿವೃತ್ತ ನೌಕರರ ಆಗ್ರಹಿಸಿದ್ದಾರೆ.

ಇದಿಷ್ಟೇ ಅಲ್ಲದೆ ಕೂಡಲೇ ಈಗ ಹೊರಡಿಸಿರುವ ಮೂರು ತಿಂಗಳುಗಳ ತನಕ ಲೆಕ್ಕ ಮಾಡಿದ ಬಳಿಕ ನಿವೃತ್ತರಿಗೆ ಸಿಗಬೇಕಿರುವ ಸೌಲಭ್ಯಗಳನ್ನು ಕೊಡಬೇಕು ಎಂಬ ಆದೇಶವನ್ನು ವಾಪಸ್ತೆಗೆದುಕೊಂಡು ತಿಂಗಳೊಳಗೆ ನಮಗೆ ಬರಬೇಕಿರುವ, ಜತೆಗೆ ಹಾಲಿ ಸರ್ಕಾರ ಬಿಡುಗಡೆ ಮಾಡಿರುವ 220 ಕೋಟಿ ರೂ.ಗಳನ್ನು ನಮ್ಮ ಬ್ಯಾಂಕ್‌ ಖಾತೆಗಳಿಗೆ ಹಾಕದಿದ್ದರೆ ಜುಲೈ 8ರಂದು ಹಮ್ಮಿಕೊಂಡಿರುವ ಪ್ರತಿಭಟನೆಯನ್ನು ತೀವ್ರಗೊಳಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಇನ್ನು ಕೆಎಸ್ಆರ್ಟಿಸಿ ಸಂಸ್ಥೆಯ ನಿವೃತ್ತ ಅಧಿಕಾರಿ ಕೆ.ವಿ.ನಟರಾಜ, ಸಿಬ್ಬಂದಿಗಳಾದ ನಾಗಮಣಿ ಸೇರಿದಂತೆ 20ಕ್ಕೂ ಹೆಚ್ಚು ನಿವೃತ್ತ ನೌಕರರು ಸಹಿ ಮಾಡಿರುವ ಪ್ರತಿಯನ್ನು ವಿಜಯಪಥ ಕಚೇರಿಗೆ ಕಳುಹಿಸುವ ಮೂಲಕ ತಮ್ಮ ಸಹನೆಯನ್ನು ಪರೀಕ್ಷಿಸಬೇಡಿ ಎಂದು ಎಚ್ಚರಿಕೆಯನ್ನು ಸಾರಿಗೆ ಸಚಿವರಿಗೆ ಮತ್ತು ಎಂಡಿಗಳಿಗೆ ರವಾನಿಸಿದ್ದಾರೆ.

Leave a Reply

error: Content is protected !!

Discover more from VIJAYAPATHA.IN

Subscribe now to keep reading and get access to the full archive.

Continue reading

LATEST
ಕ್ರೀಡಾಪಟುಗಳಿಗೆ ಕೊಡುವ ಏಕಲವ್ಯ ಪ್ರಶಸ್ತಿ ಮುಂದುವರಿಸಲಿ: ಶೋಭಾ ನಾರಾಯಣ್ ಬಿಡದಿಯಿಂದ ಹೆದ್ದಾರಿಯಲ್ಲೇ ಮುಂದೆ ಬಂದರೆ ನಿಮಗೆ ಟೋಲ್‌ ಬರೆ ಗ್ಯಾರಂಟಿ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಹೊತ್ತಿ ಉರಿದ ಸ್ಕಾರ್ಪಿಯೋ ಕಾರು KSRTC ಕನಕಪುರ ಬಸ್‌ ನಿಲ್ದಾಣದಲ್ಲಿ ವಿಕಲ ಚೇತನರಿಂದ ₹700 ವಸೂಲಿ, ಕಂಡಕ್ಟರ್ಸ್‌ ಕೊಡಬೇಕು ₹10 : ಟಿಸಿಗೆ ಡಿಎಂ ಸಾಥ್... ಹೆಚ್ಚುವರಿ ಬಡ್ಡಿ ವಿಧಿಸುವ ನೋಂದಾಯಿತ ಲೇವಾದೇವಿಸಂಸ್ಥೆಗಳ ವಿರುದ್ಧ ದೂರು ನೀಡಿ KSRTC: 38+13 ತಿಂಗಳ ವೇತನ ಹಿಂಬಾಕಿ ಯಾವಾಗ ಬರುತ್ತದೆ ಒಕ್ಕೂಟದ ವಿರುದ್ಧ ನೌಕರರು ಕಿಡಿ BMTC: ಅಪಘಾತದಲ್ಲಿ ಮೃತಪಟ್ಟ ನೌಕರರ ಕುಟುಂಬಕ್ಕೆ ₹1 ಕೋಟಿ ಪರಿಹಾರ ಚೆಕ್‌ ವಿತರಿಸಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸಾರಿಗೆ ನಿವೃತ್ತ ನೌಕರರಿಗೆ ಮತ್ತೊಮ್ಮೆ ಮೊಗದೊಮ್ಮೆ ನಿರಾಸೆ: ಭಾರಿ ಆಕ್ರೋಶಗೊಂಡ EPS ನಿವೃತ್ತರು ಕಾರು ಡೋರ್‌ಗೆ ಬೈಕ್‌ ಗುದ್ದಿ ಕೆಳಗೆ ಬಿದ್ದ ಮಹಿಳೆ ಮೇಲೆ ಹರಿದ ಬಿಎಂಟಿಸಿ ಬಸ್‌ ನಾಟಿ ಕೋಳಿ ಸಾರಿನ ಜತೆ ರಾಗಿಮುದ್ದೆ ನುಂಗಿದವರಿಗೆ ಗೊತ್ತು ಅದರ ಗಮ್ಮತ್ತು