ಹನೂರು : ತಾಲೂಕಿನ ಶ್ರೀ ಮಲೆ ಮಹದೇಶ್ವರ ಬೆಟ್ಟದಲ್ಲಿ ಅನಾಥ ಶವವೊಂದಕ್ಕೆ ಮಹದೇಶ್ವರ ಬೆಟ್ಟದ ಪೊಲೀಸ್ ಠಾಣೆ ಸಿಬ್ಬಂದಿಗಳು ಅಂತ್ಯ ಸಂಸ್ಕಾರ ಮಾಡಿ ಮಾನವೀಯತೆ ಮೆರದಿದ್ದಾರೆ,
ಶ್ರೀ ಸ್ವಾಮಿ ಕ್ಷೇತ್ರದ ಪರ ಮಾಡುವ ಸ್ಥಳದಲ್ಲಿ ಗುರುತು ಪರಿಚಯ ಇಲ್ಲದ ವ್ಯಕ್ತಿಯೊಬ್ಬರ ಶವ ಸಿಕ್ಕಿದ್ದು, ಶವದ ವಾರಸುದಾರರು ಸದ್ಯದ ಪರಿಸ್ಥಿತಿಯಲ್ಲಿ ಸಿಗದೆ ಇರುವುದರಿಂದ ಪೊಲೀಸ್ ಇಲಾಖೆ ಮುಂದೆ ನಿಂತು ಚಾಮರಾಜನಗರದ ಮೆಡಿಕಲ್ ಕಾಲೇಜು ಹಿಂಭಾಗ ಇರುವ ಯಡಬೆಟ್ಟದಲ್ಲಿ ಶವ ಸಂಸ್ಕಾರ ಮಾಡಿದ್ದಾರೆ.
ಈ ವೇಳೆ ಮಹದೇಶ್ವರಬೆಟ್ಟ ಪೊಲೀಸ್ ಠಾಣೆಯ ಎಚ್‌ಸಿ ಮುತ್ತುರಾಜ್ ಸಿಬ್ಬಂದಿ ವರ್ಷದ ಬಸವರಾಜು, ಸಂಜು ಇದ್ದರು.
![](https://vijayapatha.in/wp-content/uploads/2024/02/QR-Code-VP-1-1-300x62.png)