NEWSನಮ್ಮಜಿಲ್ಲೆನಮ್ಮರಾಜ್ಯ

ಆ.18ರಂದು KSRTC ನೌಕರರ ಕ್ರೆಡಿಟ್ ಸಹಕಾರ ಸಂಘದ ಚುನಾವಣೆಯ ಮತ ಎಣಿಕೆ- ಯಾರ ಪಾಲಾಗಲಿದ್ದಾಳೆ ವಿಜಯಲಕ್ಷ್ಮಿ!?

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ನೌಕರರ ಕ್ರೆಡಿಟ್ ಸಹಕಾರ ಸಂಘದ ಆಡಳಿತ ಮಂಡಲಿ ಚುನಾವಣೆಗೆ ಸಂಬಂಧಿಸಿದಂತೆ ಉಚ್ಚ ನ್ಯಾಯಾಲಯದ ಆದೇಶಾನುಸಾರ ಮತ ಎಣಿಕೆಯ ದಿನಾಂಕವನ್ನು ನಿಗದಿಪಡಿಸಲಾಗಿದೆ.

ನೌಕರರ ಕ್ರೆಡಿಟ್ ಸಹಕಾರ ಸಂಘದ ಆಡಳಿತ ಮಂಡಲಿ ಚುನಾವಣೆ ಕಳೆದ ಜುಲೈ 7ರಂದು ನಡೆದಿದ್ದು, ಆ ವೇಳೆ ಉಚ್ಚ ನ್ಯಾಯಾಲಯದ ಆದೇಶ ಮೇರೆಗೆ ವೋಟ್‌ ಹಾಕಿದವರ ವೋಟ್‌ಗಳನ್ನು 24 ಬಾಕ್ಸ್‌ಗಳಲ್ಲಿ ಸಂಗ್ರಹಿಸಲಾಗಿದೆ.

ಅಂತ್ಯೆಯೆ ಉಚ್ಛ ನ್ಯಾಯಾಲಯವು ಜುಲೈ 4ರಂದು ನೀಡಿರುವ ಆದೇಶದಂತೆ ಮತ ಎಣಿಕೆ ಮಾಡದೆ ಖಜಾನೆಯಲ್ಲಿ ಸಂಗ್ರಹಿಸಿಡಲಾಗಿದೆ. ಬಳಿಕ ನ್ಯಾಯಾಲಯವು ಜುಲೈ 18 ರಂದು ಹೊರಡಿಸಿರುವ ಆದೇಶದಲ್ಲಿ ಈ ಮತಪೆಟ್ಟಿಗೆಗಳಲ್ಲಿರುವ ಮತ ಪತ್ರಗಳನ್ನು ಮತ ಎಣಿಕೆ ಮಾಡಲು ನಿರ್ದೇಶನ ನೀಡಿದೆ.

ಹೀಗಾಗಿ ಮತ ಎಣಿಕೆಯನ್ನು ಆಗಸ್ಟ್‌ 10 ರಂದು ನಡೆಸಲು ಕೋರಿದ್ದೀರಿ ಆದರೆ ಉಚ್ಛ ನ್ಯಾಯಾಲಯವು 18/7/2024 ರಂದು ಹೊರಡಿಸಿರುವ ಆದೇಶದಂತೆ ಮತ ಎಣಿಕೆ ಮಾಡಲು ಎಲ್ಲ ಅಭ್ಯರ್ಥಿಗಳಿಗೆ ನೋಟಿಸ್ ನೀಡಬೇಕಾಗಿರುವುದರಿಂದ ಮತ ಎಣಿಕೆಯನ್ನು ಆಗಸ್ಟ್‌ 18ರಂದು ಮಾಡಲು ವ್ಯವಸ್ಥೆಯನ್ನು ಮಾಡಬೇಕು ಎಂದು ರಿಟರ್ನಿಂಗ್‌ ಆಫಿಸರ್‌ ಎನ್‌.ಲಕ್ಷಣ್‌ ಸೂಚಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಇದೇ ಆಗಸ್ಟ್‌ 18ರಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ನೌಕರರ ಕ್ರೆಡಿಟ್ ಸಹಕಾರ ಸಂಘದ ಆಡಳಿತ ಮಂಡಲಿಗೆ ಕಳೆದ ಜುಲೈ 7ರಂದು ನಡೆದಿರುವ ಚುನಾವಣೆಯ ಮತದಾನದ ಮತ ಎಣಿಕೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.

ಇನ್ನು ಈಗಾಗಲೇ ಉಚ್ಛ ನ್ಯಾಯಾಲಯದ ಆದೇಶವಿಲ್ಲದೆ ಮತದಾನ ಮಾಡಿದ್ದ ಮತಗಳ ಎಣಿಕೆ ಕಾರ್ಯ ಜುಲೈ 7ರಂದೆ ಮುಗಿದಿದ್ದು, ಆ ವೇಳೆ ಸಂಸ್ಥೆಯ ಕೂಡ ಅಭ್ಯರ್ಥಿಗಳು ಹೆಚ್ಚು ಮತ ಪಡೆದು ಅನಂತ ಸುಬ್ಬರಾವ್‌ ಅವರ ಬಣದ ಅಭ್ಯರ್ಥಿಗಳನ್ನು ಹಿಂದಿಕ್ಕಿದ್ದಾರೆ. ಆದರೆ, ಇದೆ ಆ.18 ಮತ ಎಣಿಕೆಯನ್ನು ಸೇರಿಸಿ ಯಾವ ಅಭ್ಯರ್ಥಿಗಳು ಜಯಗಳಿಸಿದ್ದಾರೆ ಎಂಬುದನ್ನು ಚುನಾವಣಾಧಿಕಾರಿಗಳು ಘೋಷಣೆ ಮಾಡಲಿದ್ದಾರೆ.

ಈ ಮೂಲಕ ಭಾರಿ ಹಣಹಣಿ ಏರ್ಪಟ್ಟಿದ್ದ ಈ ಚುನಾವಣೆಯಲ್ಲಿ ಶತಾಯಗತಾಯ ನಾವೇ ಗೆಲ್ಲಬೇಕು ಇಲ್ಲ ನಾವೇ ಗೆಲ್ಲಬೇಕು ಎಂದು ಪೈಪೋಟಿಯಲ್ಲಿ ತಮ್ಮ ತಮ್ಮ ಅಭ್ಯರ್ಥಿಗಳ ಪರ ಮತಪ್ರಚಾರ ಮಾಡಿದ್ದ ಕೂಟದ ಚಂದ್ರು ಬಣ ಮತ್ತು ಅನಂತ ಸುಬ್ಬರಾವ್‌ ಬಣದಲ್ಲಿ ಯಾರ ಪಾಲಾಗಲಿದ್ದಾಳೆ ವಿಜಯಲಕ್ಷ್ಮಿ ಎಂಬ ಕುತೂಹಲಕ್ಕೆ ಇದೇ ಆ.18ರಂದು ತೆರೆ ಬೀಳಲಿದೆ.

ಇನ್ನು ಈ ಸಹಕಾರ ಸಂಘದಲ್ಲಿ ಭಾರಿ ಭ್ರಷ್ಟಾಚಾರವೆ ನಡೆದಿದ್ದು, ಅದನ್ನು ಎಳೆಎಳೆಯಾಗಿ ಹೊರ ತರುವ ಮೂಲಕ ಭ್ರಷ್ಟಚಾರದಲ್ಲಿ ತೊಡಗಿ ಸದಸ್ಯರ ಹಣವನ್ನು ಲೂಟಿ ಮಾಡಿರುವವರಿಗೆ ಕಾನೂನಾತ್ಮಕವಾಗಿ ಶಿಕ್ಷೆ ಕೊಡಿಸಿಯೇ ತೀರುತ್ತೇವೆ ಎಂದು ಪಣತೊಟ್ಟು ಚುನಾವಣೆ ಎದುರಿಸಿರುವ ಕೂಟದ ಪರ ಅಭ್ಯರ್ಥಿಗಳು ಗೆದ್ದು ಬಂದರೆ ಅವರ ಮೇಲೆ ತುಂಬ ಸವಾಲುಗಳಿವೆ. ಜತೆಗೆ ಕೊಟ್ಟ ಮಾತನ್ನು ತಪ್ಪಬಾರದು ಎಂದು ಸಂಘದ ಸದಸ್ಯರು ಈಗಾಗಲೇ ಎಚ್ಚರಿಸುತ್ತಿದ್ದಾರೆ.

Leave a Reply

error: Content is protected !!

Discover more from VIJAYAPATHA.IN

Subscribe now to keep reading and get access to the full archive.

Continue reading

LATEST
ಕ್ರೀಡಾಪಟುಗಳಿಗೆ ಕೊಡುವ ಏಕಲವ್ಯ ಪ್ರಶಸ್ತಿ ಮುಂದುವರಿಸಲಿ: ಶೋಭಾ ನಾರಾಯಣ್ ಬಿಡದಿಯಿಂದ ಹೆದ್ದಾರಿಯಲ್ಲೇ ಮುಂದೆ ಬಂದರೆ ನಿಮಗೆ ಟೋಲ್‌ ಬರೆ ಗ್ಯಾರಂಟಿ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಹೊತ್ತಿ ಉರಿದ ಸ್ಕಾರ್ಪಿಯೋ ಕಾರು KSRTC ಕನಕಪುರ ಬಸ್‌ ನಿಲ್ದಾಣದಲ್ಲಿ ವಿಕಲ ಚೇತನರಿಂದ ₹700 ವಸೂಲಿ, ಕಂಡಕ್ಟರ್ಸ್‌ ಕೊಡಬೇಕು ₹10 : ಟಿಸಿಗೆ ಡಿಎಂ ಸಾಥ್... ಹೆಚ್ಚುವರಿ ಬಡ್ಡಿ ವಿಧಿಸುವ ನೋಂದಾಯಿತ ಲೇವಾದೇವಿಸಂಸ್ಥೆಗಳ ವಿರುದ್ಧ ದೂರು ನೀಡಿ KSRTC: 38+13 ತಿಂಗಳ ವೇತನ ಹಿಂಬಾಕಿ ಯಾವಾಗ ಬರುತ್ತದೆ ಒಕ್ಕೂಟದ ವಿರುದ್ಧ ನೌಕರರು ಕಿಡಿ BMTC: ಅಪಘಾತದಲ್ಲಿ ಮೃತಪಟ್ಟ ನೌಕರರ ಕುಟುಂಬಕ್ಕೆ ₹1 ಕೋಟಿ ಪರಿಹಾರ ಚೆಕ್‌ ವಿತರಿಸಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸಾರಿಗೆ ನಿವೃತ್ತ ನೌಕರರಿಗೆ ಮತ್ತೊಮ್ಮೆ ಮೊಗದೊಮ್ಮೆ ನಿರಾಸೆ: ಭಾರಿ ಆಕ್ರೋಶಗೊಂಡ EPS ನಿವೃತ್ತರು ಕಾರು ಡೋರ್‌ಗೆ ಬೈಕ್‌ ಗುದ್ದಿ ಕೆಳಗೆ ಬಿದ್ದ ಮಹಿಳೆ ಮೇಲೆ ಹರಿದ ಬಿಎಂಟಿಸಿ ಬಸ್‌ ನಾಟಿ ಕೋಳಿ ಸಾರಿನ ಜತೆ ರಾಗಿಮುದ್ದೆ ನುಂಗಿದವರಿಗೆ ಗೊತ್ತು ಅದರ ಗಮ್ಮತ್ತು