ಬೆಂಗಳೂರು: ಕನ್ನಡದ ಬಿಗ್ ಬಾಸ್ ಕಾರ್ಯಕ್ರಮದ ಮೂಲಕ ನಾಡಿನ ಜನರಿಗೆ ಪರಿಚಿನಾದ ಕಿರಿಕ್ ಕೀರ್ತಿ ನ್ಯೂಸ್ ಚಾನೆಲ್‌ಗಳ ಆಂಕರ್ ಆಗಿ ಕನ್ನಡ ಪರ ಹೋರಾಟಗಾರರಾಗಿ ಸಮಾಜದಲ್ಲಿ ಈಗ ಗುರುತಿಸಿಕೊಂಡಿರುವ ವ್ಯಕ್ತಿ.
ಬಹುತೇಕ ಕ್ಷೇತ್ರದಲ್ಲಿ ಹೆಚ್ಚೆಚ್ಚು ಆಕ್ಟಿವ್ ಆಗಿ ಇದ್ದಂತಹ ಕೀರ್ತಿಯವರು ಕೆಲವು ವರ್ಷಗಳ ಹಿಂದಷ್ಟೇ ಅರ್ಪಿತಾ ಎಂಬುವರನ್ನು ಪ್ರೀತಿಸಿ ಮನೆಯವರ ಒಪ್ಪಿಗೆ ಪಡೆದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಈ ದಂಪತಿಗೆ ಆವಿಷ್ಕಾರ್ ಎಂಬ ಮುದ್ದು ಮಗನಿದ್ದಾನೆ.
ಇದರ ಜತೆಗೆ ಬಹಳ ಲವಲವಿಕೆಯಿಂದ ಓಡಾಡಿಕೊಂಡಿದ್ದ ಈ ಜೋಡಿಗಳ ಮೇಲೆ ಅದ್ಯಾರ ಕೆಟ್ಟ ಕಣ್ಣು ಬಿತ್ತು ಗೊತ್ತಿಲ್ಲ ಕಿರಿಕ್ ಕೀರ್ತಿ ಹಾಗೂ ಅರ್ಪಿತಾ ಕೆಲ ತಿಂಗಳುಗಳಿಂದ ಜಗಳ ಮಾಡಿಕೊಂಡು ದೂರಾಗಿದ್ದರು. ಅರ್ಪಿತಾ ತಮ್ಮ ಮಗನೊಂದಿಗೆ ಕಿರಿಕ್ ಕೀರ್ತಿ ಅವರ ಮನೆ ಬಿಟ್ಟು ತವರು ಮನೆ ಸೇರಿದ್ದರು.
ಹೀಗೆ ದಂಪತಿ ಮಧ್ಯೆ ಏನೋ ಬಿರುಕು ಮೂಡಿರಬಹುದು ಕೆಲವು ದಿನಗಳಲ್ಲಿ ಮತ್ತೆ ಒಂದಾಗುತ್ತಾರೆ ಎಂದು ಕುಟುಂಬಸ್ಥರು ಸ್ನೇಹಿತರು ಹಾಗೂ ಅಭಿಮಾನಿಗಳೂ ನಿರೀಕ್ಷೆಯಲ್ಲಿದ್ದರು. ಆದರೆ ಅವರಿಗೆ ಹುಸಿಯಾಗಿದ್ದು ಆಘಾತಕಾರಿ ಸುದ್ದಿ ಒಂದನ್ನು ಕೀರ್ತಿಯೇ ಹೇಳಿಕೊಂಡಿದ್ದಾರೆ.
ಇನ್ಸ್ಟಾಗ್ರಾಮ್ ಹಾಗೂ ಫೇಸ್ಟುಕ್ ಖಾತೆಯಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿರುವ ಕಿರಿಕ್ ಕೀರ್ತಿಯವರು ಇನ್ನು ಮುಂದೆ ಕರಿಮಣಿ ಮಾಲೀಕ ನಾನಲ್ಲ ಎಂಬ ಬರಹದ ಮೂಲಕ ತಮ್ಮ ಪತ್ನಿಯಿಂದ ಅಧಿಕೃತವಾಗಿ ವಿಚ್ಛೇದನ ಪಡೆದಿರುವ ಮಾಹಿತಿಯನ್ನು ಹೊರಹಾಕಿದ್ದಾರೆ.
ಜೋಡಿ ನಂಬರ್ ಒನ್ ಕಾರ್ಯಕ್ರಮದಲ್ಲಿ ಬಹಳನೇ ಲವಲವಿಕೆಯಿಂದ ಕಾಣಿಸಿಕೊಂಡಿದಂತಹ ಈ ಜೋಡಿಗಳು ಸದಾ ಕಾಲ ಹೀಗೆ ಇರಲಿ ಎಂದು ಅದೆಷ್ಟೋ ಕನ್ನಡ ಅಭಿಮಾನಿಗಳು ಹಾರೈಸುತ್ತಿದ್ದರು. ಆದರೆ ವೈಯಕ್ತಿಕ ಬದುಕಿನಲ್ಲಿ ಮೂಡಿದಂತಹ ಕೆಲ ಮನಸ್ತಾಪ ಹಾಗೂ ಅಪನಂಬಿಕೆಯಿಂದ ಕೀರ್ತಿ ಮತ್ತು ಅರ್ಪಿತಾ ಜಗಳವಾಡಿಕೊಂಡು ಅಂತರ ಕಾಯ್ದುಕೊಂಡಿದ್ದರು. ಪ್ರತಿಯೊಬ್ಬರಿಗೂ ಮತ್ತೆ ಈ ಜೋಡಿಗಳು ಮಗನಿಗೋಸ್ಕರವಾದರೂ ಒಂದಾಗುತ್ತಾರೆ, ಎಂಬ ನಂಬಿಕೆ ಇತ್ತು.
ಆದರೆ ಕಿರಿಕ್ ಕೀರ್ತಿ ಅವರು ಕಾನೂನು ಪ್ರಕಾರ ಇವತ್ತು ನನ್ನ ಮತ್ತು ಅರ್ಪಿತಾ ಜೊತೆಗಿನ ಪತಿ ಪತ್ನಿ ಸಂಬಂಧಕ್ಕೆ ಪೂರ್ಣ ವಿರಾಮ ಸಿಕ್ಕಿದೆ. ಇನ್ನು ಮುಂದೆ ನನ್ನ ವೈಯಕ್ತಿಕ ಹಾಗೂ ವ್ಯಾವಹಾರಿಕ ವಿಚಾರಗಳಿಗೂ ಅವಳಿಗೂ ಯಾವುದೇ ಸಂಬಂಧ ಇರುವುದಿಲ್ಲ. ಕಾರಣ ಇಷ್ಟೇ ಅಧಿಕೃತವಾಗಿ ಇನ್ನು ಮುಂದೆ ಕರಿಮಣಿ ಮಾಲೀಕ ನಾನಲ್ಲ.
ಒಂದೊಳ್ಳೆ ಬದುಕು ಅವಳಿಗೂ ಸಿಗಲಿ. ಕಹಿ ನೆನಪುಗಳು ಮರೆತು ಹೊಸ ಜೀವನಕ್ಕೆ ನಾಂದಿ ಹಾಡಲಿ, ನನಗೂ ನಿಮ್ಮ ಪ್ರೀತಿ ಹಾರೈಕೆ ಮುಂದುವರೆಯಲಿ ಇಂತಿ ನಿಮ್ಮ ಕಿರಿಕ್ ಕೀರ್ತಿ ಎಂಬ ಪತ್ರವನ್ನು ಹಂಚಿಕೊಂಡಿದ್ದಾರೆ.
![](https://vijayapatha.in/wp-content/uploads/2023/08/20-Aug-Divorce-1-e1692545124768-300x241.jpg)
![](https://vijayapatha.in/wp-content/uploads/2024/02/QR-Code-VP-1-1-300x62.png)