NEWSನಮ್ಮರಾಜ್ಯರಾಜಕೀಯ

ಉತ್ತರ ಕರ್ನಾಟಕದಲ್ಲಿ ಜೆಡಿಎಸ್‌ 35 ಕ್ಷೇತ್ರ ಗೆಲ್ಲುವ ಸಂಕಲ್ಪ : ಮಾಜಿ ಸಿಎಂ ಎಚ್‌ಡಿಕೆ

ವಿಜಯಪಥ ಸಮಗ್ರ ಸುದ್ದಿ

ಕಲಬುರಗಿ: ಕಲ್ಯಾಣ ಕರ್ನಾಟಕ ಹಾಗೂ ಕಿತ್ತೂರ ಕರ್ನಾಟಕ ಸೇರಿದಂತೆ ಉತ್ತರ ಕರ್ನಾಟಕದಲ್ಲಿ ಜೆಡಿಎಸ್‌ ಕನಿಷ್ಠ 35 ಸ್ಥಾನಗಳಲ್ಲಿ ಜಯ ಗಳಿಸುವ ಗುರಿಯೊಂದಿಗೆ ಕೆಲಸ ಮಾಡಲಾಗುತ್ತಿದೆ. ಜೆಡಿಎಸ್‌ ಬರೀ ಮಂಡ್ಯ, ಹಾಸನಕ್ಕೆ ಸೀಮಿತ ಅನ್ನುವವರಿಗೆ ನಾವು ಈ ಚುನಾವಣೆಯಲ್ಲಿ ಉತ್ತರ ನೀಡುತ್ತೇವೆ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಹೇಳಿದ್ದಾರೆ.

ಪ್ರಗತಿ ಎಲ್ಲಿದೆ ? ಜನರನ್ನು ಭಾವನೆಗಳ ಮೂಲಕ ಕೆರಳಿಸುವವವರಿಂದ ಪ್ರಗತಿ ಸಾಧ್ಯವಿಲ್ಲವೆಂದು ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡ ಅವರು ನಿನ್ನೆ ಹುಬ್ಬಳ್ಳಿಯಲ್ಲಿ ಸ್ವಾಮಿ ವಿವೇಕಾನಂದರ ಕಾರ್ಯಕ್ರಮ ಮಾಡಿ, ಅವರ ಭಾವಚಿತ್ರವನ್ನೇ ಬಳಸಿಲ್ಲ ಎಂದು ಮಾಧ್ಯಮಗಳಲ್ಲಿ ನೋಡಿದ್ದೇನೆ. ಇಂಥವರಿಂದ ನಾಡಿನ ಜನರ ಏಳಿಗೆ ಸಾಧ್ಯವೆ ಎಂದು ಕಿಡಿಕಾರಿದರು.

ಇನ್ನು ಈ ಭಾಗದ ಶಾಸಕರು ತಾವು ಸಿಎಂ ಆಗಿದ್ದಾಗ ಬಂದು ಹೆಸರು ಬದಲಾವಣೆಗೆ ಆಗ್ರಹಿಸಿದ್ದನ್ನು ಮೆಲುಕು ಹಾಕಿದ ಅವರು, ಪ್ರಗತಿಯಾಗದ ಹೊರತು ಹೆಸರು ಬದಲಾವಣೆಯೊಂದೇ ಬೇಡವೆಂದು ಹೇಳಿದ್ದೆ. ಬಿಜೆಪಿಯವರು ಹೆಸರಷ್ಟೇ ಬದಲಾವಣೆ ಮಾಡಿದ್ದಾರೆ. ಜನ ಇಂತಹದ್ದಕ್ಕೆಲ್ಲ ಮರುಳಾಗಬಾರದು ಎಂದರು.

ಜ. 17 ರಿಂದ ಪಂಚರತ್ನ 3ನೇ ಹಂತ: ವಿಜಯಪುರ, ರಾಯಚೂರು ಕೊಪ್ಪಳ ಜಿಲ್ಲೆಗಳಲ್ಲೂ ಪಂಚರತ್ನ ರಥಯಾತ್ರೆ ನಡೆಸಲಾಗುತ್ತದೆ. ಸಂಕ್ರಾಂತಿ ನಂತರದ ಜ.17ರಿಂದ ಸಿಂದಗಿಯಿಂದಲೇ ಕಥಯಾತ್ರೆ 3ನೇ ಹಂತ ಶುರುವಾಗಲಿದೆ, ಮಾರ್ಚ್‌ 20ರವರೆಗೆ ನಿರಂತರವಾಗಿ ರಥಯಾತ್ರೆ ನಡೆಯಲಿದೆ. ರಾಜ್ಯಕ್ಕೆ ಜೆಡಿಎಸ್‌ ಅನಿವಾರ್ಯ ಅನ್ನೋದು ರಥಯಾತ್ರೆಯಿಂದ ಗೊತ್ತಾಗಿದೆ.

ಹೆಚ್ಡಿಕೆ ಅಧಿಕಾರಕ್ಕೆ ಬಂದರೆ ನಮ್ಮ ಸಮಸ್ಯೆ ಬಗೆಹರಿಯುತ್ತೆ, ಕುಮಾರಸ್ವಾಮಿ ಸಿಎಂ ಆಗಬೇಕೆಂಬ ಭಾವನೆ ವ್ಯಕ್ತವಾಗ್ತಿದೆ, ಕಲ್ಯಾಣ ಕರ್ನಾಟಕ ಹೆಸರಿಟ್ಟಮಾತ್ರಕ್ಕೆ ಅಭಿವೃದ್ಧಿ ಆಗಲ್ಲ. ಇಲ್ಲಿನ ರಸ್ತೆಗಳ ಸ್ಥಿತಿ ನೋಡಿದ್ರೆ ದೇವರೇ ಕಾಪಾಡಬೇಕು, ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ನೀಡುವ ಹಣ ಎಲ್ಲಿಗೆ ಹೋಗುತ್ತೆ? ಶೌಚಾಲಯ ಇಲ್ಲದೇ ಮಹಿಳೆಯರು ತಮ್ಮ ಅಳಲು ತೋಡಿಕೊಳ್ತಿದ್ದಾರೆ. ಒಂದು ಕಡೆ ಸ್ವಚ್ಛ ಭಾರತ್‌ ಅಂತಾರೆ, ಎಲ್ಲಿದೆ ಸ್ವಚ್ಛ ಭಾರತ್‌ ಎಂದು ಪ್ರಶ್ನಿಸಿದರು.

Leave a Reply

error: Content is protected !!

Discover more from VIJAYAPATHA.IN

Subscribe now to keep reading and get access to the full archive.

Continue reading

LATEST
ಕ್ರೀಡಾಪಟುಗಳಿಗೆ ಕೊಡುವ ಏಕಲವ್ಯ ಪ್ರಶಸ್ತಿ ಮುಂದುವರಿಸಲಿ: ಶೋಭಾ ನಾರಾಯಣ್ ಬಿಡದಿಯಿಂದ ಹೆದ್ದಾರಿಯಲ್ಲೇ ಮುಂದೆ ಬಂದರೆ ನಿಮಗೆ ಟೋಲ್‌ ಬರೆ ಗ್ಯಾರಂಟಿ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಹೊತ್ತಿ ಉರಿದ ಸ್ಕಾರ್ಪಿಯೋ ಕಾರು KSRTC ಕನಕಪುರ ಬಸ್‌ ನಿಲ್ದಾಣದಲ್ಲಿ ವಿಕಲ ಚೇತನರಿಂದ ₹700 ವಸೂಲಿ, ಕಂಡಕ್ಟರ್ಸ್‌ ಕೊಡಬೇಕು ₹10 : ಟಿಸಿಗೆ ಡಿಎಂ ಸಾಥ್... ಹೆಚ್ಚುವರಿ ಬಡ್ಡಿ ವಿಧಿಸುವ ನೋಂದಾಯಿತ ಲೇವಾದೇವಿಸಂಸ್ಥೆಗಳ ವಿರುದ್ಧ ದೂರು ನೀಡಿ KSRTC: 38+13 ತಿಂಗಳ ವೇತನ ಹಿಂಬಾಕಿ ಯಾವಾಗ ಬರುತ್ತದೆ ಒಕ್ಕೂಟದ ವಿರುದ್ಧ ನೌಕರರು ಕಿಡಿ BMTC: ಅಪಘಾತದಲ್ಲಿ ಮೃತಪಟ್ಟ ನೌಕರರ ಕುಟುಂಬಕ್ಕೆ ₹1 ಕೋಟಿ ಪರಿಹಾರ ಚೆಕ್‌ ವಿತರಿಸಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸಾರಿಗೆ ನಿವೃತ್ತ ನೌಕರರಿಗೆ ಮತ್ತೊಮ್ಮೆ ಮೊಗದೊಮ್ಮೆ ನಿರಾಸೆ: ಭಾರಿ ಆಕ್ರೋಶಗೊಂಡ EPS ನಿವೃತ್ತರು ಕಾರು ಡೋರ್‌ಗೆ ಬೈಕ್‌ ಗುದ್ದಿ ಕೆಳಗೆ ಬಿದ್ದ ಮಹಿಳೆ ಮೇಲೆ ಹರಿದ ಬಿಎಂಟಿಸಿ ಬಸ್‌ ನಾಟಿ ಕೋಳಿ ಸಾರಿನ ಜತೆ ರಾಗಿಮುದ್ದೆ ನುಂಗಿದವರಿಗೆ ಗೊತ್ತು ಅದರ ಗಮ್ಮತ್ತು