VIJAYAPATHA.IN > ವಿಜಯಪಥ > NEWS > ಕೃಷಿ > ಕನ್ನುಘಟ್ಟದ ಬಳಿ ಸಾಕು ಪ್ರಾಣಿಗಳ ಭಕ್ಷಿಸುತ್ತಿದ್ದ ಹೆಣ್ಣು ಚಿರತೆ ಸೆರೆ
ಕನ್ನುಘಟ್ಟದ ಬಳಿ ಸಾಕು ಪ್ರಾಣಿಗಳ ಭಕ್ಷಿಸುತ್ತಿದ್ದ ಹೆಣ್ಣು ಚಿರತೆ ಸೆರೆ
ಸುರಕ್ಷಿತವಾಗಿ ಅರಣ್ಯ ಪ್ರದೇಶಕ್ಕೆ ಬಿಟ್ಟ ಅರಣ್ಯ ಸಿಬ್ಬಂದಿ
admin.savhnMarch 20, 2020
ತುಮಕೂರು: ಹೆಣ್ಣು ಚಿರತೆಯನ್ನು ತಿಪಟೂರು ವಲಯದ ಅರಣ್ಯ ಸಿಬ್ಬಂದಿ ಶುಕ್ರವಾರ ಕಾರ್ಯಾಚರಣೆ ನಡೆಸಿ ಸೆರೆ ಹಿಡಿದಿದ್ದಾರೆ.
ತಿಪಟೂರು ತಾಲೂಕು ನೊಣವಿನಕೆರೆ ಹೋಬಳಿ ಕನ್ನುಘಟ್ಟ ಬಳಿ ನಾಲ್ಕೈದುದಿನಗಳಿಂದ ಸಾರ್ವಜನಿಕರಿಗೆ ಭೀತಿಹುಟ್ಟಿಸಿ ಸಾಕು ಪ್ರಾಣಿಗಳನ್ನು ಭಕ್ಷಿಸುತ್ತಿದ್ದ 2.5 ವರ್ಷದ ಚಿರತೆ ಅರಣ್ಯಸಿಬ್ಬಂದಿ ಇಟ್ಟಿದ್ದ ಬೋನಿಗೆ ಬಿದ್ದಿದೆ.
ಚಿರತೆಯನ್ನು ಸುರಕ್ಷಿತವಾಗಿ ಅರಣ್ಯ ಪ್ರದೇಶಕ್ಕೆ ಬಿಡಲಾಗಿದೆ ಎಂದು ತುಮಕೂರು ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಗಿರೀಶ್ ತಿಳಿಸಿದ್ದಾರೆ.
Related
admin.savhn