NEWSನಮ್ಮಜಿಲ್ಲೆಬೆಂಗಳೂರು

BMTC ನೌಕರರಿಗೆ ಆನ್-ಲೈನ್ ಮೂಲಕ ವೇತನ ಚೀಟಿ ಪಡೆಯುವ ವ್ಯವಸ್ಥೆ- ಜಾರಿ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಅಧಿಕಾರಿಗಳು/ನೌಕರರ 2025ರ ಜವನರಿಯ ವೇತನ ಚೀಟಿ (Pay slip) ಸೇರಿದಂತೆ ಇನ್ನುಮುಂದಿನ ಎಲ್ಲ ತಿಂಗಳುಗಳ ವೇತನ ಚೀಟಿಯೂ ಆನ್-ಲೈನ್ ಮೂಲಕ ಸಿಗಲಿದೆ ಎಂದು ವ್ಯವಸ್ಥಾಪಕ ನಿರ್ದೇಶಕ ರಾಮಚಂದ್ರನ್‌ ತಿಳಿಸಿದ್ದಾರೆ.

ಈ ಎಂಬಂಧ ಸಂಸ್ಥೆಯ ಮುಖ್ಯ ಗಣಕ ವ್ಯವಸ್ಥಾಪಕರು ಎಲ್ಲ ಇಲಾಖಾ ಮುಖ್ಯಸ್ಥರು, ವಿಭಾಗ ನಿಯಂತ್ರಣಾಧಿಕಾರಿಗಳು, ಘಟಕ ವ್ಯವಸ್ಥಾಪಕರು, ಕಾರ್ಯವ್ಯವಸ್ಥಾಪಕರು, ಕೇಂದ್ರೀಯ ಕಾರ್ಯಾಗಾರ, ನಿಲ್ದಾಣಾಧಿಕಾರಿಗಳಿಗೆ ಆನ್-ಲೈನ್ ವೇತನ ಚೀಟಿ ತಂತ್ರಾಂಶ ಜಾರಿಗೊಳಿಸಿರುವ ಬಗ್ಗೆ ತಿಳಿಸಿದ್ದಾರೆ.

ಆನ್-ಲೈನ್ ಮೂಲಕ ವೇತನ ಚೀಟಿ ತಂತ್ರಾಂಶವನ್ನು ಗಣಕ ಇಲಾಖೆಯಲ್ಲಿ ಆಂತರಿಕವಾಗಿ ಅಭಿವೃದ್ಧಿಪಡಿಸಿದ್ದು ಜನವರಿ-2025 ನೇ ಮಾಹೆಯಿಂದ ಸಂಸ್ಥೆಯ ಎಲ್ಲ ನೌಕರರು ಆನ್-ಲೈನ್ ಮೂಲಕ ವೇತನ ಚೀಟಿ ವೀಕ್ಷಿಸುವ/ಮುದ್ರಿಸುವ ವ್ಯವಸ್ಥೆಯನ್ನು ಜಾರಿಗೊಳಿಸಲು ವ್ಯವಸ್ಥಾಪಕ ನಿರ್ದೇಶಕರು ಆದೇಶಿಸಿದ್ದರು.

ಅದರಂತೆ LMS ಸೌಲಭ್ಯವಿರುವ ಸಂಸ್ಥೆಯ ಎಲ್ಲ ನೌಕರರು ಅವರ LMS login ಮುಖಾಂತರ ಹಾಗೂ ಕೇಂದ್ರ ಕಚೇರಿಯ ನೌಕರರು EMS ತಂತ್ರಾಂಶದ ಮುಖಾಂತರ ವೇತನ ಚೀಟಿ ವೀಕ್ಷಿಸುವ/ಮುದ್ರಿಸುವ ವ್ಯವಸ್ಥೆಯನ್ನು ಪಡೆಯಬಹುದಾಗಿದೆ ಎಂದು ತಿಳಿಸಿದ್ದಾರೆ.

ಇನ್ನು ಘಟಕಗಳಿಗೆ ಒದಗಿಸಿರುವ login ನಲ್ಲಿ ಘಟಕದ ಎಲ್ಲ ವರ್ಗದ ನೌಕರರ ವೇತನ ಚೀಟಿಗಳನ್ನು ಪರಿಶೀಲಿಸಲು ಹಾಗೂ ತದನಂತರದಲ್ಲಿ ಘಟಕದಲ್ಲಿ ಶೇಖರಿಸಬೇಕಾದ ವೇತನ ಚೀಟಿಗಳನ್ನು pdf download ಮಾಡಲು ಹಾಗೂ ಮುದ್ರಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದ್ದಾರೆ.

ಮುಂದುವರೆದು, ಘಟಕಗಳಲ್ಲಿ ನೌಕರರ ಹಾಜರಾತಿಯನ್ನು ಗಣಕ ಯಂತ್ರದಲ್ಲಿ ನಮೂದಿಸುವ ಕಾರ್ಯದಲ್ಲಿ ಯಾವುದೇ ಬದಲಾವಣೆ ಇಲ್ಲ. ಈ ಹಿನ್ನಲೆಯಲ್ಲಿ, ಈ ವ್ಯವಸ್ಥೆಯ ಬಗ್ಗೆ ತಮ್ಮ ಇಲಾಖೆಯ/ ಘಟಕದ ಎಲ್ಲ ನೌಕರರಿಗೆ ಮಾಹಿತಿ ನೀಡಲು ಈ ಮೂಲಕ ತಿಳಿಸಲಾಗಿದೆ ಎಂದು ಮುಖ್ಯ ಗಣಕ ವ್ಯವಸ್ಥಾಪಕರು ಹೇಳಿದ್ದಾರೆ.

Megha
the authorMegha

Leave a Reply

error: Content is protected !!