ಬೆಂಗಳೂರು: ಒಂದೆಡೆ ಗೃಹ ಸಚಿವ ಆರಗ ಜ್ಞಾನೇಂದ್ರ ಗುಜರಾತ್ ಪ್ರವಾಸ, ಮತ್ತೊಂದೆಡೆ ಗೃಹಸಚಿವ ಪ್ರವಾಸದಿಂದ ಬಂದ ಮಾರನೇ ದಿನ ಗುಜರಾತ್‍ನಲ್ಲೇ ಸ್ಯಾಂಟ್ರೋ ರವಿ ಬಂಧನ. ಈ ವಿಚಾರ ಸದ್ಯ ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿದೆ. ಎರಡು ಒಂದಕ್ಕೊಂದು ಇಂಟರ್‍ಲಿಂಕ್ ಹೊಂದಿದೆ ಎಂದು ಕಾಂಗ್ರೆಸ್ ಆರೋಪಿಸುತ್ತಿದೆ.
ನಿನ್ನೆ ಗೃಹಸಚಿವ ಆರಗ ಜ್ಞಾನೇಂದ್ರ ಅವರು ಗುಜರಾತಿನ ಅಹಮದಾಬಾದ್‌ಗೆ ತೆರಳಿದ್ದರು. ಇಂದು ಅದೇ ಗುಜರಾತಿನ ಅಹಮದಾಬಾದ್‌ನಲ್ಲಿ ಸ್ಯಾಂಟ್ರೋ ರವಿಯ ಬಂಧನ. ಇದು ಖಂಡಿತಾ ಕಾಕತಾಳೀಯವಲ್ಲ ಎಂದು ಶುಕ್ರವಾರ ಸಂಜೆ ಟ್ವೀಟ್ ಮಾಡಿದೆ.
ಜ್ಞಾನೇಂದ್ರ ಅವರೇ, ಗುಜರಾತಿನಲ್ಲಿ ಸ್ಯಾಂಟ್ರೋ ರವಿ ನಿಮ್ಮ ಮಧ್ಯೆ ನಡೆದ ಡೀಲಿಂಗ್ ಏನು? ವರ್ಗಾವಣೆ ದಂಧೆಯ ಸಾಕ್ಷ್ಯಗಳನ್ನು ಮುಚ್ಚಿಡಲು ಒಪ್ಪಂದ ಮಾಡಿಕೊಂಡಿರಾ? ಆತನ ಬಳಿ ಇದ್ದ ಹಲವು ಸಚಿವರ ಸಿಡಿಗಳನ್ನು ವಶಪಡಿಸಿಕೊಳ್ಳಲು ಹೋಗಿದ್ರಾ? ಅಥವಾ ಹೈಕಮಾಂಡ್‌ಗೆ ಭೇಟಿ ಮಾಡಿಸಿ ಆತನಿಗೆ ಉನ್ನತ ಹುದ್ದೆ ಕೊಡಿಸಲು ಹೋಗಿದ್ರಾ ಎಂದು ಪ್ರಶ್ನಿಸುವ ಮೂಲಕ ಕಾಲೆಳೆದಿದೆ.
ಸ್ಯಾಂಟ್ರೋ ರವಿಯ ಆಪ್ತರಾದ ಗೃಹ ಸಚಿವ JnanendraAraga ಅವರು ನಿನ್ನೆ ಗುಜರಾತಿಗೆ ಹೋಗಿರುತ್ತಾರೆ, ಸ್ಯಾಂಟ್ರೋ ರವಿಯೂ ಗುಜರಾತಿಗೆ ಹೋಗಿರುತ್ತಾನೆ. ಬಂಧನವೂ ಗುಜರಾತಿನಲ್ಲಿ. ರವಿ ಗೃಹಸಚಿವರೊಂದಿಗೆ ಅಲ್ಲಿಗೆ ಹೋಗಿದ್ದನೇ? ಅಲ್ಲಿ ಅವರಿಬ್ಬರ ನಡುವೆ ಒಪ್ಪಂದ ನಡೆದಿರಬಹುದೇ? ತಮ್ಮ ವಿರುದ್ದದ ಸಾಕ್ಷ್ಯ ನಾಶಕ್ಕಾಗಿ ಗುಜರಾತಿಗೆ ಹೋಗಿದ್ದರೆ ಎಂದು ಪ್ರಶ್ನಿಸಿದೆ.
ಸ್ಯಾಂಟ್ರೋ ರವಿಯ ವಿರುದ್ಧ ವರ್ಗಾವಣೆ ದಂಧೆಯ ವಿಚಾರವಾಗಿ ಸರ್ಕಾರ ಇನ್ನೂ ಪ್ರಕರಣ ದಾಖಲಿಸಲಿಲ್ಲ. ಆತನ ಬಂಧನವಾಗಿದ್ದು ಪತ್ನಿಯ ದೂರಿನ ಆಧಾರದಲ್ಲಿ ಹೊರತು ಸರ್ಕಾರದ ದೂರಿನಲ್ಲಿ ಅಲ್ಲ. ಆತನ ಎಲ್ಲಾ ವ್ಯವಹಾರಗಳನ್ನು, ಸರ್ಕಾರ, ಸಚಿವರ ಸಹಬಾಗಿತ್ವವನ್ನು ಲೋಕಾಯುಕ್ತ ಅಥವಾ ನ್ಯಾಯಾಂಗ ತನಿಖೆಗೆ ವಹಿಸಿದಲ್ಲಿ ಮಾತ್ರ ಸತ್ಯ ಹೊರಬರಲು ಸಾಧ್ಯ ಎಂದು ಹೇಳಿದೆ.
ಇನ್ನು ಇದು ಕಾಕಾತಾಳಿಯವೋ..? ತಪ್ಪಿಸಿಕೊಳ್ಳಲು ಸ್ಯಾಂಟ್ರೋ ಮಾಡಿದ ಕಳ್ಳಾಟವೋ ಗೊತ್ತಿಲ್ಲ. 2 ದಿನದ ಹಿಂದಷ್ಟೇ ಗುಜರಾತ್ ಟೂರ್‌ಗೆ ಗೃಹಸಚಿವ ಆರಗ ಜ್ಞಾನೇಂದ್ರ ಹೋಗಿದ್ದರು. ವಿಧಿ-ವಿಜ್ಞಾನ ವಿಶ್ವವಿದ್ಯಾನಿಲಯಕ್ಕೆ ಸಂಬಂಧಪಟ್ಟಂತೆ ಎರಡು ದಿನಗಳ ಗುಜರಾತ್ ಪ್ರವಾಸ ಕೈಗೊಂಡಿದ್ದರು. ಇದೇ ವೇಳೆ ಗುಜರಾತ್ ಸಿಎಂ ಭೂಪೇಂದ್ರ ಪಟೇಲ್ ಭೇಟಿಯಾಗಿ ಸೌಹಾರ್ದಯುತವಾದ ಮಾತುಕತೆ ನಡೆಸಿದ್ರು.
ಅಹಮದಾಬಾದ್‍ನಿಂದ ಮೊನ್ನೆ ರಾತ್ರಿ ಗುಜರಾತ್ ಪ್ರವಾಸ ಮುಗಿಸಿ ಆರಗ ಜ್ಞಾನೇಂದ್ರ ರಾಜ್ಯಕ್ಕೆ ವಾಪಸ್ ಆಗಿದ್ರು. ಇದೇ ಸಂದರ್ಭದಲ್ಲಿ ಅಹಮದಾಬಾದ್‍ನಲ್ಲೇ ಸ್ಯಾಂಟ್ರೋ ರವಿ ಬಂಧನ ಆಗಿರುವುದಕ್ಕೆ ಕಾಂಗ್ರೆಸ್ ಗುಮಾನಿ ವ್ಯಕ್ತಪಡಿಸಿದೆ. ಅಲ್ಲದೇ ಕುಮಾರಸ್ವಾಮಿ ಸಹ ಗೃಹ ಸಚಿವರ ಮೇಲೆ ಅನುಮಾನವ್ಯಕ್ತಪಡಿಸಿ ಟಾಂಗ್ ನೀಡಿದ್ದಾರೆ. ಇದರಿಂದ ಮುಜುಗರಕ್ಕೊಳಗಾದ ಗೃಹಸಚಿವರು ಜಾರಿಕೊಳ್ಳುವ ಮಾತುಗಳನ್ನಾಡುವ ಮೂಲಕ ಆಕ್ರೋಶ ಹೊರಹಾಕುತ್ತಿದ್ದಾರೆ.
![](https://vijayapatha.in/wp-content/uploads/2024/02/QR-Code-VP-1-1-300x62.png)