NEWSಆರೋಗ್ಯನಮ್ಮಜಿಲ್ಲೆ

ಗರ್ಭಪಾತ ಭಯದಿಂದ 7 ತಿಂಗಳು ಮಂಡ್ಯ ಆಸ್ಪತ್ರೆಯಲ್ಲೇ ವಾಸ: ಮಿಮ್ಸ್ ವೈದ್ಯರ ಕಾಳಜಿಯಿಂದ ಹೆಣ್ಣು ಮಗುವಿಗೆ ಜನ್ಮ ನೀಡಿದ ತಾಯಿ

ವಿಜಯಪಥ ಸಮಗ್ರ ಸುದ್ದಿ

ಮಂಡ್ಯ : ಸತತವಾಗಿ ನಾಲ್ಕು ಬಾರಿ ಗರ್ಭಪಾತವಾಗಿದ್ದ ಮಹಿಳೆಯೊಬ್ಬರು ಐದನೇ ಬಾರಿಗೆ ಇಂಥಹದ್ದೇ ಸಮಸ್ಯೆ ಯಾಗಬಹುದು ಎಂಬ ಭಯದಿಂದ ಏಳು ತಿಂಗಳ ಕಾಲ ಮಂಡ್ಯ ಆಸ್ಪತ್ರೆಯಲ್ಲೇ ಇದ್ದುಕೊಂಡು ಈ ಬಾರಿ ಹೆಣ್ಣು ಮಗುವಿಗೆ ಜನ್ಮ ನೀಡಿರುವ ಅಪರೂಪದಲ್ಲೇ ಅಪರೂಪಕ್ಕೆ ಮಂಡ್ಯ ಜಿಲ್ಲಾಸ್ಪತ್ರೆ ನಿದರ್ಶನವಾಗಿದೆ.

ತಾಲೂಕಿನ ತಗ್ಗಹಳ್ಳಿ ಗ್ರಾಮದ ಮಾದೇಶ್ ಎಂಬುವರ ಪತ್ನಿ ಜಯಲಕ್ಷ್ಮೀ ನಗರದ ಮಿಮ್ಸ್ ಆಸ್ಪತ್ರೆಯಲ್ಲಿ ಸೆ. 6ರಂದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ತಾಯಿ– ಮಗು ಆರೋಗ್ಯ ವಾಗಿದ್ದಾರೆ.

ಮಾದೇಶ್ ಹಾಗೂ ಜಯಲಕ್ಷ್ಮೀ ಏಳು ವರ್ಷಗಳ ಹಿಂದೆ ವಿವಾಹವಾಗಿದ್ದರು. ಜಯಲಕ್ಷ್ಮೀಗೆ ಗರ್ಭ ಧರಿಸಿದ ಮೂರೇ ತಿಂಗಳಲ್ಲೇ ಗರ್ಭಪಾತವಾಗುತ್ತಿತ್ತು. ಹೀಗೆ ನಾಲ್ಕು ಬಾರಿ ಮಗು ಕಳೆದುಕೊಂಡಿದ್ದರಿಂದ ಆತಂಕಗೊಂಡಿದ್ದ ಜಯಲಕ್ಷ್ಮೀ ಮಂಡ್ಯದ ಮಿಮ್ಸ್ ಆಸ್ಪತ್ರೆಯ ಸ್ತ್ರೀ ರೋಗ ತಜ್ಞ ಡಾ. ಮನೋಹರ್ ಅವರನ್ನು ಭೇಟಿಮಾಡಿ ತಮ್ಮ ಅಳಲು ತೊಡಿಕೊಂಡಿದ್ದರು.

ಜಯಲಕ್ಷ್ಮೀ ಅವರ ಸಮಸ್ಯೆ ಆಲಿಸಿದ ಡಾ. ಮನೋಹರ್ ಮತ್ತೆ ಈ ರೀತಿಯ ತೊಂದರೆ ಆಗಬಾರದು ಎಂದು ಅವರನ್ನು ಕಳೆದ ಏಳು ತಿಂಗಳಿಂದ ವೈದ್ಯಕೀಯ ನಿಗಾದಲ್ಲಿ ಇರಿಸಿದ್ದರು. ಈಗ ಅವರು 5ನೇ ಬಾರಿಗೆ ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡುವಲ್ಲಿ ಯಶಸ್ವಿ ಯಾಗಿದ್ದು, ಇಡೀ ಕುಟುಂಬದ ಸದಸ್ಯರು ಸಂತಸಗೊಂಡಿದ್ದಾರೆ.

ಸ್ತ್ರೀ ರೋಗ ತಜ್ಞ ಡಾ.ಮನೋಹರ್‌ ಮಾತನಾಡಿ, ಜಯಲಕ್ಷ್ಮೀ ಅವರಿಗೆ ಈ ಹಿಂದೆ ಸತತವಾಗಿ ನಾಲ್ಕು ಬಾರಿ ಗರ್ಭಪಾತವಾಗಿದೆ. ಈಗ 5ನೇ ಬಾರಿಗೆ ಗರ್ಭಣಿಯಾಗಿದ್ದರು. 8/3/2023 ರಂದು ಅವರು ಹೊರರೋಗಿ ವಿಭಾಗಕ್ಕೆ ಬಂದಿದ್ದರು. ಈ ಹಿಂದೆ ಅನೇಕ ಬಾರಿ ಆದಂತೆ ಗರ್ಭಪಾತ ಆಗಬಾರದು ಎಂದು ಅವರಿಗೆ ನಾವು ಆಪ್ತ ಸಮಾಲೋಚನೆ ಮಾಡಿದ್ದೆವು. ಸಮಸ್ಯೆ ಏನು ಎಂದು ತಿಳಿದುಕೊಳ್ಳಲು ಹಲವು ಪರೀಕ್ಷೆಗಳನ್ನು ಮಾಡಬೇಕಿತ್ತು. ಆದರೆ ಅವರು ಬಡವರಾಗಿರುವುದರಿಂದ ಅವರ ಬಳಿ ಹಣ ಇರಲಿಲ್ಲ ಎಂದು ವಿವರಿಸಿದರು.

ಇನ್ನು ತದನಂತರ ನೀವು ಆಸ್ಪತ್ರೆಗೆ ದಾಖಲಾದರೆ ಸಂಪೂರ್ಣ ಜವಾಬ್ದಾರಿಯನ್ನು ನಾವೇ ತೆಗೆದುಕೊಳ್ಳುತ್ತೇವೆ ಎಂದು ಅವರಿಗೆ ಭರವಸೆ ನೀಡಿದ್ದೆವು. ಅದರಂತೆ ಅವರು 10/3/23ರಂದು ದಾಖಲಾದರು. ನಂತರ ಪ್ರಸೂತಿ ಮತ್ತು ಸ್ತ್ರೀ ರೋಗ ವಿಭಾಗದ ವೈದ್ಯರು, ಶುಶ್ರೂಷಕರು ನಿಗಾ ವಹಿಸಿದ್ದರು. ಸೆ.6ರಂದು ಮಹಿಳೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಈಗ ತಾಯಿ– ಮಗು ಆರೋಗ್ಯ ವಾಗಿದ್ದಾರೆ ಎಂದು ತಿಳಿಸಿದರು.

ಜಯಲಕ್ಷ್ಮೀ ಮಾತನಾಡಿ, ಡಾ. ಮನೋಹರ್ ಅವರು ತುಂಬಾ ಕಾಳಜಿ ವಹಿಸಿದ್ದಾರೆ. ಅವರು ನಮಗೆ ದೇವರ ಸಮಾನ. ತಂದೆ ಸಮಾನ. ಅವರಷ್ಟೇ ಅಲ್ಲದೆ ಆಸ್ಪತ್ರೆಯ ಪ್ರತಿಯೊಬ್ಬರೂ ನನ್ನನ್ನು ಮಗಳಂತೆ ನೋಡಿಕೊಂಡಿದ್ದಾರೆ. ಕಳೆದ ಏಳು ತಿಂಗಳುಗಳಿಂದ ವೈದ್ಯರು ಉತ್ತಮವಾಗಿ ಚಿಕಿತ್ಸೆ ನೀಡಿದ್ದು ಅದರ ಫಲವಾಗಿ ನಾನು ಈಗ ಮಗುವನ್ನು ಎತ್ತಿಕೊಂಡಿದ್ದೇನೆ ಎಂದು ಮಗು ಜನಿಸಿರುವುದಕ್ಕೆ ತುಂಬಾ ಖುಷಿ ಪಟ್ಟಿದ್ದಾರೆ.

ಒಟ್ಟಾರೆ ಮಂಡ್ಯ ಜಿಲ್ಲಾಸ್ಪತ್ರೆಯ ಅದುವೇ ಗರ್ಬೀಣಿ ಹಾಗೂ ಹೆರಿಗೆ ವಿಭಾಗದಲ್ಲಿರುವ ವೈದ್ಯರು ಈ ಬಗ್ಗೆ ಉತ್ತಮವಾಗಿ ಸ್ಪಂದಿಸುತ್ತಾರೆ, ಖಾಸಗಿ ಆಸ್ಪತ್ರೆಗಳಲ್ಲಿ ನಾರ್ಮಲ್‌ ಹೆರಿಗೆ ಆಗುದಿಲ್ಲ ಎಂದು ಹೇಳಿದ ಅದೆಷ್ಟೇ ಗರ್ಭಿಣಿಯರಿಗೆ ಇಲ್ಲಿ ನಾರ್ಮಲ್‌ ಹೆರಿಗೆ ಮಾಡಿಸಿರುವ ನಿದರ್ಶನಗಳು ಇವೆ. ಇಲ್ಲಿನ ಪ್ತಸೂತಿ ಮತ್ತು ಸ್ತ್ರೀ ರೋಗ ವಿಭಾಗದ ವೈದ್ಯರು ಮಾತ್ರ ದೇವರಸಮಾನವೇ ಆಗಿದ್ದಾರೆ ಎಂದರೆ ಅದು ತಪ್ಪಾಗಲಾರದು.

Leave a Reply

error: Content is protected !!

Discover more from VIJAYAPATHA.IN

Subscribe now to keep reading and get access to the full archive.

Continue reading

LATEST
ಕ್ರೀಡಾಪಟುಗಳಿಗೆ ಕೊಡುವ ಏಕಲವ್ಯ ಪ್ರಶಸ್ತಿ ಮುಂದುವರಿಸಲಿ: ಶೋಭಾ ನಾರಾಯಣ್ ಬಿಡದಿಯಿಂದ ಹೆದ್ದಾರಿಯಲ್ಲೇ ಮುಂದೆ ಬಂದರೆ ನಿಮಗೆ ಟೋಲ್‌ ಬರೆ ಗ್ಯಾರಂಟಿ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಹೊತ್ತಿ ಉರಿದ ಸ್ಕಾರ್ಪಿಯೋ ಕಾರು KSRTC ಕನಕಪುರ ಬಸ್‌ ನಿಲ್ದಾಣದಲ್ಲಿ ವಿಕಲ ಚೇತನರಿಂದ ₹700 ವಸೂಲಿ, ಕಂಡಕ್ಟರ್ಸ್‌ ಕೊಡಬೇಕು ₹10 : ಟಿಸಿಗೆ ಡಿಎಂ ಸಾಥ್... ಹೆಚ್ಚುವರಿ ಬಡ್ಡಿ ವಿಧಿಸುವ ನೋಂದಾಯಿತ ಲೇವಾದೇವಿಸಂಸ್ಥೆಗಳ ವಿರುದ್ಧ ದೂರು ನೀಡಿ KSRTC: 38+13 ತಿಂಗಳ ವೇತನ ಹಿಂಬಾಕಿ ಯಾವಾಗ ಬರುತ್ತದೆ ಒಕ್ಕೂಟದ ವಿರುದ್ಧ ನೌಕರರು ಕಿಡಿ BMTC: ಅಪಘಾತದಲ್ಲಿ ಮೃತಪಟ್ಟ ನೌಕರರ ಕುಟುಂಬಕ್ಕೆ ₹1 ಕೋಟಿ ಪರಿಹಾರ ಚೆಕ್‌ ವಿತರಿಸಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸಾರಿಗೆ ನಿವೃತ್ತ ನೌಕರರಿಗೆ ಮತ್ತೊಮ್ಮೆ ಮೊಗದೊಮ್ಮೆ ನಿರಾಸೆ: ಭಾರಿ ಆಕ್ರೋಶಗೊಂಡ EPS ನಿವೃತ್ತರು ಕಾರು ಡೋರ್‌ಗೆ ಬೈಕ್‌ ಗುದ್ದಿ ಕೆಳಗೆ ಬಿದ್ದ ಮಹಿಳೆ ಮೇಲೆ ಹರಿದ ಬಿಎಂಟಿಸಿ ಬಸ್‌ ನಾಟಿ ಕೋಳಿ ಸಾರಿನ ಜತೆ ರಾಗಿಮುದ್ದೆ ನುಂಗಿದವರಿಗೆ ಗೊತ್ತು ಅದರ ಗಮ್ಮತ್ತು