NEWSದೇಶ-ವಿದೇಶ

ಚೀನಾದಲ್ಲಿ ಹೊಸ ವೈರಸ್‌ಗೆ ವ್ಯಕ್ತಿ ಬಲಿ

ಹ್ಯಾಂಟ ವೈರಸ್‌ (Hanta virus)ನಿಂದ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದಾಗ ಮೃತಪಟ್ಟ ವ್ಯಕ್ತಿ

Vijayapatha - ವಿಜಯಪಥ
ವಿಜಯಪಥ ಸಮಗ್ರ ಸುದ್ದಿ

ಬೀಜಿಂಗ್‌: ಕೊರೊನಾ ವೈರಸ್‌ನಂತೆ ಚೀನಾದಲ್ಲಿ ಮತ್ತೊಂದು ವೈರಸ್‌ಗೆ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಯುನ್ನಾನ್‌ ಪ್ರಾಂತದಲ್ಲಿ ನಡೆದಿದೆ.

ಕೊವಿಡ್‌-19 ಕೊರೊನಾ ಸೋಂಕು ಈಗಾಲೇ ವಿಶ್ವಾದ್ಯಂತ ಸುಮಾರು 16 ಸಾವಿರ ಮಂದಿಯನ್ನು ಬಲಿ ತೆಗೆದುಕೊಂಡಿದ್ದು, ಅದರ ಬೆನ್ನಲೇ ಈ ಹೊಸ ವೈರಸ್‌ ಕಾಡಿಸಿಕೊಂಡಿರುವುದು ಮತ್ತೆ ಇಡೀ ಪ್ರಪಂಚವನ್ನೇ ರೋಗದ ಬಾಧೆಗೆ ಇನ್ನಷ್ಟು ನೂಕುತ್ತಿದೆ.

ಇನ್ನೂ ಕೊರೊನಾದಿಂದ ಎಚ್ಚೆತ್ತುಕೊಳ್ಳಲಾಗದೆ ಎಲ್ಲಾ ಕೆಲಸಗಳಿಗೂ ವಿರಾಮ ನೀಡಿ ಮನೆಯಿಂದ ಹೊರಬರದಿದ್ದರೂ ಬಾಧಿಸುತ್ತಿರುವ ಕೊರೊನಾದಿಂದ ವಿಶ್ವದ 180 ದೇಶದ ಜನ ತತ್ತರಿಸಿ ಹೋಗುತ್ತಿದ್ದಾರೆ. ಈ ನಡುವೆ ಹೊಸ ಹ್ಯಾಂಟ ವೈರಸ್‌ ಕಾಣಿಸಿಕೊಂಡಿದ್ದು, ಈ ವೈರಸ್‌ಗೆ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿ ಬಲಿಯಾಗಿದ್ದಾನೆ.

ಕೆಲಸ ನಿಮಿತ್ತ ಯುನ್ನಾನ್‌ ಪ್ರಾಂತ್ಯಂದಿದ ಶಂಡಾಂಗ್‌ ಪ್ರಾಂತ್ಯಕ್ಕೆ ಪ್ರಯಾಣ ಬೆಳೆಸುತ್ತಿದ್ದಾಗ ಬಸ್‌ನಲ್ಲಿ ಮೃತಪಟ್ಟಿದ್ದಾನೆ. ಈತನಿಗೆ ಇದ್ದ ವೈರಸ್‌ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಇತರ 30 ಮಂದಿ ಪ್ರಯಾಣಿಕರಿಗೂ ಈ ವೈರಸ್‌ ಸೋಂಕಿರುವ ಶಂಕೆ ವ್ಯಕ್ತವಾಗಿದೆ.

ಹ್ಯಾಂಟ (Hanta virus) ವೈರಸ್‌ ಸಾಮಾನ್ಯವಾಗಿ ಇಲಿಯಿಂದ ಬರುತ್ತದೆ ಎಂದು ವೈದ್ಯರು ಹೇಳಿದ್ದು, ಇದು ಮನುಷ್ಯರಿಂದ ಮನುಷ್ಯರಿಗೆ ಹರಡುವುದಿಲ್ಲ. ಆದರೆ ಇಲಿಗಳ ಮಲ ಮೂತ್ರ ಲಾಲಾರಸ ಸ್ಪರ್ಶಿಸಿ ನಂತರ ಕಣ್ಣು, ಕಿವಿ, ಮೂಗು, ಬಾಯಿ ಮುಟ್ಟಿಕೊಂಡರೆ ಬರುತ್ತದೆ ಎಂದು ತಿಳಿಸಿದ್ದಾರೆ.

ಈ ಸೋಂಕು ತಗುಲಿದರೆ ಜ್ವರ, ತಲೆನೋವು, ಸ್ನಾಯು ಸೆಳೆತ, ಹೊಟ್ಟೆನೋವು,ತಲೆತಿರುಗುವಿಕೆ , ಶೀತ, ವಾಕರಿಕೆ ಮತ್ತು ವಾಂತಿ ಇತರ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ.

ನಂತರದ ದಿನಗಳಲ್ಲಿ ಉಸಿರಾಟದ ತೊಂದರೆ, ಶ್ವಾಸಕೋಶಕ್ಕೆ ನೀರು ತುಂಬಿಕೊಳ್ಳುವುದು. ಇದನ್ನು ಆರಂಭದಲ್ಲೇ ನಿವಾರಿಸಲು ಸಾಧ್ಯವಿದೆ ಎಂದು ವೈದ್ಯರು ಹೇಳಿದ್ದಾರೆ. ಆದರ ಜತೆಗೆ ಇದನ್ನು ಆರಂಭದಲ್ಲಿ ನಿಖರವಾಗಿ ಪತ್ತೆಹಚ್ಚುವ ಕೆಲಸ ಆಗಬೇಕಿದೆ.

Leave a Reply

error: Content is protected !!
LATEST
KSRTC ಚಾಲನಾ ಸಿಬ್ಬಂದಿ ತಮ್ಮ ಜೀವವನ್ನು ಪಣಕ್ಕಿಟ್ಟು ಸಲ್ಲಿಸುವ ಸೇವೆ ಅವಿಸ್ಮರಣೀಯ- ಶ್ರೀ ಸೌಮ್ಯನಾಥ ಸ್ವಾಮೀಜಿ ಶ್ಲಾಘ... ಬನ್ನೂರು: ಸ್ಮಶಾನ ರಸ್ತೆಗಾಗಿ ಶವವಿಟ್ಟು ಮುಖ್ಯರಸ್ತೆ ಬಂದ್‌ಮಾಡಿ ಪ್ರತಿಭಟನೆ ವೇತನ ಸಂಬಂಧ ಸಾರಿಗೆ  4 ನಿಗಮಗಳ ನೌಕರರ ಅಭಿಪ್ರಾಯ ಸಂಗ್ರಹ ಅಭಿಯಾನ ದೀಪಾವಳಿಗೂ ಮುನ್ನ ಸರ್ಕಾರಿ ನೌಕರರಿಗೆ ಗಿಫ್ಟ್‌: ಶೇ.3ರಷ್ಟು ತುಟ್ಟಿಭತ್ಯೆ ಹೆಚ್ಚಳ KSRTC: ಒಂದೇ ಆಧಾರ್‌ನ 3ಜೆರಾಕ್ಸ್‌ ಪ್ರತಿ ಹಿಡಿದು ಟಿಕೆಟ್‌ ಕೇಳಿದ ನಾರಿಮಣಿಗಳು- ಪರಿಶೀಲಿಸಿದ ಕಂಡಕ್ಟರ್‌ಗೆ ನಾನು ಸರ... ಅ.21 ರಿಂದ ನ.20 ರವರೆಗೆ 6ನೇ ಸುತ್ತಿನ ಕಾಲುಬಾಯಿ ಲಸಿಕೆ: DC ಡಾ.ಶಿವಶಂಕರ ಪೋಕ್ಸೋ ಕಾಯ್ದೆಯನ್ವಯ ಸಂತ್ರಸ್ತ ಮಕ್ಕಳಿಗೆ ಸೇವೆ ಸಲ್ಲಿಸಲು ಅರ್ಜಿ ಆಹ್ವಾನ ಬೆಂ.ಗ್ರಾಂ.ಜಿಲ್ಲೆ: ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಮಹೇಶ್ವರಿಗೆ 1 ಲಕ್ಷ ರೂ. ಪ್ರೋತ್ಸಾಹ ಧ... BBMP: ಮಳೆಯಿಂದ ಸಮಸ್ಯೆ ಆಗಿದ್ದರೆ ಕೂಡಲೇ 1533ಕ್ಕೆ ಕರೆ ಮಾಡಿ ದೂರು ನೀಡಿ ದೀಪಾವಳಿ ಹಬ್ಬ ಹಿನ್ನೆಲೆ KKRTC ನೌಕರರಿಗೆ ಅ.29ರಂದೇ ವೇತನ ಕೊಡಲು ಎಂಡಿ ರಾಚಪ್ಪ ನಿರ್ದೇಶನ