NEWSನಮ್ಮಜಿಲ್ಲೆರಾಜಕೀಯ

ಜನರಿಗೆ ಸೀರೆ, ರಗ್ಗಿನ ಆಮಿಷ ತೋರಿದರೆ ಸಮಾಜ ಅಭಿವೃದ್ಧಿ ಆಗಲ್ಲ: ಶಾಸಕ ನರೇಂದ್ರ

ವಿಜಯಪಥ ಸಮಗ್ರ ಸುದ್ದಿ

ಹನೂರು : ಜನರಿಗೆ ಸೀರೆ, ರಗ್ಗಿನ ಆಮಿಷ ತೋರಿದರೆ ಸಮಾಜ ಅಭಿವೃದ್ಧಿ ಆಗಲ್ಲ ಬಡವರ ಪರ ಕಾಳಜಿ‌ ಇದ್ದ ಕಾಂಗ್ರೇಸ್ ಸರ್ಕಾರ ಮತ್ತೆ ಬಂದರೆ ಮಾತ್ರ ಅಭಿವೃದ್ಧಿ ಎಂದು ಕೆಲ ಬಿಜೆಪಿ‌ ಮುಖಂಡರಿಗೆ ಶಾಸಕ ನರೇಂದ್ರ ಟಾಂಗ್ ಕೊಟ್ಟ ಪ್ರಸಂಗ ಜರುಗಿದೆ.

ತಾಲೂಕಿನ ಲೊಕ್ಕನಹಳ್ಳಿ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ಸಿಸಿ ರಸ್ತೆ,ಚರಂಡಿ ಅಭಿವೃದ್ಧಿ ಕಾಮಗಾರಿ ಸೇರಿದಂತೆ ಸಮುದಾಯ ಭವನಗಳ ಉದ್ಘಾಟನೆ ನೆರವೇರಿಸಿ ಮಾತನಾಡಿದರು.

ಹನೂರು ವಿಧಾನಸಭಾ ಕ್ಷೇತ್ರದಲ್ಲಿ ಕೆಲವು ಬೆಂಗಳೂರಿನಿಂದ ಬಂದಿರುವ ಹಣವಂತರು ಜನರಿಗೆ ಸೀರೆ, ರಗ್ಗು ಹಾಗೂ ಇತರೆ ಆಮಿಷಗಳನ್ನು ನೀಡಿ ಅಭಿವೃದ್ಧಿ ಮಾಡುತ್ತೇನೆಂದು ಸುಳ್ಳು ಭರವಸೆಗಳನ್ನು ನೀಡಿ ಜನರನ್ನು ದಿಕ್ಕು ತಪ್ಪಿಸುತ್ತಿದ್ದಾರೆ. ಆದರೆ ಜನರು ಸ್ವಾಭಿಮಾನಿಗಳು ನಿಮ್ಮ ಆಮಿಷಗಳಿಗೆ ಬಗ್ಗುವುದಿಲ್ಲ ಚುನಾವಣೆಗೆ ಇವು ಮಾನದಂಡವಲ್ಲ ಜನರಿಗೆ ನಿಮ್ಮ ಕೊಡುಗೆ ಏನು ಎಂದು ನೇರವಾಗಿ ಹೆಸರೇಳದೆ ಟಿಕಿಸಿದರು.

ನನ್ನ ಶಾಸಕ ಅವಧಿಯಲ್ಲಿ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಿದ್ದೇನೆ. ಶಾಲೆಗಳನ್ನು ತೆರೆದು ಶಿಕ್ಷಣ ನೀಡಿ ಪ್ರಜ್ಞಾವಂತರನ್ನಾಗಿ ಮಾಡಲು ಆದ್ಯತೆ ನೀಡಿದ್ದೇವೆ. ಸೋಲಿಗರ ಅಭಿವೃದ್ಧಿ ಸೇರಿದಂತೆ ಇತರ ಸಮುದಾಯ ಅಭಿವೃದ್ಧಿಗೆ ಹಗಲಿರುಲು ಎನ್ನದೆ ಶ್ರಮ ಪಟ್ಟಿದ್ದೇನೆ, ಈಗಿರುವಾಗ ಜನರಿಗೆ ರಗ್ಗು ಸೀರೆ ನೀಡಿ ಜನರನ್ನು ಮಲಿಗ್ಸೋದಾ ನಿಮ್ಮ ಅಭಿವೃದ್ಧಿ ಎಂದು ಹನೂರು ಕ್ಷೇತ್ರದಲ್ಲಿ ಕೆಲ ಬಿಜೆಪಿ ಮುಖಂಡರ ಹೆಸರು ಹೇಳದೆ ಟೀಕಿಸಿದ್ದಾರೆ.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸರಕಾರದ ಅವಧಿಯಲ್ಲಿ ಕ್ಷೇತ್ರಕ್ಕೆ ಸುಮಾರು 3500ಕೋಟಿ ಅನುದಾನವನ್ನು ನೀಡಲಾಗಿದ್ದು ಈಗಲೂ ಅವರು ನೀಡಿರುವ ಅನುದಾನದಲ್ಲಿ ಕೆಲಸಗಳು ನಡೆಯುತ್ತಿದೆ ಎಂದರು.

ಬಿಜೆಪಿ ಸರ್ಕಾರ ಅವಧಿಯಲ್ಲಿ 3ವರ್ಷದಲ್ಲಿ 25ಕೋಟಿ ರೂ ಹಣವನ್ನು ಒತ್ತಾಯದ ಮೆರೆಗೆ ಬಿಡುಗಡೆ ಮಾಡಲಾಗಿದೆ ಹಾಗೂ ಪಾಳ್ಯ ಹಾಗೂ ಮಲೆ ಮಹದೇಶ್ವರ ಬೆಟ್ಟದಲ್ಲಿರುವ 30ಹಾಸಿಗೆ ಆಸ್ಪತ್ರೆ ಯನ್ನು ಮೇಲದರ್ಜೆಗೆ ಏರಿಸಲಾಗಿದೆ. ಆದರೆ ಹನೂರು ತಾಲ್ಲೂಕು ಕೇಂದ್ರ ಆಸ್ಪತ್ರೆಯನ್ನು ಮೇಲದರ್ಜೆಗೆ ಏರಿಸಲು ಸರಕಾರ ಮೀನಾ ಮೇಷ ಎಣಿಸುತ್ತಿದೆ ಎಂದರು.

ಅರಣ್ಯ ಹಕ್ಕು ಕಾಯ್ದೆಯಡಿಯಲ್ಲಿ 18000 ಜನರಿಗೆ 3800 ಎಕ್ಟರ್ ಜಮೀನನ್ನು ಮುಂಜೂರು ಮಾಡಿಸಿದ್ದೇನೆ, ನನ್ನ ಅಧಿಕಾರ ಅವಧಿಯಲ್ಲಿ ಮೊರಾರ್ಜಿ ಶಾಲೆ, ಏಕಲವ್ಯ ವಸತಿ ಶಾಲೆ ಸೇರಿದಂತೆ, ವಿವಿಧ ಸಮುದಾಯದ ಭವನಗಳನ್ನ ನಿರ್ಮಾಣ ಮಾಡಲಾಗಿದೆ ಆದರೆ ಬಿಜೆಪಿ ಸರಕಾರ ಬಂದ ಮೇಲೆ ಅನುದಾನವನ್ನು ನೀಡಿಲ್ಲ, ಕ್ಷೇತ್ರದಲ್ಲಿ ಸುಮಾರು 35ಸಾವಿರ ಜನರಿಗೆ ಉಚಿತ ಗ್ಯಾಸ್ ವಿತರಣೆ ಮಾಡಲಾಗಿದೆ, ಕ್ಷೇತ್ರದಾದ್ಯಂತ 185 ಸೋಲಿಗ ಪೋಡುಗಳಿಗೆ ರಸ್ತೆ ಕುಡಿಯುವ ನೀರಿನ ವ್ಯವಸ್ಥೆ ಸೇರಿದಂತೆ ಅಭಿವೃದ್ಧಿ ಕೆಲಸಗಳನ್ನು ಕೈಗೊಂಡಿದ್ದೇನೆ ಎಂದರು.

ರಸ್ತೆ ಅಭಿವೃದ್ಧಿಗೆ ಹಲವು ಬಾರಿ ಮನವಿ : ಹನೂರು ಮಾರ್ಗದಿಂದ ಬಂಡಳ್ಳಿ ರಸ್ತೆ ಮಾರ್ಗವು ತುಂಬಾ ಹದಗೆಟ್ಟಿದ್ದು ಹಲವು ಬಾರಿ ಮುಖ್ಯಮಂತ್ರಿ, ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಇಲಾಖೆ ಸಚಿವರಿಗೆ, ಅಧಿಕಾರಿಗಳಿಗೆ ಹಲವು ಬಾರಿ ಮನವಿ ನೀಡಿದರು ಬಿಜೆಪಿ ಸರಕಾರ ಗಣನೆಗೆ ತಗೆದುಕೊಳ್ಳುತ್ತಿಲ್ಲ ಎಂದು ಬೇಸರ ವ್ಯಕ್ತ ಪಡಿಸಿದರು.

ಮಹಾಲಿಂಗನ ಕಟ್ಟೆ ಮುಖ್ಯರಸ್ತೆಯನ್ನು ಸಮಾಜ ಸೇವಕರು ಅಭಿವೃದ್ಧಿ ಮಾಡುತ್ತಿದ್ದಾರೆ ಎಂದು ಕೇಳಿದ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಶಾಸಕರು ರಸ್ತೆಯೂ ಕೆ ಆರ್ ಐ ಡಿ ಎಲ್ ನಿಗಮದಿಂದ ಅನುದಾನ ನೀಡಲಾಗಿದೆ, ಕಾಮಗಾರಿಯು ಸಹ ಆರಂಭ ವಾಗಿದೆ ಆದರೆ ಸ್ಥಳೀಯ ಶಾಸಕರನ್ನು ಕಡೆಗಣಿಸಿದ್ದಾರೆ, ಕ್ಷೇತ್ರದಲ್ಲಿ ಏನೇ ಅಭಿವೃದ್ಧಿ ಕೆಲಸಗಳು ಅನುಷ್ಠಾನಕ್ಕೆ ಬರ ಬೇಕಾದರೆ ಶಾಸಕರ ಮೂಲಕ ಅಭಿವೃದ್ಧಿಯಾಗ ಬೇಕೇ ಹೊರತು ಯಾರಿಂದಲೂ ಸಾಧ್ಯವಿಲ್ಲ,ಆದರೆ ಕೆಲವರು ಜನರ ಕಣ್ಣಿಗೆ ಮಣ್ಣು ಎರಚುತ್ತಿದ್ದಾರೆ ಎಂದು ಟೀಕಿಸಿದರು.

ಈ ಸಂದರ್ಭದಲ್ಲಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪಡೆದ ಸೋಲಿಗ ಮಾದಮ್ಮ, ಮಾಜಿ ಜಿಪಂ. ಉಪಾಧ್ಯಕ್ಷ ಬಸವರಾಜು, ಕೊಪ್ಪಾಳಿ ಮಹಾದೇವ ನಾಯ್ಕ, ಮುಖಂಡರಾದ ಪುಟ್ಟವೀರ ನಾಯ್ಕ್, ಪುಟ್ಟರಾಜು, ಚೇತನ್ ಮಾದೇಶ್, ಅಂಕರಾಜು,ಸಿದ್ದರಾಜು, ವಿಷ್ಣು ಕುಮಾರ್, ಅಂಕರಾಜು, ಜಗದೀಶ್, ಮಾದೇಶ್, ನಾಗರಾಜು, ರಂಗ ಶೆಟ್ಟಿ, ವೇಲು, ಮಹಾದೇವ,ಸತೀಶ್ ಚಂದ್ರು ಮಹದೇವ್ ಇನ್ನಿತರರು ಇದ್ದರು.

Leave a Reply

error: Content is protected !!

Discover more from VIJAYAPATHA.IN

Subscribe now to keep reading and get access to the full archive.

Continue reading

LATEST
ಕ್ರೀಡಾಪಟುಗಳಿಗೆ ಕೊಡುವ ಏಕಲವ್ಯ ಪ್ರಶಸ್ತಿ ಮುಂದುವರಿಸಲಿ: ಶೋಭಾ ನಾರಾಯಣ್ ಬಿಡದಿಯಿಂದ ಹೆದ್ದಾರಿಯಲ್ಲೇ ಮುಂದೆ ಬಂದರೆ ನಿಮಗೆ ಟೋಲ್‌ ಬರೆ ಗ್ಯಾರಂಟಿ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಹೊತ್ತಿ ಉರಿದ ಸ್ಕಾರ್ಪಿಯೋ ಕಾರು KSRTC ಕನಕಪುರ ಬಸ್‌ ನಿಲ್ದಾಣದಲ್ಲಿ ವಿಕಲ ಚೇತನರಿಂದ ₹700 ವಸೂಲಿ, ಕಂಡಕ್ಟರ್ಸ್‌ ಕೊಡಬೇಕು ₹10 : ಟಿಸಿಗೆ ಡಿಎಂ ಸಾಥ್... ಹೆಚ್ಚುವರಿ ಬಡ್ಡಿ ವಿಧಿಸುವ ನೋಂದಾಯಿತ ಲೇವಾದೇವಿಸಂಸ್ಥೆಗಳ ವಿರುದ್ಧ ದೂರು ನೀಡಿ KSRTC: 38+13 ತಿಂಗಳ ವೇತನ ಹಿಂಬಾಕಿ ಯಾವಾಗ ಬರುತ್ತದೆ ಒಕ್ಕೂಟದ ವಿರುದ್ಧ ನೌಕರರು ಕಿಡಿ BMTC: ಅಪಘಾತದಲ್ಲಿ ಮೃತಪಟ್ಟ ನೌಕರರ ಕುಟುಂಬಕ್ಕೆ ₹1 ಕೋಟಿ ಪರಿಹಾರ ಚೆಕ್‌ ವಿತರಿಸಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸಾರಿಗೆ ನಿವೃತ್ತ ನೌಕರರಿಗೆ ಮತ್ತೊಮ್ಮೆ ಮೊಗದೊಮ್ಮೆ ನಿರಾಸೆ: ಭಾರಿ ಆಕ್ರೋಶಗೊಂಡ EPS ನಿವೃತ್ತರು ಕಾರು ಡೋರ್‌ಗೆ ಬೈಕ್‌ ಗುದ್ದಿ ಕೆಳಗೆ ಬಿದ್ದ ಮಹಿಳೆ ಮೇಲೆ ಹರಿದ ಬಿಎಂಟಿಸಿ ಬಸ್‌ ನಾಟಿ ಕೋಳಿ ಸಾರಿನ ಜತೆ ರಾಗಿಮುದ್ದೆ ನುಂಗಿದವರಿಗೆ ಗೊತ್ತು ಅದರ ಗಮ್ಮತ್ತು