NEWSನಮ್ಮಜಿಲ್ಲೆ

ಜೀವನದ ಸಾರ್ಥಕತೆಗೆ ಶ್ರೀಕೃಷ್ಣನ ಸಂದೇಶ ಅತ್ಯಗತ್ಯ: ಶಾಸಕ ಮಹದೇವ್

ವಿಜಯಪಥ ಸಮಗ್ರ ಸುದ್ದಿ

ಪಿರಿಯಾಪಟ್ಟಣ: ಜೀವನದ ಸಾರ್ಥಕತೆ ಹಾಗೂ ಧರ್ಮಮಾರ್ಗದಲ್ಲಿ ನಡೆಯಲು ಶ್ರೀಕೃಷ್ಣನ ಸಂದೇಶಗಳು ದಾರಿದೀಪವಾಗಲಿವೆ ಎಂದು ಶಾಸಕ ಕೆ.ಮಹದೇವ್ ತಿಳಿಸಿದರು.

ಪಟ್ಟಣದ ತಾಲೂಕು ಆಡಳಿತ ಭವನದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಹಾಗೂ ಶ್ರೀಕೃಷ್ಣ ಯಾದವ(ಗೊಲ್ಲ)ರ ಸಂಘದ ವತಿಯಿಂದ ಸೋಮವಾರ ಆಯೋಜಿಸಿದ್ದ ಶ್ರೀಕೃಷ್ಣ ಜಯಂತಿಯಲ್ಲಿ ಮಾತನಾಡಿದರು.

ದುಷ್ಟಶಕ್ತಿಗಳು ಹೆಚ್ಚಾದಾಗ ಅದನ್ನು ನಿಯಂತ್ರಣ ಮಾಡಲು ಯುದ್ಧ ಮಾಡಲೇಬೇಕು ಎಂದು ಶ್ರೀಕೃಷ್ಣ ಮಹಾಭಾರತದ ಮೂಲಕ ಇಡೀ ಜಗತ್ತಿಗೆ ತೋರಿಸಿಕೊಟ್ಟಿದ್ದಾನೆ. ಕೌರವರ ಪಾಲಿಗೆ ವಿರೋಧಿಯಾಗಿ ಕಂಡರೂ ಧರ್ಮದ ಉಳಿವಿಗಾಗಿ ಪಾಂಡವರ ಪಾಲಿಗೆ ಧರ್ಮಪರಿಪಾಲಕನಾಗಿ ನಿಲ್ಲುತ್ತಾನೆ. ಹಾಗಾಗಿ ಕೃಷ್ಣನ ಸಂದೇಶಗಳು ಇಡೀ ಜಗತ್ತಿಗೆ ಜೀವನದ ಪಾಠವಾಗಿ ಧರ್ಮದ ಹಾದಿಯಲ್ಲಿ ನಡೆವವರಿಗೆ ವರವಾಗಿಯೂ, ಅಧರ್ಮದ ಹಾದಿಯಲ್ಲಿ ನಡೆಯುವವರಿಗೆ ಶಾಪವಾಗಿಯೂ ಪರಿಣಮಿಸಿವೆ ಎಂದು ಹೇಳಿದರು.

ಶ್ರೀಕೃಷ್ಣನ ಸಂದೇಶಗಳು ಸಮಾಜದ ತಪ್ಪುಗಳನ್ನು ತಿದ್ದುವ, ಸತ್ಯದ ಪಥದಲ್ಲಿ ಸಾಗುವ ದಾರಿದೀಪವಾಗಿವೆ. ಆದ್ದರಿಂದ ಶ್ರೀಕೃಷ್ಣ ಹಾಕಿಕೊಟ್ಟ ಮಾರ್ಗದರ್ಶನವನ್ನು ಅಳವಡಿಕೊಳ್ಳಬೇಕು ಎಂದರು.

ತಾಲೂಕು ಶ್ರೀ ಕೃಷ್ಣ ಯಾದವ( ಗೊಲ್ಲ)ರ ಸಂಘದ ಅಧ್ಯಕ್ಷ ಪಿ.ಡಿ.ಪ್ರಸನ್ನ ಮಾತನಾಡಿ, ಗೊಲ್ಲ ಸಮುದಾಯವು ಆರ್ಥಿಕ, ಸಾಮಾಜಿ, ಶೈಕ್ಷಣಿಕ ಹಾಗೂ ರಾಜಕೀಯವಾಗಿ ಹಿಂದುಳಿದಿರುವ ಕಾರಣ ಸರ್ಕಾರ ಕಾಡು ಗೊಲ್ಲರ ಅಭಿವೃದ್ದಿ ನಿಗಮ ರಚಿಸಿದ್ದರೂ ಈ ಸಮುದಾಯ ವಿವಿಧ ಪಂಗಡಗಳಾಗಿ ಹರಿದು ಹಂಚಿಹೋಗಿರುವುದರಿಂದ ಯಾವುದೇ ಸವಲತ್ತುಗಳನ್ನು ಪಡೆಯಲಾಗುತ್ತಿಲ್ಲ.

ತಾಲೂಕಿನಲ್ಲಿ ಇವರಿಗೆ ವಸತಿ, ನಿವೇಶನ ಸೇರಿದಂತೆ ಸರ್ಕಾರದ ಸವಲತ್ತುಗಳು ನೀಡುವಲ್ಲಿ ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಇದರ ಬಗ್ಗೆ ಶಾಸಕರು ಗಮನ ಹರಿಸಬೇಕು, ಪಟ್ಟಣದಲ್ಲಿ ಜನಾಂಗಕ್ಕೆ ಸ್ಮಶಾನ ಜಾಗ ಹಾಗೂ ಶ್ರೀ ಕೃಷ್ಣ ಮಂದಿರ ನಿರ್ಮಾಣಕ್ಕೆ ನಿವೇಶನ ಹಾಗೂ ಅನುದಾನ ನೀಡಬೇಕು ಎಂದು ಶಾಸಕರಲ್ಲಿ ಮನವಿ ಮಾಡಿದರು.

ಬಿಇಒ ತಿಮ್ಮೇಗೌಡ ಮಾತನಾಡಿ, ಶ್ರೀಕೃಷ್ಣ ಯಾದವ ಜನಾಂಗದಲ್ಲಿ ಹುಟ್ಟಿ, ಜಗತ್ ರಕ್ಷಕ ಹಾಗೂ ವಿಶ್ವಕ್ಕೆ ಗುರುವಾಗಿದ್ದಾನೆ. ಅಧರ್ಮ, ಅಸತ್ಯವನ್ನು ತೊಲಗಿಸುವ ನಿಟ್ಟಿನಲ್ಲಿ ಅಧರ್ಮ ತಲೆಎತ್ತಿದಾಗಲೆಲ್ಲ ಜನ್ಮವೆತ್ತಿ ಬಂದು ಧರ್ಮ ರಕ್ಷಣೆ ಮಾಡುತ್ತೇನೆ ಎಂದು ಶಿಷ್ಟರ ಪಾಲಿನ ರಕ್ಷಕನಾಗಿ, ದುಷ್ಟರ ಪಾಲಿನ ಶಿಕ್ಷಕನಾಗಿ ನಿಲ್ಲುವ ಮೂಲಕ ವಿಶ್ವಕ್ಕೆ ದಾರಿತೋರಿಸುವ ನಿಟ್ಟಿನಲ್ಲಿ ಶ್ರೀಕೃಷ್ಣನ ಸಂದೇಶಗಳು ಅಜರಾಮರವಾಗಿವೆ. ಭಗವದ್ಗೀತೆಯಲ್ಲಿ ಸತ್ಯದ ಮಾರ್ಗ, ಜೀವನದ ವಿಧಾನವನ್ನು ತಿಳಿಸುವ ಸಾಕಷ್ಟು ಅಂಶಗಳನ್ನು ಕಾಣಬಹುದು ಎಂದರು.

ತಹಸೀಲ್ದಾರ್ ಯದುಗಿರೀಶ್, ತಾಪಂ ಇಒ ಸಿ.ಆರ್.ಕೃಷ್ಣ ಕುಮಾರ್, ಕೃಷಿ ಇಲಾಖೆ ಸಹಾಯಕ ನಿರ್ದೇಶಕ, ಪ್ರಸಾದ್, ವಿವಿಧ ಇಲಾಖೆಗಳ ಅಧಿಕಾರಿಗಳಾದ ಡಾ.ಸೋಮಯ್ಯ, ಸಿದ್ದೇಗೌಡ, ಶಿರಸ್ತೇದಾರ್ ವಿನಯಕುಮಾರ್, ಪುರಸಭಾ ಅಧ್ಯಕ್ಷ ಮಂಜುನಾಥ್ ಸಿಂಗ್, ಎಇಇಗಳಾದ ಕುಮಾರ್, ಮಂಜುನಾಥ್, ಶಿವಕುಮಾರ್, ಎಂ.ಕೆ.ಪ್ರಕಾಶ್.

ಮಾಜಿ ಪುರಸಭಾ ಸದಸ್ಯೆ ತನುಜರಮೇಶ್, ತಾಲೂಕು ಯಾದವ ಸಂಘದ ಉಪಾಧ್ಯಕ್ಷ ವೆಂಕಟೇಶ್, ಪ್ರಧಾನ ಕಾರ್ಯದರ್ಶಿ ಪರಮೇಶ್, ಪದಾಧಿಕಾರಿಗಳಾದ ವಿಶ್ವನಾಥ್, ಸತ್ಯನಾರಾಯಣ, ಸಂತೋಷ್, ಜ್ಞಾನೇಶ್ ತೇಜಸ್, ಅಂಕನಹಳ್ಳಿ ಕುಮಾರ್ ಮತ್ತಿತರರು ಇದ್ದರು.

Leave a Reply

error: Content is protected !!

Discover more from VIJAYAPATHA.IN

Subscribe now to keep reading and get access to the full archive.

Continue reading

LATEST
ಕ್ರೀಡಾಪಟುಗಳಿಗೆ ಕೊಡುವ ಏಕಲವ್ಯ ಪ್ರಶಸ್ತಿ ಮುಂದುವರಿಸಲಿ: ಶೋಭಾ ನಾರಾಯಣ್ ಬಿಡದಿಯಿಂದ ಹೆದ್ದಾರಿಯಲ್ಲೇ ಮುಂದೆ ಬಂದರೆ ನಿಮಗೆ ಟೋಲ್‌ ಬರೆ ಗ್ಯಾರಂಟಿ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಹೊತ್ತಿ ಉರಿದ ಸ್ಕಾರ್ಪಿಯೋ ಕಾರು KSRTC ಕನಕಪುರ ಬಸ್‌ ನಿಲ್ದಾಣದಲ್ಲಿ ವಿಕಲ ಚೇತನರಿಂದ ₹700 ವಸೂಲಿ, ಕಂಡಕ್ಟರ್ಸ್‌ ಕೊಡಬೇಕು ₹10 : ಟಿಸಿಗೆ ಡಿಎಂ ಸಾಥ್... ಹೆಚ್ಚುವರಿ ಬಡ್ಡಿ ವಿಧಿಸುವ ನೋಂದಾಯಿತ ಲೇವಾದೇವಿಸಂಸ್ಥೆಗಳ ವಿರುದ್ಧ ದೂರು ನೀಡಿ KSRTC: 38+13 ತಿಂಗಳ ವೇತನ ಹಿಂಬಾಕಿ ಯಾವಾಗ ಬರುತ್ತದೆ ಒಕ್ಕೂಟದ ವಿರುದ್ಧ ನೌಕರರು ಕಿಡಿ BMTC: ಅಪಘಾತದಲ್ಲಿ ಮೃತಪಟ್ಟ ನೌಕರರ ಕುಟುಂಬಕ್ಕೆ ₹1 ಕೋಟಿ ಪರಿಹಾರ ಚೆಕ್‌ ವಿತರಿಸಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸಾರಿಗೆ ನಿವೃತ್ತ ನೌಕರರಿಗೆ ಮತ್ತೊಮ್ಮೆ ಮೊಗದೊಮ್ಮೆ ನಿರಾಸೆ: ಭಾರಿ ಆಕ್ರೋಶಗೊಂಡ EPS ನಿವೃತ್ತರು ಕಾರು ಡೋರ್‌ಗೆ ಬೈಕ್‌ ಗುದ್ದಿ ಕೆಳಗೆ ಬಿದ್ದ ಮಹಿಳೆ ಮೇಲೆ ಹರಿದ ಬಿಎಂಟಿಸಿ ಬಸ್‌ ನಾಟಿ ಕೋಳಿ ಸಾರಿನ ಜತೆ ರಾಗಿಮುದ್ದೆ ನುಂಗಿದವರಿಗೆ ಗೊತ್ತು ಅದರ ಗಮ್ಮತ್ತು