CrimeNEWSನಮ್ಮಜಿಲ್ಲೆಬೆಂಗಳೂರು

ತಾಯಿ, ಮಗನ ಕೊಂದು ಆತ್ಮಹತ್ಯೆ ಎಂದು ಬಿಂಬಿಸಲು ಹೊರಟ ಪಾಪಿಯ ಹೆಡೆಮುರಿಕಟ್ಟಿದ ಬಾಗಲಗುಂಟೆ ಪೊಲೀಸರು

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ರಾಜಧಾನಿ ಬೆಚ್ಚಿಬೀಳುವಂತೆ ಯಲ್ಲಿ ಇತ್ತೀಚೆಗೆ ನಡೆದಿದ್ದ ತಾಯಿ ಮತ್ತು ಮಗನ ಭೀಕರ ಹತ್ಯೆಯನ್ನು ಭೇದಿಸಿರುವ ಪೊಲೀಸರು ಕೊಲೆ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಗಂಡನಿಂದ ದೂರಾಗಿದ್ದ ಆಕೆಯೊಂದಿಗೆ ಅಕ್ರಮ ಸಂಬಂಧ ಹೊಂದಿದ ಪಾಪಿ ಶೇಖರ್‌ ಎಂಬಾತನೆ ತಾಯಿ ಮಗ ಇಬ್ಬರನ್ನು ಕೊಂಡ ಆರೋಪಿಯಾಗಿದ್ದು, ಸದ್ಯ ಈಗ ಕಂಬಿಹಿಂದೆ ಬಂಧಿಯಾಗಿದ್ದಾನೆ.

ಘಟನೆ ವಿವರ: ಬಾಗಲಗುಂಟೆಯ ರವೀಂದ್ರ ನಗರದ ಬಾಡಿಗೆ ಮನೆಯ ನಿವಾಸಿ ನವನೀತ (35) ಎಂಬ ಮಹಿಳೆ ಹಾಗೂ ಅವರ ಎಂಟು ವರ್ಷದ ಮಗ ಸುಜನ್‌ ಇದೇ ಸೆಪ್ಟೆಂಬರ್‌ 6ರಂದು ಕೊಲೆಯಾಗಿದ್ದರು.

ಇತ್ತ ಆಂಧ್ರ ಪ್ರದೇಶ ಮೂಲದ ನವನೀತ ಎರಡು ವರ್ಷಗಳಿಂದ ಗಂಡ ಚಂದ್ರುವಿನಿಂದ ಬೇರಾಗಿ ಸಿಂಗಲ್‌ ಮದರ್‌ ಆಗಿ ಮಗನನ್ನು ನೋಡಿಕೊಳ್ಳುತ್ತಿದ್ದರು. ಆದರೆ, ಹೊರಗಿನ ವ್ಯಕ್ತಿಗಳ ಜತೆಗೆ ಅಷ್ಟೇನೂ ಬೆರೆಯದ ನವನೀತಳ ಕೊಲೆಯ ಕಾರಣ ಏನು ಎನ್ನುವುದು ಆ ಕ್ಷಣಕ್ಕೆ ಗೊತ್ತಾಗಿರಲಿಲ್ಲ.

ಒಂದು ಕ್ಷಣ ಯೋಚಿಸುವುದಾದರೆ, ನವನೀತ ಅವರನ್ನು ಚೂರಿಯಿಂದ ಇರಿದು ಕೊಲೆ ಮಾಡಲಾಗಿದೆ. ಆದರೆ, ಎಂಟು ವರ್ಷದ ಸುಜನ್‌ನನ್ನು ಉಸಿರುಗಟ್ಟಿಸಿ ಸಾಯಿಸಲಾಗಿದೆ. ಈ ಇಬ್ಬರ ಶವ ಕೂಡಾ ಬೆಡ್‌ ಮೇಲೆ ಇವೆ. ಇದು ಆಕೆಯೇ ಮಗನನ್ನು ಉಸಿರುಗಟ್ಟಿಸಿ ಕೊಲೆ ಮಾಡಿ ಬಳಿಕ ತಾನು ಆತ್ಮಹತ್ಯೆ ಮಾಡಿಕೊಂಡರೆ ಎಂಬ ಅನುಮಾನ ಬರುವಂತೆ ಇತ್ತು.

ಆದರೆ, ಈ ಬಗ್ಗೆ ಸೂಕ್ಷವಾಗಿ ಗಮನಿಸಿದ ಪೊಲೀಸರು ಇದು ಆತ್ಮಹತ್ಯೆಯಲ್ಲ ಕೊಲೆ ಎಂದು ದೃಢಪಡಿಸಿಕೊಂಡು ಆಕೆಯ ಪತಿ ಮತ್ತು ಬಾಡಿಗೆ ಮನೆಯ ಮಾಲೀಕರಿಂದ ಮಾಹಿತಿ ಪಡೆದು ಕಾರ್ಯಾಚರಣೆಗೆ ಇಳಿದರು. ಆ ವೇಳೆ ಹಂತಕನನ್ನು ಬಗ್ಗೆ ವಿಷಯ ತಿಳಿದು ಆತನನ್ನು ಬಂಧಿಸಿದ್ದಾರೆ.

ಶೇಖರನೇ ಕೊಲೆಗಾರ!: ನವನೀತ ಅವರು ಕಳೆದ ಎರಡು ವರ್ಷಗಳಿಂದ ಗಂಡ ಚಂದ್ರುವಿನಿಂದ ದೂರವಾಗಿ ಜೀವನ ಸಾಗಿಸುತ್ತಿದ್ದರು. ಹೀಗಾಗಿ ಒಂಟಿಯಾಗಿದ್ದ ಆ ಹೆಣ್ಣಿನ ಬಾಳಲ್ಲಿ ಬಂದ ಶೇಖರ ಅವಳು ಮತ್ತು ಆಕೆಯ ಮಗನ ಬಾಳನ್ನೇ ಕೊನೆಗಾಣಿಸಿದ್ದಾನೆ ಎಂದು ಶೇಖರ್‌ನನ್ನು ಬಂಧಿಸಿರುವ ಬಾಗಲಗುಂಟೆ ಪೊಲೀಸರು ತಿಳಿಸಿದ್ದಾರೆ.

ಶೇಖರ್‌ನನ್ನು ಬಂಧಿಸಿದ ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸಿದಾಗ ಆತ ವಿಚಾರಣೆ ವೇಳೆ ಕೊಲೆ ಮಾಡಿದ್ದು ನಾನೆ ಎಂದು ಒಪ್ಪಿಕೊಂಡಿದ್ದಾನೆ. ಅಷ್ಟೇ ಅಲ್ಲದೆ ಕೊಲೆಯ ಕಾರಣವನ್ನೂ ವಿವರಿಸಿದ್ದಾನೆ.

ನನ್ನ ಜತೆ ಕಳೆದ ಎರಡು ವರ್ಷಗಳಿಂದ ಚೆನ್ನಾಗಿದ್ದ ನವನೀತ ಇತ್ತೀಚೆಗೆ ಇನ್ನೊಬ್ಬನ್ನ ಜತೆ ಲವ್ವಿಡವ್ವಿ ಶುರು ಮಾಡಿದ್ದಾಳೆ ಎಂಬ ಸಂಶಯ ಇತ್ತು. ಅದು ಕೆಲವೊಂದು ಮಾಹಿತಿಗಳ ಆಧಾರದಲ್ಲಿ ಸಾಬೀತು ಕೂಡಾ ಆಗಿತ್ತು. ಇದರಿಂದ ಕುಪಿತಗೊಂಡು ಈ ಕೃತ್ಯ ಎಸಗಿರುವುದಾಗಿ ತಿಳಿಸಿದ್ದಾನೆ.

ಆಕೆಯ ಕತ್ತನ್ನೇ ಸೀಳಿದ: ಹೌದು! ಕಳೆದ ಮಂಗಳವಾರ ಸ್ವಲ್ಪ ನಿನ್ನ ಜತೆ ಮಾತನಾಡಬೇಕು ಎಂದು ಶೇಖರ್‌ ನವನೀತಳ ಮನೆಗೆ ಹೋಗಿದ್ದ. ಆಗ ಮನೆಯಲ್ಲಿದ್ದ ಮಗ ಸುಜನ್‌ನನ್ನು ಜ್ಯೂಸ್‌ ತರೋಗು ಎಂದು ಹೊರಗೆ ಕಳುಹಿಸಿ, ಇತ್ತ ನವನೀತಳ ಜತೆ ಜಗಳವಾಡಿದ್ದಾನೆ. ಗಂಡನನ್ನು ಬಿಟ್ಟಿದ್ದಿ. ಈಗ ನಾನೊಬ್ಬ ಸಾಕಾಗಲ್ವಾ ನಿಂಗೆ, ಇನ್ನೊಬ್ಬ ಬೇಕಾ ಎಂದು ನಿಂದಿಸಿದ್ದಾನೆ. ಕೊನೆಗೆ ಆಕೆಯ ಕತ್ತನ್ನೇ ಸೀಳಿ ಹಾಕಿದ್ದಾನೆ.

ಈ ನಡುವೆ ಜ್ಯೂಸ್‌ ತೆಗೆದುಕೊಂಡು ಬಂದ ಸುಜನ್‌ ಬಳಿ ನವನೀತಗಳ ಸಾವನ್ನು ಮುಚ್ಚಿಟ್ಟ ಶೇಖರ ಸುಜನ್‌ಗೆ ನಿನಗೊಂದು ಮ್ಯಾಜಿಕ್‌ ತೋರಿಸ್ತೇನೆ ಎಂದು ಮರುಳು ಮಾಡಿ ಸುಜನ್‌ನನ್ನು ಚೇರ್ ಮೇಲೆ ಕುರಿಸಿ ವೇಲ್‌ನಿಂದ ಕೈ ಕಟ್ಟಿ ಬಳಿಕ ತಲೆದಿಂಬಿನಿಂದ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ.

ಸುಜನ್‌ನನ್ನು ಕೊಂದ ಬಳಿಕ ಆತನ ಶವವನ್ನು ಹಾಸಿಗೆಯಲ್ಲಿ ತಾಯಿಯ ಪಕ್ಕವೇ ಹಾಕಿದ್ದಾನೆ. ಬಳಿಕ ಆಕೆಯೇ ಮಗನನ್ನು ಕೊಂದು ತಾನೂ ಕುತ್ತಿಗೆಗೆ ಚೂರಿ ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಬಿಂಬಿಸುವ ಚಾಣಕ್ಷತನ ತೋರಲು ಕೊಲೆಗೆ ಬಳಸಿದ್ದ ಚಾಕುವನ್ನು ನವನೀತಳ ಕೈಯಲ್ಲಿ ಇಟ್ಟು ಹೋಗಿದ್ದಾನೆ. ಆದರೆ, ಮನೆ ಮಾಲೀಕರು, ನವನೀತಳ ಸಂಬಂಧಿಕರು ನೀಡಿದ ಮಾಹಿತಿ ಮೇರೆಗೆ ಶೇಖರ್‌ನ ಹೆಡೆಮುರಿಕಟ್ಟಿ ಪೊಲೀಸರು ಈಗ ಕಂಬಿಹಿಂದೆ ಬಿಟ್ಟಿದ್ದಾರೆ.

Leave a Reply

error: Content is protected !!

Discover more from VIJAYAPATHA.IN

Subscribe now to keep reading and get access to the full archive.

Continue reading

LATEST
ಕ್ರೀಡಾಪಟುಗಳಿಗೆ ಕೊಡುವ ಏಕಲವ್ಯ ಪ್ರಶಸ್ತಿ ಮುಂದುವರಿಸಲಿ: ಶೋಭಾ ನಾರಾಯಣ್ ಬಿಡದಿಯಿಂದ ಹೆದ್ದಾರಿಯಲ್ಲೇ ಮುಂದೆ ಬಂದರೆ ನಿಮಗೆ ಟೋಲ್‌ ಬರೆ ಗ್ಯಾರಂಟಿ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಹೊತ್ತಿ ಉರಿದ ಸ್ಕಾರ್ಪಿಯೋ ಕಾರು KSRTC ಕನಕಪುರ ಬಸ್‌ ನಿಲ್ದಾಣದಲ್ಲಿ ವಿಕಲ ಚೇತನರಿಂದ ₹700 ವಸೂಲಿ, ಕಂಡಕ್ಟರ್ಸ್‌ ಕೊಡಬೇಕು ₹10 : ಟಿಸಿಗೆ ಡಿಎಂ ಸಾಥ್... ಹೆಚ್ಚುವರಿ ಬಡ್ಡಿ ವಿಧಿಸುವ ನೋಂದಾಯಿತ ಲೇವಾದೇವಿಸಂಸ್ಥೆಗಳ ವಿರುದ್ಧ ದೂರು ನೀಡಿ KSRTC: 38+13 ತಿಂಗಳ ವೇತನ ಹಿಂಬಾಕಿ ಯಾವಾಗ ಬರುತ್ತದೆ ಒಕ್ಕೂಟದ ವಿರುದ್ಧ ನೌಕರರು ಕಿಡಿ BMTC: ಅಪಘಾತದಲ್ಲಿ ಮೃತಪಟ್ಟ ನೌಕರರ ಕುಟುಂಬಕ್ಕೆ ₹1 ಕೋಟಿ ಪರಿಹಾರ ಚೆಕ್‌ ವಿತರಿಸಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸಾರಿಗೆ ನಿವೃತ್ತ ನೌಕರರಿಗೆ ಮತ್ತೊಮ್ಮೆ ಮೊಗದೊಮ್ಮೆ ನಿರಾಸೆ: ಭಾರಿ ಆಕ್ರೋಶಗೊಂಡ EPS ನಿವೃತ್ತರು ಕಾರು ಡೋರ್‌ಗೆ ಬೈಕ್‌ ಗುದ್ದಿ ಕೆಳಗೆ ಬಿದ್ದ ಮಹಿಳೆ ಮೇಲೆ ಹರಿದ ಬಿಎಂಟಿಸಿ ಬಸ್‌ ನಾಟಿ ಕೋಳಿ ಸಾರಿನ ಜತೆ ರಾಗಿಮುದ್ದೆ ನುಂಗಿದವರಿಗೆ ಗೊತ್ತು ಅದರ ಗಮ್ಮತ್ತು