CrimeNEWS

ದೂರು ಕೊಡಲು ಹೋದ ಸಂತ್ರಸ್ತೆಯನ್ನೇ ಮಂಚಕ್ಕೆ ಕರೆದ ಆರೋಪ – ಇನ್​ಸ್ಪೆಕ್ಟರ್ ರಾಜಣ್ಣ ವಿರುದ್ಧ ಡಿಸಿಪಿಗೆ ದೂರು

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಕೊಟ್ಟ ಸಾಲ ವಾಪಸ್‌ ಕೊಡದಿದ್ದವನ ವಿರುದ್ಧ ದೂರು ಕೊಡಲು ಹೋದ ಸಂತ್ರಸ್ತೆಯನ್ನೆ ಮಂಚಕ್ಕೆ ಕರೆದ ಇನ್​ಸ್ಪೆಕ್ಟರ್‌ ವಿರುದ್ಧ ಸಂತ್ರಸ್ತ ಯುವತಿ ದೂರು ನೀಡಿದ್ದಾರೆ.

ಸಾಲ ಮರು ಪಾವತಿಸದ ವಂಚಕನ ವಿರುದ್ಧ ದೂರು ನೀಡಲು ಹೋದ ಯುವತಿಗೇ ಲೈಂಗಿಕ ಕಿರುಕುಳ ನೀಡಿದ ಕೊಡಿಗೇಹಳ್ಳಿ ಠಾಣೆ ಇನ್​ಸ್ಪೆಕ್ಟರ್‌ ವಿರುದ್ಧ ಎಸಿಪಿ ಮತ್ತು ಡಿಸಿಪಿಗೆ ಸಾಕ್ಷಿ ಸಮೇತ ಯುವತಿ ದೂರು ನೀಡಿದ್ದಾರೆ. ಮನಿ ಲಾಂಡ್ರಿಂಗ್ ಕೇಸಲ್ಲಿ ಅರೆಸ್ಟ್ ಆಗಿದ್ದ ವೀರೇಂದ್ರ ಬಾಬು ಯುವತಿ ಬಳಿಯಿಂದ 15 ಲಕ್ಷ ರೂಪಾಯಿ ಪಡೆದು ವಾಪಸ್ ನೀಡದೆ ವಂಚಿಸಿದ್ದನು. ಈ ಬಗ್ಗೆ ವಂಚಕ ಬಾಬು ವಿರುದ್ಧ ದೂರು ನೀಡಲು ಕೊಡಿಗೆಹಳ್ಳಿ ಠಾಣೆಗೆ ಯುವತಿ ಹೋಗಿದ್ದಾಳೆ. ಈ ವೇಳೆ ಠಾಣಾ ಇನ್​ಸ್ಪೆಕ್ಟರ್ ರಾಜಣ್ಣ ಆಕೆಯ ನಂಬರ್ ಪಡೆದು ಚಾಟಿಂಗ್ ಆರಂಭಿಸಿದ್ದಾನೆ.

ಯುವತಿಯೊಂದಿಗೆ ನಿತ್ಯ ಚಾಟಿಂಗ್ ಮಾಡುತ್ತಿದ್ದ ರಾಜಣ್ಣ, ಪದೇಪದೆ ಭೇಟಿಯಾಗು ಬಾ ಎಂದು ಕರೆಯುತ್ತಿದ್ದ. ಅದರಂತೆ ಆಕೆ ಫೆ. 24 ರಂದು ಠಾಣೆಗೆ ಹೋಗಿದ್ದರು. ಆ ವೇಳೆ ಡ್ರೈಫ್ರೂಟ್ಸ್ ಬಾಕ್ಸ್ ಮತ್ತು ತನ್ನ ರೂಂ ಕೀ ನೀಡಿ ಒಳಗೆ ಕಳುಹಿಸಿದ್ದ ಎಂದು ಆರೋಪಿಸಲಾಗಿದೆ. ಹೀಗೆ ಹೋದಾಕೆ ಠಾಣೆಯಿಂದ ಕಣ್ಣೀರು ಸುರಿಸುತ್ತಾ ಹೊರಬಂದು ನೇರವಾಗಿ ಮಹಿಳಾ ಸಬ್ ಇನ್​​ಸ್ಪೆಕ್ಟರ್ ಒಬ್ಬರಿಗೆ ಕರೆ ಮಾಡಿ ನಡೆದ ಘಟನೆಯನ್ನು ವಿವರಿಸಿದ್ದಾರೆ.

ಯುವತಿಯನ್ನು ಠಾಣೆಗೆ ಕರೆಸಿದ ಮಹಿಳಾ ಸಬ್ ಇನ್​ಸ್ಪೆಕ್ಟರ್, ಆಕೆಯ ಮನವೋಲಿಸುವ ಪ್ರಯತ್ನ ಮಾಡಿದ್ದಾರೆ. ಕೇಸ್ ಬೇಡ, ಕೇಸ್ ಮಾಡಿದರೆ ಪ್ರಕರಣ ದೊಡ್ಡದಾಗುತ್ತದೆ. ಹೀಗಾಗಿ ಇದನ್ನು ಇಲ್ಲಿಗೆ ಬಿಟ್ಟು ನೀನು ಹೊರಡು ಎಂದಿದ್ದಾರೆ. ನಂತರ ಚಿಕ್ಕಮಗಳೂರಿಗೆ ತೆರಳಿದ್ದ ನೊಂದ ಯುವತಿ, ನಿನ್ನೆ (ಮಾ.19ರಂದು) ಬಂದು ಈಶಾನ್ಯ ವಿಭಾಗ ಡಿಸಿಪಿಗೆ ದೂರು‌ ನೀಡಿದ್ದಾರೆ.

ಯುವತಿ ನೀಡಿದ ದೂರಿನನ್ವಯ ಪ್ರಕರಣ ದಾಖಲಿಸಿದ ಡಿಸಿಪಿ ಲಕ್ಷ್ಮಿ ಪ್ರಸಾದ್, ಯಲಹಂಕ ಎಸಿಪಿ ಮೂಲಕ ತನಿಖೆ ಆರಂಭಿಸಿದ್ದಾರೆ. ಅದರಂತೆ ಠಾಣೆಯ ಸಿಸಿಟಿವಿ ಫೂಟೇಜ್ ಕಲೆಕ್ಟ್ ಮಾಡಿಸಿಕೊಂಡಿದ್ದು, ಇಂದು ನಗರ ಪೊಲೀಸ್ ಆಯುಕ್ತರಿಗೆ ವರದಿ ನೀಡುವ ಸಾಧ್ಯತೆ ಇದೆ. ವರದಿ ಆಧರಿಸಿ ಇನ್​​ಸ್ಪೆಕ್ಟರ್ ‌ರಾಜಣ್ಣ ವಿರುದ್ಧ ಎಫ್‌ಐಆರ್‌ ದಾಖಲಿಸಿ ತನಿಖೆ ನಡೆಸಲಾಗುವುದು.

ರಾಜಣ್ಣ ವಿರುದ್ಧ ದೂರು ನೀಡಿದ್ದ ಠಾಣಾ ಸಿಬ್ಬಂದಿ: ಕೊಡಿಗೇಹಳ್ಳಿ ಪೊಲೀಸ್ ಠಾಣೆಯಲ್ಲಿ ಇನ್​ಸ್ಪೆಕ್ಟರ್​ ರಾಜಣ್ಣ ನಡೆಸುತ್ತಿರುವ ದಂಧೆಗಳು ಮತ್ತು ಭ್ರಷ್ಟಾಚಾರದ ಬಗ್ಗೆ ಅದೇ ಠಾಣೆಯ ಸಿಬ್ಬಂದಿಯೊಬ್ಬರು ಈ ಹಿಂದೆ ಡಿಸಿಪಿಗೆ ದೂರು ನೀಡಿದ್ದರು. ಈ ವಿಚಾರ ತಿಳಿದ ರಾಜಣ್ಣ, ಡಿಸಿಪಿಯನ್ನೇ ಎತ್ತಂಗಡಿ ಮಾಡಿಸುವುದಾಗಿ ಸವಾಲು ಹಾಕಿದ್ದಾರೆ. ಡಿಸಿಪಿ ಅನೂಪ್ ಶೆಟ್ಟಿ ಎತ್ತಂಗಡಿ ಮಾಡಿಸಿ ಅವರ ಸ್ಥಾನಕ್ಕೆ ಸಾರಾ ಫಾತಿಮಾ ಅವರನ್ನು ಕೂರಿಸುವುದಾಗಿ ಸವಾಲು ಹಾಕಿದ್ದ.

ಸದ್ಯದಲ್ಲೇ ಡಿಸಿಪಿ ಅನೂಪ್ ಶೆಟ್ಟಿ ವರ್ಗಾವಣೆ ಆಗುತ್ತದೆ, ನಂತರ ನಾನು ಹೇಗೆ ಬೇಕಾದರೂ ಇರಬಹುದು, ಡಿಸಿಪಿ ವರ್ಗಾವಣೆ ಮಾಡಿಸುತ್ತಿರುವುದು ನಾನೇ ಎಂದು ರಾಜಣ್ಣ ಹೇಳಿರುವುದಾಗಿ ಹೆಸರು ಹೇಳಲಿಚ್ಚಿಸದ ಪೊಲೀಸ್ ಠಾಣಾ ಸಿಬ್ಬಂದಿಗಳಿಂದಲೇ ಮಾಹಿತಿ ಹೊರಬಿದ್ದಿತ್ತು.

ಬೆಂಗಳೂರಿನ ಕೆನರಾ ಬ್ಯಾಂಕ್​ ಲೇಔಟ್​ನಲ್ಲಿರುವ ಇಸ್ಪೀಟ್​ ಅಡ್ಡೆ ನಡೆಸುತ್ತಿದ್ದ ವೆಂಕಟೇಶ್​ನಿಂದ ರಾಜಣ್ಣ 2ಲಕ್ಷ ರೂ.ಗಳನ್ನು ಪಡೆದ ಆರೋಪವಿದೆ. ಅಲ್ಲದೆ ಕೇಬಲ್ ತಗುಲಿ ವ್ಯಕ್ತಿ ಮೃತಪಟ್ಟಿದ್ದ ಪ್ರಕರಣದಲ್ಲಿ ಏರ್​ಟೆಲ್​ ಬ್ರಾಡ್​ಬ್ಯಾಂಡ್​ ಉಸ್ತುವಾರಿ ಸುರೇಶ್​ಗೆ ಬೆದರಿಕೆ ಹಾಕಿದ್ದಲ್ಲದೆ 15 ಲಕ್ಷ ರೂಪಾಯಿ ಕೊಡದಿದ್ದರೆ ಕೊಲೆ ಕೇಸ್ ದಾಖಲಿಸುವುದಾಗಿ ಧಮ್ಕಿ ಹಾಕಿದ್ದ.

ಈ ವೇಳೆ ಮೃತನ ಕುಟುಂಬಕ್ಕೆ 10 ಲಕ್ಷ ರೂ.ಗಳನ್ನು, ನಿಮಗೆ 5 ಲಕ್ಷ ರೂ.ಗಳನ್ನು ಕೊಡುವೆ ಎಂದು ಸುರೇಶ್ ಹೇಳಿದ್ದರು. ಅದಕ್ಕೆ ನನಗೆ 10 ಲಕ್ಷ, ಮೃತನ ಕುಟುಂಬಕ್ಕೆ 5 ಲಕ್ಷ ಕೊಡು ಎಂದು ರಾಜಣ್ಣ ಹೇಳಿದ್ದರು. ಇದರಿಂದ ಬೇಸತ್ತ ಸುರೇಶ್, ಲೋಕಾಯುಕ್ತಕ್ಕೆ ದೂರು ನೀಡಿದ್ದರು.

ದಾಳಿ ನಡೆಸುವ ದಿನ ಲೋಕಾಯುಕ್ತ ಸಂಸ್ಥೆಯಿಂದ ಯಾರೋ ಒಬ್ಬರು ಕರೆ ಮಾಡಿ ಮಾಹಿತಿ ನೀಡುತ್ತಿದ್ದಂತೆ ರಾಜಣ್ಣ, ಸುರೇಶ್​ನನ್ನು ಯಾರು ಕೂಡ ಮಾತನಾಡಿಸಬಾರದು ಎಂದು ಠಾಣೆ ಸಿಬ್ಬಂದಿಗೆ ಸೂಚಿಸಿದ್ದ. ಈ ವಿಚಾರವಾಗಿ ಠಾಣೆ ಸಿಬ್ಬಂದಿಯೊಬ್ಬರು ಡಿಸಿಪಿ ಅನೂಪ್​ ಶೆಟ್ಟಿಗೆ ದೂರು ನೀಡಿದ್ದರು.

Leave a Reply

error: Content is protected !!

Discover more from VIJAYAPATHA.IN

Subscribe now to keep reading and get access to the full archive.

Continue reading

LATEST
ಕ್ರೀಡಾಪಟುಗಳಿಗೆ ಕೊಡುವ ಏಕಲವ್ಯ ಪ್ರಶಸ್ತಿ ಮುಂದುವರಿಸಲಿ: ಶೋಭಾ ನಾರಾಯಣ್ ಬಿಡದಿಯಿಂದ ಹೆದ್ದಾರಿಯಲ್ಲೇ ಮುಂದೆ ಬಂದರೆ ನಿಮಗೆ ಟೋಲ್‌ ಬರೆ ಗ್ಯಾರಂಟಿ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಹೊತ್ತಿ ಉರಿದ ಸ್ಕಾರ್ಪಿಯೋ ಕಾರು KSRTC ಕನಕಪುರ ಬಸ್‌ ನಿಲ್ದಾಣದಲ್ಲಿ ವಿಕಲ ಚೇತನರಿಂದ ₹700 ವಸೂಲಿ, ಕಂಡಕ್ಟರ್ಸ್‌ ಕೊಡಬೇಕು ₹10 : ಟಿಸಿಗೆ ಡಿಎಂ ಸಾಥ್... ಹೆಚ್ಚುವರಿ ಬಡ್ಡಿ ವಿಧಿಸುವ ನೋಂದಾಯಿತ ಲೇವಾದೇವಿಸಂಸ್ಥೆಗಳ ವಿರುದ್ಧ ದೂರು ನೀಡಿ KSRTC: 38+13 ತಿಂಗಳ ವೇತನ ಹಿಂಬಾಕಿ ಯಾವಾಗ ಬರುತ್ತದೆ ಒಕ್ಕೂಟದ ವಿರುದ್ಧ ನೌಕರರು ಕಿಡಿ BMTC: ಅಪಘಾತದಲ್ಲಿ ಮೃತಪಟ್ಟ ನೌಕರರ ಕುಟುಂಬಕ್ಕೆ ₹1 ಕೋಟಿ ಪರಿಹಾರ ಚೆಕ್‌ ವಿತರಿಸಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸಾರಿಗೆ ನಿವೃತ್ತ ನೌಕರರಿಗೆ ಮತ್ತೊಮ್ಮೆ ಮೊಗದೊಮ್ಮೆ ನಿರಾಸೆ: ಭಾರಿ ಆಕ್ರೋಶಗೊಂಡ EPS ನಿವೃತ್ತರು ಕಾರು ಡೋರ್‌ಗೆ ಬೈಕ್‌ ಗುದ್ದಿ ಕೆಳಗೆ ಬಿದ್ದ ಮಹಿಳೆ ಮೇಲೆ ಹರಿದ ಬಿಎಂಟಿಸಿ ಬಸ್‌ ನಾಟಿ ಕೋಳಿ ಸಾರಿನ ಜತೆ ರಾಗಿಮುದ್ದೆ ನುಂಗಿದವರಿಗೆ ಗೊತ್ತು ಅದರ ಗಮ್ಮತ್ತು