ಸಿನಿಪಥ

ನಟ ಅಕುಲ್‌ ಬಾಲಾಜಿ ವಿರುದ್ಧ ಎಫ್‌ಐಆರ್‌

ಲಾಕ್‌ಡೌನ್‌ ನಡುವೆಯೂ ರೆಸಾರ್ಟ್‌ನಲ್ಲಿ ಮದುವೆ ಮಾಡಲು ಅನುಮತಿ ನೀಡಿದ್ದಕ್ಕೆ ಕ್ರಮ

ವಿಜಯಪಥ ಸಮಗ್ರ ಸುದ್ದಿ

ದೊಡ್ಡಬಳ್ಳಾಪುರ: ಯಾವುದೇ ಅನುಮತಿ ಪಡೆಯದೇ ವಿವಾಹ ಕಾರ್ಯಕ್ರಮಕ್ಕೆ ಸಿದ್ಧತೆ ಮಾಡಿಕೊಳ್ಳಲು ಅನುಮಾಡಿಕೊಟ್ಟಿದ್ದಕ್ಕೆ ನಟ ಹಾಗೂ ನಿರೂಪಕ ಅಕುಲ್‌ ಬಾಲಾಜಿ ವಿರುದ್ಧ ಏಫ್‌ಐಆರ್‌ ದಾಖಲಾಗಿದೆ.

ಲಾಕ್‌ಡೌನ್ ನಡುವೆಯೇ  ತನ್ನ ರೆಸಾರ್ಟ್‌ನಲ್ಲಿ ಖಾಸಗಿ ಕಾರ್ಯಕ್ರಮವೊಂದಕ್ಕೆ ಅನುವು ಮಾಡಿಕೊಟ್ಟಿದ್ದರು ಎಂಬ ಕಾರಣಕ್ಕೆ ಪೊಲೀಸರು ಎಫ್‌ಐಆರ್ ದಾಖಲಿಸಿದ್ದು, ಕಾರ್ಯಕ್ರಮ ಕುರಿತ ವಿಚಾರವಾಗಿ ತನಿಖೆ ನಡೆಸುತ್ತಿದ್ದಾರೆ.

ಅಕುಲ್ ಒಡೆತನದ ಲಘುಮೇನಹಳ್ಳಿ ಬಳಿ ಇರುವ ಸನ್‌ಶೈನ್ ರೆಸಾರ್ಟ್‌ ನಲ್ಲಿ ಏಪ್ರಿಲ್ 18ರಂದು ರಾತ್ರಿ  10.30ರಂದು ಜನ ಸೇರಿದ್ದರು. ಬೆಂಗಳೂರಿನಿಂದ 20ಕ್ಕೂ ಅಧಿಕ ಮಂದಿ ರೆಸಾರ್ಟ್‌ಗೆ ಬಂದು ಯಾವುದೇ ಅನುಮತಿ ಇಲ್ಲದೆ ಮದುವೆಗೆ ಸಿದ್ಧತೆ ನಡೆಸುತ್ತಿದ್ದರು ಎಂದು ಹೇಳಲಾಗಿದೆ.

ಕೊರೊನಾ ಸೋಂಕು ಹರಡುವುದನ್ನು ತಡೆಗಟ್ಟಲು ಸರ್ಕಾರ ಜಾರಿಗೊಳಿಸಿರುವ ಲಾಕ್‌ಡೌನ್ ನಿಯಮ ಉಲ್ಲಂಘಿಸಿ ಅಕುಲ್ ಬಾಲಾಜಿ ತನ್ನ ರೆಸಾರ್ಟ್‌ನಲ್ಲಿ ಮದುವೆಗೆ ಅವಕಾಶ ಮಾಡಿಕೊಟ್ಟಿದಕ್ಕೆ ಅವರ ವಿರುದ್ಧ ಎಫ್‌ಐಆರ್‌ ದಾಖಲಿಸಿ ಎಚ್ಚರಿಕೆಯನ್ನು ನೀಡಲಾಗಿದೆ ಎಂದು ತಿಳಿದು ಬಂದಿದೆ.

ಯಾವುದೇ ಒಂದು ಕಾರ್ಯಕ್ರಮ ಆಯೋಜನೆ ಮಾಡಬೇಕಾದರು ಪೊಲೀಸರ ಅನುಮತಿ ಪಡೆಯುವುದನ್ನು ಸರ್ಕಾರ ಕಡ್ಡಾಯಗೊಳಿಸಿದೆ. ಆದರೆ ಅದನ್ನು ಮೀರಿ ಮದುವೆಗೆ ಸಿದ್ಧತೆ ಮಾಡಿಕೊಂಡಿರುವುದು ಕಾನೂನು ಬಾಹಿರವಾದುದು ಎಂದು ಪೊಲೀಸರು ತಿಳಿಸಿದ್ದಾರೆ.

Leave a Reply

error: Content is protected !!
LATEST
ಅತಿಯಾಗಿ ಲೈಂಗಿಕ ಕ್ರಿಯೆಗೆ ಪೀಡಿಸಿದ್ದರಿಂದ ಒಂಟಿ ಮಹಿಳೆಯ ಕೊಲೆ: ಹತ್ಯೆ ರಹಸ್ಯ ಬೇಧಿಸಿದ ಪೊಲೀಸರು ಆಗಸದಲ್ಲೇ ಡಿಕ್ಕಿ ಹೊಡೆದುಕೊಂಡ ನೌಕಾಪಡೆಯ 2 ಹೆಲಿಕಾಪ್ಟರ್‌ಗಳು ನೋಡ ನೋಡುತ್ತಿದ್ದಂತೆ ಪತನ: 10 ಮಂದಿ ಮೃತ KSRTC: ಸಾರಿಗೆ ನಿಗಮಗಳ ಖಾಸಗೀಕರಣಕ್ಕೆ ಅವಕಾಶ ನೀಡುತ್ತಿದೆ ಕೇಂದ್ರ ಬೃಹತ್‌ ಕೈಗಾರಿಕಾ ಸಚಿವಾಲಯ KSRTC: ಏಪ್ರಿಲ್‌-ಜೂನ್‌ ಪೀಕ್‌ ಸೀಸನ್‌ ಎಂದು ಚಾಲನಾ ಸಿಬ್ಬಂದಿಗಳಿಗೆ ರಜೆ ಕೊಡದೆ ಹಿಂಸಿಸುತ್ತಿರುವ ಅಧಿಕಾರಿಗಳು..! ಬಿಜೆಪಿ ರಾಜಕೀಯ ಲಾಭಕ್ಕೆ ನೇಹಾ ಪ್ರಕರಣ ಬಳಸಿಕೊಳ್ಳುತ್ತಿರುವುದು ನಾಚಿಕೆಗೇಡಿನ ವಿಚಾರ: ಜಗದೀಶ್ ವಿ. ಸದಂ IVRS, ಬಲ್ಕ್ SMS ಮೂಲಕ ಮತದಾರರಿಗೆ ಮೊಬೈಲ್‌ ಸಂದೇಶ: ತುಷಾರ್ ಗಿರಿನಾಥ್ KSRTC: ವೇತನ ಸಮಸ್ಯೆ ಪರಿಹರಿಸದೆ ಅಸಡ್ಡೆ ತೋರಲು ಇವರು ಕಾರಣಗಳು....!? ರಾಜಕೀಯ ಪಕ್ಷಗಳ ಚುನಾವಣಾ ಪ್ರಣಾಳಿಕೆಗಳು ಜನರ ವಂಚಿಸುವ ಮಂತ್ರ ದಂಡಗಳು : ಕುರುಬೂರ್‌ ಶಾಂತಕುಮಾರ್‌ 'ನಮ್ಮ ನಡೆ ಮತಗಟ್ಟೆಯ ಕಡೆ' ಜಾಗೃತಿ ಜಾಥಾಗೆ ಮನೋಜ್ ಕುಮಾರ್ ಮೀನಾ, ತುಷಾರ್ ಗಿರಿನಾಥ್ ಚಾಲನೆ ಕೊಡಗು: ಹುಲಿದಾಳಿಗೆ ಅಸ್ಸಾಂ ಮೂಲದ ಕಾರ್ಮಿಕ ಬಲಿ