ಬೆಂಗಳೂರು: ಕರ್ನಾಟಕ ಸರ್ಕಾರದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ಸಚಿವ ಸಂಪುಟದಲ್ಲಿ ನೂತನವಾಗಿ ಸಾರಿಗೆ ಸಚಿವರಾಗಿರುವ ಬಿ. ಶ್ರೀರಾಮುಲು ಅವರು ನೌಕರರ ಕಷ್ಟ ಆಲಿಸಿ ಶೀಘ್ರಗತಿಯಲ್ಲಿ ಸಮಸ್ಯೆ ಪರಿಹರಿಸುವರು ಎಂಬ ವಿಶ್ವಾಸ ನಮಗಿದೆ ಎಂದು ನೊಂದ ಎಲ್ಲ 1.20 ಲಕ್ಷ ನೌಕರರು ಹೇಳುತ್ತಿದ್ದಾರೆ.
ಬಿ. ಶ್ರೀರಾಮುಲು ಅವರು ಸಾರಿಗೆ ಸಚಿವರಾಗಿರುವುದು ಕರ್ನಾಟಕ ರಾಜ್ಯದ 4 ಸಾರಿಗೆ ನಿಗಮಗಳ ನೌಕರರ ಸಂತಸವಾಗಿದ್ದು, ಅವರು ನೊಂದವರ ಪರ ನಿಲ್ಲುವ ಮನಸ್ಸುಳ್ಳವರಾಗಿದ್ದಾರೆ ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಕೂಟ ಸೇರಿದಂತೆ ನೌಕರರ ಸಂಟನೆಗಳ ಪದಾಧಿಕಾರಿಗಳು ಹಲವೆಡೆ ಸಿಹ ಹಂಚಿ ಸಂಭ್ರಮಿಸುತ್ತಿದ್ದಾರೆ.
ರಾಜ್ಯದ ಎಲ್ಲಾ ಸಾರಿಗೆನೌಕರರ ಬೇಡಿಕೆಗಳನ್ನು ಈಡೇರಿಸಲು ಹಾಗೂ ನೌಕರರ ಕಷ್ಟ ಸುಖಗಳ ಬಗ್ಗೆ ಚಿಂತನೆ ಮಾಡುವ ಮೂಲಕ ಉತ್ತಮ ಸಚಿವರೆಂದು ಹೆಸರು ಗಳಿಸಿಕೊಳ್ಳುವ ಕೆಲಸ ಮಾಡುವಿರೆಂದು ನಂಬುತ್ತೇವೆ ಎಂದು ತಮ್ಮ ಸಾಜಾಜಿಕ ಜಾಲ ತಾಣಗಳಾದ ಫೇಸ್ಬುಕ್, ಟ್ವೀಟರ್ಗಳಲ್ಲಿ ಬರೆದುಕೊಳ್ಳುತ್ತಿದ್ದಾರೆ.
ಇನ್ನು ಹಿಂದಿನ ಸಾರಿಗೆ ಸಚಿವರು ಕೊಟ್ಟ ಮಾತನ್ನು ಉಳಿದುಕೊಳ್ಳಲು ವಿಫಲರಾದರು. ತಾವು ಈ ರೀತಿಯಾಗಿ ನಡೆದುಕೊಳ್ಳದೇ ಕೊಟ್ಟ ಮಾತನ್ನು ಉಳಿಸಿಕೊಳ್ಳುವ ಶ್ರೀರಾಮ ಆಗಬೇಕೆಂದು ನಮ್ಮೆಲ್ಲರ ಬಹುದಿನಗಳ ಕೊರಿಕೆಯಾಗಿದೆ ಎಂದು ತಿಳಿಸಿದ್ದಾರೆ.
ಬೆಂಗಳೂರು, ಮೈಸೂರು, ಬಳ್ಳಾರಿ, ಕಲಬುರಗಿ, ದಕ್ಷಿಣ ಕನ್ನಡ, ಉತ್ತರ ಕನ್ನಡ ಜಿಲ್ಲೆಗಳು ಸೇರಿ ರಾಜ್ಯಾದ್ಯಂತ ಸಾರಿಗೆ ನೌಕರರು ಒಂದು ರೀತಿ ಬಡವರ ಉದ್ಧಾರಕ ಬಂದಿದ್ದಾರೆ ಎಂದು ಸಂತಸ ಹಂಚಿಕೊಳ್ಳುತ್ತ ಶುಭ ಕೋರಿದ್ದಾರೆ.