ಚಂಡೀಗಡ: ಕಾಂಗ್ರೆಸ್ ನಾಯಕ ಚರಣ್‌ಜಿತ್ ಸಿಂಗ್ ಚನ್ನಿ ಅವರು ಪಂಜಾಬ್ನ 16ನೇಮುಖ್ಯ ಮಂತ್ರಿಯಾಗಿ ಸೋಮವಾರ ಪ್ರಮಾಣ ವಚನ ಸ್ವೀ ಕರಿಸಿದ್ದಾರೆ.
ಮುಖ್ಯ ಮಂತ್ರಿ ಹುದ್ದೆ ಗೇರಿದ ದಲಿತ ಸಮುದಾಯದ ಮೊದಲ ವ್ಯಕ್ತಿ ಅವರು. ರಾಜ್ಯ ಪಾಲ ಭನ್ವಾರಿಲಾಲ್ ಪುರೋಹಿತ್ ಅವರು ಪ್ರಮಾಣವಚನ ಬೋಧಿಸಿದರು.
ಸುಖ್ಜಿಂದರ್ ಸಿಂಗ್ ರಂಧಾವ ಮತ್ತು ಒ.ಪಿ. ಸೋನಿ ಅವರಿಗೆಹೊಸ ಸರ್ಕಾರದಲ್ಲಿ ಉಪಮುಖ್ಯ ಮಂತ್ರಿ ಹುದ್ದೆ ನೀಡಲಾಗಿದೆ. ಅಮರಿಂದರ್ ಸಿಂಗ್ ನೇತೃತ್ವದ ಈ ಹಿಂದಿನ ಸರ್ಕಾರದಲ್ಲಿ ಈ ಇಬ್ಬರೂ ಸಚಿವರಾಗಿದ್ದರು.
ಕೇಂದ್ರ ದಮೂರು ಕೃಷಿ ಕಾಯ್ದೆ ಗಳನ್ನು ರದ್ದು ಪಡಿಸಬೇಕು ಎಂದು ಚನ್ನಿ ಅವರು ಒತ್ತಾಯಿಸಿದ್ದಾರೆ. ‘ಕರಾಳ’ ಕಾಯ್ದೆಗಳ ವಿರುದ್ಧ ಹೋರಾಡುತ್ತಿರುವ ರೈತರ ಜತೆಗೆ ಕಾಂಗ್ರೆಸ್ ಪಕ್ಷವು ಗಟ್ಟಿಯಾಗಿ ನಿಲ್ಲಲಿದೆ ಎಂದಿದ್ದಾರೆ.
ಸೋಮವಾರ ಬೆಳಿಗ್ಗೆ 11 ಗಂಟೆಗೆ ಪ್ರಮಾಣವಚನ ನಿಗದಿಯಾಗಿತ್ತು . ಆದರೆ, ಸ್ವ ಲ್ಪ ತಡವಾಗಿ ಕಾರ್ಯಕ್ರಮ ನಡೆಯಿತು. ಸೋನಿ ಅವರಿಗೆ ಉಪಮುಖ್ಯ ಮಂತ್ರಿ ಹುದ್ದೆ ನೀಡಿಕೆ ಬಗ್ಗೆ ಸಮಾರಂಭಕ್ಕೆ ಅಲ್ಪ ಮೊದಲು ನಿರ್ಧಾರ ಕೈಗೊಳ್ಳಲಾಯಿತು ಎಂದು ಹೇಳಲಾಗಿದೆ. ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಪಂಜಾಬ್ ಕಾಂಗ್ರೆಸ್ ಘಟಕದ ಅಧ್ಯ ಕ್ಷ ನವಜೋತ್ ಸಿಂಗ್ ಸಿಧು ಅವರು ಸಮಾರಂಭದಲ್ಲಿ ಇದ್ದರು. ಆದರೆ, ಭಿನ್ನ ಮತದ ಕಾರಣಕ್ಕೆ ಮುಖ್ಯ ಮಂತ್ರಿ ಹುದ್ದೆಗೆ ಶನಿವಾರ ರಾಜೀನಾಮೆ ನೀಡಿದ ಅಮರಿಂದರ್ ಅವರು ಗೈರುಹಾಜರಾಗಿದ್ದರು.
ನೀರು, ವಿದ್ಯು ತ್ ಬಿಲ್ ಮನ್ನಾ: ಹೊಸದಾಗಿ ಅಧಿಕಾರ ಸ್ವೀ ಕರಿಸಿದ ಪಂಜಾಬ್ ಸಿಎಂ ಚರಣ್‌ಜಿತ್ ಸಿಂಗ್ ಚನ್ನಿ ಸೋಮವಾರ ರೈತರ ನೀರು, ವಿದ್ಯು ತ್ ಶುಲ್ಕ ಮನ್ನಾ ಮಾಡುವುದಾಗಿ ಭರವಸೆ ನೀಡಿದ್ದಾರೆ.
ಮುಖ್ಯ ಮಂತ್ರಿಯಾದ ಬಳಿಕ ತಮ್ಮ ಮೊದಲ ಪತ್ರಿಕಾಗೋಷ್ಠಿ ಯಲ್ಲಿ ಚನ್ನಿ ಸೋಮವಾರ ನಡೆಸಿದರು. ಈ ವೇಳೆ ಅವರು ತಮ್ಮ ನ್ನು ‘ಆಮ್ ಆದ್ಮಿ’ ಎಂದು ಹೇಳಿಕೊಂಡರು.
ಪಾರದರ್ಶಕ ಸರ್ಕಾರವನ್ನು ಖಾತ್ರಿ ಪಡಿಸುವುದಾಗಿ ತಿಳಿಸಿದ ಅವರು, ಮೂರು ಕೃಷಿ ಕಾನೂನುಗಳನ್ನು ರದ್ದು ಗೊಳಿಸುವಂತೆ ಕೇಂದ್ರ ವನ್ನು ಒತ್ತಾಯಿಸಿದರು.
![](https://vijayapatha.in/wp-content/uploads/2024/02/QR-Code-VP-1-1-300x62.png)