CrimeNEWS

ಪತ್ನಿ ಹತ್ಯೆ ಮಾಡಿ ಬಕೇಟ್‌ಗೆ ರಕ್ತ ತುಂಬಿದ ಕಿರಾತಕ: ಮನೆ ಹಿಂಭಾಗ ಶವ ಹೂತಿಟ್ಟು ಪರಾರಿ!

ವಿಜಯಪಥ ಸಮಗ್ರ ಸುದ್ದಿ

ಮಂಡ್ಯ: ಪತ್ನಿಯನ್ನು ಹತ್ಯೆಮಾಡಿ ಬಳಿಕ ಶವವನ್ನು ಮನೆಯ ಹಿಂಭಾಗದ ಜಮೀನಿನಲ್ಲಿ ಗುಂಡಿ ತೆಗೆದು ಮಣ್ಣು ಮಾಡಿದ ಪತಿ ಸ್ಥಳದಿಂದ ನಾಪತ್ತೆಯಾಗಿರುವ ಘಟನೆ ಜಿಲ್ಲೆಯ ಮಳವಳ್ಳಿ ತಾಲೂಕಿನ ಕಲ್ಲುವೀರನಹಳ್ಳಿ ಗ್ರಾಮದಲ್ಲಿ ನಡೆದಿದೆ.

ರಾಣಿ ಕೊಲೆಯಾದಾಕೆ. ಆಕೆಯ ಪತಿ ಶಿವರಾಜ್ ಅಲಿಯಾಸ್ ಪಿಚ್ಚಾ ಕೊಲೆ ಮಾಡಿರುವ ಆರೋಪಿ.  ಪಿಚ್ಚಾ ಕಳೆದ 20 ವರ್ಷಗಳ ಹಿಂದೆ  ತನ್ನ ಸ್ವಂತ ಅಕ್ಕನ ಮಗಳಾದ ರಾಣಿಯನ್ನು ಮನಸಾರೆ ಇಷ್ಟಪಟ್ಟು ಮದುವೆಯಾಗಿದ್ದ. ಬಳಿಕ ಇವರ ಪ್ರೀತಿಗೆ ಒಂದು ಗಂಡು ಮಗು ಕೂಡ ಆಗತ್ತೆ. ಆ ಸಂದರ್ಭ ಈತ ಮತ್ತು ಪತ್ನಿ ರಾಣಿ ಕೂಲಿ ಕೆಲಸ ಮಾಡುತ್ತ. ಗ್ರಾಮದಲ್ಲಿ ಸುಖ ಜೀವನ ನಡೆಸಿದ್ದರು.

ಗ್ರಾಮದಲ್ಲಿ ಹೇಗೋ ಕಬ್ಬು ಕಡಿಯುತ್ತ ಕೂಲಿ ಕೆಲಸ ಮಾಡಿಕೊಂಡಿದ್ದ ಶಿವರಾಜ ಹಣದ ಆಸೆಗೆ ಬಿದ್ದು ತನ್ನ ಇಬ್ಬರು ಸಂಬಂಧಿಕರ ಜೊತೆ ಸೇರಿ ಕಳೆದ 12 ವರ್ಷಗಳ ಹಿಂದೆ ಕನಕಪುರ ತಾಲೂಕಿನ ಹಾರೋಹಳ್ಳಿಯ ಅರ್ಚಕರೊಬ್ಬರ ಹತ್ಯೆ ನಡೆಸಿದ್ದ.

ಬಳಿಕ ಅಲ್ಲಿ ದರೊಡೆ ನಡೆಸಿದ್ದ ಚಿನ್ನಾಭರಣಗಳನ್ನು ತನ್ನ ಮನೆಯ ಒಳಗೆ ಹಾಗೂ ಒಂದಷ್ಟು ಚಿನ್ನಾಭರಣಗಳನ್ನ ಮನೆಯ ಹಿತ್ತಲಿನಲ್ಲಿ ಬಚ್ಚಿಟ್ಟಿದ್ದ. ಬಚ್ಚಿಡುವಾಗ ಈತನ 4 ವರ್ಷದ ಮಗ ಯೋಗೇಶ್ ನೋಡಿಬಿಟ್ಟಿದ್ದ.

ಮಗ ಯೋಗೇಶ ತನ್ನ ಅಪ್ಪ ತಂದು ಅವಿತಿಟ್ಟಿದ್ದ ಚಿನ್ನಾಭರಣಗಳನ್ನ ಪೊಲೀಸರಿಗೆ ತೋರಿಸಿಕೊಟ್ಟಿದ್ದ. ಮೊದಲೇ ಹತ್ಯೆ ವಿಚಾರವಾಗಿ ಈತನನ್ನ ಬಂಧಿಸಿದ್ದ ಪೊಲೀಸರಿಗೆ ಚಿನ್ನಾಭರಣಗಳು ಸಿಕ್ಕಿದ್ದು, ದೊಡ್ಡ ಮಟ್ಟದ ಸಾಕ್ಷಿ ಸಿಕ್ಕಂತಾಗಿತ್ತು. ಹೀಗಾಗಿ ಕಳೆದ ಹತ್ತು ವರ್ಷಗಳಿಂದ ಶಿವರಾಜ ಅಲಿಯಾಸ್ ಪಿಚ್ಚಾ ಜೈಲಿನಲ್ಲಿ ಕಂಬಿ ಎಣಿಸುತ್ತಿದ್ದ.

ಹತ್ತು ವರ್ಷಗಳ ಕಾಲ ಜೈಲು ಪಾಲಾಗಿದ್ದ ಶಿವರಾಜ ಏಳೆಂಟು ತಿಂಗಳ ಹಿಂದಷ್ಟೇ ಬಿಡುಗಡೆಯಾಗಿ ತನ್ನ ಗ್ರಾಮವಾದ ಕಲ್ಲುವೀರನಹಳ್ಳಿಗೆ ವಾಪಸ್ಸಾಗಿದ್ದ. ಈ ಸಂದರ್ಭ ತನ್ನ ಹೆಂಡತಿ ರಾಣಿ ಎಲ್ಲಿ ಅಂತ ತನ್ನ ತಾಯಿ ಪಾಪಮ್ಮಳನ್ನ ವಿಚಾರಿಸಿದ್ದ. ರಾಣಿ ಬಗ್ಗೆ ಮಾಹಿತಿ ನೀಡಿದ ಪಾಪಮ್ಮ ರಾಣಿ ಈಗ ಬೆಂಗಳೂರಿನಲ್ಲಿ ಇದ್ದಾಳೆ. ನೀನು ಜೈಲಿಗೆ ಹೋದ ಬಳಿಕ ಅವಳು ಕೂಡ ಬೆಂಗಳೂರಿಗೆ ಹೋಗಿದ್ದಾಳೆ ಎಂದು ತಿಳಿಸಿದ್ದಾರೆ.

ಮೊದಲು ತನ್ನ ತಮ್ಮನ ಮನೆಯಲ್ಲಿದ್ದ ರಾಣಿ ಹೇಗೋ ಸಣ್ಣಾ ಪುಟ್ಟ ಕೆಲಸ ಮಾಡ್ತ ಬದುಕು ನಡೆಸುತ್ತಿದ್ದಳು. ಆದರೆ ಇತ್ತೀಚೆಗೆ ರಾಣಿಗೆ ಬೇರೊಬ್ಬ ಗಂಡಸಿನ ಜೊತೆ ಸ್ನೇಹ ಬೆಳೆದಿತ್ತು. ಬಳಿಕ ಸ್ನೇಹ ಪ್ರೀತಿಯಾಗಿ ಬದಲಾಗಿತ್ತು. ರಾಣಿ ಗಂಡ ಶಿವರಾಜ ಬರುವ ಹೊತ್ತಿಗೆ ಸರಿಯಾಗಿ 8 ತಿಂಗಳ ತುಂಬು ಗರ್ಭಿಣಿಯಾಗಿದ್ದಳು.

ಗರ್ಭಿಣಿಯಾಗಿದ್ದ ರಾಣಿಯನ್ನು ಕಂಡ ಶಿವರಾಜ ಶಾಕ್ ಆಗಿದ್ದ. ಇಷ್ಟಾದರೂ ಕೂಡ ನನಗೆ ನನ್ನ ಹೆಂಡತಿ ರಾಣಿ ಬೇಕೆ ಬೇಕು ಅಂತ ಹೇಳಿದ ಶಿವರಾಜ ಮಗುವಾಗೋವರೆಗೂ ಸುಮ್ಮನಾಗಿದ್ದ ಬಳಿಕ ಮಗುವಾಗ್ತಿದ್ದಂತೆ. ಸ್ವಲ್ಪ ದಿನ ಕಳೆಯಿತ್ತಿದ್ದಾಗೆ ಆ ಮಗುವನ್ನ ಬೇರೊಬ್ಬರಿಗೆ ಕೊಡಿಸಿ. ತನ್ನ ಪತ್ನಿ ರಾಣಿಯನ್ನ ಮತ್ತೆ ಕಲ್ಲುವೀರನಹಳ್ಳಿ ಗ್ರಾಮಕ್ಕೆ ಕರೆ ತಂದಿದ್ದ.

ಹೇಗೋ ರಾಣಿಯ ಮನವೊಲಿಸಿ ಕರೆತಂದ ಶಿವರಾಜ ಗ್ರಾಮದಲ್ಲಿ ತನ್ನ ಪತ್ನಿ ಜೊತೆ ಸಂಸಾರ ನಡೆಸಿದ್ದ. ಆದರೆ ಈ ಮಧ್ಯೆ ಶುಕ್ರವಾರ ರಾತ್ರಿ ಇಬ್ಬರ ನಡುವೆ ಅದೆನಾಯ್ತೋ ಗೊತ್ತಿಲ್ಲ. ಆದರೆ ಶಿವರಾಜ ರಾಣಿಯ ಕತ್ತು ಕೊಯ್ದು ಹತ್ಯೆ ಮಾಡಿದ್ದಾನೆ.

ರಾಣಿಯನ್ನು ಮತ್ತೆ ಮನೆಗೆ ಕರೆತಂದಿದ್ದ ಶಿವರಾಜ ಪತ್ನಿ ಜೊತೆ ಪ್ರತಿ ದಿನ ಆಕೆಯ ಪ್ರಿಯಕರನ ವಿಚಾರವಾಗಿ ಕ್ಯಾತೆ ಆರಂಭಿಸಿದ್ದ. ಇಬ್ಬರ ನಡುವೆ ಆಗಾಗ್ಗೆ ಗಲಾಟೆ ಕೂಡ ನಡಿತಿತ್ತು. ಈ ವಿಚಾರವಾಗಿ ಕೊಪಗೊಂಡಿದ್ದ ಶಿವರಾಜ ಮೊನ್ನೆ ರಾತ್ರಿ ರಾಣಿ ಮಲಗಿದ್ದಾಗ ಆಕೆಯ ಕತ್ತನ್ನ ಸೀಳಿಬಿಟ್ಟಿದ್ದಾನೆ.

ಬಳಿಕ ಯಾರಿಗೂ ಗೊತ್ತಾಗಬಾರದು ಅಂತ ಆಕೆಯ ಕತ್ತಿನಿಂದ ಚಿಮ್ಮಿದ ರಕ್ತವನ್ನು ಬಕೇಟೊಂದಕ್ಕೆ ತುಂಬಿದ್ದಾನೆ. ಬಳಿಕ ಯಾರಿಗೂ ತಿಳಿಯದಂತೆ ರಾತ್ರೋ ರಾತ್ರಿ ತನ್ನ ಮನೆಯ ಹಿಂಭಾಗ ಅರ್ಧ ಕಿ.ಮೀ. ನಷ್ಟು ದೂರದಲ್ಲಿ ರಾಣಿಯ ಮೃತ ದೇಹ ತೆಗೆದುಕೊಂಡು ಹೋಗಿದ್ದಾನೆ. ಮೊದಲೆ ಕತ್ತಲೆಯಾಗಿದ್ದರಿಂದ ಗ್ರಾಮದ ಸತೀಶ್ ಎಂಬುವವರ ಜಮೀನಿನಲ್ಲಿ ಒಂದು ಅಡಿಯಷ್ಟು ಹಳ್ಳ ತೆಗೆದು ರಾಣಿಯ ಮೃತ ದೇಹ ಊತಿಟ್ಟು ಪರಾರಿಯಾಗಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಈ ಬಗ್ಗೆ ಮಳವಳ್ಳಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ತಹಸೀಲ್ದಾರ್ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮತ್ತೆ ಕೊಲೆಯಾದ ಮಹಿಳೆಯ ಶವ ಹೊರ ತೆಗೆದು ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ.

Leave a Reply

error: Content is protected !!

Discover more from VIJAYAPATHA.IN

Subscribe now to keep reading and get access to the full archive.

Continue reading

LATEST
ಕ್ರೀಡಾಪಟುಗಳಿಗೆ ಕೊಡುವ ಏಕಲವ್ಯ ಪ್ರಶಸ್ತಿ ಮುಂದುವರಿಸಲಿ: ಶೋಭಾ ನಾರಾಯಣ್ ಬಿಡದಿಯಿಂದ ಹೆದ್ದಾರಿಯಲ್ಲೇ ಮುಂದೆ ಬಂದರೆ ನಿಮಗೆ ಟೋಲ್‌ ಬರೆ ಗ್ಯಾರಂಟಿ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಹೊತ್ತಿ ಉರಿದ ಸ್ಕಾರ್ಪಿಯೋ ಕಾರು KSRTC ಕನಕಪುರ ಬಸ್‌ ನಿಲ್ದಾಣದಲ್ಲಿ ವಿಕಲ ಚೇತನರಿಂದ ₹700 ವಸೂಲಿ, ಕಂಡಕ್ಟರ್ಸ್‌ ಕೊಡಬೇಕು ₹10 : ಟಿಸಿಗೆ ಡಿಎಂ ಸಾಥ್... ಹೆಚ್ಚುವರಿ ಬಡ್ಡಿ ವಿಧಿಸುವ ನೋಂದಾಯಿತ ಲೇವಾದೇವಿಸಂಸ್ಥೆಗಳ ವಿರುದ್ಧ ದೂರು ನೀಡಿ KSRTC: 38+13 ತಿಂಗಳ ವೇತನ ಹಿಂಬಾಕಿ ಯಾವಾಗ ಬರುತ್ತದೆ ಒಕ್ಕೂಟದ ವಿರುದ್ಧ ನೌಕರರು ಕಿಡಿ BMTC: ಅಪಘಾತದಲ್ಲಿ ಮೃತಪಟ್ಟ ನೌಕರರ ಕುಟುಂಬಕ್ಕೆ ₹1 ಕೋಟಿ ಪರಿಹಾರ ಚೆಕ್‌ ವಿತರಿಸಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸಾರಿಗೆ ನಿವೃತ್ತ ನೌಕರರಿಗೆ ಮತ್ತೊಮ್ಮೆ ಮೊಗದೊಮ್ಮೆ ನಿರಾಸೆ: ಭಾರಿ ಆಕ್ರೋಶಗೊಂಡ EPS ನಿವೃತ್ತರು ಕಾರು ಡೋರ್‌ಗೆ ಬೈಕ್‌ ಗುದ್ದಿ ಕೆಳಗೆ ಬಿದ್ದ ಮಹಿಳೆ ಮೇಲೆ ಹರಿದ ಬಿಎಂಟಿಸಿ ಬಸ್‌ ನಾಟಿ ಕೋಳಿ ಸಾರಿನ ಜತೆ ರಾಗಿಮುದ್ದೆ ನುಂಗಿದವರಿಗೆ ಗೊತ್ತು ಅದರ ಗಮ್ಮತ್ತು