NEWSನಮ್ಮಜಿಲ್ಲೆನಮ್ಮರಾಜ್ಯರಾಜಕೀಯ

ಬಿಜೆಪಿಯ 10 ಶಾಸಕರ ಅಮಾನತು: ಸ್ಪೀಕರ್​ ಖಾದರ್​ ವಿರುದ್ಧ ರಾಜ್ಯಪಾಲರಿಗೆ ದೂರು

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಸದನದಲ್ಲಿ ಅಶಿಸ್ತು ತೋರಿದ್ದಾರೆ ಎಂದು  ವಿಧಾನಸಭಾಧ್ಯಕ್ಷ ಯು.ಟಿ. ಖಾದರ್​ ಅವರು ನಿನ್ನೆ (ಜು. 19) ಬಿಜೆಪಿಯ 10 ಶಾಸಕರನ್ನು ಅಮಾನತು ಮಾಡಿರುವುದನ್ನು ವಿರೋಧಿಸಿ ಇಂದು (ಜು.20) ಬಿಜೆಪಿ ಶಾಸಕರು ನಡೆಸುತ್ತಿರುವ ಧರಣಿಗೆ ಜೆಡಿಎಸ್​ ಶಾಸಕರು ಸಾಥ್​ ನೀಡಿದ್ದಾರೆ. ಅಲ್ಲದೆ, ಎರಡೂ ವಿಪಕ್ಷಗಳು  ಕಲಾಪವನ್ನು ಬಹಿಷ್ಕರಿಸಿವೆ.

ಇನ್ನು ಬಿಜೆಪಿ ಶಾಸಕರಾದ ಅಶ್ವಥ್ ನಾರಾಯಣ, ಯಶ್ ಪಾಲ್ ಸುವರ್ಣ, ಆರಗ ಜ್ಞಾನೇಂದ್ರ, ವೇದವ್ಯಾಸ ಕಾಮತ್, ಧಿರಜ್ ಮುನಿರಾಜು, ಭರತ್ ಶೆಟ್ಟಿ, ಆರ್. ಅಶೋಕ್, ಅರವಿಂದ್ ಬೆಲ್ಲದ, ಉಮಾನಾಥ್ ಕೊಟ್ಯಾನ್ ಹಾಗೂ ಸುನಿಲ್ ಕುಮಾರ್ ಅವರನ್ನು ಅಧಿವೇಶನ ಮುಗಿಯುವವರೆಗೂ ಸ್ಪೀಕರ್​ ಯು.ಟಿ. ಖಾದರ್​ ಅಮಾನತು ಮಾಡಿದ್ದಾರೆ. ಈ ಅಮಾನತು ಮಾಡಿರುವುದನ್ನು ಖಂಡಿಸಿ ರಾಜ್ಯಪಾಲರಿಗೆ ವಿಪಕ್ಷಗಳು ಇಂದು ದೂರು ನೀಡಿವೆ.

ಸ್ಪೀಕರ್​ ಅವರ ಈ ನಿಲುವಿನ ವಿರುದ್ಧ ಗುರುವಾರವೂ ಬಿಜೆಪಿ ಪ್ರತಿಭಟನೆ ಮುಂದುವರಿಸಿದ್ದು, ರಾಜ್ಯಪಾಲರಿಗೆ ಈ ಸಂಬಂಧ ದೂರು ಸಹ ನೀಡಿದೆ. ಇದಕ್ಕೆ ಜೆಡಿಎಸ್​ ಸಾಥ್​ ನೀಡುವ ಮೂಲಕ ಸರ್ಕಾರದ ವಿರುದ್ಧ ಬಿಜೆಪಿ ಹಾಗೂ ಜೆಡಿಎಸ್ ಒಗ್ಗಟ್ಟಿನ ಹೋರಾಟ ನಡೆಸುತ್ತಿವೆ.

ಸದನದ ಒಳಗೆ ಹಾಗೂ ಹೊರಗೆ ಉಭಯ ಪಕ್ಷಗಳು ಒಗ್ಗಟ್ಟಾಗಿದ್ದು, ಕಾಂಗ್ರೆಸ್ ವಿರುದ್ಧ ಜಂಟಿಯಾಗಿ ಹೋರಾಟಕ್ಕಿಳಿದಿದೆ. ಮೈತ್ರಿಯ ಸುದ್ದಿ ಬೆನ್ನಲ್ಲೇ ಈ ಹೊಂದಾಣಿಕೆ ಹೋರಾಟ ರಾಜಕೀಯ ಮಹತ್ವ ಪಡೆದುಕೊಳ್ಳುತ್ತಿದೆ. ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಸಿ.ಟಿ ರವಿ, ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಹಾಗೂ ಸುನೀಲ್ ಕುಮಾರ್, ರಮೇಶ್ ಜಾರಕಿಹೊಳಿ ಹಾಗೂ ಪ್ರಭು ಚೌಹಾಣ್ ಸೇರಿದಂತೆ ಬಿಜೆಪಿ ಪರಿಷತ್ ಸದಸ್ಯರು ರಾಜಭವನಕ್ಕೆ ತೆರಳಿ ಸ್ಪೀಕರ್​ ವಿರುದ್ಧ ದೂರು ನೀಡಿದ್ದಾರೆ.

ಇದೇ ವೇಳೆ ಮಾಜಿ ಸಿಎಂ ಎಚ್​.ಡಿ. ಕುಮಾರಸ್ವಾಮಿ, ಎಚ್​.ಡಿ. ರೇವಣ್ಣ ಸೇರಿದಂತೆ ಜೆಡಿಎಸ್​ ಶಾಸಕರು ಸಹ ಬಿಜೆಪಿ ಜತೆಗೂಡಿ ಕಲಾಪ ಸುಗಮವಾಗಿ, ನಿಷ್ಪಕ್ಷಪಾತವಾಗಿ ನಡೆಸಲು ಸ್ಪೀಕರ್ ವಿಫಲವಾಗಿದ್ದಾರೆ ಎಂಬುವುದು ಸೇರಿದಂತೆ ಮೊನ್ನೆ ಕೇಂದ್ರ ಆಡಳಿತಾರೂಢ ಎನ್​ಡಿಎ ವಿರುದ್ಧ ನಡೆದ ವಿಪಕ್ಷಗಳ ಸಭೆಯಲ್ಲಿ IAS ಅಧಿಕಾರಿಗಳ ದುರ್ಬಳಕೆ ಮಾಡಿಕೊಂಡಿರುವ ಬಗ್ಗೆ ಬಿಜೆಪಿ ಮತ್ತು ಜೆಡಿಎಸ್​ ರಾಜ್ಯಪಾಲರಿಗೆ ದೂರುನೀಡಿವೆ.

 ನಡೆದಿದ್ದೇನು?: ಬುಧವಾರ ಊಟಕ್ಕೂ ಬಿಡದೆ ಕಲಾಪ ಮುಂದುವರಿಸಿ ಬಜೆಟ್ ಮೇಲೆ ಚರ್ಚೆಗೆ ಅವಕಾಶ ನೀಡಿದ್ದಕ್ಕೆ ಬಿಜೆಪಿ ಸದಸ್ಯರು ಸ್ಪೀಕರ್​ ವಿರುದ್ಧ ಪ್ರತಿಭಟನೆ ನಡೆಸಿದರು. ವಿಪಕ್ಷದ ನಾಯಕರು ಸ್ಪೀಕರ್ ಪೀಠದ ಬಳಿ ಜಮಾಯಿಸಿ ಹರಿದ ವಿಧೇಯಕಗಳ ಪ್ರತಿಗಳನ್ನು ಸ್ಪೀಕರ್ ಪೀಠದಲ್ಲಿ ಕುಳಿತಿದ್ದ ಡೆಪ್ಯುಟಿ ಸ್ಪೀಕರ್ ರುದ್ರಪ್ಪ ಲಮಾಣಿ ಮೇಲೆ ಎಸೆದರು.

ಸದನಕ್ಕೆ ಅಗೌರವ ತಂದವರ ಹೆಸರನ್ನು ಸ್ಪೀಕರ್​ ಖಾದರ್​ ಅವರು ಪ್ರಸ್ತಾಪಿಸಿದರು. ಸದನದ ನಡುವಳಿಕೆ ನಿಯಮದ ಪ್ರಕಾರ ಕಾನೂನುಮಂತ್ರಿ ಎಚ್.ಕೆ. ಪಾಟೀಲ ಅವರು ಅಮಾನತು ಮಾಡಿದರು. 348 ನಿಯಮ ಹಕ್ಕನ್ನು ಖಾದರ್​ ಚಲಾಯಿಸಿದರು. ಎಚ್. ಕೆ. ಪಾಟೀಲ್ ಅವರು ಮಂಡಿಸಿದ ಪ್ರಸ್ತಾಪವನ್ನು ಧ್ವನಿ ಮತದ ಮೂಲಕ ಅಂಗೀಕರಿಸಲಾಯಿತು.

Leave a Reply

error: Content is protected !!

Discover more from VIJAYAPATHA.IN

Subscribe now to keep reading and get access to the full archive.

Continue reading

LATEST
ಕ್ರೀಡಾಪಟುಗಳಿಗೆ ಕೊಡುವ ಏಕಲವ್ಯ ಪ್ರಶಸ್ತಿ ಮುಂದುವರಿಸಲಿ: ಶೋಭಾ ನಾರಾಯಣ್ ಬಿಡದಿಯಿಂದ ಹೆದ್ದಾರಿಯಲ್ಲೇ ಮುಂದೆ ಬಂದರೆ ನಿಮಗೆ ಟೋಲ್‌ ಬರೆ ಗ್ಯಾರಂಟಿ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಹೊತ್ತಿ ಉರಿದ ಸ್ಕಾರ್ಪಿಯೋ ಕಾರು KSRTC ಕನಕಪುರ ಬಸ್‌ ನಿಲ್ದಾಣದಲ್ಲಿ ವಿಕಲ ಚೇತನರಿಂದ ₹700 ವಸೂಲಿ, ಕಂಡಕ್ಟರ್ಸ್‌ ಕೊಡಬೇಕು ₹10 : ಟಿಸಿಗೆ ಡಿಎಂ ಸಾಥ್... ಹೆಚ್ಚುವರಿ ಬಡ್ಡಿ ವಿಧಿಸುವ ನೋಂದಾಯಿತ ಲೇವಾದೇವಿಸಂಸ್ಥೆಗಳ ವಿರುದ್ಧ ದೂರು ನೀಡಿ KSRTC: 38+13 ತಿಂಗಳ ವೇತನ ಹಿಂಬಾಕಿ ಯಾವಾಗ ಬರುತ್ತದೆ ಒಕ್ಕೂಟದ ವಿರುದ್ಧ ನೌಕರರು ಕಿಡಿ BMTC: ಅಪಘಾತದಲ್ಲಿ ಮೃತಪಟ್ಟ ನೌಕರರ ಕುಟುಂಬಕ್ಕೆ ₹1 ಕೋಟಿ ಪರಿಹಾರ ಚೆಕ್‌ ವಿತರಿಸಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸಾರಿಗೆ ನಿವೃತ್ತ ನೌಕರರಿಗೆ ಮತ್ತೊಮ್ಮೆ ಮೊಗದೊಮ್ಮೆ ನಿರಾಸೆ: ಭಾರಿ ಆಕ್ರೋಶಗೊಂಡ EPS ನಿವೃತ್ತರು ಕಾರು ಡೋರ್‌ಗೆ ಬೈಕ್‌ ಗುದ್ದಿ ಕೆಳಗೆ ಬಿದ್ದ ಮಹಿಳೆ ಮೇಲೆ ಹರಿದ ಬಿಎಂಟಿಸಿ ಬಸ್‌ ನಾಟಿ ಕೋಳಿ ಸಾರಿನ ಜತೆ ರಾಗಿಮುದ್ದೆ ನುಂಗಿದವರಿಗೆ ಗೊತ್ತು ಅದರ ಗಮ್ಮತ್ತು