NEWSನಮ್ಮಜಿಲ್ಲೆನಮ್ಮರಾಜ್ಯ

ಬೇಜವಾಬ್ದಾರಿಯಿಂದ ವರ್ತಿಸುವ ಬಿಎಂಟಿಸಿ ಎಲೆಕ್ಟ್ರಿಕ್‌ ಬಸ್‌ ಚಾಲಕ – ಉಡಾಫೆ ವರ್ತನೆ : ಪ್ರಯಾಣಿಕ ಲೋಕೇಶ್‌ ಆರೋಪ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಜತೆಗೆ ಒಡಂಬಡಿಕೆ ಮಾಡಿಕೊಂಡು ಸಂಚರಿಸುತ್ತಿರುವ ಎಲೆಕ್ಟ್ರಿಕ್‌ ಬಸ್‌ನ ಚಾಲಕರು ಮತ್ತು ಬಿಎಂಟಿಸಿ ಬಸ್‌ ಚಾಲಕರ ನಡುವೆ ಒಂದಿಲ್ಲೊಂದು ಕಾರಣಕ್ಕೆ ತಿಕ್ಕಾಟ ನಡೆಯುತ್ತಲೇ ಇದೆ. ಇದರ ನಡುವೆ ಎಲೆಕ್ಟ್ರಿಕ್‌ ಬಸ್‌ ಚಾಲಕರು ಪ್ರಯಾಣಿಕರೆ ಭಯಪಡುವ ರೀತಿಯಲ್ಲಿ ಬಸ್‌ ಚಾಲನೆ ಮಾಡುತ್ತಿದ್ದಾರೆ ಎಂಬ ಆರೋಪ ಪ್ರಯಾಣಿಕರಿಂದಲೇ ಕೇಳಿ ಬರುತ್ತಿದೆ.

ಇದೇ ಕಳೆದ ಜ.6ರಂದು ಬೆಳಗ್ಗೆ 9.30 ಸುಮಾರಿಗೆ ಎಲೆಕ್ಟ್ರಿಕ್‌ ಬಸ್‌ ಚಾಲಕ (ವಾಹನ ಸಂಖ್ಯೆ KA51 AH 4150) ಅರಬಿಕ್‌ ಕಾಲೇಜು ಬಳಿ ನಿಲ್ದಾಣದಲ್ಲಿ ನಿಂತಿದ್ದ ಬಿಎಂಟಿಸಿ ಬಸ್‌ಗೆ ಸೈಡ್‌ ಹೊಡೆಯುವುದಕ್ಕೆ ಅತಿ ವೇಗವಾಗಿ ಮತ್ತು ಅಜಾಗೂರು ಕತೆಯಿಂದ ಚಾಲನೆ ಮಾಡಿದ್ದಾನೆ ಎಂದು ಆ ಬಸ್‌ನಲ್ಲೇ ಇದ್ದ ಪ್ರಯಾಣಿಕ ಲೋಕೇಶ್‌ ಎಂಬುವರು ತಿಳಿಸಿದ್ದಾರೆ.

ಅಲ್ಲದೆ ಎಲೆಕ್ಟ್ರಿಕ್‌ ಬಸ್‌ ಸಿಬ್ಬಂದಿ ಪ್ರಯಾಣಿಕರೊಂದಿಗೆ ಏಕ ವಚಲ ಪ್ರಯೋಗ ಮಾಡುತ್ತಾರೆ. ನಾನು ಬಸ್‌ ಓಡಿಸೋದೆ ಹೀಗೆ ನಿನಗೆ ಕಷ್ಟವಾದರೆ ಇಳಿದು ಹೋಗು ಎಂದು ನಮಗೆ ಗದರಿಸುತ್ತಾರೆ ಎಂದು ವಿಜಯಪಥಕ್ಕೆ ತಿಳಿಸಿದ್ದಾರೆ.

ಜನವರಿ 6ರಂದು ನಾನು ಪ್ರಯಾಣಿಕನಾಗಿ ಪ್ರಯಾಣಿಸುತ್ತಿದ್ದಾಗ ಇದೇ ವಾಹನದ ಚಾಲಕರು ಅರಬಿಕ್‌ ಕಾಲೇಜು ಬಳಿ ಅತಿ ವೇಗವಾಗಿ ಮತ್ತು ಅಜಾಗೂರು ಕತೆಯಿಂದ ಚಾಲನೆ ಮಾಡಿ ಪ್ರಯಾಣಿಕರಿಗೆ ಭಯ ಹುಟ್ಟಿಸುವ ರೀತಿಯಲ್ಲಿ ಬೇಜವಾಬ್ದಾರಿಯಿಂದ ಚಲಾಯಿಸಿದರು ಮತ್ತು ಇದು ಮೊದಲ ಬಾರಿಯಲ್ಲ ಹಲವು ಬಾರಿ ಈ ಚಾಲಕರು ಈ ರೀತಿ ನಡೆದುಕೊಂಡಿದ್ದಾರೆ.

ನಾವು ಸೇರಿದಂತೆ ಇತರ ಪ್ರಯಾಣಿಕರು ಚಾಲಕನನ್ನು ಪ್ರಶ್ನಿಸಿದಾಗ ಉಡಾಫೆ ಮಾತುಗಳನ್ನು ಆಡಿದರು. ಇವರು ಮಾಡುವ ತಪ್ಪುಗಳಿಂದ ಪ್ರಯಾಣಿಕರ ಪ್ರಾಣಗಳ ಜತೆ ಈ ಗುತ್ತಿಗೆ ಆಧಾರದ ಮೇಲೆ ನೇಮಕಗೊಂಡ ಚಾಲಕರು ಆಟವಾಡುತ್ತಿದ್ದಾರೆ ಮತ್ತು ಪ್ರಯಾಣಿಕರ ಹಿತರಕ್ಷಣೆಯನ್ನು ಕಾಪಾಡುವಂತಹ ಬಿಎಂಟಿಸಿಯ ಸಂಸ್ಥೆಗೆ ಧಕ್ಕೆ ತರುವ ರೀತಿಯಲ್ಲಿ ನಡೆದುಕೊಳ್ಳುತ್ತಿದ್ದಾರೆ.

ಹೀಗಾಗಿ ಇವರ ಬಗ್ಗೆ ಸೂಕ್ತ ಕ್ರಮವನ್ನು ಕೈಗೊಳ್ಳಬೇಕು ಈರೀತಿ  ಬೇಜವಾಬ್ದಾರಿ ವರ್ತನೆಯಿಂದ ನೌಕರರನ್ನು ವರ್ತಿಸದಂತೆ ತಿಳಿವಳಿಕ ನೀಡಬೇಕು ಎಂದು  ನೊಂದ ಪ್ರಯಾಣಿಕನಾಗಿ ತಮ್ಮಲ್ಲಿ ವಿನಂತಿಸಿಕೊಳ್ಳುತ್ತಿದ್ದೇನೆ ಎಂದು ಸಂಸ್ಥೆಯ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.

Leave a Reply

error: Content is protected !!

Discover more from VIJAYAPATHA.IN

Subscribe now to keep reading and get access to the full archive.

Continue reading

LATEST
ಕ್ರೀಡಾಪಟುಗಳಿಗೆ ಕೊಡುವ ಏಕಲವ್ಯ ಪ್ರಶಸ್ತಿ ಮುಂದುವರಿಸಲಿ: ಶೋಭಾ ನಾರಾಯಣ್ ಬಿಡದಿಯಿಂದ ಹೆದ್ದಾರಿಯಲ್ಲೇ ಮುಂದೆ ಬಂದರೆ ನಿಮಗೆ ಟೋಲ್‌ ಬರೆ ಗ್ಯಾರಂಟಿ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಹೊತ್ತಿ ಉರಿದ ಸ್ಕಾರ್ಪಿಯೋ ಕಾರು KSRTC ಕನಕಪುರ ಬಸ್‌ ನಿಲ್ದಾಣದಲ್ಲಿ ವಿಕಲ ಚೇತನರಿಂದ ₹700 ವಸೂಲಿ, ಕಂಡಕ್ಟರ್ಸ್‌ ಕೊಡಬೇಕು ₹10 : ಟಿಸಿಗೆ ಡಿಎಂ ಸಾಥ್... ಹೆಚ್ಚುವರಿ ಬಡ್ಡಿ ವಿಧಿಸುವ ನೋಂದಾಯಿತ ಲೇವಾದೇವಿಸಂಸ್ಥೆಗಳ ವಿರುದ್ಧ ದೂರು ನೀಡಿ KSRTC: 38+13 ತಿಂಗಳ ವೇತನ ಹಿಂಬಾಕಿ ಯಾವಾಗ ಬರುತ್ತದೆ ಒಕ್ಕೂಟದ ವಿರುದ್ಧ ನೌಕರರು ಕಿಡಿ BMTC: ಅಪಘಾತದಲ್ಲಿ ಮೃತಪಟ್ಟ ನೌಕರರ ಕುಟುಂಬಕ್ಕೆ ₹1 ಕೋಟಿ ಪರಿಹಾರ ಚೆಕ್‌ ವಿತರಿಸಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸಾರಿಗೆ ನಿವೃತ್ತ ನೌಕರರಿಗೆ ಮತ್ತೊಮ್ಮೆ ಮೊಗದೊಮ್ಮೆ ನಿರಾಸೆ: ಭಾರಿ ಆಕ್ರೋಶಗೊಂಡ EPS ನಿವೃತ್ತರು ಕಾರು ಡೋರ್‌ಗೆ ಬೈಕ್‌ ಗುದ್ದಿ ಕೆಳಗೆ ಬಿದ್ದ ಮಹಿಳೆ ಮೇಲೆ ಹರಿದ ಬಿಎಂಟಿಸಿ ಬಸ್‌ ನಾಟಿ ಕೋಳಿ ಸಾರಿನ ಜತೆ ರಾಗಿಮುದ್ದೆ ನುಂಗಿದವರಿಗೆ ಗೊತ್ತು ಅದರ ಗಮ್ಮತ್ತು