ನಮ್ಮರಾಜ್ಯರಾಜಕೀಯ

ಮುಖ್ಯಮಂತ್ರಿ ಆಗಲು ನಾನು ಯಾವುದೇ ಪ್ರಯತ್ನ ಮಾಡಲಿಲ್ಲ : ಬೊಮ್ಮಾಯಿ

ವಿಜಯಪಥ ಸಮಗ್ರ ಸುದ್ದಿ

ಹನೂರು: ನಾನು ಮುಖ್ಯಮಂತ್ರಿ ಆಗಲು ಯಾವುದೇ ಪ್ರಯತ್ನವನ್ನು ಮಾಡಿಲ್ಲ ಆದರೆ ಕೆಲವರು ಮುಖ್ಯಮಂತ್ರಿ ಆಗಲೆಂದೇ ಹುಟ್ಟಿದ್ದಾರೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಚಾಮರಾಜನಗರ ಜಿಲ್ಲೆಯ ಹನೂರಿನಲ್ಲಿ 650 ಕೋಟಿ ರೂಪಾಯಿ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ನಾನು ಡಾ.ಬಿ.ಆರ್.ಅಂಬೇಡ್ಕರ್, ಬಸವಣ್ಣ ಅವರ ಚಿಂತನೆಗಳನ್ನು ಮೈಗೂಡಿಸಿಕೊಂಡು ಬೆಳೆದವನು, ಅವರ ತತ್ವಾದರ್ಶಗಳನ್ನು ಆಡಳಿತದಲ್ಲಿ ಬಳಸುತ್ತಿದ್ದೇನೆ ಎಂದು ಹೇಳಿದರು.

ಹೀಗಾಗಿ ಸಾಮಾಜಿಕ ನ್ಯಾಯ ಎಂದು ಭಾಷಣಗಳನ್ನು ಮಾಡಿದರೆ ಜನರಿಗೆ ನ್ಯಾಯ ಸಿಗಲ್ಲ. ಅವಕಾಶ ಸಿಕ್ಕಾಗ ಕೆಲಸ ಮಾಡಬೇಕು. ನಾನು ಶಕ್ತಿಮೀರಿ ಬಡವರಿಗೆ ಬದುಕು ಕಟ್ಟಿಕೊಳ್ಳುವಂತ ಕೆಲಸ ಮಾಡುತ್ತಿದ್ದೇನೆ. ಸಂವಿಧಾನದ ಆಶಯ, ಆತ್ಮಸಾಕ್ಷಿಯಂತೆ ಕೆಲಸ‌ ಮಾಡುತ್ತೀದ್ದೇನೆ ಎಂದು ವಿಪಕ್ಷಗಳ ಟೀಕೆಗೆ ಈ ರೀತಿ ತಿರುಗೇಟು ನೀಡಿದರು.

ಇನ್ನು ಗಡಿಭಾಗದ ಕನ್ನಡಿಗರಷ್ಟೇ ಗಡಿಯಾಚೆಗಿನ ಕನ್ನಡಿಗರ ಅಭಿವೃದ್ಧಿಯೂ ಮುಖ್ಯ. ಗಡಿಯಾಚೆಗಿನ ಕನ್ನಡ ಶಾಲೆಗಳ ಅಭಿವೃದ್ಧಿಗೆ ಈ ಬಾರಿಯ ಬಜೆಟ್ ನಲ್ಲಿ ವಿಶೇಷ ಅನುದಾನ ಘೋಷಣೆ ಮಾಡುತ್ತೇನೆ. ಮುಂದಿನ ದಿನಗಳಲ್ಲಿ ಹನೂರು ಕ್ಷೇತ್ರ ರಾಜ್ಯದಲ್ಲೇ ಅತ್ಯಂತ ಮುಂದುವರಿದ ತಾಲೂಕು ಆಗಲಿದೆ ಎಂದರು.

ಹಿಂದಿನ ಸರ್ಕಾರಗಳು ಯೋಜನೆಗಳನ್ನು ಘೋಷಣೆಗಳು ಮಾಡುತ್ತಿದ್ದವು ಆದರೆ, ಕಾರ್ಯಗತ ಆಗುತ್ತಿರಲಿಲ್ಲ. ಕಾಗದದಲ್ಲಿ ಆದೇಶ ಇರುತ್ತಿತ್ತು.‌ ನನ್ನ ಕ್ಷೇತ್ರದಲ್ಲೇ 3 ಬಾರಿ ಯೋಜನೆಯೊಂದು ಆದೇಶ ಹೊರಡಿಸಿ ಬಳಿಕ ಅನುದಾನ ಕೊಡದೆ ರದ್ದಾಯಿತು. ಆದರೆ, ನಮ್ಮ ಸರ್ಕಾರ ಘೋಷಣೆ ಮಾಡುವುದಲ್ಲ ಕಾರ್ಯಗತ ಮಾಡುತ್ತಿದ್ದೇವೆ ಎಂದು ವಿಪಕ್ಷಗಳಿಗೆ ಟಾಂಗ್ ಕೊಟ್ಟರು.

ಜನರು ನಮಗೆ 60 ತಿಂಗಳು ಅವಕಾಶ ಕೊಡುತ್ತಾರೆ. 59 ತಿಂಗಳು ಕೆಲಸ‌ ಮಾಡೋಣ. 1 ತಿಂಗಳು ರಾಜಕೀಯ ಮಾಡೋಣ, ಶಾಸಕರು ಕೊಟ್ಟಿರುವ ಮನವಿಗಳನ್ನು ಶೀಘ್ರ ಮಂಜೂರಾತಿ ಕೊಡುತ್ತೇನೆ. ಯಳಂದೂರು ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸುವ ಬಗ್ಗೆ ಚಿಂತಿಸುತ್ತೇನೆ. ಚಾಮರಾಜನಗರ ಜಿಲ್ಲೆಯ ಅಭಿವೃದ್ಧಿಗೆ ಆದಷ್ಟು ನೆರವಾಗುತ್ತೇವೆ ಎಂದು ಭರವಸೆ ನೀಡಿದರು.

ಇನ್ನು ಪ.ಜಾತಿ ಮತ್ತು ಪಂಗಡದ ಮೀಸಲಾತಿ ಹೆಚ್ಚಳದ ವಿಚಾರವನ್ನೇ ಈ ಹಿಂದೆ ಹೆದರಿಕೆಯಿಂದ ಯಾರು ಮುಟ್ಟಲಿಲ್ಲ. ಆದರೆ ನಾನು ಧೈರ್ಯ ಮಾಡಿ ಆತ್ಮಸಾಕ್ಷಿಯಂತೆ ನಡೆದುಕೊಂಡು ಮೀಸಲಾತಿ ಹೆಚ್ಚಿಸಿದೆ.‌ ವಾಸ್ತವಾಂಶಕ್ಕೆ ಸ್ಪಂದಿಸಿದರೆ ಕ್ರಾಂತಿ ಆಗಲಿದೆ. ಅದು ನನಗೆ ಗೊತ್ತಿದೆ ಆದರೆ, ಬಡವರು ಬದುಕು ಕಟ್ಟಿಕೊಳ್ಳಲು ಏನು ಬೇಕಾದರೂ ಮಾಡುತ್ತೇನೆ. ನಾವು ಎಷ್ಟು ವರ್ಷ ಸಿಎಂ ಆಗಿರುತ್ತೇವೆ ಎಂಬುದು ಮುಖ್ಯವಲ್ಲ, ಏನು ಕೆಲಸ‌ ಮಾಡಿದ್ದೇವೆ ಎಂಬುದು ಮುಖ್ಯ ಎಂದರು.

ಜನರಿಗೆ ತಿಳಿದಿದೆ ಯಾರು ನಿಷ್ಠರು ಎನ್ನುವುದು. ನಮ್ಮದು ಡಬಲ್ ಇಂಜಿನ್ ಸರ್ಕಾರ ಆದ್ದರಿಂದಲೇ 6 ಸಾವಿರ ಕಿಮೀ ರಸ್ತೆ ನಿರ್ಮಾಣ ಆಗುತ್ತಿದೆ, ಅಸಾಧ್ಯ ಆಗಿರುವುದೆಲ್ಲಾ ಸಾಧ್ಯವಾಗುತ್ತಿದೆ. ನಡುಭಾಗದ ಪ್ರದೇಶದಷ್ಟೇ ಗಡಿಭಾಗದ ಜಿಲ್ಲೆಗಳ ಅಭಿವೃದ್ಧಿಯೂ ಮುಖ್ಯ. ‌ಆದ್ದರಿಂದಲೇ 1500 ಗಡಿ ಗ್ರಾಮಗಳ ಅಭಿವೃದ್ಧಿಗೆ ಯೋಜನೆ ರೂಪಿಸುತ್ತಿದ್ದೇವೆ. ಗಡಿಭಾಗದ ಶಾಲೆಗಳು, ರಸ್ತೆಗಳು ಮತ್ತು ಆಸ್ಪತ್ರೆಗಳ ಅಭಿವೃದ್ಧಿಗೆ ಹೆಚ್ಚು ಅನುದಾನ ಕೊಡಲಾಗುತ್ತಿದೆ ಎಂದು ಹೇಳಿದರು.

Leave a Reply

error: Content is protected !!

Discover more from VIJAYAPATHA.IN

Subscribe now to keep reading and get access to the full archive.

Continue reading

LATEST
ನಾನು ಕಾದು ಕುಳಿತಿದ್ದರೂ ಬಸ್‌ ನಿಲ್ಲಿಸಿಲ್ಲ - ಚಾಲಕ, ಕಂಡಕ್ಟರ್‌ ತಿಂಗಳ ಸಂಬಳ ನನಗೆ ನಷ್ಟಪರಿಹಾರ ಕೊಡಿ: ವಕೀಲನ ಒತ್ತ... ಕೆಎಂಎಫ್ ಸಿಬ್ಬಂದಿಗೆ 7ನೇ ವೇತನ ಆಯೋಗ ಜಾರಿ- 2024ರ ಆ.1ರಿಂದಲೇ ಪೂರ್ವಾನ್ವಯ KSRTC ಏಕಸ್ವಾಮ್ಯಕ್ಕೆ ಮೂಗುದಾರ ಹಾಕಿ- ಸರ್ಕಾರದ ಕಾಯ್ದೆ ಸರಿ ಎಂದ ಕೋರ್ಟ್ ಸ್ಮಶಾನ ಜಾಗ ಭೂಗಳ್ಳನಿಗೆ ಬಿಟ್ಟುಕೊಡಲು ಟಿಪ್ಪಣಿ ಮಂಡಿಸಿರುವ ಭ್ರಷ್ಟ ಅಧಿಕಾರಿಗಳು: ಎನ್.ಆರ್.ರಮೇಶ್ ಆರೋಪ ಕ್ರೀಡಾಪಟುಗಳಿಗೆ ಕೊಡುವ ಏಕಲವ್ಯ ಪ್ರಶಸ್ತಿ ಮುಂದುವರಿಸಲಿ: ಶೋಭಾ ನಾರಾಯಣ್ ಬಿಡದಿಯಿಂದ ಹೆದ್ದಾರಿಯಲ್ಲೇ ಮುಂದೆ ಬಂದರೆ ನಿಮಗೆ ಟೋಲ್‌ ಬರೆ ಗ್ಯಾರಂಟಿ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಹೊತ್ತಿ ಉರಿದ ಸ್ಕಾರ್ಪಿಯೋ ಕಾರು KSRTC ಕನಕಪುರ ಬಸ್‌ ನಿಲ್ದಾಣದಲ್ಲಿ ವಿಕಲ ಚೇತನರಿಂದ ₹700 ವಸೂಲಿ, ಕಂಡಕ್ಟರ್ಸ್‌ ಕೊಡಬೇಕು ₹10 : ಟಿಸಿಗೆ ಡಿಎಂ ಸಾಥ್... ಹೆಚ್ಚುವರಿ ಬಡ್ಡಿ ವಿಧಿಸುವ ನೋಂದಾಯಿತ ಲೇವಾದೇವಿಸಂಸ್ಥೆಗಳ ವಿರುದ್ಧ ದೂರು ನೀಡಿ KSRTC: 38+13 ತಿಂಗಳ ವೇತನ ಹಿಂಬಾಕಿ ಯಾವಾಗ ಬರುತ್ತದೆ ಒಕ್ಕೂಟದ ವಿರುದ್ಧ ನೌಕರರು ಕಿಡಿ