CrimeNEWSದೇಶ-ವಿದೇಶ

ಮದುವೆ ಮಂಟಪದಲ್ಲೇ ವಿಷ ಸೇವಿಸಿದ ವಧು-ವರರು: ವರ ಮೃತ, ಜೀವನ್ಮರಣ ಹೋರಾಟದಲ್ಲಿ ವಧು

ವಿಜಯಪಥ ಸಮಗ್ರ ಸುದ್ದಿ

ಇಂದೋರ್:‌ ಮದುವೆ ಮಂಟಪದಲ್ಲೇ ವಧು-ವರರು ವಿಷ ಸೇವಿಸಿದ್ದು ಈ ವೇಳೆ ವರ ಮೃತಪಟ್ಟು ವಧು ಸಾವು ಬದುಕಿನ ನಡುವೆ ಹೋರಾಟಡುತ್ತಿರುವ ಘಟನೆ ಮಧ್ಯ ಪ್ರದೇಶದ ಇಂದೋರ್‌ನಲ್ಲಿ ನಡೆದಿದೆ.

ವರ ದೀಪಕ್ ಅಹಿರ್ವಾರ್ ಮೃತಪಟ್ಟಿದ್ದು, ವಧು ನಿಶಾ ಜೀವನ್ಮರಣದಲ್ಲಿ ಹೋರಾಡುತ್ತಿದ್ದಾಳೆ.

ಘಟನೆ ವಿವರ: ನಿನ್ನೆ ಕನಾಡಿಯಾ ಪ್ರದೇಶದ ಆರ್ಯ ಸಮಾಜ ದೇವಸ್ಥಾನದಲ್ಲಿ ನಡೆಯುತ್ತಿದ್ದ ಮದುವೆ ಕಾರ್ಯಕ್ರಮದಲ್ಲಿ ವಧು ವರರ ನಡುವೆ ವಾಗ್ವಾದ ಉಂಟಾಗಿದೆ. ಇನ್ನೇನು ಹಾರ ಬದಲಾಯಿಸಿ ತಾಳಿ ಕಟ್ಟಬೇಕು ಎನ್ನುವಾಗಲೇ ವರ ಮದುವೆ ವೇದಿಕೆಯ ಪಕ್ಕಕ್ಕೆ ಹೋಗಿದ್ದಾನೆ.

ಬಳಿಕ ವೇದಿಕೆಗೆ ಬಂದು ತಾನು ವಿಷ ಸೇವಿಸಿದ್ದಾಗಿ ದೀಪಕ್ ಅಹಿರ್ವಾರ್ ವಧು ನಿಶಾಳಿಗೆ ಹೇಳಿದ್ದಾನೆ. ವರನ ಮಾತನ್ನು ಕೇಳಿ ವಧು ಕೂಡ ವಿಷ ಸೇವಿಸಿದ್ದಾಳೆ.

ಹೇಗೋ ವಿಷಯ ತಿಳಿದ ಪಾಲಕರು ಕೂಡಲೇ ಗಂಭೀರ ಸ್ಥಿತಿಯಲ್ಲಿದ್ದ ಇಬ್ಬರನ್ನೂ ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ ಮಾರ್ಗಮಧ್ಯದಲ್ಲೇ ವರ ಮೃತಪಟ್ಟಿದ್ದು, ವಧು ಜೀವನ್ಮರಣ ಹೋರಾಟ ಮಾಡುತ್ತಿದ್ದಾಳೆ. ಆಕೆಯನ್ನು ವೆಂಟಿಲೇಟರ್‌ನಲ್ಲಿ ಇಡಲಾಗಿದ್ದು ಇನ್ನು ಏನನ್ನು ಹೇಳಲು ಸಾಧ್ಯವಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ.

ಇತ್ತ ಯುವತಿ ಮದುವೆಯಾಗಲು ಒತ್ತಡ ಹೇರುತ್ತಿದ್ದಳು. ನಮ್ಮ ಹುಡುಗನಿಗೆ ಇನ್ನು ಚಿಕ್ಕ ವಯಸ್ಸು ಆತ ಸ್ವಲ್ಪ ಕೆರಿಯರ್‌ ಬಿಲ್ಡ್‌ ಮಾಡಿಕೊಳ್ಳಬೇಕೆಂದು ಹೇಳಿ, ಎರಡು ವರ್ಷ ಸಮಯ ಕೇಳಿದ್ದ.

ಆದರೆ ಇದಕ್ಕೆ ಆಕೆ ಒಪ್ಪದೆ ಹುಡುಗನ ವಿರುದ್ಧ ದೂರು ನೀಡಿದ್ದಳು. ಇದೇ ಕಾರಣದಿಂದ ಮದುವೆ ಬೇಗ ಮಾಡಲು ತೀರ್ಮಾನ ಮಾಡಿದ್ದೆವು ಎಂದು ವರನ ಕುಟುಂಬ ಸದಸ್ಯರು ಹೇಳಿದ್ದಾರೆ.

ಘಟನೆ ಸಂಬಂಧ ಪೊಲೀಸರು ದೂರು ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

error: Content is protected !!

Discover more from VIJAYAPATHA.IN

Subscribe now to keep reading and get access to the full archive.

Continue reading

LATEST
ಹೆಚ್ಚುವರಿ ಬಡ್ಡಿ ವಿಧಿಸುವ ನೋಂದಾಯಿತ ಲೇವಾದೇವಿಸಂಸ್ಥೆಗಳ ವಿರುದ್ಧ ದೂರು ನೀಡಿ KSRTC: 38+13 ತಿಂಗಳ ವೇತನ ಹಿಂಬಾಕಿ ಯಾವಾಗ ಬರುತ್ತದೆ ಒಕ್ಕೂಟದ ವಿರುದ್ಧ ನೌಕರರು ಕಿಡಿ BMTC: ಅಪಘಾತದಲ್ಲಿ ಮೃತಪಟ್ಟ ನೌಕರರ ಕುಟುಂಬಕ್ಕೆ ₹1 ಕೋಟಿ ಪರಿಹಾರ ಚೆಕ್‌ ವಿತರಿಸಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸಾರಿಗೆ ನಿವೃತ್ತ ನೌಕರರಿಗೆ ಮತ್ತೊಮ್ಮೆ ಮೊಗದೊಮ್ಮೆ ನಿರಾಸೆ: ಭಾರಿ ಆಕ್ರೋಶಗೊಂಡ EPS ನಿವೃತ್ತರು ಕಾರು ಡೋರ್‌ಗೆ ಬೈಕ್‌ ಗುದ್ದಿ ಕೆಳಗೆ ಬಿದ್ದ ಮಹಿಳೆ ಮೇಲೆ ಹರಿದ ಬಿಎಂಟಿಸಿ ಬಸ್‌ ನಾಟಿ ಕೋಳಿ ಸಾರಿನ ಜತೆ ರಾಗಿಮುದ್ದೆ ನುಂಗಿದವರಿಗೆ ಗೊತ್ತು ಅದರ ಗಮ್ಮತ್ತು ನೀವು ಗಬಗಬನೆ ಊಟ ಮಾಡುವವರಿದ್ದೀರಾ? ಹಾಗಿದ್ದರೆ ನಿಮಗೆ ಈ ಸಮಸ್ಯೆ ಕಾಡದಿರದು! BMTC ನೌಕರರಿಗೆ ಆನ್-ಲೈನ್ ಮೂಲಕ ವೇತನ ಚೀಟಿ ಪಡೆಯುವ ವ್ಯವಸ್ಥೆ- ಜಾರಿ ಸ್ಕೂಟರ್‌ಗೆ ಕಾರು ಡಿಕ್ಕಿ- ಮೊಪೆಡ್‌ನಲ್ಲಿ ತೆರಳುತ್ತಿದ್ದ ಮಾವ-ಸೊಸೆ ದಾರುಣ ಸಾವು ಪೊಲೀಸ್‌ ಠಾಣೆ ಮೆಟ್ಟಿಲೇರಿದ ಹಿಟ್‌ ಧಾರಾವಾಹಿಗಳ ನಿರ್ದೇಶಕ, ನಿರ್ಮಾಪಕ ರಾಮ್​ಜೀ