NEWSದೇಶ-ವಿದೇಶನಮ್ಮರಾಜ್ಯ

ಮನೆಯಲ್ಲೇ ಅಪರಿಚಿತರೊಂದಿಗೆ ಹಾಸಿಗೆ ಹಂಚಿಕೊಂಡು ತಿಂಗಳಿಗೆ 42 ಸಾವಿರ ಬಾಡಿಗೆ ವಸೂಲಿ ಮಾಡುವ ಮೋನಿಕಾ

ವಿಜಯಪಥ ಸಮಗ್ರ ಸುದ್ದಿ

ನ್ಯೂಡೆಲ್ಲಿ: ಆಸ್ಟ್ರೇಲಿಯಾದ ಮಹಿಳೆಯೊಬ್ಬರು ಹಾಟ್ ಬೆಡ್ಡಿಂಗ್ ಎಂಬ ಹೊಸ ಟ್ರೆಂಡ್​ ಸೃಷ್ಟಿ ಮಾಡುವ ಮೂಲಕ ಸಿಕ್ಕಾಪಟ್ಟೆ ದುಡಿಮೆ ಮಾಡುತ್ತಿದ್ದಾರೆ. ಅದೇನೆಂದರೆ ದೊಡ್ಡ ಬೆಡ್​ನಲ್ಲಿ ತಾನೊಬ್ಬಳೇ ಮಲಗುವ ಆ ಬಡ್‌ನ ಉಳಿದ ಜಾಗವನ್ನು ಬಾಡಿಗೆಗೆ ಕೊಡುವುದು.
ಈ ಮೂಲಕ ಆಕೆ ತಿಂಗಳಿಗೆ 42,000 ರೂ. ದುಡಿಯುತ್ತಿದ್ದಾಳೆ. ಇದು ಭಾರಿ ಅಚ್ಚರಿಯನ್ನುಂಟು ಮಾಡಿದರು ಸತ್ಯ.

ಈ ಮಹಿಳೆಯ ಹೆಸರು ಮೋನಿಕ್ ಜೆರೆಮಿಯಾ. ತನ್ನ ಹಾಸಿಗೆ ತನಗೆ ಮಾತ್ರ ತುಂಬಾ ದೊಡ್ಡದಾಗಿದೆ ಮತ್ತು ಇನ್ನೊಬ್ಬ ವ್ಯಕ್ತಿ ಸುಲಭವಾಗಿ ಮಲಗಬಹುದು ಎಂದು ಅಂದುಕೊಂಡ ಈಕೆ ಅದನ್ನು ವ್ಯಾಪಾರದ ಅವಕಾಶವಾಗಿ ಪರಿವರ್ತಿಸಿದ್ದಾಳೆ. ಹಾಟ್ ಬೆಡ್ಡಿಂಗ್ ತನ್ನ ಹೆಸರನ್ನು ಹಾಟ್ ಡೆಸ್ಕ್ ನಿಂದ ಎರವಲು ಪಡೆದಿದ್ದೇನೆ ಎಂದು ಆಕೆ ಹೇಳಿಕೊಂಡಿದ್ದಾರೆ. ಹಾಡ್​ ಡೆಸ್ಕ್ ಎಂದರೆ ಸಹೋದ್ಯೋಗಿಗಳು ಒಂದೇ ಡೆಸ್ಕ್ ಅನ್ನು ಹಂಚಿಕೊಳ್ಳುವುದು. ಅಂತೆಯೇ ಈಕೆ ಹಾಸಿಗೆ ಹಂಚಿಕೊಂಡು ಬಾಡಿಗೆ ಪಡೆಯುವ ಮೂಲಕ ಹಣ ಗಳಿಸುತ್ತಿದ್ದಾಳೆ.

ಡೈಲಿ ಸ್ಟಾರ್ ವೆಬ್​ ಪ್ರಕಾರ, ಮೋನಿಕ್​ ಈಗ ತನ್ನ ಹಾಸಿಗೆಯನ್ನು ಹಂಚಿಕೊಳ್ಳಲು ಜನರಿಗೆ ಆಹ್ವಾನ ಕೊಟ್ಟಿದ್ದಾಳೆ. ಬಂದು ಮಲಗಿದರೆ ಶುಲ್ಕವನ್ನು ವಿಧಿಸುತ್ತಾಳೆ. ಮೋನಿಕ್ ಈ ಹಾಟ್ ಬೆಡ್ಡಿಂಗ್ ಪರಿಕಲ್ಪನೆಯಿಂದ ಪ್ರತಿ ತಿಂಗಳು ಸುಮಾರು 42,000 ರೂ.ಗಳು ಅಂದರೆ 400 ಪೌಂಡ್ ಗಳಿಸುತ್ತಿದ್ದಾರೆ. ಒಂದು ವರ್ಷಕ್ಕೆ ಇದು ಸುಮಾರು 5 ಲಕ್ಷ ರೂ.ಗಳಾಗುತ್ತದೆ ಎಂದು ಮೋನಿಕ್ ಹೇಳಿದ್ದಾರೆ.

ಹಾಸಿಗೆ ಹಂಚಿಕೊಳ್ಳುವ ಪರಿಕಲ್ಪನೆಯು ಸಾಕಷ್ಟು ರೋಮಾಂಚನಕಾರಿಯಾಗಿ ತೋರಿದರೂ, ಅವಳು ಮತ್ತು ಹಾಸಿಗೆಯನ್ನು ಹಂಚಿಕೊಳ್ಳುವ ವ್ಯಕ್ತಿಯ ನಡುವೆ ಒಪ್ಪಂದವೂ ಆಗತ್ತದೆ. ಮಲಗುವ ವೇಳೆ ಪ್ರಣಯ ಅಥವಾ ಲೈಂಗಿಕತೆ ಇರುವುದಿಲ್ಲ ಎಂದು ಆಕೆ ಒಪ್ಪಂದ ಮಾಡಿಕೊಳ್ಳುತ್ತಾಳೆ.

ಕೊರೊನಾ ಕಾಲದಲ್ಲಿ ಬಂದ ಐಡಿಯಾ ಇದು: ಸಾಂಕ್ರಾಮಿಕ ಸಮಯದಲ್ಲಿ ಮೋನಿಕ್ ಒಬ್ಬಂಟಿಯಾಗಿ ಮನೆಯೊಳಗೆ ಲಾಕ್ ಆಗಿದ್ದಳು. ಒಬ್ಬಳೇ ಮಲಗಿದ್ದಾಗ ತನ್ನ ಹಾಸಿಗೆಯಲ್ಲಿ ಇನ್ನೂ ಜಾಗ ಇದೆಯಲ್ವಾ ಎಂದು ಆಕೆಗೆ ಯೋಚನೆ ಬಂದಿತ್ತು. ತಕ್ಷಣ ಆಕೆ ತನ್ನ ಹಾಸಿಗೆಯಲ್ಲಿನ ಖಾಲಿ ಜಾಗವನ್ನು ಬಾಡಿಗೆಗೆ ನೀಡುವ ನಿರ್ಧಾರವನ್ನು ತೆಗೆದುಕೊಂಡರು.

ಅಚ್ಚರಿಯೆಂದರೆ ಬಾಡಿಗೆ ವ್ಯವಸ್ಥೆಯನ್ನು ಮೊದಲು ಬಳಸಿಕೊಂಡಿದ್ದು ಆಕೆಯ ಮಾಜಿ ಪ್ರೇಮಿ. ಎರಡು ನಗರಗಳ ನಡುವೆ ಪ್ರಯಾಣಿಸುತ್ತಿದ್ದ ಆತ ಕಡಿಮೆ ದುಡ್ಡಿಗೆ ಸಿಗುತ್ತಿದ್ದ ವಸತಿ ಸೌಕರ್ಯವನ್ನು ಸದ್ಬಳಕೆ ಮಾಡಿಕೊಂಡ. ರಾತ್ರಿ ಸುಮಾರು ಹತ್ತು ಗಂಟೆಗೆ ಇಬ್ಬರೂ ಮಲಗಲು ಹೋಗುತ್ತಿದ್ದರು. ಆದರೆ ಅವರು ಎಂದಿಗೂ ಮಾತನಾಡಿರಲಿಲ್ಲ ಇಬ್ಬರೂ ಹೆಡ್​ಫೋನ್​ಗಳನ್ನು ಹಾಕಿಕೊಳ್ಳುತ್ತಿದ್ದರು.

ವ್ಯವಹಾರವು ಸ್ವಲ್ಪ ಡೇಂಜರಸ್ ಎಂಬುದು ಕೂಡ ಆಕೆಗೆ ಕೆಲವು ಬಾರಿ ಅರ್ಥವಾಗಿತ್ತು. ಹೀಗಾಗಿ ತನ್ನ ಪಕ್ಕದಲ್ಲಿ ಮಲಗುವ ವ್ಯಕ್ತಿಯ ಬ್ಯಾಕ್​ಗ್ರೌಂಡ್ ವೆರಿಫಿಕೇಷನ್​ ಕೂಡ ಮಾಡುತ್ತಿದ್ದಳು. ಅಲ್ಲದೆ ತಾನು ಸುಖ ನಿದ್ದೆಯಲ್ಲಿರುವ ವೇಳೆ ಹಾಸಿಗೆಯನ್ನು ಸಂಪೂರ್ಣವಾಗಿ ಅಪರಿಚಿತರೊಂದಿಗೆ ಹಂಚಿಕೊಳ್ಳುವುದು ಸುಲಭಲ್ಲ ಎಂಬುದರ ಅರಿವು ಆಕೆಗಿದೆ.

ಇನ್ನು ಹಾಸಿಗೆಗೆ ಹೋಗುವಾಗ ಜಾಗರೂಕರಾಗಿರಬೇಕಿದ್ದು. ಅದಕ್ಕೆ ಮುಕ್ತ ಮನಸ್ಸಿನವರು, ಗೌರವಯುತರು ಮತ್ತು ಲೈಂಗಿಕ ಸಂಬಂಧವನ್ನು ಹೊಂದಲು ಬಯಸದವರೆ ಇವರು ಎಂಬುದನ್ನು ಆಕೆ ಖಾತರಿ ಮಾಡಿಕೊಂಡ ಬಳಿಕ ಬಾಡಿಗೆಗೆ ಬೆಡ್‌ ಕೊಡುತ್ತಾರೆ.

ಅಂದ ಹಾಗೆ ಈ ಹಾಟ್​ ಬೆಡ್ಡಿಂಗ್​ ಹೊಸತೆನಲ್ಲ. ಸಿಡ್ನಿ ವಿಶ್ವವಿದ್ಯಾಲಯದ ಸಾವಿರಾರು ಅಂತಾರಾಷ್ಟ್ರೀಯ ವಿದ್ಯಾರ್ಥಿಗಳು ಈ ವ್ಯವಸ್ಥೆಯನ್ನು ಅವಲಂಬಿಸಿಕೊಂಡಿದ್ದಾರೆ. ಕಡಿಮೆ ಖರ್ಚಿನಲ್ಲಿ ದೊರೆಯುವ ವಸತಿ ವ್ಯವಸ್ಥೆಯನ್ನು ಅವರು ಸಮರ್ಪಕರವಾಗಿ ಈ ರೀತಿ ಬಳಸಿಕೊಳ್ಳುತ್ತಿದ್ದಾರೆ.

Leave a Reply

error: Content is protected !!

Discover more from VIJAYAPATHA.IN

Subscribe now to keep reading and get access to the full archive.

Continue reading

LATEST
ಕ್ರೀಡಾಪಟುಗಳಿಗೆ ಕೊಡುವ ಏಕಲವ್ಯ ಪ್ರಶಸ್ತಿ ಮುಂದುವರಿಸಲಿ: ಶೋಭಾ ನಾರಾಯಣ್ ಬಿಡದಿಯಿಂದ ಹೆದ್ದಾರಿಯಲ್ಲೇ ಮುಂದೆ ಬಂದರೆ ನಿಮಗೆ ಟೋಲ್‌ ಬರೆ ಗ್ಯಾರಂಟಿ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಹೊತ್ತಿ ಉರಿದ ಸ್ಕಾರ್ಪಿಯೋ ಕಾರು KSRTC ಕನಕಪುರ ಬಸ್‌ ನಿಲ್ದಾಣದಲ್ಲಿ ವಿಕಲ ಚೇತನರಿಂದ ₹700 ವಸೂಲಿ, ಕಂಡಕ್ಟರ್ಸ್‌ ಕೊಡಬೇಕು ₹10 : ಟಿಸಿಗೆ ಡಿಎಂ ಸಾಥ್... ಹೆಚ್ಚುವರಿ ಬಡ್ಡಿ ವಿಧಿಸುವ ನೋಂದಾಯಿತ ಲೇವಾದೇವಿಸಂಸ್ಥೆಗಳ ವಿರುದ್ಧ ದೂರು ನೀಡಿ KSRTC: 38+13 ತಿಂಗಳ ವೇತನ ಹಿಂಬಾಕಿ ಯಾವಾಗ ಬರುತ್ತದೆ ಒಕ್ಕೂಟದ ವಿರುದ್ಧ ನೌಕರರು ಕಿಡಿ BMTC: ಅಪಘಾತದಲ್ಲಿ ಮೃತಪಟ್ಟ ನೌಕರರ ಕುಟುಂಬಕ್ಕೆ ₹1 ಕೋಟಿ ಪರಿಹಾರ ಚೆಕ್‌ ವಿತರಿಸಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸಾರಿಗೆ ನಿವೃತ್ತ ನೌಕರರಿಗೆ ಮತ್ತೊಮ್ಮೆ ಮೊಗದೊಮ್ಮೆ ನಿರಾಸೆ: ಭಾರಿ ಆಕ್ರೋಶಗೊಂಡ EPS ನಿವೃತ್ತರು ಕಾರು ಡೋರ್‌ಗೆ ಬೈಕ್‌ ಗುದ್ದಿ ಕೆಳಗೆ ಬಿದ್ದ ಮಹಿಳೆ ಮೇಲೆ ಹರಿದ ಬಿಎಂಟಿಸಿ ಬಸ್‌ ನಾಟಿ ಕೋಳಿ ಸಾರಿನ ಜತೆ ರಾಗಿಮುದ್ದೆ ನುಂಗಿದವರಿಗೆ ಗೊತ್ತು ಅದರ ಗಮ್ಮತ್ತು