ಕೃಷಿನಮ್ಮರಾಜ್ಯ

ಮಾವಿನಲ್ಲಿ ಹೀಚು ಉದುರುವುನ್ನು ತಡೆಗಟ್ಟಲು ರೈತರು ತೆಗೆದುಕೊಳ್ಳಬೇಕಾದ ಕ್ರಮ

ವಿಜಯಪಥ ಸಮಗ್ರ ಸುದ್ದಿ

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಮಾವು ಒಂದು ತೋಟಗಾರಿಕಾ ಬೆಳೆಯಾಗಿದ್ದು ಪ್ರಸ್ತುತ ಹಂಗಾಮಿನಲ್ಲಿ ಮಾವಿನ ಸಂರಕ್ಷಣೆ ಕ್ರಮಗಳ ಕುರಿತು ರೈತರು ತಿಳಿಯುವುದು ಅತ್ಯವಶ್ಯಕವಾಗಿದೆ.

ಪ್ರಸ್ತುತ ಹಂಗಾಮಿನಲ್ಲಿ ಅಧಿಕ ಉಷ್ಣಾಂಶ ಮತ್ತು ಪ್ರಖರ ಬಿಸಿಲಿನ ತೀಕ್ಷ್ಣತೆ ಕಾರಣ ಹೂ. ಹೀಚುಗಳು ಉದುರುವುನ್ನು ತಡೆಗಟ್ಟಲು ಹೂಬಿಟ್ಟಿರುವ ಮರಗಳಿಗೆ 2-3 ಬಾರಿ ಪೂರಕ ನೀರಾವರಿ ಕೈಗೊಳ್ಳುವುದು ಅವಶ್ಯಕವಾಗಿದೆ.

ಹೊಸ ಎಲೆ ಚಿಗುರು ಹೊರಟಿರುವ ಮರಗಳಿಗೆ ನೀರು ಹಾಯಿಸುವ ಅವಶ್ಯಕತೆ ಇರುವುದಿಲ್ಲ, ಹೂ ಬಿಟ್ಟಿರುವ ಗಿಡಗಳ ಪಾತಿಗೆ ಸಾವಯವ ಹೊದಿಕೆ ಕೈಗೊಳ್ಳುವುದರಿಂದ ಮಣ್ಣಿನಲ್ಲಿ ತೇವಾಂಶ ಕಾಪಾಡಿಕೊಂಡು ಗುಣಮಟ್ಟದ ಇಳುವರಿ ಪಡೆಯಬಹುದು.

ಕಾಯಿ ಕಚ್ಚುವ ಪ್ರಮಾಣವನ್ನು ಹೆಚ್ಚಿಸಲು ಹಾಗೂ ಎಳೆಕಾಯಿಗಳ ಉದುರುವಿಕೆ ತಡೆಯಲು ಪ್ಲಾನೋಫಿಕ್ಸ್ 0.5 ಮಿ.ಲಿ ಅನ್ನು ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಿ ಗೋಲಿ ಗಾತ್ರದ ಹಂತದಲ್ಲಿದ್ದಾಗ ಲಘು ಪೋಷಕಾಂಶ ಮಿಶ್ರಣ ಮ್ಯಾಂಗೋಸ್ಪೆಷಲ್ ಸಿಂಪಡಣೆ ಕೈಗೊಳ್ಳಬೇಕಾಗುತ್ತದೆ.

ಫಸಲನ್ನು ಹಣ್ಣಿನ ನೊಣದ ಭಾದೆಯಿಂದ ರಕ್ಷಿಸಲು ಹಣ್ಣಿನ ನೊಣದ ಮೋಹಕ ಬಲೆ ಅಳವಡಿಸಿಕೊಳ್ಳವುದು, ಜಿಗಿಹುಳು ನಿರ್ವಹಣೆಗೆ ಥಯೋಫನೇಟ್ ಮಿಥೈಲ್ 1 ಮಿ.ಲಿ ಅಥವಾ ಡೈನೋಕ್ಯಾಪ್ 1 ಮಿ.ಲೀ* ಮ್ಯಾಂಕೋಜಿಬ್ 2 ಗ್ರಾಂ ಅನ್ನು ಪ್ರತಿ ಲೀಟರ್‌ನಲ್ಲಿ ಬೆರೆಸಿ ಸಿಂಪಡಣೆ ಮಾಡಬೇಕು. ಸಿಂಪಡಣಾ ದ್ರಾವಣಗಳಿಗೆ ೦.೫ ಮಿ.ಲೀ ಶಾಂಪು ಅಥವಾ ಅಂಟನ್ನು ನೀರಿನಲ್ಲಿ ಸಿಂಪಡಿಸಬೇಕು.

ಚಿಕ್ಕ ಕಾಯಿಗಳು ಬೆಳೆಯುತ್ತಿರುವ ಹಂತದಲ್ಲಿ ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆ ಹೊರತಂದಿರುವ ಮಾವು ಸ್ಪೆಷಲ್ ಅನ್ನು ಪ್ರತಿ ಲೀಟರ್ ನೀರಿನಲ್ಲಿ ೫೦ ಗ್ರಾಂ ಪ್ರಮಾಣದಲ್ಲಿ ಕರಗಿಸಿ ಸಿಂಪಡಿಸಿವುದು, ಈ ಸಿಂಪಡಣೆ ದ್ರಾವಣಕ್ಕೆ  ಸೋಪು ದ್ರಾವಣವನ್ನು 0.5 ಮಿ.ಲಿ ಮತ್ತು ಅರ್ಧ ಹೋಳು ನಿಂಬೆ ರಸ ಬೆರಸಿ ಸಿಂಪಡಿಸಿದರೆ ಅದು ಪರಿಣಾಮಕಾರಿಯಾಗಿ ಕಾಯಿಗಳಿಗೆ ಅಂಟಿಕೊಳ್ಳುವುದು ಯಾವುದೇ ಸಿಂಥೆಟಿಕ್ ಪೈರೆಥ್ರಾಯಿಟ್ ಕೀಟನಾಶಕ ಬಳಸಬಾರದು.

ಹೆಚ್ಚಿನ ಮಾಹಿತಿಗಾಗಿ ರೈತರು ಹಾರ್ಟಿ ಕ್ಲಿನಿಕ್ ತೋಟಗಾರಿಕೆ ವಿಭಾಗದ ವಿಷಯ ತಜ್ಞರನ್ನು ಅಥವಾ ಹೋಬಳಿ ಮಟ್ಟದ ಸಹಾಯಕ ತೋಟಗಾರಿಕೆ ಅಧಿಕಾರಿಯವರನ್ನು  ಭೇಟಿಯಾಗಿ ಅಥವಾ ದೂ.ಸಂ 08262- 295043, 9110607092  ಮೂಲಕ  ಮಾಹಿತಿ ಪಡೆಯಬಹುದಾಗಿದೆ.

Leave a Reply

error: Content is protected !!
LATEST
ಆಗಸದಲ್ಲೇ ಡಿಕ್ಕಿ ಹೊಡೆದುಕೊಂಡ ನೌಕಾಪಡೆಯ 2 ಹೆಲಿಕಾಪ್ಟರ್‌ಗಳು ನೋಡ ನೋಡುತ್ತಿದ್ದಂತೆ ಪತನ: 10 ಮಂದಿ ಮೃತ KSRTC: ಸಾರಿಗೆ ನಿಗಮಗಳ ಖಾಸಗೀಕರಣಕ್ಕೆ ಅವಕಾಶ ನೀಡುತ್ತಿದೆ ಕೇಂದ್ರ ಬೃಹತ್‌ ಕೈಗಾರಿಕಾ ಸಚಿವಾಲಯ KSRTC: ಏಪ್ರಿಲ್‌-ಜೂನ್‌ ಪೀಕ್‌ ಸೀಸನ್‌ ಎಂದು ಚಾಲನಾ ಸಿಬ್ಬಂದಿಗಳಿಗೆ ರಜೆ ಕೊಡದೆ ಹಿಂಸಿಸುತ್ತಿರುವ ಅಧಿಕಾರಿಗಳು..! ಬಿಜೆಪಿ ರಾಜಕೀಯ ಲಾಭಕ್ಕೆ ನೇಹಾ ಪ್ರಕರಣ ಬಳಸಿಕೊಳ್ಳುತ್ತಿರುವುದು ನಾಚಿಕೆಗೇಡಿನ ವಿಚಾರ: ಜಗದೀಶ್ ವಿ. ಸದಂ IVRS, ಬಲ್ಕ್ SMS ಮೂಲಕ ಮತದಾರರಿಗೆ ಮೊಬೈಲ್‌ ಸಂದೇಶ: ತುಷಾರ್ ಗಿರಿನಾಥ್ KSRTC: ವೇತನ ಸಮಸ್ಯೆ ಪರಿಹರಿಸದೆ ಅಸಡ್ಡೆ ತೋರಲು ಇವರು ಕಾರಣಗಳು....!? ರಾಜಕೀಯ ಪಕ್ಷಗಳ ಚುನಾವಣಾ ಪ್ರಣಾಳಿಕೆಗಳು ಜನರ ವಂಚಿಸುವ ಮಂತ್ರ ದಂಡಗಳು : ಕುರುಬೂರ್‌ ಶಾಂತಕುಮಾರ್‌ 'ನಮ್ಮ ನಡೆ ಮತಗಟ್ಟೆಯ ಕಡೆ' ಜಾಗೃತಿ ಜಾಥಾಗೆ ಮನೋಜ್ ಕುಮಾರ್ ಮೀನಾ, ತುಷಾರ್ ಗಿರಿನಾಥ್ ಚಾಲನೆ ಕೊಡಗು: ಹುಲಿದಾಳಿಗೆ ಅಸ್ಸಾಂ ಮೂಲದ ಕಾರ್ಮಿಕ ಬಲಿ ತಾಳವಾಡಿ: ಜಮೀನಿಗೆ ನುಗ್ಗುತ್ತಿರುವ ಕಾಡಾನೆ ಹಿಮ್ಮೆಟ್ಟಿಸಿದ ರೈತರು