ವಿಜಯಪುರ: ರಸ್ತೆ ದಾಟುತ್ತಿದ್ದ ಪಾದಚಾರಿಯೊಬ್ಬರ ಮೇಲೆ ಬಸ್ ಹರಿದ ಪರಿಣಾಮ ಆತ ಸ್ಥಳದಲ್ಲೇ ಅಸುನೀಗಿರುವ ಘಟನೆ ವಿಜಯಪುರದ ಬಸವೇಶ್ವರ ವೃತ್ತದಲ್ಲಿ ಇಂದು ಬೆಳ್ಳಂಬೆಳಗ್ಗೆ ನಡೆದಿದೆ.
ಅಶೋಕ ಪರ್ಜೆನವರ್ (58) ಮೃತ ವ್ಯಕ್ತಿ ಎಂದು ಗುರುತಿಸಲಾಗಿದೆ. ಬಸ್ ಅಪಘಾತದಲ್ಲಿ ವ್ಯಕ್ತಿ ರಸ್ತೆಗೆ ಬಿದ್ದು ಅಲ್ಲೇ ಉಚಿರು ಚೆಲ್ಲಿದ್ದಾರೆ.
ಖಾಸಗಿ ಬಸ್ ಬರುತ್ತಿದ್ದ ವೇಳೆ ಅಶೋಕ ರಸ್ತೆ ದಾಟುತ್ತಿದ್ದ ಈ ವೇಳೆ ಚಾಲಕನ ನಿಯಂತ್ರಣಕ್ಕ ಬರದೆ ಬಸ್ ಮುಂದೆ ಚಲಿಸಿದ್ದರಿಂದ ಆತ ಬಸ್‌ನಡಿ ಸಿಲುಕಿ ಉಸಿರು ಚೆಲ್ಲಿದ್ದಾರೆ ಎಂದು ಹೇಳಲಾಗುತ್ತಿದೆ.
ಇನ್ನು ಬಸ್ ಬೆಂಗಳೂರಿನಿಂದ ವಿಜಯಪುರಕ್ಕೆ ಬರುತ್ತಿತ್ತು ಎಂದು ತಿಳಿದು ಬಂದಿದ್ದು, ಘಟನೆ ಸಂಬಂಧ ವಿಜಯಪುರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ಮುಂದಿನ ಕ್ರಮ ತೆಗೆದುಕೊಂಡಿದ್ದಾರೆ.
![](https://vijayapatha.in/wp-content/uploads/2024/02/QR-Code-VP-1-1-300x62.png)