NEWSನಮ್ಮಜಿಲ್ಲೆಸಂಸ್ಕೃತಿ

ಲೇಖಕಿ ಹೆಲನ್ ಕೆಲರ್ ವಿಶ್ವದ ಮಹಾ ವಿಸ್ಮಯ : ಸಾಹಿತಿ ಬನ್ನೂರು ರಾಜು

ವಿಜಯಪಥ ಸಮಗ್ರ ಸುದ್ದಿ

ಮೈಸೂರು: ತನ್ನ ಅಂದತ್ವ ಮತ್ತು ಕಿವುಡುತನವನ್ನೆಲ್ಲಾ ಮೀರಿ ತನ್ನ ಪಾಲಿಗಿದ್ದ ಕತ್ತಲೆಯನ್ನೇ ಬೆಳಕು ಮಾಡಿಕೊಂಡು ತಾನೂ ಬೆಳಗಿ ಜಗತ್ತನ್ನೇ ಬೆಳಗಿದ ವಿಸ್ಮಯದೋಪಾದಿಯ ವಿಶ್ವದ ಅದ್ಭುತ ಸಾಧಕಿ, ಮಹಾ ಲೇಖಕಿ ಹೆಲನ್ ಕೆಲರ್ ಎಂದು ಸಾಹಿತಿ ಬನ್ನೂರು ಕೆ.ರಾಜು ಅಭಿಪ್ರಾಯಪಟ್ಟರು.

ನಗರದ ಕೃಷ್ಣಮೂರ್ತಿ ಪುರಂನಲ್ಲಿರುವ ಸುಶೀಲಾ ಬಾಯಿ ನಾಗೇಶ್ ರಾವ್ ಟ್ರಸ್ಟ್ ನ ವನಿತಾ ಸದನ ಮತ್ತು ಹಿರಣ್ಮಯಿ ಪ್ರತಿಷ್ಠಾನ ಹಾಗೂ ಕಾವೇರಿ ಬಳಗ ಸಂಯುಕ್ತವಾಗಿ ವನಿತಾ ಸದನ ಪ್ರೌಢಶಾಲೆಯ ಆವರಣದಲ್ಲಿ ಆಯೋಜಿಸಿದ್ದ ಹೆಲನ್ ಕೆಲರ್ ಜನ್ಮದಿನಾಚರಣೆ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಹೆಲನ್ ಕೆಲರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಉದ್ಘಾಟಿಸಿ ಮಾತನಾಡಿದರು.

ಹೆಲನ್ ಕೆಲರ್ ಎಂದರೆ ಇಡೀ ಪ್ರಪಂಚವೇ ನಿಬ್ಬೆರಗಾಗುವಂತೆ ಮಹದದ್ಭುತ ಸಾಧನೆ ಮಾಡಿದ ಜಗತ್ತು ಕಂಡ ಮೊಟ್ಟ ಮೊದಲ ವಿಶೇಷ ಚೈತನ್ಯ ಶಕ್ತಿಯ ಸಾಧಕಿ. ಕಣ್ಣಿದ್ದೂ ಕುರುಡರಂತಿರುವ, ಮೂಗಿದ್ದೂ, ಬಾಯಿದ್ದೂ ಮೂಕರಂತಿರುವ, ಕಿವಿಯಿದ್ದೂ ಕಿವುಡರಂತಿರುವ ನಮ್ಮ ಇವತ್ತಿನ ಜನರಿಗೆ ಇದಾವುದೂ ಇಲ್ಲದೆ ಜಗತ್ತನ್ನೇ ಗೆದ್ದು ಬದುಕಿ ತೋರಿಸಿದವರು ಹೆಲನ್ ಕೆಲರ್ ಎಂದರು.

ತಾನು ಬದುಕು ಕಟ್ಟಿಕೊಂಡದ್ದು ಮಾತ್ರವಲ್ಲದೆ ತಾನು ನಡೆದ ಬೆಳಕಿನ ದಾರಿಯಲ್ಲಿ ಎಲ್ಲರೂ ನಡೆಯುವಂತೆ ಪ್ರೇರಣೆ ನೀಡಿದವರು ಮತ್ತು ಪ್ರೇರೇಪಣೆ ಮಾಡಿದವರು ಅವರು. ಹೊರ ಗಣ್ಣಿಗಿಂತ ಒಳಗಣ್ಣು, ಹೊರ ಗಿವಿಗಿಂತ ಒಳಗಿವಿ ಅತ್ಯಂತ ಶಕ್ತಿಯುತವೆಂದು ಕತ್ತಲಿಂದ ಬೆಳಕಿನತ್ತ ಹೇಗೆ ನಡೆಯ ಬೇಕೆಂಬುದಕ್ಕೆ ತೋರು ಬೆರಳಾಗಿ ಇವತ್ತಿಗೂ ಅವರು ನಮ್ಮೊಂದಿಗೆ ಇಲ್ಲದಿದ್ದರೂ ತಮ್ಮ ಅಸಾಧಾರಣ ಸಾಧನೆಗಳ ಮೂಲಕ ಮಾನವ ಕುಲ ಇರುವ ತನಕವೂ ಶಾಶ್ವತರಾಗಿದ್ದಾರೆ ಎಂದು ತಿಳಿಸಿದರು.

ಸತ್ತು ಬದುಕುವುದೆಂದರೆ ಇದೇ ತಾನೆ? ಇಂಥ ಸಾಧಕಿ ಹೆಲನ್ ಕೆಲರ್ ಅವರ ಸಾಧನೆಯ ಹೆಜ್ಜೆಗಳನ್ನು ಪ್ರತಿಯೊಬ್ಬರೂ ಅದರಲ್ಲೂ ವಿಶೇಷವಾಗಿ ವಿದ್ಯಾರ್ಥಿಗಳು ಮಾದರಿಯಾಗಿ ಅನುಸರಿಸಬೇಕು ಎಂದು ಸಲಹೆ ನೀಡಿದರು.

ಖ್ಯಾತ ಸಂಖ್ಯಾಶಾಸ್ತ್ರಜ್ಞ ಎಸ್.ಜಿ. ಸೀತಾರಾಮ್ ಅವರು, ಹೆಲನ್ ಕೆಲರ್ ಕುರಿತ ವಿಡಿಯೋ ತುಣುಕುಗಳನ್ನು ಪ್ರದರ್ಶಿಸುತ್ತಾ, ಫೋಟೋ ಸ್ಲೈಡ್ಸ್ ಗಳನ್ನು ತೋರಿಸುತ್ತಾ ವಿದ್ಯಾರ್ಥಿಗಳ ಗಮನವನ್ನು ಕೇಂದ್ರೀಕರಿಸಿಕೊಂಡು ಸವಿವರವಾಗಿ ತಿಳಿಸಿಕೊಟ್ಟರು.

ಸುಶೀಲಾಬಾಯಿ ನಾಗೇಶ್ ರಾವ್ ಟ್ರಸ್ಟ್ ನ ಟ್ರಸ್ಟಿ ಶ್ರೀನಿವಾಸರಾವ್ ಅವರು ಪ್ರಸ್ತುತ ಸಾಲಿನಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತ್ಯುನ್ನತ ಸ್ಥಾನ ಗಳಿಸಿರುವ ವಿದ್ಯಾರ್ಥಿಗಳಾದ ಎಂ. ಮಾನಸ, ಸೌಜನ್ಯ, ಜೈನಬಿ, ಉನ್ ಜಿಯಾ, ಚಂದನ, ಅಪೂರ್ವ ಹಾಗೂ ಪಿಯುಸಿಯ ಪ್ರಿಯಾಂಕ ಪ್ರಮೋದ್ ದೈವಜ್ಞ ಅವರಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಿದರು. ನಂತರ ಮಾತನಾಡಿದ ಅವರು ಹೆಲನ್ ಕೆಲರ್ ರೀತಿ ವಿದ್ಯಾರ್ಥಿಗಳಾದ ತಾವುಗಳೆಲ್ಲರೂ ಚೆನ್ನಾಗಿ ಕಲಿತು ಬುದ್ಧಿವಂತರಾಗಿ ಸಾಧಕರಾಗ ಬೇಕೆಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಹೆಲನ್ ಕೆಲರ್ ಸ್ಮರಣಾರ್ಥ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಾದ ಭಾಷಣ ಸ್ಪರ್ಧೆಯಲ್ಲಿ ತನುಶ್ರೀ (ಪ್ರ), ಪ್ರೇಮ (ದ್ವಿ), ಶ್ರೀನಿತ್ಯ( ತೃ) ಮತ್ತು ಗಾಯನ ಸ್ಪರ್ಧೆಯಲ್ಲಿ ತೇಜಸ್ವಿನಿ(ಪ್ರ), ಧನ್ಯ (ದ್ವಿ), ಮಹಾಲಕ್ಷ್ಮಿ (ತೃ) ಹಾಗೂ ಚಿತ್ರಕಲಾ ಸ್ಪರ್ಧೆಯಲ್ಲಿ ದರ್ಶನ್ (ಪ್ರ), ಚಂದನ (ದ್ವಿ), ಭುವನೇಶ್ವರಿ (ತೃ), ಅವರುಗಳಿಗೆ ಮುಖ್ಯ ಶಿಕ್ಷಕಿ ಟಿ. ಶಿವಮ್ಮ ಅವರು ಬಹುಮಾನ ನೀಡಿ ಅಭಿನಂದಿಸಿದರು.

ಸುಶೀಲಾಬಾಯಿ ನಾಗೇಶ್ ರಾವ್ ಟ್ರಸ್ಟ್ ನ ಭಾರತಿ ಅಧ್ಯಕ್ಷತೆ ವಹಿಸಿದ್ದರು. ಹಿರಣ್ಮಯಿ ಪ್ರತಿಷ್ಠಾನದ ಅಧ್ಯಕ್ಷ ಎ.ಸಂಗಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು. ಟ್ರಸ್ಟಿನ ಕಾರ್ಯದರ್ಶಿ ರೂಪಾರಾಣಿ, ಉಪ ಕಾರ್ಯದರ್ಶಿ ಶ್ಯಾಮಲಾ ಜಯರಾಂ, ಟ್ರಸ್ಟಿ ಪದ್ಮಿನಿ, ಆಡಳಿತಾಧಿಕಾರಿ ಶ್ರೀಕಾಂತ್, ಕಾವೇರಿ ಬಳಗದ ಅಧ್ಯಕ್ಷೆ ಎನ್.ಕೆ.ಕಾವೇರಿಯಮ್ಮ, ಶಿಕ್ಷಕರಾದ ಸುರೇಶ್, ರವಿಕುಮಾರ್, ತ್ರಿವೇಣಿ, ಲಾವಣ್ಯ, ಸುಧಾ, ಶ್ರೀದೇವಿ, ಸರಳ,ಅರುಂಧತಿ ಹಾಗೂ ಓರಿಗಾಮಿತಜ್ಞ ಎಚ್. ವಿ. ಮುರಳೀಧರ್, ಕಲಾವಿದೆ ಹಾಗೂ ಲೇಖಕಿ ಡಾ. ಜಮುನಾ ರಾಣಿ ಮಿರ್ಲೆ ಇನ್ನಿತರರಿದ್ದರು.

ಪ್ರಾರಂಭದಲ್ಲಿ ವಿದ್ಯಾರ್ಥಿನಿಯರಾದ ಯದುಶ್ರೀ ಮತ್ತು ಆಯುಷ ಪ್ರಾರ್ಥನೆ ಮಾಡಿದರು. ಶಿಕ್ಷಕ ರವಿಕುಮಾರ್ ಎಲ್ಲರನ್ನೂ ಸ್ವಾಗತಿಸಿದರು. ಕೊನೆಯಲ್ಲಿ ಶಿಕ್ಷಕ ಸುರೇಶ್ ವಂದನಾರ್ಪಣೆ ಮಾಡಿದರು.

Leave a Reply

error: Content is protected !!

Discover more from VIJAYAPATHA.IN

Subscribe now to keep reading and get access to the full archive.

Continue reading

LATEST
ಕ್ರೀಡಾಪಟುಗಳಿಗೆ ಕೊಡುವ ಏಕಲವ್ಯ ಪ್ರಶಸ್ತಿ ಮುಂದುವರಿಸಲಿ: ಶೋಭಾ ನಾರಾಯಣ್ ಬಿಡದಿಯಿಂದ ಹೆದ್ದಾರಿಯಲ್ಲೇ ಮುಂದೆ ಬಂದರೆ ನಿಮಗೆ ಟೋಲ್‌ ಬರೆ ಗ್ಯಾರಂಟಿ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಹೊತ್ತಿ ಉರಿದ ಸ್ಕಾರ್ಪಿಯೋ ಕಾರು KSRTC ಕನಕಪುರ ಬಸ್‌ ನಿಲ್ದಾಣದಲ್ಲಿ ವಿಕಲ ಚೇತನರಿಂದ ₹700 ವಸೂಲಿ, ಕಂಡಕ್ಟರ್ಸ್‌ ಕೊಡಬೇಕು ₹10 : ಟಿಸಿಗೆ ಡಿಎಂ ಸಾಥ್... ಹೆಚ್ಚುವರಿ ಬಡ್ಡಿ ವಿಧಿಸುವ ನೋಂದಾಯಿತ ಲೇವಾದೇವಿಸಂಸ್ಥೆಗಳ ವಿರುದ್ಧ ದೂರು ನೀಡಿ KSRTC: 38+13 ತಿಂಗಳ ವೇತನ ಹಿಂಬಾಕಿ ಯಾವಾಗ ಬರುತ್ತದೆ ಒಕ್ಕೂಟದ ವಿರುದ್ಧ ನೌಕರರು ಕಿಡಿ BMTC: ಅಪಘಾತದಲ್ಲಿ ಮೃತಪಟ್ಟ ನೌಕರರ ಕುಟುಂಬಕ್ಕೆ ₹1 ಕೋಟಿ ಪರಿಹಾರ ಚೆಕ್‌ ವಿತರಿಸಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸಾರಿಗೆ ನಿವೃತ್ತ ನೌಕರರಿಗೆ ಮತ್ತೊಮ್ಮೆ ಮೊಗದೊಮ್ಮೆ ನಿರಾಸೆ: ಭಾರಿ ಆಕ್ರೋಶಗೊಂಡ EPS ನಿವೃತ್ತರು ಕಾರು ಡೋರ್‌ಗೆ ಬೈಕ್‌ ಗುದ್ದಿ ಕೆಳಗೆ ಬಿದ್ದ ಮಹಿಳೆ ಮೇಲೆ ಹರಿದ ಬಿಎಂಟಿಸಿ ಬಸ್‌ ನಾಟಿ ಕೋಳಿ ಸಾರಿನ ಜತೆ ರಾಗಿಮುದ್ದೆ ನುಂಗಿದವರಿಗೆ ಗೊತ್ತು ಅದರ ಗಮ್ಮತ್ತು