NEWSನಮ್ಮರಾಜ್ಯರಾಜಕೀಯ

ವಿಧಾನಪರಿಷತ್‌ ಕಲಾಪಗಳ ನ್ಯೂನತೆಗಳ ಸರಿಪಡಿಸಲು ಮುಖ್ಯಮಂತ್ರಿ ಚಂದ್ರು ಮನವಿ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ಇಂದು ಬೆಳಗ್ಗೆ ವಿಧಾನಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ ಅವರನ್ನು ಸೌಹಾರ್ದ ಭೇಟಿ ಮಾಡಿದರು.

ಭೇಟಿಯ ಸಂದರ್ಭದಲ್ಲಿ ಸಭಾಪತಿಗಳಿಗೆ ಅಭಿನಂದನೆಗಳನ್ನು ಸಲ್ಲಿಸುತ್ತಾ ಕಾರ್ಯಕಲಾಪಗಳ ಅನೇಕ ನ್ಯೂನತೆಗಳನ್ನು ಸರಿಪಡಿಸಲು ಮನವಿ ಮಾಡಿದರು. ಪರಿಷತ್ತಿನ ಮಾಜಿ ಸದಸ್ಯರು ಆಗಿರುವ ಮುಖ್ಯಮಂತ್ರಿ ಚಂದ್ರು ಪರಿಷತ್ತಿನ ಗೌರವವನ್ನು ಎತ್ತಿ ಹಿಡಿಯುವ ಕಾರ್ಯಕ್ಕೆ ಸಭಾಪತಿಗಳು ಮುಂದಾಗಬೇಕೆಂದು ಕೇಳಿಕೊಂಡರು.

ಅಂದಿನ ಸದನಗಳಲ್ಲಿ ಮುಖ್ಯಮಂತ್ರಿ ಚಂದ್ರು ಅವರ ಜೊತೆಗಿನ ಮಹತ್ವದ ಚರ್ಚೆ ಮತ್ತು ಅವರ ಪ್ರತಿವಾದಗಳನ್ನು ಮೆಲಕು ಹಾಕಿ ಸಭಾಪತಿಗಳಾದ ಹೊರಟ್ಟಿಯವರು ಪ್ರಶಂಸಿಸಿದರು. ಪರಿಷತ್ತಿನ ನಡವಳಿಕೆ ವಿಚಾರವಾಗಿ ಅನೇಕ ಸುಧಾರಣಾ ಅಂಶಗಳನ್ನು ಒಳಗೊಂಡ ಪತ್ರವನ್ನು ಸಲ್ಲಿಸಿದರು.

ಪತ್ರದ ಸಾರಾಂಶ: ಇತ್ತೀಚಿಗೆ ಕರ್ನಾಟಕ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ರಾಜ್ಯದ ಜನರು ಒಂದು ಪಕ್ಷಕ್ಕೆ ಸ್ಪಷ್ಟ ಬಹುಮತ ನೀಡಿದ್ದು, ರಾಜ್ಯದಲ್ಲಿ ಸುಭದ್ರ ಸರ್ಕಾರ ನಡೆಸಲು ಜನರು ನಾಂದಿ ಹಾಡಿದ್ದಾರೆ. ಯಾವುದೇ ಬದಲಾವಣೆಗಳಿಲ್ಲದೇ ತಾವು ವಿಧಾನ ಪರಿಷತ್ತಿನ ಸಭಾಪತಿಯಾಗಿ ಮುಂದುವರದಿದ್ದಿರಿ, ತಮಗೆ ಅಭಿನಂದನೆಗಳು.

ಇತ್ತೀಚಿಗಷ್ಟೇ ಮುಗಿದ ಬಜೆಟ್ ಅಧಿವೇಶನದಲ್ಲಿ ವಿಧಾನ ಪರಿಷತ್ತಿನ ಕಾರ್ಯಕಲಾಪಗಳನ್ನು ಗಮನಿಸಿದಾಗ ಅನೇಕ ನ್ಯೂನತೆಗಳು ಕಂಡು ಬಂದಿದ್ದು, ವಿಧಾನ ಪರಿಷತ್ತಿನ ಮಾಜಿ ಸದಸ್ಯನಾಗಿ ಹಾಗು ರಾಷ್ಟ್ರೀಯ ಪಕ್ಷದ ರಾಜ್ಯಧ್ಯಕ್ಷನಾಗಿ, ಇದರಲ್ಲಿ ಕೆಲವನ್ನು ನಿಮ್ಮ ಗಮನಕ್ಕೆ ತರುತ್ತಿದ್ದೇನೆ. ಈ ಕೆಳಗಿನ ನ್ಯೂನತೆಗಳನ್ನು ನಿವಾರಿಸಿ ವಿಧಾನ ಪರಿಷತ್ತಿನ ಘನತೆಯನ್ನು ಎತ್ತಿ ಹಿಡಿಯುತ್ತೀರಿ ಎಂದು ಭಾವಿಸುತ್ತೇನೆ.

  1. ಗೌರವಾನ್ವಿತ ಸಚಿವರು ಸಭೆಗೆ ತಡವಾಗಿ ಬರುವುದು 2. ಸದಸ್ಯರ ಪ್ರಶ್ನೆಗಳಿಗೆ ಸರಿಯಾದ ಉತ್ತರ ನೀಡದಿರುವುದು 3. ವಿಪಕ್ಷಗಳ ಸದಸ್ಯರ ಪ್ರಶ್ನೆಗಳಿಗೆ ಸೂಕ್ತ ಉತ್ತರ ನೀಡದೇ ಅವರು ಬಾವಿಗಿಳಿಯುವಂತೆ ಮಾಡಿರುವುದು 4. ಗೊಂದಲಮಯ ವಾತಾವರಣ ಸೃಷ್ಟಿಸಿ ಕಲಾಪದ ಕಾಲಹರಣ.

5.ವಿಪಕ್ಷದ ಸದಸ್ಯರು ಹದ್ದು ಮೀರಿ ವರ್ತಿಸಿದ್ದು 6. ವಿನಾಕಾರಣ ಕಲಾಪದ ಸಮಯ ಪೋಲಾಗಿರುವುದು 7. ರಾಜ್ಯ ಸಮಸ್ಯೆಗಳನ್ನು ಚರ್ಚಿಸಲು ಇರುವ ಸದನವನ್ನು ರಾಜಕೀಯ ದೋಷಾರೋಪಣೆಗೆ ದುರ್ಬಳಕೆ.

ಸಭಾಪತಿಗಳಾಗಿ ತಾವು ಅನೇಕ ಸಂದರ್ಭಗಳಲ್ಲಿ ಕಲಾಪಗಳನ್ನು ಸರಿದಾರಿಗೆ ತರುವ ಕೆಲಸವನ್ನು ಮಾಡಿರುವಿರಿ. ಅದಾಗ್ಯೂ ಕೆಲವು ಸದಸ್ಯರುಗಳ ವರ್ತನೆ, ಸಭಾಧ್ಯಕ್ಷರಾದ ತಮ್ಮ ವರ್ಚಸ್ಸನ್ನು ಕಡಿಮೆ ಮಾಡುತ್ತಿರುವುದು ನಾಡಿನ ಜನರಿಗೆ ಮತ್ತು ನಿಯಮ ಪಾಲಿಸುವ ಸದಸ್ಯರಿಗೆ ಬೇಸರ ತಂದಿದೆ.

ನಾಡಿನ ಹೆಮ್ಮಯ ಪ್ರತೀಕವಾಗಿರುವ ಈ ಸದನವು ರಾಜ್ಯದ ಅಭಿವೃದ್ದಿಯ ಚರ್ಚೆಗಳಿಗೆ ವೇದಿಕೆಯಾಗಲಿ ಎಂದು ಆಶಿಸುತ್ತೇನೆ. ನಮ್ಮ ಪಕ್ಷವು ವಿಧಾನ ಮಂಡಲದಲ್ಲಿ ಇಲ್ಲದಿದ್ದರೂ, ರಾಷ್ಟ್ರೀಯ ಪಕ್ಷವಾಗಿ ಹೊರಗಿನಿಂದಲೇ ಸರ್ಕಾರದ ನೀತಿ ನಡವಳಿಕೆಯ ಬಗ್ಗೆ ಮಾತನಾಡುತ್ತಾ ಜನರ ಹಿತ ಕಾಪಾಡುತ್ತೇವೆ ಎಂದು ಈ ಮೂಲಕ ತಿಳಿಸುತ್ತೇನೆ.

Leave a Reply

error: Content is protected !!

Discover more from VIJAYAPATHA.IN

Subscribe now to keep reading and get access to the full archive.

Continue reading

LATEST
ಕ್ರೀಡಾಪಟುಗಳಿಗೆ ಕೊಡುವ ಏಕಲವ್ಯ ಪ್ರಶಸ್ತಿ ಮುಂದುವರಿಸಲಿ: ಶೋಭಾ ನಾರಾಯಣ್ ಬಿಡದಿಯಿಂದ ಹೆದ್ದಾರಿಯಲ್ಲೇ ಮುಂದೆ ಬಂದರೆ ನಿಮಗೆ ಟೋಲ್‌ ಬರೆ ಗ್ಯಾರಂಟಿ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಹೊತ್ತಿ ಉರಿದ ಸ್ಕಾರ್ಪಿಯೋ ಕಾರು KSRTC ಕನಕಪುರ ಬಸ್‌ ನಿಲ್ದಾಣದಲ್ಲಿ ವಿಕಲ ಚೇತನರಿಂದ ₹700 ವಸೂಲಿ, ಕಂಡಕ್ಟರ್ಸ್‌ ಕೊಡಬೇಕು ₹10 : ಟಿಸಿಗೆ ಡಿಎಂ ಸಾಥ್... ಹೆಚ್ಚುವರಿ ಬಡ್ಡಿ ವಿಧಿಸುವ ನೋಂದಾಯಿತ ಲೇವಾದೇವಿಸಂಸ್ಥೆಗಳ ವಿರುದ್ಧ ದೂರು ನೀಡಿ KSRTC: 38+13 ತಿಂಗಳ ವೇತನ ಹಿಂಬಾಕಿ ಯಾವಾಗ ಬರುತ್ತದೆ ಒಕ್ಕೂಟದ ವಿರುದ್ಧ ನೌಕರರು ಕಿಡಿ BMTC: ಅಪಘಾತದಲ್ಲಿ ಮೃತಪಟ್ಟ ನೌಕರರ ಕುಟುಂಬಕ್ಕೆ ₹1 ಕೋಟಿ ಪರಿಹಾರ ಚೆಕ್‌ ವಿತರಿಸಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸಾರಿಗೆ ನಿವೃತ್ತ ನೌಕರರಿಗೆ ಮತ್ತೊಮ್ಮೆ ಮೊಗದೊಮ್ಮೆ ನಿರಾಸೆ: ಭಾರಿ ಆಕ್ರೋಶಗೊಂಡ EPS ನಿವೃತ್ತರು ಕಾರು ಡೋರ್‌ಗೆ ಬೈಕ್‌ ಗುದ್ದಿ ಕೆಳಗೆ ಬಿದ್ದ ಮಹಿಳೆ ಮೇಲೆ ಹರಿದ ಬಿಎಂಟಿಸಿ ಬಸ್‌ ನಾಟಿ ಕೋಳಿ ಸಾರಿನ ಜತೆ ರಾಗಿಮುದ್ದೆ ನುಂಗಿದವರಿಗೆ ಗೊತ್ತು ಅದರ ಗಮ್ಮತ್ತು