ಬೆಂಗಳೂರು: ವಿಧಾನಸೌಧದಲ್ಲಿ ಅಧಿಕಾರಿಯೊಬ್ಬರ ಬಳಿ ₹10 ಲಕ್ಷ ನಗದು ಸಿಕ್ಕಿರುವುದಕ್ಕೆ ಸಂಬಂಧಿಸಿ ಅಧಿಕಾರಿ ಜೆ.ಜಗದೀಶ್ ಹಾಗೂ ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ್ ವಿರುದ್ಧ ಸೂಕ್ತ ತನಿಖೆ ಆಗಬೇಕೆಂದು ಆಮ್ ಆದ್ಮಿ ಪಾರ್ಟಿ ರಾಜ್ಯ ವಕ್ತಾರ ಹಾಗೂ ಮಾಜಿ ಕೆಎಎಸ್ ಅಧಿಕಾರಿ ಕೆ.ಮಥಾಯಿ ಆಗ್ರಹಿಸಿದ್ದಾರೆ.
ಆಮ್ ಆದ್ಮಿ ಪಾರ್ಟಿಯ ರಾಜ್ಯ ಕಚೇರಿಯಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಕೆ.ಮಥಾಯಿ, ವಿಧಾನಸೌಧಕ್ಕೆ ತೆರಳುತ್ತಿದ್ದ ಲೋಕೋಪಯೋಗಿ ಇಲಾಖೆಯ ಕಿರಿಯ ಎಂಜಿನಿಯರ್ ಜೆ.ಜಗದೀಶ್ ಬಳಿ ಹತ್ತು ಲಕ್ಷ ರೂಪಾಯಿ ಪತ್ತೆಯಾಗಿದೆ. ಪೊಲೀಸರು ಆತನನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ್ ಹಾಗೂ ಅವರ ಆಪ್ತ ಕಾರ್ಯದರ್ಶಿಯ ಹೆಸರನ್ನು ಬಾಯ್ಬಿಟ್ಟಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ. ಅದು ಗುತ್ತಿಗೆ ಕಾಮಗಾರಿಯ 40% ಕಮಿಷನ್ ಹಣವೆಂಬ ಶಂಕೆ ವ್ಯಕ್ತವಾಗಿದೆ. ಈ ಬಗ್ಗೆ ಸೂಕ್ತ ತನಿಖೆ ನಡೆಯಬೇಕು ಎಂದು ಒತ್ತಾಯಿಸಿದರು.
ಕೆಂಗಲ್ ಹನುಮಂತಯ್ಯನವರು ಕಟ್ಟಿಸಿದ ವಿಧಾನಸೌಧಕ್ಕೆ ರಾಜ್ಯದ ಆಡಳಿತದಲ್ಲಿ ಪವಿತ್ರವಾದ ಸ್ಥಾನವಿದೆ. ಆದರೆ ಭ್ರಷ್ಟ ಬಿಜೆಪಿ ಸರ್ಕಾರವು ವಿಧಾನಸೌಧವನ್ನು 40% ಕಮಿಷನ್ ದಂಧೆಗೆ ಬಳಸಿ, ಅದರ ಪಾವಿತ್ರ್ಯತೆಗೆ ಧಕ್ಕೆ ತರುತ್ತಿದೆ. ಸಚಿವರು, ಶಾಸಕರು, ಅಧಿಕಾರಿಗಳು ವಿಧಾನಸೌಧವನ್ನು ಭ್ರಷ್ಟಾಚಾರದ ಡೀಲ್ ಕುದುರಿಸುವ ಹಾಗೂ ಅಕ್ರಮ ಹಣವನ್ನು ವಿನಿಮಯ ಮಾಡಿಕೊಳ್ಳುವ ಕೇಂದ್ರವನ್ನಾಗಿ ಮಾಡಿಕೊಂಡಿದ್ದಾರೆ. ಸಿಎಂ ಬಸವರಾಜ ಬೊಮ್ಮಾಯಿಯವರು ಇವೆಲ್ಲದಕ್ಕೂ ಬೆನ್ನೆಲುಬಾಗಿ ನಿಂತಿದ್ದಾರೆ” ಎಂದು ಕೆ.ಮಥಾಯಿ ಆರೋಪಿಸಿದರು.
ಬಂಧಿತ ಆರೋಪಿ ಜೆ.ಜಗದೀಶ್‌ಗೆ ಆ ಹಣವನ್ನು ಕೊಟ್ಟವರು ಯಾರು? ಆತ ಅದನ್ನು ವಿಧಾನಸೌಧಕ್ಕೆ ಏಕೆ ತೆಗೆದುಕೊಂಡು ಬಂದಿದ್ದ? ಅಲ್ಲಿ ಯಾರಿಗೆ ಆ ಹಣವನ್ನು ಕೊಡಲು ಬಂದಿದ್ದ? ಅದು ಯಾವ ಗುತ್ತಿಗೆ ಕಾಮಗಾರಿಯ ಕಮಿಷನ್? ಎಂಬ ಅನೇಕ ಪ್ರಶ್ನೆಗಳು ಜನರನ್ನು ಕಾಡುತ್ತಿವೆ. ಪೊಲೀಸರು ಶೀಘ್ರವೇ ತನಿಖೆಯನ್ನು ಪೂರ್ಣಗೊಳಿಸಿ ಜನರ ಪ್ರಶ್ನೆಗಳಿಗೆ ಸ್ಪಷ್ಟವಾಗಿ ಉತ್ತರ ನೀಡಬೇಕು. ಸರ್ಕಾರದ ಒತ್ತಡಕ್ಕೆ ಮಣಿದು ಪ್ರಕರಣವನ್ನು ಮುಚ್ಚಿ ಹಾಕಬಾರದು ಎಂದು ಕೆ.ಮಥಾಯಿ ಹೇಳಿದರು.
ಹೀಗಾಗಿ ಬಿಎಂಟಿಸಿಗೇ ಮತ್ತು ಸರ್ಕಾರಕ್ಕೂ ವಜಾಗೊಂಡಿರುವ ಹಲವು ನೌಕರರು ಬಿಸಿ ತುಪ್ಪವಾಗಿ ಪರಿಣಮಿಸುತ್ತಿದ್ದಾರೆ. ಇನ್ನು ಕೆಲ ನೌಕರರು ಆರ್ಥಿಕ ಪರಿಸ್ಥಿತಿ ಸರಿ ಇಲ್ಲ. ಕಾನೂನು ಹೋರಾಟ ಅಂದರೆ ವರ್ಷಾನುಗಟ್ಟಲೆ ಸಮಯ ತೆಗೆದುಕೊಳ್ಳುತ್ತದೆ. ಹೀಗೆ ನಾವು ವೇತನ ಇಲ್ಲದೆ ಸಂಸಾರ ನಿರ್ವಹಣೆ ಮಾಡುವುದು ತುಂಬ ಕಷ್ಟಕರವಾಗಲಿದೆ. ಹೀಗಾಗಿ ನಾವು ಸಂಸ್ಥೆಯ ಷರತ್ತಿಗೆ ವಲ್ಲದ ಮನಸ್ಸಿನಿಂದಲೇ ಒಪ್ಪಿ ಡ್ಯೂಟಿಗೆ ಹೋಗುತ್ತಿದ್ದೇವೆ ಎಂದು ತಮ್ಮ ನೋವವನ್ನು ತೋಡಿಕೊಂಡಿದ್ದಾರೆ.
ಒಟ್ಟಾರೆ ಬಿಎಂಟಿಸಿ ವಜಾಗೊಳಿಸಿರುವವರಲ್ಲಿ ಈಗ ಉಳಿದಿರುವ ಸುಮಾರು 483 ನೌಕರರಲ್ಲಿ 100ಕ್ಕೂ ಹೆಚ್ಚು ನೌಕರರು ಕಾನೂನು ಹೋರಾಟದ ಮೂಲಕವೇ ನಾವು ಡ್ಯೂಟಿ ಪಡೆಯುತ್ತೇವೆ. ಹೀಗಾಗಿ ಕಾನೂನು ಹೋರಾಟ ಮುಂದುವರಿಸುತ್ತೇವೆ ಎಂದು ಹೇಳುತ್ತಿದ್ದಾರೆ ಎಂದು ಬಲ್ಲ ಮೂಲಗಳಿಂದ ಖಚಿತ ಮಾಹಿತಿ ಹೊರಬಿದ್ದಿದೆ.
ಇನ್ನು ಪೊಲೀಸ್ ಪ್ರಕರಣವಿರುವ ನೌಕರರನ್ನು ಸದ್ಯ ತೆಗೆದುಕೊಳ್ಳುವುದಕ್ಕೆ ಸಂಸ್ಥೆಯ ಅಧಿಕಾರಿಗಳು ಹಿಂದೆಟು ಹಾಕುತ್ತಿದ್ದಾರೆ. ಇದು ಒಂದು ಕಡೆ ವಜಾಗೊಂಡ ಎಲ್ಲ ನೌಕರರು ಸೇವೆಗೆ ಮತ್ತೆ ಮರಳುತ್ತಾರೆ ಎಂಬ ನಿರೀಕ್ಷೆಗೂ ಹೊಡೆತ ಬಿದ್ದಂತಾಗುತ್ತಿದೆ. ಹೀಗಾಗಿ ಸುಮಾರು 200ಕ್ಕೂ ಹೆಚ್ಚು ನೌಕರರು ಷರತ್ತುಗಳಿಗೆ ಒಪ್ಪದೆ ಇನ್ನು ಉಳಿದ ನೌಕರರು ಒಪ್ಪಲ್ಲ ಎನ್ನುತ್ತಿದ್ದಾರೆ.
[wp-rss-aggregator limit=”4″ pagination=”on” page=”2″]
![](https://vijayapatha.in/wp-content/uploads/2024/02/QR-Code-VP-1-1-300x62.png)