NEWSರಾಜಕೀಯ

ವಿಧಾನಸಭಾ ಚುನಾವಣೆಗೆ ಆಮ್‌ ಆದ್ಮಿ ಪಾರ್ಟಿಯ 80 ಅಭ್ಯರ್ಥಿಗಳನ್ನೊಳಗೊಂಡ ಮೊದಲ ಪಟ್ಟಿ ಬಿಡುಗಡೆ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆಗೆ ಆಮ್‌ ಆದ್ಮಿ ಪಾರ್ಟಿಯು ತಮ್ಮ ಅಭ್ಯರ್ಥಿಗಳ ಮೊದಲ ಪಟ್ಟಿಯಲ್ಲಿ 80 ಮಂದಿ ಅಭ್ಯರ್ಥಿಗಳ ಹೆಸರನ್ನು ಘೋಷಿಸಿದೆ.

ನಮ್ಮದು ಯುವ ದೇಶವಾಗಿದ್ದು, ಯುವಕರು ತಮ್ಮ ಭವಿಷ್ಯವನ್ನು ನಿರ್ಧರಿಸುವಲ್ಲಿ ಪ್ರಮುಖ ಧ್ವನಿ ಹೊಂದಿರಬೇಕು. ನಮ್ಮ ಅಭ್ಯರ್ಥಿಗಳಲ್ಲಿ ಹೆಚ್ಚಿನವರು ಯುವ ಸ್ಪರ್ಧಿಗಳು. ಇವರಲ್ಲಿ ಅರ್ಧಕ್ಕಿಂತಲೂ ಹೆಚ್ಚು ಜನರು 45 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಎಂದು ಇದೇ ವೇಳೆ ಪಕ್ಷದ ರಾಜ್ಯಾಧ್ಯಕ್ಷ ಪೃಥ್ವಿರೆಡ್ಡಿ ತಿಳಿಸಿದ್ದಾರೆ.

ನಮ್ಮ ರಾಜ್ಯದ ಅರ್ಧಕ್ಕಿಂತಲೂ ಹೆಚ್ಚಿನ ಭಾಗ ಕೃಷಿಯನ್ನು ಅವಲಂಬಿಸಿದೆ. ಆದರೆ, ನಮ್ಮ ವಿಧಾನಸಭೆಯಲ್ಲಿ ರೈತರಿಗೆ ಪ್ರಾತಿನಿಧ್ಯವಿಲ್ಲ. ನಮ್ಮ ಮೊದಲ ಪಟ್ಟಿಯಲ್ಲಿ 7 ರೈತರು ಇರುವುದು ನಮಗೆ ಖುಷಿ ತಂದಿದೆ.

– ನಮ್ಮ ಜನಸಂಖ್ಯೆಯ ಶೇ. 50ರಷ್ಟು ಮಹಿಳೆಯರು, ಮತ್ತು ಬೇರೆ ಪಕ್ಷಗಳು ಅವರನ್ನು ನಾಮನಿರ್ದೇಶನ ಮಾಡದ ಕಾರಣ ಮಹಿಳೆಯರಿಗೆ ಸಾರ್ವಜನಿಕ ಹುದ್ದೆಯನ್ನು ಪಡೆಯುವುದು ಕಷ್ಟವಾಗಿದೆ. ನಮ್ಮ ಮೊದಲ ಪಟ್ಟಿಯಲ್ಲಿ 7 ಮಹಿಳೆಯರಿದ್ದಾರೆ ಎನ್ನುಲು ನಾವು ಸಂತೋಷಪಡುತ್ತೇವೆ ಮತ್ತು ನಮ್ಮ ಮುಂದಿನ ಪಟ್ಟಿಗಳಲ್ಲಿ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಇರುತ್ತಾರೆ ಎಂದು ಭಾವಿಸಿದ್ದೇವೆ.

– ನಮ್ಮ ರಾಜ್ಯದ ಜನರಿಗೆ ಹೆಚ್ಚಿನ ರೀತಿಯಲ್ಲಿ ಸೇವೆ ಸಲ್ಲಿಸಲು ಸಾಮಾಜಿಕ ಕಾರ್ಯಕರ್ತರು ಎಎಪಿಯನ್ನು ಒಂದು ವೇದಿಕೆಯಾಗಿ ದೇಶಾದ್ಯಂತ ಸಾಮಾಜಿಕ ಕಾರ್ಯಕರ್ತರು ಹೆಚ್ಚಾಗಿ ನೋಡುತ್ತಾರೆ. ನಮ್ಮ ಮೊದಲ ಪಟ್ಟಿಯಲ್ಲಿ 5 ಸಾಮಾಜಿಕ ಕಾರ್ಯಕರ್ತರು ಇದ್ದಾರೆ ಎಂದು   ಪೃಥ್ವಿರೆಡ್ಡಿ ತಿಳಿಸಿದ್ದಾರೆ.

ಎಎಪಿ ಬಿಡುಗಡೆ ಮಾಡಿರುವ ಅಭ್ಯರ್ಥಿಗಳ ಮೊದಲ ಪಟ್ಟಿ:

  • 20-ತೇರದಾಳ – ಅರ್ಜುನ ಹಲಗಿಗೌಡರ
  • 23-ಬಾದಾಮಿ – ಶಿವರಾಯಪ್ಪ ಜೋಗಿನ
  • 24-ಬಾಗಲಕೋಟೆ – ರಮೇಶ ಬದ್ನೂರ
  • 3-ಅಥಣಿ – ಸಂಪತ್ ಕುಮಾರ ಶೆಟ್ಟಿ
  • 16-ಬೈಲಹೊಂಗಲ – ಬಿ. ಎಂ. ಚಿಕ್ಕನಗೌಡರ
  • 18-ರಾಮದುರ್ಗ – ಮಲ್ಲಿಕಜಾನ್‌ ನದಾಫ
  • 72-ಹುಬ್ಬಳ್ಳಿ-ದಾರವಾಡ ಪೂರ್ವ – ಬಸವರಾಜ ಎಸ್‌ ತೇರದಾಳ
  • 73-ಹುಬ್ಬಳ್ಳಿ-ದಾರವಾಡ ಕೇಂದ್ರ – ವಿಕಾಸ ಸೊಪ್ಪಿನ
  • 75-ಕಲಘಟಗಿ – ಮಂಜುನಾಥ ಜಕ್ಕಣ್ಣವರ
  • 67-ರೋಣ – ಆನೇಕಲ್‌ ದೊಡ್ಡಯ್ಯ
  • 85-ಬ್ಯಾಡಗಿ – ಎಂ. ಎನ್.‌ ನಾಯಕ
  • 87-ರಾಣೆಬೆನ್ನೂರು – ಹನುಮಂತಪ್ಪ ಕಬ್ಬಾರ
  • 47-ಬಸವಕಲ್ಯಾಣ – ದೀಪಕ ಮಲಗಾರ
  • 48-ಹುಮನಾಬಾದ – ಬ್ಯಾಂಕ್‌ ರೆಡ್ಡಿ
  • 49-ಬೀದರ ದಕ್ಷಿಣ – ನಸೀಮುದ್ದಿನ್‌ ಪಟೇಲ
  • 51-ಭಾಲ್ಕಿ – ತುಕಾರಾಮ ನಾರಾಯಣರಾವ್ ಹಜಾರೆ
  • 52-ಔರಾದ – ಬಾಬುರಾವ ಅಡ್ಕೆ
  • 43-ಗುಲ್ಬರ್ಗ ಗ್ರಾಮೀಣ – ಡಾ. ರಾಘವೇಂದ್ರ ಚಿಂಚನಸೂರ
  • 44-ಗುಲ್ಬರ್ಗ ದಕ್ಷಿಣ – ಸಿದ್ದರಾಮ ಅಪ್ಪಾರಾವ ಪಾಟೀಲ
  • 45-ಗುಲ್ಬರ್ಗ ಉತ್ತರ – ಸಯ್ಯದ್‌ ಸಜ್ಜಾದ್‌ ಅಲಿ
  • 32-ಇಂಡಿ – ಗೋಪಾಲ ಆರ್‌ ಪಾಟೀಲ
  • 62-ಗಂಗಾವತಿ – ಶರಣಪ್ಪ ಸಜ್ಜಿಹೊಲ
  • 53-ರಾಯಚೂರು – ಗ್ರಾಮೀಣ ಡಾ. ಸುಭಾಶಚಂದ್ರ ಸಾಂಭಾಜಿ
  • 54-ರಾಯಚೂರು – ಡಿ. ವೀರೇಶ ಕುಮಾರ ಯಾದವ
  • 55-ಮಾನ್ವಿ – ರಾಜಾ ಶಾಮಸುಂದರ ನಾಯಕ
  • 57-ಲಿಂಗಸುಗೂರು – ಶಿವಪುತ್ರ ಗಾಣದಾಳ
  • 58-ಸಿಂಧನೂರು – ಸಂಗ್ರಾಮ ನಾರಾಯಣ ಕಿಲ್ಲೇದ
  • 90-ವಿಜಯನಗರ – ಡಿ. ಶಂಕರದಾಸ
  • 96-ಕೂಡ್ಲಿಗಿ – ಶ್ರೀನಿವಾಸ ಎನ್
  • 104-ಹರಪನಹಳ್ಳಿ – ನಾಗರಾಜ ಎಚ್‌
  • 99-ಚಿತ್ರಗುರ್ಗ – ಜಗದೀಶ ಬಿ. ಇ
  • 103-ಜಗಳೂರು – ಗೋವಿಂದರಾಜು
  • 105-ಹರಿಹರ – ಗಣೇಶಪ್ಪ ದುರ್ಗದ
  • 106-ದಾವಣಗೆರೆ ಉತ್ತರ – ಶ್ರೀಧರ ಪಾಟೀಲ
  • 130-ತುರುವೇಕೆರೆ – ಟೆನ್ನಿಸ್‌ ಕೃಷ್ಣ
  • 131-ಕುಣಿಗಲ್‌ – ಜಯರಾಮಯ್ಯ
  • 135-ಗುಬ್ಬಿ – ಪ್ರಭುಸ್ವಾಮಿ
  • 136-ಸಿರಾ – ಶಶಿಕುಮಾರ್
  • 137-ಪಾವಗಡ – ರಾಮಾಂಜನಪ್ಪ ಎನ್
  • 123-ಶೃಂಗೇರಿ – ರಾಜನ್‌ ಗೌಡ ಎಚ್.ಎಸ್‌
  • 196-ಹಾಸನ – ಅಗಿಲೆ ಯೋಗೀಶ್‌
  • 112-ಭದ್ರಾವತಿ – ಆನಂದ
  • 113-ಶಿವಮೊಗ್ಗ – ನೇತ್ರಾವತಿ ಟಿ
  • 117-ಸಾಗರ – ಕೆ. ದಿವಾಕರ
  • 201-ಮೂಡಬಿದ್ರಿ – ವಿಜಯನಾಥ ವಿಠಲ ಶೆಟ್ಟಿ
  • 203-ಮಂಗಳೂರು ನಗರ ದಕ್ಷಿಣ – ಸಂತೋಷ್‌ ಕಾಮತ
  • 207-ಸುಳ್ಯ – ಸುಮನಾ
  • 122-ಕಾರ್ಕಳ – ಡ್ಯಾನಿಯಲ್
  • 80-ಶಿರಸಿ – ಹಿತೇಂದ್ರ ನಾಯಕ
  • 186-ಮಳವಳ್ಳಿ – ಬಿ.ಸಿ. ಮಹದೇವಸ್ವಾಮಿ
  • 189-ಮಂಡ್ಯ – ಬೊಮ್ಮಯ್ಯ
  • 210-ಪಿರಿಯಾಪಟ್ಟಣ – ರಾಜಶೇಖರ್‌ ದೊಡ್ಡಣ್ಣ
  • 217-ಚಾಮರಾಜ – ಮಾಲವಿಕಾ ಗುಬ್ಬಿವಾಣಿ
  • 218-ನರಹಿಂಹರಾಜ – ಧರ್ಮಶ್ರೀ
  • 220-ಟಿ. ನರಸಿಪುರ – ಸಿದ್ದರಾಜು
  • 182-ಮಾಗಡಿ – ರವಿಕಿರಣ್‌ ಎಂ.ಎನ್
  • 183-ರಾಮನಗರ – ನಂಜಪ್ಪ ಕಾಳೇಗೌಡ
  • 184-ಕನಕಪುರ – ಪುಟ್ಟರಾಜು ಗೌಡ
  • 185-ಚನ್ನಪಟ್ಟಣ – ಶರತ್ ಚಂದ್ರ
  • 179-ದೇವನಹಳ್ಳಿ – ಶಿವಪ್ಪ ಬಿ.ಕೆ
  • 180-ದೊಡ್ಡಬಳ್ಳಾಪುರ – ಪುರುಷೋತ್ತಮ
  • 181-ನೆಲಮಂಗಲ – ಗಂಗಬೈಲಪ್ಪ ಬಿ.ಎಂ
  • 140-ಬಾಗೇಪಲ್ಲಿ – ಮಧುಸೀತಪ್ಪ
  • 143-ಚಿಂತಾಮಣಿ – ಸಿ. ಬೈರೆಡ್ಡಿ
  • 146-ಕೊಲಾರ್‌ ಗೋಲ್ಡ್‌ ಫೀಲ್ಡ್‌ – ಆರ್.‌ ಗಗನ ಸುಕನ್ಯ
  • 149-ಮಾಲೂರು – ರವಿಶಂಕರ್‌ ಎಂ
  • 155-ದಾಸರಹಳ್ಳಿ – ಕೀರ್ತನ್‌ ಕುಮಾರ
  • 156-ಮಹಾಲಕ್ಷ್ಮಿ ಬಡಾವಣೆ – ಶಾಂತಲಾ ದಾಮ್ಲೆ
  • 157-ಮಲ್ಲೇಶ್ವರ – ಸುಮನ್ ಪ್ರಶಾಂತ್‌
  • 158-ಹೆಬ್ಬಾಳ – ಮಂಜುನಾಥ ನಾಯ್ಡು
  • 159-ಪುಲಕೇಶಿನಗರ – ಸುರೇಶ್‌ ರಾಥೋಡ್‌
  • 161-ಸಿ.ವಿ. ರಾಮನ್‌ ನಗರ – ಮೋಹನ ದಾಸರಿ
  • 162-ಶಿವಾಜಿನಗರ – ಪ್ರಕಾಶ್‌ ನೆಡುಂಗಡಿ
  • 163-ಶಾಂತಿನಗರ – ಕೆ ಮಥಾಯ್
  • 165-ರಾಜಾಜಿನಗರ – ಬಿಟಿ ನಾಗಣ್ಣ
  • 167-ವಿಜಯನಗರ – ಡಾ ರಮೇಶ್‌ ಬೆಲ್ಲಂಕೊಂಡ
  • 169-ಚಿಕ್ಕಪೇಟೆ – ಬ್ರಿಜೇಶ್‌ ಕಾಳಪ್ಪ
  •  171-ಪದ್ಮನಾಭನಗರ – ಅಜಯ್‌ ಗೌಡ
  •  172-ಬಿ.ಟಿ.ಎಂ ಬಡಾವಣೆ – ಶ್ರೀನಿವಾಸ್‌ ರೆಡ್ಡಿ
  •  175-ಬೊಮ್ಮನಹಳ್ಳಿ – ಸೀತಾರಾಮ್‌ ಗುಂಡಪ್ಪ

Leave a Reply

error: Content is protected !!

Discover more from VIJAYAPATHA.IN

Subscribe now to keep reading and get access to the full archive.

Continue reading

LATEST
ಕ್ರೀಡಾಪಟುಗಳಿಗೆ ಕೊಡುವ ಏಕಲವ್ಯ ಪ್ರಶಸ್ತಿ ಮುಂದುವರಿಸಲಿ: ಶೋಭಾ ನಾರಾಯಣ್ ಬಿಡದಿಯಿಂದ ಹೆದ್ದಾರಿಯಲ್ಲೇ ಮುಂದೆ ಬಂದರೆ ನಿಮಗೆ ಟೋಲ್‌ ಬರೆ ಗ್ಯಾರಂಟಿ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಹೊತ್ತಿ ಉರಿದ ಸ್ಕಾರ್ಪಿಯೋ ಕಾರು KSRTC ಕನಕಪುರ ಬಸ್‌ ನಿಲ್ದಾಣದಲ್ಲಿ ವಿಕಲ ಚೇತನರಿಂದ ₹700 ವಸೂಲಿ, ಕಂಡಕ್ಟರ್ಸ್‌ ಕೊಡಬೇಕು ₹10 : ಟಿಸಿಗೆ ಡಿಎಂ ಸಾಥ್... ಹೆಚ್ಚುವರಿ ಬಡ್ಡಿ ವಿಧಿಸುವ ನೋಂದಾಯಿತ ಲೇವಾದೇವಿಸಂಸ್ಥೆಗಳ ವಿರುದ್ಧ ದೂರು ನೀಡಿ KSRTC: 38+13 ತಿಂಗಳ ವೇತನ ಹಿಂಬಾಕಿ ಯಾವಾಗ ಬರುತ್ತದೆ ಒಕ್ಕೂಟದ ವಿರುದ್ಧ ನೌಕರರು ಕಿಡಿ BMTC: ಅಪಘಾತದಲ್ಲಿ ಮೃತಪಟ್ಟ ನೌಕರರ ಕುಟುಂಬಕ್ಕೆ ₹1 ಕೋಟಿ ಪರಿಹಾರ ಚೆಕ್‌ ವಿತರಿಸಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸಾರಿಗೆ ನಿವೃತ್ತ ನೌಕರರಿಗೆ ಮತ್ತೊಮ್ಮೆ ಮೊಗದೊಮ್ಮೆ ನಿರಾಸೆ: ಭಾರಿ ಆಕ್ರೋಶಗೊಂಡ EPS ನಿವೃತ್ತರು ಕಾರು ಡೋರ್‌ಗೆ ಬೈಕ್‌ ಗುದ್ದಿ ಕೆಳಗೆ ಬಿದ್ದ ಮಹಿಳೆ ಮೇಲೆ ಹರಿದ ಬಿಎಂಟಿಸಿ ಬಸ್‌ ನಾಟಿ ಕೋಳಿ ಸಾರಿನ ಜತೆ ರಾಗಿಮುದ್ದೆ ನುಂಗಿದವರಿಗೆ ಗೊತ್ತು ಅದರ ಗಮ್ಮತ್ತು