NEWSನಮ್ಮರಾಜ್ಯಸಂಸ್ಕೃತಿ

ಸಂಕಷ್ಟದಲ್ಲಿದ್ದಾರೆ ಪ್ರವಾಸಿ ಮಾರ್ಗದರ್ಶಕರು

ಸಚಿವ ಸಿ. ಟಿ. ರವಿ ಹೇಳಿಕೆ l ಗೈಡ್‌ಗಳಿಗೆ  ಆಹಾರ ಕಿಟ್ ವಿತರಣೆ

ವಿಜಯಪಥ ಸಮಗ್ರ ಸುದ್ದಿ

ಹಾಸನ: ಬೇಲೂರಿನಲ್ಲಿ ಪ್ರವಾಸಿ ಗೈಡ್ ಗಳಿಗೆ ಪಡಿತರ ಸಾಮಗ್ರಿಯನ್ನು ಪ್ರವಾಸೋದ್ಯಮ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸಿ. ಟಿ. ರವಿ ವಿತರಿಸಿದರು.

ಕೊರೊನಾ ಸೋಂಕು ನಿಯಂತ್ರಣ ಕ್ರಮದ ಹಿನ್ನೆಲೆಯಲ್ಲಿ ಲಾಕ್ ಡೌನ್ ಆದೇಶ   ಜಾರಿಯಲ್ಲಿದೆ .   ಇದರಿಂದ ಪ್ರವಾಸಿ ಮಾರ್ಗದರ್ಶಕರು ಸಂಕಷ್ಟಕ್ಕೆ ಸಿಲುಕಿದ್ದು, ಅವರ ಊಟೋಪಚಾರಕ್ಕಾಗಿ ದಿನಸಿ ಸಾಮಗ್ರಿ ವಿತರಿಸಲಾಗಿದೆ ಎಂದು  ಸಚಿವರು ತಿಳಿಸಿದರು.

ಚಿಕ್ಕಮಗಳೂರು ಬೇಲೂರು ಹಾಸನ‌ ಹೊಳೆ ನರಸೀಪುರ ಬಿಳಿಕೆರೆ ನಾಲ್ಕು ಲೈನ್ ರಸ್ತೆ ಪ್ರಸ್ತಾಪ ಹಿಂದಿನಿಂದಲೂ ಇದೆ ಹಾಲಿ ಬೇಲೂರುವರೆಗೆ ರಾಷ್ಟ್ರೀಯ ಶುಂಠಿ ಹೆದ್ದಾರಿಗೆ ಸೇರಿದ್ದು, ಚಿಕ್ಕಮಗಳೂರು ಬೇಲೂರು ‌ನಡುವಿನ‌ ರಸ್ತೆ ತಾಂತ್ರಿಕ ಕಾರಣಗಳಿಂದ ಕೈಬಿಟ್ಟಿದ್ದು ಸದ್ಯದಲ್ಲೆ ಸೇರ್ಪಡೆಗೊಳ್ಳಲಿದೆ ಎಂದರು.

ಚಿಕ್ಕಮಗಳೂರು ‌ಬೇಲೂರು  ಹಾಸನ ರೈಲ್ವೆ ಯೋಜನೆಗೆ ಮಂಜೂರಾತಿ ದೊರೆತಿದೆ. ರಾಜ್ಯ ಸರ್ಕಾರ ಜಮೀನು ಒದಗಿಸಿದರೆ ತಕ್ಷಣ ಕೆಲಸ ಪ್ರಾರಂಭಿಸುವುದಾಗಿ ರೈಲ್ವೆ ಸಚಿವರು ತಮಗೆ ವೈಯಕ್ತಿಕವಾಗಿ ತಿಳಿಸಿದ್ದಾರೆ ಎಂದು ರವಿ ಹೇಳಿದರು.

ಬೇಲೂರು ಚನ್ನಕೇಶವ ಸ್ವಾಮಿ ದೇವಾಲಯದಲ್ಲಿ ಸಾಂಪ್ರದಾಯಿಕ ವಾರ್ಷಿಕ ಪೂಜೆ‌ ನಡೆದಿದೆ. ಜಿಲ್ಲಾಧಿಕಾರಿಯವರ ಸೂಚನೆ ಹಾಗೂ ಕೇಂದ್ರ ಸರ್ಕಾರದ ಲಾಕ್ ಡೌನ್ ಆದೇಶ ಜಾರಿ ಗೊಳಿಸಿರುವುದರಿಂದ  ಬೇಲೂರಿನಲ್ಲಿ ರಥೋತ್ಸವ  ನಡೆದಿಲ್ಲ .ಕೊರೊನಾ ಸೋಂಕು ದೂರಾಗಿ‌ ಎಲ್ಲವೂ ಸುಸೂತ್ರವಾದ ನಂತರ ವಿಜ್ರಂಭಣೆಯ ರಥೋತ್ಸವ ನಡೆಸಬಹುದಾಗಿದೆ ಎಂದು ಸಚಿವರು ತಿಳಿಸಿದರು.

ಶಾಸಕರಾದ ಕೆ.ಎಂ ಲಿಂಗೇಶ್  ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

Leave a Reply

error: Content is protected !!
LATEST
ಮೈತ್ರಿ ತೆಕ್ಕೆಗೆ ಬನ್ನೂರು ಪುರಸಭೆ: ಜೆಡಿಎಸ್‌ಗೆ ಅಧ್ಯಕ್ಷ ಗದ್ದುಗೆ, ಬಿಜೆಪಿಗೆ ಉಪಾಧ್ಯಕ್ಷ ಗಾದಿ ರಾಜ್ಯದ ಆರು ಪ್ರತ್ಯೇಕ ಸ್ಥಳಗಳಲ್ಲಿ ಅಪಘಾತ: 13 ಮಂದಿ ಸಾವು, ಹಲವರಿಗೆ ಗಾಯ ಯಡಿಯೂರು ಕೆರೆ: ಗಣಪತಿ ವಿಸರ್ಜನಾ ಕಲ್ಯಾಣಿಗೆ ನೀರು ತುಂಬಿಸಿದ ಬಿಬಿಎಂಪಿ ತಂದೆ ನಿಧನರಾದ ದುಃಖದಲ್ಲಿರುವ ನೌಕರನಿಗೆ ರಜೆ ಕೊಡದೆ ಗೈರು ತೋರಿಸಿದ್ದು ಅಲ್ಲದೆ ಕಾರಣ ಕೇಳಿ ನೋಟಿಸ್‌ ಕೊಟ್ಟ ಅಧಿಕಾರಿ... KKRTC ಬಸ್‌-ಶಾಲಾ ಬಸ್‌ ಮುಖಾಮುಖಿ ಡಿಕ್ಕಿ: ಇಬ್ಬರು ಮೃತ- 25ಕ್ಕೂ ಹೆಚ್ಚು ಮಕ್ಕಳಿಗೆ ಗಾಯ KSRTC: 38 ತಿಂಗಳ ವೇತನ ಹೆಚ್ಚಳ ಹಿಂಬಾಕಿಗೆ ಆಗ್ರಹಿಸಿ BMS ಪ್ರತಿಭಟನೆ- ಸರ್ಕಾರದ ವಿರುದ್ಧ ಕಿಡಿ MSRTC: ನೌಕರರ ಮುಷ್ಕರಕ್ಕೆ ಮಣಿದು 6500 ರೂ. ವೇತನ ಹೆಚ್ಚಳಕ್ಕೆ ಒಪ್ಪಿದ ಸರ್ಕಾರ- ಧರಣಿ ವಾಪಸ್‌ MSRTC: ತೀವ್ರಗೊಂಡ ನೌಕರರ ಮುಷ್ಕರ- 11 ಸಂಘಟನೆಗಳ ಒಗ್ಗಟ್ಟು- ನಿಗಮಕ್ಕೆ ನಡುಕ ಚಾಮುಂಡಿಬೆಟ್ಟದಲ್ಲಿ ಧೂಮಪಾನ, ಮದ್ಯಪಾನ, ಗುಟ್ಕಾ ನಿಷೇಧ: ಸಿಎಂ ಘೋಷಣೆ ಪೋಡಿ ಮುಕ್ತ ಅಭಿಯಾನ, ಪೌತಿ ಖಾತೆ ಆಂದೋಲನಕ್ಕೆ ಕ್ರಮ: ಕಂದಾಯ ಸಚಿವ ಕೃಷ್ಣ ಬೈರೇಗೌಡ