NEWSನಮ್ಮಜಿಲ್ಲೆನಮ್ಮರಾಜ್ಯ

ಸಚಿವರು ಕೊಟ್ಟ ಮಾತು ತಪ್ಪಿದರೆ ಸೆ.20ರಂದು ಪ್ರತಿಭಟನಾ ಧರಣಿ: ಸಿಐಟಿಯು

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ವಜಾ, ಅಮಾನತು, ವರ್ಗಾವಣೆಗೊಂಡ ನೌಕರರ ಬಗ್ಗೆ ಇಂದು ಸಿಐಟಿಯು ಕಚೇರಿಯಲ್ಲಿ ಬಹಳ ಗಂಭೀರವಾದ ಚರ್ಚೆ ನಡೆಯಿತು.

ಈ ವೇಳೆ ನೌಕರರ ಬೇಡಿಕೆ ಇನ್ನೆರಡು ದಿನದಲ್ಲಿ ಈಡೇರದಿದ್ದರೆ ಸೆ.20 ರಂದು ನಡೆಸಲು ಉದ್ದೇಶಿಸಿರುವ ಧರಣಿ ಸತ್ಯಾಗ್ರಹವನ್ನು ಕೈಗೊಳ್ಳಲು ತೀರ್ಮಾನಿಸಲಾಯಿತು.

ಸಭೆಯಲ್ಲಿ ಕಾನೂನಿನ ಹೋರಾಟಕ್ಕಿಂತ ಸಾಮೂಹಿಕ ಹೋರಾಟ ಬಹಳ ಬೇಗ ಯಶಸ್ಸನ್ನು ಪಡೆಯುತ್ತದೆ ಎಂಬುದು ಬಹಳ ಸ್ಪಷ್ಟವಾಯಿತು. ನೌಕರರು ಯಾರು ಭಯಪಡುವ ಅಗತ್ಯವಿಲ್ಲ. ಸಚಿವರು ಕೊಟ್ಟ ಮಾತಿನಂತೆ ನಡೆದುಕೊಳ್ಳತ್ತಾರೆ ಎಂಬ ವಿಶ್ವಾಸ ನಮಗಿದೆ. ಹೀಗಾಗಿ ಸಭೆಯಲ್ಲಿ ತೆಗದುಕೊಂಡ ತೀರ್ಮಾನದಂತೆ ನಾವು ಕೂಡ ಸಚಿವರ ಮೇಲೆ ವಿಶ್ವಾಸವಿಟ್ಟು ಸೆ.20ರವರೆಗೂ ನಮ್ಮ ಹೋರಾಟವನ್ನು ಮುಂದೂಡೋಣ ಎಂಬ ನಿರ್ಧಾರ ತೆಗೆದುಕೊಂಡಿದ್ದೇವೆ.

ಒಂದು ವೇಳೆ ಸಚಿವರು ನೌಕರರ ನ್ಯಾಯಸಮ್ಮತ ಬೇಡಿಕೆಗಳನ್ನು ಈಡೇರಿಸದಿದ್ದರೆ ಯಾರು ಬರಲಿ ಅಥವಾ ಬರದಿರಲಿ. ಇತರ ವದಂತಿಗಳಿಗೆ ಕಿವಿಗೊಡದೆ ನಾನು ಈ ಹೋರಾಟದಲ್ಲಿ ಭಾಗವಹಿಸಿಯೇ ತೀರುತ್ತೇನೆ ಎಂಬ ದೃಢ ಸಂಕಲ್ಪದಿಂದ ಹೋರಾಟಕ್ಕೆ ಕನಿಷ್ಠಪಕ್ಷ ಒಬ್ಬ ನೌಕರ 5 ಜನರನ್ನು ಕರೆದುಕೊಂಡು ಬರುವಂತಹ ಪ್ರಯತ್ನ ಮಾಡುವಂತೆ ಸಲಹೆ ನೀಡಲಾಯಿತು.

ನೀವು ಖಾಲಿ ಹೊಟ್ಟೆಯಲ್ಲಿ ಈಗ ಇರುವಿರಿ ಎಂಬುದನ್ನು ಮರೆಯಬೇಡಿ ಈಗ ನಿಮ್ಮ ಹೊಟ್ಟೆ ತುಂಬಿಸಿಕೊಳ್ಳಲು ಹೋರಾಟ ಅನಿವಾರ್ಯ. ಇದನ್ನು ಮನಗಂಡು ಸೆ.20ರ ಒಂದು ದಿನದ ಹೋರಾಟವನ್ನು ಯಶಸ್ವಿ ಮಾಡಿ. ಈಗ ನಮ್ಮ ಬೇಡಿಕೆ ಒಂದೇ ವಜಾಗೊಂಡ ನೌಕರರನ್ನು ವಾಪಸ್ ಪಡೆಯಬೇಕು ಹಾಗೂ ವರ್ಗಾವಣೆಗೊಂಡವರನ್ನು ಮರಳಿ ಅದೇ ಸ್ಥಳಕ್ಕೆ ನಿಯೋಜಿಸಬೇಕು ಎಂಬುದು.

ನಮ್ಮ ಬೇಡಿಕೆ ನಾವು ಯಾವುದೇ ಸರ್ಕಾರ ಆಡಳಿತದ ವಿರುದ್ಧದ ಹೋರಾಟದಲ್ಲಿ ಪಾಲ್ಗೊಳ್ಳುತ್ತಿಲ್ಲ ನಮ್ಮ ನೆರವಿಗೆ ಬಂದಿರುವ ಸಿಐಟಿಯು ಸಂಘಟನೆಗೆ ಎಲ್ಲರೂ ಬೆಂಬಲಿಸುವುದರಿಂದ ನಾವು ಕಳೆದುಕೊಳ್ಳುವುದು ಏನೂ ಇಲ್ಲ ಎಂಬುದು ನಿಮ್ಮಗೆ ತಿಳಿದಿರಲಿ. ಇದನ್ನು ನಿಮ್ಮ ಎಲ್ಲ ಸ್ನೇಹಿತರಿಗೂ ತಿಳಿಸಿ ಹೋರಾಟಕ್ಕೆ ಬೆಂಬಲಿಸಿ ಎಂದು ಸಭೆ ಸೇರಿದ ಎಲ್ಲ ಸಂಘಟನೆಗಳ ಪದಾಧಿಕಾರಿಗಳು ಒಕ್ಕೊರಲಿನಿಂದ ತೀರ್ಮಾನಿಸಿದ್ದಾರೆ.

ಹೀಗಾಗಿ ಸಚಿವರು ಇನ್ನೆರಡು ದಿನದಲ್ಲಿ ಸಿಹಿ ಸುದ್ದಿ ಕೊಡುವರು ಎಂಬ ವಿಶ್ವಾಸದಲ್ಲಿ ನೌಕರರು ಚಾತಕ ಪಕ್ಷಿಯಂತೆ ಕಾದು ಕುಳಿತಿದ್ದಾರೆ. ನೌಕರರ ನಿರೀಕ್ಷೆ ಹುಸಿಯಾಗುವುದಿಲ್ಲ ಎಂಬ ಭರವಸೆಯೂ ಇದೆ ಎಂದು ಸಾರಿಗೆಯ ಬಹುತೇಕೆ ಎಲ್ಲ ಸಂಘಟನೆಗಳ ಪದಾಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Leave a Reply

error: Content is protected !!

Discover more from VIJAYAPATHA.IN

Subscribe now to keep reading and get access to the full archive.

Continue reading

LATEST
ಕ್ರೀಡಾಪಟುಗಳಿಗೆ ಕೊಡುವ ಏಕಲವ್ಯ ಪ್ರಶಸ್ತಿ ಮುಂದುವರಿಸಲಿ: ಶೋಭಾ ನಾರಾಯಣ್ ಬಿಡದಿಯಿಂದ ಹೆದ್ದಾರಿಯಲ್ಲೇ ಮುಂದೆ ಬಂದರೆ ನಿಮಗೆ ಟೋಲ್‌ ಬರೆ ಗ್ಯಾರಂಟಿ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಹೊತ್ತಿ ಉರಿದ ಸ್ಕಾರ್ಪಿಯೋ ಕಾರು KSRTC ಕನಕಪುರ ಬಸ್‌ ನಿಲ್ದಾಣದಲ್ಲಿ ವಿಕಲ ಚೇತನರಿಂದ ₹700 ವಸೂಲಿ, ಕಂಡಕ್ಟರ್ಸ್‌ ಕೊಡಬೇಕು ₹10 : ಟಿಸಿಗೆ ಡಿಎಂ ಸಾಥ್... ಹೆಚ್ಚುವರಿ ಬಡ್ಡಿ ವಿಧಿಸುವ ನೋಂದಾಯಿತ ಲೇವಾದೇವಿಸಂಸ್ಥೆಗಳ ವಿರುದ್ಧ ದೂರು ನೀಡಿ KSRTC: 38+13 ತಿಂಗಳ ವೇತನ ಹಿಂಬಾಕಿ ಯಾವಾಗ ಬರುತ್ತದೆ ಒಕ್ಕೂಟದ ವಿರುದ್ಧ ನೌಕರರು ಕಿಡಿ BMTC: ಅಪಘಾತದಲ್ಲಿ ಮೃತಪಟ್ಟ ನೌಕರರ ಕುಟುಂಬಕ್ಕೆ ₹1 ಕೋಟಿ ಪರಿಹಾರ ಚೆಕ್‌ ವಿತರಿಸಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸಾರಿಗೆ ನಿವೃತ್ತ ನೌಕರರಿಗೆ ಮತ್ತೊಮ್ಮೆ ಮೊಗದೊಮ್ಮೆ ನಿರಾಸೆ: ಭಾರಿ ಆಕ್ರೋಶಗೊಂಡ EPS ನಿವೃತ್ತರು ಕಾರು ಡೋರ್‌ಗೆ ಬೈಕ್‌ ಗುದ್ದಿ ಕೆಳಗೆ ಬಿದ್ದ ಮಹಿಳೆ ಮೇಲೆ ಹರಿದ ಬಿಎಂಟಿಸಿ ಬಸ್‌ ನಾಟಿ ಕೋಳಿ ಸಾರಿನ ಜತೆ ರಾಗಿಮುದ್ದೆ ನುಂಗಿದವರಿಗೆ ಗೊತ್ತು ಅದರ ಗಮ್ಮತ್ತು