NEWSನಮ್ಮರಾಜ್ಯ

ಸನ್ನಡತೆ ಆಧಾರದಲ್ಲಿ 139 ಕೈದಿಗಳ ಬಿಡುಗಡೆಗೆ ಶಿಫಾರಸು: ಸಚಿವ ಬಸವರಾಜ ಬೊಮ್ಮಾಯಿ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಕೋವಿಡ್​ನ ಮೂರನೇ ಅಲೆ ಎದುರಿಸಲು ಸಜ್ಜಾಗುವ ನಿಟ್ಟಿನಲ್ಲಿ ಆಕ್ಸಿಜನ್ ಉತ್ಪಾದನೆಗೆ ಪುಷ್ಟಿ ನೀಡಲು ವಿವಿಧ ಕ್ರಮಗಳಿಗೆ ಇಂದು ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ದೊರೆತಿದೆ.

ಈ ಮೂಲಕ ಕೆಲ ಮಹತ್ವದ ನಿರ್ಧಾರಗಳನ್ನ ಕೈಗೊಳ್ಳಲಾಗಿದ್ದು, ಎಸ್ಸೆಸ್ಸೆಲ್ಸಿ ಬಳಿಕ ಮಾಡಲಾಗುವ ಜೆಒಸಿ (JOC – Job Oriented Course) ಕೋರ್ಸ್​ಗಳನ್ನು ಪಿಯುಸಿಗೆ ಸಮಾನವೆಂದು ಪರಿಗಣಿಸಲು ಸಂಪುಟದಲ್ಲಿ ಒಪ್ಪಿಗೆ ಸಿಕ್ಕಿದೆ.

ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ಪಡೆ (ಕೆಎಸ್​ಆರ್​ಪಿ) ಯಿಂದ ಸಿವಿಲ್ ಪೊಲೀಸ್​ಗೆ ಬರಬೇಕಾದರೆ ದೈಹಿಕ ಕ್ಷಮತೆಯ ಪರೀಕ್ಷೆ (ಫಿಸಿಕಲ್ ಎಕ್ಸಾಂ) ನಡೆಸಲು ನಿರ್ಧರಿಸಲಾಗಿದೆ. ವಿಧಾನಸೌಧದ ಆವರಣದಲ್ಲಿ ಬಸವಣ್ಣ ಪ್ರತಿಮೆ ಸ್ಥಾಪನೆಗೆ ಒಪ್ಪಿಗೆ ನೀಡಲಾಗಿದೆ.

ಸಹಕಾರ ಸಂಘ, ಬ್ಯಾಂಕ್​ಗಳ ಅಧ್ಯಕ್ಷ ಉಪಾಧ್ಯಕ್ಷ, ಪದಾಧಿಕಾರಿಗಳ ಚುನಾವಣೆಗೆ ಸಹಕಾರ ಇಲಾಖೆಯಿಂದ ಬಂದ ಪ್ರಸ್ತಾವನೆಗೆ ಸಂಪುಟ ಸಭೆ ಅನುಮೋದನೆ ನೀಡಿದೆ.

ಇನ್ನು ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗಾರರೊಂದಿಗೆಮಾತನಾಡಿದ ಗೃಹ ಸಚಿವ ಬಸವರಾಜ ಬೊಮ್ಮಾಯಿ, ರಾಜ್ಯದಲ್ಲಿ ಆಮ್ಲಜನಕ ಉತ್ಪಾದನೆಯ (Oxygen Manufacturing Units) 9 ಘಟಕಗಳಿವೆ. ಅವುಗಳು 800 ಮೆಟ್ರಿಕ್ ಟನ್ ಆಕ್ಸಿಜನ್ ಉತ್ಪಾದನೆಯ ಸಾಮರ್ಥ್ಯ ಹೊಂದಿವೆ. ಈ ಘಟಕಗಳ ಸಂಖ್ಯೆ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.

ಆಕ್ಸಿಜನ್ ಘಟಕ ಸ್ಥಾಪನೆಗೆ ಮುಂದೆ ಬಂದವರಿಗೆ ಶೇ. 25ರಷ್ಟು ಕ್ಯಾಪಿಟಲ್ ಸಬ್ಸಿಡಿ ನೀಡಲಾಗುತ್ತದೆ. ಮೂರು ವರ್ಷ ವಿದ್ಯುತ್ ಬಿಲ್​ನಲ್ಲಿ ವಿನಾಯಿತಿ ನೀಡಲಾಗುತ್ತದೆ. ಮೆಟ್ರಿಕ್ ಟನ್​ಗೆ 1 ಸಾವಿರ ರೂ. ಪವರ್ ಟಾರಿಫ್ ಕೊಡಲಾಗುತ್ತದೆ. ಹಾಗೆಯೇ, ಭೂಮಿಯ ರಿಜಿಸ್ಟ್ರೇಷನ್​ನಲ್ಲೂ ವಿನಾಯಿತಿ ನೀಡಲಾಗುತ್ತದೆ ಎಂದು ವಿವರಿಸಿದರು.

ರಾಜ್ಯದಲ್ಲಿ ವಿದೇಶಿ ನೇರ ಬಂಡವಾಳ ಆಕರ್ಷಿಸಲು ಮುಂದಿನ ವರ್ಷ ವಿಶ್ವ ಬಂಡವಾಳ ಹೂಡಿಕೆದಾರರ ಸಮಾವೇಶ ನಡೆಸಲಾಗುವುದು. ಇನ್ವೆಸ್ಟ್ ಕರ್ನಾಟಕ 2022 ಅನ್ನು ಫೆಬ್ರವರಿ 9ರಿಂದ 12ರವರೆಗೆ ನಡೆಸಲು ಸಂಪುಟ ಸಭೆಯಲ್ಲಿ ನಿರ್ಧರಿಸಲಾಯಿತು ಎಂದು ತಿಳಿಸಿದರು.

ಇನ್ನು, ದಾಸನಪುರದಲ್ಲಿ ನಿರ್ಮಾಣವಾಗಿರುವ ಎಪಿಎಂಸಿಯಲ್ಲಿಇ 93 ಲೀಸ್ ಕಂ ಸೇಲ್ ಮಳಿಗೆಗಳಿವೆ. ಇವುಗಳ ಪೈಕಿ 54 ಮಳಿಗೆಗಳನ್ನು ಬಾಡಿಗೆಗೆ ನೀಡಲಾಗಿದೆ. ಈಗ ಲೀಸ್ ಕಂ ಸೇಲ್ ಮೊತ್ತವನ್ನು 20 ಲಕ್ಷ ರೂ.ಗೆ ಕಡಿತ ಮಾಡಲಾಗಿದೆ. 20 ಸಾವಿರ ರೂ. ಇದ್ದ ಮಾಸಿಕ ಬಾಡಿಕೆ ದರವನ್ನು 12 ಸಾವಿರ ರೂ.ಗೆ ಇಳಿಸಿದ್ದೇವೆ ಎಂದು ಬೊಮ್ಮಾಯಿ ಹೇಳಿದರು.

ಸಚಿವ ಸಂಪುಟ ಸಭೆಯಲ್ಲಿ ಕೈಗೊಂಡ ಕೆಲ ನಿರ್ಧಾರಗಳು

  1. ಜೆಒಸಿ ಕೋರ್ಸ್​ಗಳನ್ನ ಪಿಯುಸಿ ತತ್ಸಮಾನವೆಂದು ಪರಿಗಣನೆ
  2. ವಿಧಾನಸೌಧದಲ್ಲಿ ಬಸವಣ್ಣ ಪ್ರತಿಮೆ ಸ್ಥಾಪನೆಗೆ ಒಪ್ಪಿಗೆ* ಕೆಎಸ್​ಆರ್​ಪಿಯಿಂದ ಸಿವಿಲ್ ಪೊಲೀಸ್​ಗೆ ಬರಲು ಫಿಸಿಕಲ್ ಎಕ್ಸಾಂ ಕಡ್ಡಾಯ
  3. ಗದಗ್ ನಗರದಲ್ಲಿ ಪಶು ವೈದ್ಯಕೀಯ ಕಾಲೇಜು ಕಟ್ಟಡ ನಿರ್ಮಾಣಕ್ಕೆ ಹೆಚ್ಚವರಿ 30 ಕೋಟಿ ಸೇರಿದಂತೆ 80 ಕೋಟಿ ರೂ. ಅನುದಾನ
  4. 2022ರ ಫೆಬ್ರವರಿ 9ರಿಂದ 12ರವರೆಗೆ ವಿಶ್ವ ಬಂಡವಾಳ ‘ಹೂಡಿಕೆದಾರರ ಸಮಾವೇಶ ಇನ್ವೆಸ್ಟ್ ಕರ್ನಾಟಕ 2021 ಅನ್ನು ಆಯೋಜಿಸಲು ಒಪ್ಪಿಗೆ
  5. ರಾಜ್ಯದಲ್ಲಿ ಆಕ್ಸಿಜನ್ ಉತ್ಪಾದನೆ ಘಟಕಗಳನ್ನ ಹೆಚ್ಚಿಸಲು ವಿವಿಧ ಉತ್ತೇಜನಗಳಿರುವ ಕ್ರಮಕ್ಕೆ ಅನುಮೋದನೆ
  6. ದಾಸನಪುರ ಎಪಿಎಂಸಿ ಮಳಿಗೆಗಳ ಬಾಡಿಗೆ ದರ ಇಳಿಕೆ
  7. ಸಹಕಾರ ಸಂಘ, ಬ್ಯಾಂಕ್​ಗಳ ಪದಾಧಿಕಾರಿಗಳ ಚುನಾವಣೆ ನಡೆಸುವ ಪ್ರಸ್ತಾವನೆಗೆ ಒಪ್ಪಿಗೆ
  8. 139 ಕೈದಿಗಳನ್ನ ಸನ್ನಡತೆ ಆಧಾರದಲ್ಲಿ ಬಿಡುಗಡೆಗೆ ರಾಜ್ಯಪಾಲರಿಗೆ ಶಿಫಾರಸು
  9. ಬೆಳೆ ಸರ್ವೆಗೆ ಹೊಸ ಆ್ಯಪ್ ರಚನೆಗೆ ಒಪ್ಪಿಗೆ

Leave a Reply

error: Content is protected !!

Discover more from VIJAYAPATHA.IN

Subscribe now to keep reading and get access to the full archive.

Continue reading

LATEST
ಕ್ರೀಡಾಪಟುಗಳಿಗೆ ಕೊಡುವ ಏಕಲವ್ಯ ಪ್ರಶಸ್ತಿ ಮುಂದುವರಿಸಲಿ: ಶೋಭಾ ನಾರಾಯಣ್ ಬಿಡದಿಯಿಂದ ಹೆದ್ದಾರಿಯಲ್ಲೇ ಮುಂದೆ ಬಂದರೆ ನಿಮಗೆ ಟೋಲ್‌ ಬರೆ ಗ್ಯಾರಂಟಿ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಹೊತ್ತಿ ಉರಿದ ಸ್ಕಾರ್ಪಿಯೋ ಕಾರು KSRTC ಕನಕಪುರ ಬಸ್‌ ನಿಲ್ದಾಣದಲ್ಲಿ ವಿಕಲ ಚೇತನರಿಂದ ₹700 ವಸೂಲಿ, ಕಂಡಕ್ಟರ್ಸ್‌ ಕೊಡಬೇಕು ₹10 : ಟಿಸಿಗೆ ಡಿಎಂ ಸಾಥ್... ಹೆಚ್ಚುವರಿ ಬಡ್ಡಿ ವಿಧಿಸುವ ನೋಂದಾಯಿತ ಲೇವಾದೇವಿಸಂಸ್ಥೆಗಳ ವಿರುದ್ಧ ದೂರು ನೀಡಿ KSRTC: 38+13 ತಿಂಗಳ ವೇತನ ಹಿಂಬಾಕಿ ಯಾವಾಗ ಬರುತ್ತದೆ ಒಕ್ಕೂಟದ ವಿರುದ್ಧ ನೌಕರರು ಕಿಡಿ BMTC: ಅಪಘಾತದಲ್ಲಿ ಮೃತಪಟ್ಟ ನೌಕರರ ಕುಟುಂಬಕ್ಕೆ ₹1 ಕೋಟಿ ಪರಿಹಾರ ಚೆಕ್‌ ವಿತರಿಸಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸಾರಿಗೆ ನಿವೃತ್ತ ನೌಕರರಿಗೆ ಮತ್ತೊಮ್ಮೆ ಮೊಗದೊಮ್ಮೆ ನಿರಾಸೆ: ಭಾರಿ ಆಕ್ರೋಶಗೊಂಡ EPS ನಿವೃತ್ತರು ಕಾರು ಡೋರ್‌ಗೆ ಬೈಕ್‌ ಗುದ್ದಿ ಕೆಳಗೆ ಬಿದ್ದ ಮಹಿಳೆ ಮೇಲೆ ಹರಿದ ಬಿಎಂಟಿಸಿ ಬಸ್‌ ನಾಟಿ ಕೋಳಿ ಸಾರಿನ ಜತೆ ರಾಗಿಮುದ್ದೆ ನುಂಗಿದವರಿಗೆ ಗೊತ್ತು ಅದರ ಗಮ್ಮತ್ತು