ಬೆಂಗಳೂರು: ಸಂಪೂರ್ಣ ನಾಡು ಆರ್ಥಿಕವಾಗಿ ಸಬಲವಾಗಬೇಕು. ಜತೆಗೆ ಸ್ವಾವಲಂಬಿ ಸ್ವಾಭಿಮಾನದ ಬದುಕಿಗೆ ಸೂರು ಅವಶ್ಯಕ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಿ ಮಾತನಾಡಿದ ಅವರು, ಆರ್ಥಿಕವಾಗಿ ಸಬಲರಾದರೇ ಮಾತ್ರ ನಾಡಕಟ್ಟಲು ಸಾಧ್ಯ. ಬಡವಾರಾಗಿ ಹುಟ್ಟಿದ ಮೇಲೆ ಬಡವರಾಗಿ ಸಾಯಬೇಕೆಂಬ ನಿಯಮವಿಲ್ಲ ಎಲ್ಲರೂ ಪರಿಶ್ರಮದಿಂದ ಏಳಿಗೆ ಕಾಣಲು ಸಾಧ್ಯ ಎಂದರು.
ಇನ್ನು ಸ್ವಾವಲಂಬಿ ಸ್ವಾಭಿಮಾನದ ಬದುಕಿಗೆ ಸೂರು ಅವಶ್ಯಕ. ಅಶೋಕ್ ನೀಡಿರುವುದು ಕೇವಲ ಹಕ್ಕುಪತ್ರ ಅಲ್ಲ. ಮನಸ್ಸಿನ ನೆಮ್ಮದಿ, ಇದು ಕೇವಲ ನಮ್ಮ ಕಾಯಕ ಅಲ್ಲ ನಮ್ಮ ಪುಣ್ಯ. 1.50 ಲಕ್ಷಕ್ಕಿಂತ ಹೆಚ್ಚು ತಾಂಡಾ ಜನರಿಗೆ ಹಕ್ಕುಪತ್ರ ವಿತರಿಸಿದ್ದೇವೆ ಎಂದು ತಿಳಿಸಿದರು.
![](https://vijayapatha.in/wp-content/uploads/2023/03/20-Mar-bjp-bsb-blr-300x163.jpg)
ಬಡವರ ಕನಸನ್ನು ನನಸು ಮಾಡುವುದು ನಮ್ಮ ಗುರಿ. ಜನರ ಕ್ಷೇಮಾಭಿವೃದ್ದಿಗಾಗಿ ನಾವು ರಾಜಕೀಯ ಮಾಡುತ್ತಿದ್ದೇವೆ. ಜನರಿಗೆ ಹತ್ತಿರವಾಗುವ ಯೋಜನೆಗಳನ್ನು ನೀಡಿದ್ದೇವೆ. ಜನರ ಸಮಸ್ಯೆ ಪರಿಹಾರಕ್ಕಾಗಿ ಸರ್ಕಾರ ಕೆಲಸ ಮಾಡುತ್ತಿದೆ ಎಂದು ಹೇಳಿದರು.
ಜಲಜೀವನ್ ಯೋಜನೆ ಮೂಲಕ ಪ್ರತಿಮನೆಗೂ ಕುಡಿಯುವ ನೀರು ಪೂರೈಸಲಾಗುತ್ತಿದೆ. ರೈತರ ಮಕ್ಕಳಿಗೆ ವಿದ್ಯಾನಿಧಿ ಯೋಜನೆ ಜಾರಿ ಮಾಡಿದ್ದೇವೆ. ಬಡವರ ಮಕ್ಕಳು ಮುಂದೆ ಬರಬೇಕು ನಿಮ್ಮ ಮಕ್ಕಳು ಶಿಕ್ಷಣ ಪಡೆದು ಈ ವೇದಿಕೆಯಲ್ಲಿ ಕುಳಿತುಕೊಳ್ಳಬೇಕು. ಆತ್ಮಸ್ಥೈರ್ಯದಿಂದ ಮುನ್ನುಗ್ಗಿ ಬದುಕು ಕಟ್ಟಿಕೊಳ್ಳಬೇಕು ಎಂದು ಕರೆ ನೀಡಿದರು.
![](https://vijayapatha.in/wp-content/uploads/2024/02/QR-Code-VP-1-1-300x62.png)