CrimeNEWSಬೆಂಗಳೂರು

ಸಾರಿಗೆ ನೌಕರರಿಗೆ ಸೈಟ್‌ ಧೋಖಾ ಆರೋಪ ಸುಳ್ಳು ಎಂದ ಮೇಟಿ- ಹಾಗಿದ್ದರೆ ಚರ್ಚೆಗೆ ಬನ್ನಿ ಎಂದು ಬಹಿರಂಗ ಆಹ್ವಾನ ನೀಡಿದ ರೇಣುಕಾನಂದ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಸಾರಿಗೆ ನೌಕರರಿಗೆ ನಿವೇಶನ ಕೊಡುವುದಾಗಿ ನಂಬಿಸಿ ನಕಲಿ ದಾಖಲೆ ಸೃಷ್ಟಿಸಿ ಕೋಟಿ ಕೋಟಿ ರೂಪಾಯಿ  ವಂಚಿಸಿರುವುದು ಸುಳ್ಳು ಎಂದಾದರೆ ಬಹಿರಂಗ ಚರ್ಚೆಗೆ ಬನ್ನಿ ಎಸ್‌.ಜೆ. ಮೇಟಿಯವರೆ ಎಂದು ಸಾರಿಗೆ ನೌಕರರಾದ ರೇಣುಕಾನಂದ ಎಂಬುವರು ಬಹಿರಂಗ ಆಹ್ವಾನ ನೀಡಿದ್ದಾರೆ.

ಅಲ್ಲದೆ ಇದು ಸುಳ್ಳಾಗಿದ್ದರೆ, ಮೊದಲು ಮಾಧ್ಯಮದ ಮೇಲೆ ಕೇಸ್‌ ಹಾಕಿ, ಇದು ಸುಳ್ಳಾ ಹಾಗಾದರೆ ತಹಸೀಲ್ದಾರ್‌ ಅವರು ನೋಂದಣಿ ಮಾಡಬೇಡಿ ಎಂದು ಆದೇಶ ಹೊರಡಿಸಿರುವುದು ಸುಳ್ಳಾ, ಕೆಇಬಿಯವರಿಗೆ ವಿದ್ಯುತ್‌ ಕೊಡಬೇಡಿ ಎಂದು ಹೇಳಿರುವುದು ಸುಳ್ಳಾ ಎಂದು ಜಾಡಿಸಿದ್ದಾರೆ.

ಇನ್ನು ಈ ಬಗ್ಗೆ ಸ್ಪಷ್ಟನೆ ನೀಡಿರುವ ಆರೋಪಿ ಮೇಟಿ ಇದೆಲ್ಲ ಸುಳ್ಳು ಈ ಬಗ್ಗೆ ನಮ್ಮ ವಕೀಲರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದೇವೆ ಎಂದು ಹೇಳಿದ್ದಾನೆ. ಇದರಿಂದ ಕೆರಳಿದ ರೇಣುಕಾನಂದ ಅವರು ಈ ಬಗ್ಗೆ ಬಹಿರಂಗ ಚರ್ಚೆಗೆ ಬನ್ನಿ ನಿಮ್ಮ ವಂಚನೆ ಸುಳ್ಳ, ಸತ್ಯವ ಇಲ್ಲವೋ ಎಂಬುವುದು ಜನರಿಗೂ ತಿಳಿಯಲಿ ಎಂದು ಕರೆ ನೀಡಿದ್ದಾರೆ.

ಇನ್ನು ಆರೋಪಿ ಮೇಟಿ ಈಗಾಗಲೇ ಸಾರಿಗೆ ಅಧಿಕಾರಿಗಳು ಮತ್ತು ನೌಕರರು ಸೇರಿದಂತೆ 58 ಮಂದಿಗೆ ವಂಚನೆ ಮಾಡಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ.

ಇದು ಸತ್ಯವಾಗಿದ್ದರೆ ಮೇಟಿ ಮತ್ತು ಅವರ ಸಹಚರರಿಂದ ವಂಚನೆಗೆ ಒಳಗಾಗಿರುವವರು ಮೊದಲು ಹೋಗಿ ಪೊಲೀಸ್‌ ಠಾಣೆಯಲ್ಲಿ ದೂರು ನೀಡುವ ಮೂಲಕ  ಕಾನೂನಾತ್ಮಕವಾಗಿ ತಮಗೆ ಬರಬೇಕಿರುವುದನ್ನು ಪಡೆದುಕೊಳ್ಳಬೇಕು. ಯಾರೂ ಕೂಡ ದೂರು ನೀಡಲು ಮುಂದಾಗದಿದ್ದರೆ ವಂಚಕರು ಇನ್ನಷ್ಟು ಜನರನ್ನು ವಂಚಿಸುತ್ತಾರೆ ಎಂದು ಹಿರಿಯ ವಕೀಲರು ಸಲಹೆ ನೀಡಿದ್ದಾರೆ.

Leave a Reply

error: Content is protected !!
LATEST
KSRTC: ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ತುಮಕೂರು ಘಟಕ 1-2ರ ಗುತ್ತಿಗೆ ಚಾಲಕರಿಂದ ದಿಢೀರ್‌ ಪ್ರತಿಭಟನೆ ಮೆಜೆಸ್ಟಿಕ್‌: KSRTC ಟಿಸಿಗಳಿಗೆ ಕಂಡಕ್ಟರ್‌ಗಳು ₹10 ಕೊಟ್ಟರಷ್ಟೆ ಲಾಗ್‌ಶೀಟ್‌ ಮೇಲೆ ಸಹಿ ಇಲ್ಲದಿದ್ದರೆ ಕ್ಲಾಸ್‌ !!? ಕನಸನ್ನು ನನಸಾಗಿಸಲು ಪ್ರಯತ್ನ ಮುಖ್ಯ: ಮಕ್ಕಳಿಗೆ ಡಿಸಿಎಂ ಶಿವಕುಮಾರ್ ಕಿವಿಮಾತು KSRTC: ಸಮಸ್ಯೆ  ಹೇಳಿಕೊಂಡು ಬರುವ ನೌಕರರ ಭೇಟಿ ಮಾಡದೆ ಸೂಟ್‌ಕೇಸ್‌ ತಂದವರೊಂದಿಗೆ ಹರಟೆ ಹೊಡೆಯುವ ಕೆಲ ಸಾಹೇಬರೆನಿಸಿಕೊ... ಆಟೋಟದಲ್ಲಿ ಕೂಟದ ಕಟ್ಟಾಳುಗಳು ಬ್ಯುಸಿ: ನೌಕರರು ನಂಬಿ 4ವರ್ಷ ಕಳೆದರೂ ಈಡೇರೇಯಿಲ್ಲ ಬೇಡಿಕೆ - ದಿಕ್ಕು ತಪ್ಪುತ್ತಿದೆಯೇ ... BMTC ಬಸ್‌-ಟ್ರಕ್‌-ಇನೋವಾ ಕಾರು ನಡುವೆ ಸರಣಿ ಅಪಘಾತ: ಇಬ್ಬರು ಮೃತ, ಬಸ್‌ ಚಾಲಕನ ಸ್ಥಿತಿ ಗಂಭೀರ KSRTC: ಕೂಟದ ಅಜೆಂಡ ದಿಕ್ಕು ತಪ್ಪುತ್ತಿದೆಯೇ - ಸರಿ ಸಮಾನ ವೇತನದ ಪಾಡೇನು? 8ಕಿಮೀ BMTC ಬಸ್‌ ಹಿಂಬಾಲಿಸಿಕೊಂಡು ಬಂದು ಚಾಲಕನ ಮೇಲೆ ಹಲ್ಲೆಮಾಡಿ ಪೊಲೀಸರ ಅತಿಥಿಯಾದ ಬೈಕ್‌ ಸವಾರ ಸರಿ ಸಮಾನ ವೇತನಕ್ಕೆ ಅಡ್ಡಗಾಲು ಹಾಕುವುದನ್ನು ಈಗಲಾದರೂ ಬಿಡಿ- ಸಾರಿಗೆ ಅಧಿಕಾರಿಗಳು-ನೌಕರರ ಆಗ್ರಹ ತೆರಿಗೆ ಬಾಕಿ ಉಳಿಸಿಕೊಂಡಿರುವ ವಸತಿಯೇತರ ಕಟ್ಟಡಗಳಿಗೆ ಬೀಗಹಾಕಿ ವಸೂಲಿ ಮಾಡಿ: ತುಷಾರ್ ಗಿರಿನಾಥ್