ಸಾರಿಗೆ ನೌಕರರಿಗೆ ಸೈಟ್ ಧೋಖಾ ಆರೋಪ ಸುಳ್ಳು ಎಂದ ಮೇಟಿ- ಹಾಗಿದ್ದರೆ ಚರ್ಚೆಗೆ ಬನ್ನಿ ಎಂದು ಬಹಿರಂಗ ಆಹ್ವಾನ ನೀಡಿದ ರೇಣುಕಾನಂದ
ಬೆಂಗಳೂರು: ಸಾರಿಗೆ ನೌಕರರಿಗೆ ನಿವೇಶನ ಕೊಡುವುದಾಗಿ ನಂಬಿಸಿ ನಕಲಿ ದಾಖಲೆ ಸೃಷ್ಟಿಸಿ ಕೋಟಿ ಕೋಟಿ ರೂಪಾಯಿ ವಂಚಿಸಿರುವುದು ಸುಳ್ಳು ಎಂದಾದರೆ ಬಹಿರಂಗ ಚರ್ಚೆಗೆ ಬನ್ನಿ ಎಸ್.ಜೆ. ಮೇಟಿಯವರೆ ಎಂದು ಸಾರಿಗೆ ನೌಕರರಾದ ರೇಣುಕಾನಂದ ಎಂಬುವರು ಬಹಿರಂಗ ಆಹ್ವಾನ ನೀಡಿದ್ದಾರೆ.
ಅಲ್ಲದೆ ಇದು ಸುಳ್ಳಾಗಿದ್ದರೆ, ಮೊದಲು ಮಾಧ್ಯಮದ ಮೇಲೆ ಕೇಸ್ ಹಾಕಿ, ಇದು ಸುಳ್ಳಾ ಹಾಗಾದರೆ ತಹಸೀಲ್ದಾರ್ ಅವರು ನೋಂದಣಿ ಮಾಡಬೇಡಿ ಎಂದು ಆದೇಶ ಹೊರಡಿಸಿರುವುದು ಸುಳ್ಳಾ, ಕೆಇಬಿಯವರಿಗೆ ವಿದ್ಯುತ್ ಕೊಡಬೇಡಿ ಎಂದು ಹೇಳಿರುವುದು ಸುಳ್ಳಾ ಎಂದು ಜಾಡಿಸಿದ್ದಾರೆ.
ಇನ್ನು ಈ ಬಗ್ಗೆ ಸ್ಪಷ್ಟನೆ ನೀಡಿರುವ ಆರೋಪಿ ಮೇಟಿ ಇದೆಲ್ಲ ಸುಳ್ಳು ಈ ಬಗ್ಗೆ ನಮ್ಮ ವಕೀಲರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದೇವೆ ಎಂದು ಹೇಳಿದ್ದಾನೆ. ಇದರಿಂದ ಕೆರಳಿದ ರೇಣುಕಾನಂದ ಅವರು ಈ ಬಗ್ಗೆ ಬಹಿರಂಗ ಚರ್ಚೆಗೆ ಬನ್ನಿ ನಿಮ್ಮ ವಂಚನೆ ಸುಳ್ಳ, ಸತ್ಯವ ಇಲ್ಲವೋ ಎಂಬುವುದು ಜನರಿಗೂ ತಿಳಿಯಲಿ ಎಂದು ಕರೆ ನೀಡಿದ್ದಾರೆ.
ಇನ್ನು ಆರೋಪಿ ಮೇಟಿ ಈಗಾಗಲೇ ಸಾರಿಗೆ ಅಧಿಕಾರಿಗಳು ಮತ್ತು ನೌಕರರು ಸೇರಿದಂತೆ 58 ಮಂದಿಗೆ ವಂಚನೆ ಮಾಡಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ.
ಇದು ಸತ್ಯವಾಗಿದ್ದರೆ ಮೇಟಿ ಮತ್ತು ಅವರ ಸಹಚರರಿಂದ ವಂಚನೆಗೆ ಒಳಗಾಗಿರುವವರು ಮೊದಲು ಹೋಗಿ ಪೊಲೀಸ್ ಠಾಣೆಯಲ್ಲಿ ದೂರು ನೀಡುವ ಮೂಲಕ ಕಾನೂನಾತ್ಮಕವಾಗಿ ತಮಗೆ ಬರಬೇಕಿರುವುದನ್ನು ಪಡೆದುಕೊಳ್ಳಬೇಕು. ಯಾರೂ ಕೂಡ ದೂರು ನೀಡಲು ಮುಂದಾಗದಿದ್ದರೆ ವಂಚಕರು ಇನ್ನಷ್ಟು ಜನರನ್ನು ವಂಚಿಸುತ್ತಾರೆ ಎಂದು ಹಿರಿಯ ವಕೀಲರು ಸಲಹೆ ನೀಡಿದ್ದಾರೆ.