NEWSನಮ್ಮರಾಜ್ಯಲೇಖನಗಳು

ಸಾರಿಗೆ ನೌಕರರ ವೇತನ ಶೇ.27 ರಿಂದ ಶೇ.44 ರಷ್ಟು ಕಡಿಮೆಯಾಗಲು ಕಾರಣವೇನು..?

ವಿಜಯಪಥ ಸಮಗ್ರ ಸುದ್ದಿ

ಸಾರಿಗೆ ನೌಕರರಿಗೆ ಏಕೆ ವೇತನ ಆಯೋಗದಂತೆ ವೇತನವನ್ನು ನೀಡಲು ಸಾಧ್ಯವಿಲ್ಲ..? ಸಾಧ್ಯವಿಲ್ಲವಾಗಿದ್ದರೆ, ಯಾವ ಕಾನೂನು ಅಡ್ಡಿಯಾಗಿವುದು..? ಅಡ್ಡಿ ಯಾಗಿರುವ/ ಆಗಬಹುದಾದ ಕಾನೂನುಗಳು ನೌಕರರ ಕಠಿಣ ಪರಿಶ್ರಮ & ಅವರ ಪ್ರಸ್ತುತ ಜೀವನ ನಿರ್ವಹಣ ವೆಚ್ಚದ ಹಿತದೃಷ್ಟಿಯಿಂದ ಬದಲಾಯಿಸಲು ಅಸಾಧ್ಯವೆ…? ಅಸಾಧ್ಯವೆಂದಾದರೆ ರಾಜ್ಯದಲ್ಲಿ ಇದುವರೆಗೂ ಯಾವುದೇ ಕಾನೂನುಗಳನ್ನು ಬದಲಾಯಿಸಲಾಗಿಲ್ಲವೆ…?

ರಾಜ್ಯದ ಎಲ್ಲ 76 ನಿಗಮ ಮಂಡಳಿಗಳಿಗೆ ಪ್ರಮುಖ ಇಲಾಖೆಗಳಿಗೆ ಪೂರಕವಾಗಿ ಕಾರ್ಯನಿರ್ವಹಿಸುವ ಜವಾಬ್ದಾರಿಯನ್ನು  ನೀಡಲಾಗಿದೆ. ಸಾರ್ವಜನಿಕ ಉದ್ದಮೆಗಳ ಇಲಾಖೆಯನ್ನು ರೂಪಿಸಿ, ಅದರ ನಿರ್ದೇಶನದನ್ವಯ, ಮೂಲ ಇಲಾಖೆಯ ಅಡಿಯಲ್ಲಿ ಹಾಗೂ ಈ ನಿಗಮಗಳನ್ನು ಕೈಗಾರಿಕಾ ಅಧಿನಿಯಮಕ್ಕೆ ಒಳಪಡಿಸಿ ಕಾರ್ಯ ನಿರ್ವಹಿಸಲು ಅನುವು ಮಾಡಿಕೊಡಲಾಗಿದೆ. ಇವುಗಳಲ್ಲಿ ನಮ್ಮ ಸಾರಿಗೆ ನಿಗಮನೂ ಕೂಡ ಒಂದು.

ನಮ್ಮ 4 ಸಾರಿಗೆ ನಿಗಮಗಳು, ಕೆ.ಪಿ.ಟಿ.ಸಿ.ಎಲ್., ಬಿ.ಡಬ್ಲ್ಯೂಎಸ್.ಎಸ್.ಬಿ., ಚಿನ್ನದ ಗಣಿ ನಿಗಮಗಳು ಹಾಗೂ ಇತರೆ ಕೆಲವೇ ಕೆಲವು ನಿಗಮಗಳನ್ನು ಹೊರತುಪಡಿಸಿ ಇನ್ನುಳಿದ 72 ನಿಗಮ-ಮಂಡಳಿಗಳಲ್ಲಿ ವೇತನ ಆಯೋಗದನ್ವಯವೇ ವೇತನವನ್ನು ನೀಡಲಾಗುತ್ತಿದೆ. ಈ ಬಗ್ಗೆ ನಿಮಗೆ ಗೊತ್ತಿಲ್ಲದಿದ್ದಲ್ಲಿ ಅಥವಾ ಅನುಮಾನ ವಿದ್ದಲ್ಲಿ ಸಮೀಪದ ಯಾವುದಾರು ನಿಗಮದ ಕಚೇರಿಗೆ ಹೋಗಿ ಭೇಟಿ ಮಾಡಿ ತಿಳಿದುಕೊಂಡು ಅದರ ಪೂರಕ ದಾಖಲೆಯನ್ನು ಪಡೆದುಕೊಳ್ಳಬಹುದು.

ಇನ್ನು ಹಾಗಾದರೆ ಇತರೆ ನಿಗಮ-ಮಂಡಳಿಗಳ ನೌಕರರಿಗೆ ವೇತನ ಆಯೋಗದನ್ವಯ ವೇತನ ನೀಡುವ ಕಾನೂನು, ಯಾವ ಕಾನೂನು ಅಡಿಯಲ್ಲಿ ಜಾರಿಗೆ ತರಲಾಗಿದೆ…? ಆ ನಿಗಮ-ಮಂಡಳಿಗಳು ಅನುಸರಿಸಿದ ಕಾನೂನುಗಳನ್ನು ಸಾರಿಗೆ ಸಂಸ್ಥೆಗಳಲ್ಲಿ ಅಳವಡಿಸಲು ಏಕೆ ಸಾಧ್ಯವಿಲ್ಲ…?

ಸಾರಿಗೆ ನಿಗಮದಲ್ಲಿ  27-09-1981 ಕೈಗಾರಿಕಾ ಒಪ್ಪಂದದ ಕಂಡಿಕೆ 7 ರಲ್ಲಿ ನೌಕರರಿಗೆ ಉಪಧನ ನಿಯಮಾವಳಿ & ಉಪಧನ ಕಾಯ್ದೆ-1972 ರಂತೆ ಎರಡೂ ರೀತಿಯಲ್ಲಿ ಲೆಕ್ಕಾಚಾರ ಮಾಡಿ ಸಾರಿಗೆ ನೌಕರರಿಗೆ ಯಾವುದು ಹೆಚ್ಚು ಲಾಭದಾಯಕವೋ ಅದರಂತೆ ಉಪಧನ ಪಾವತಿಸಲಾಗುತ್ತಿದ್ದ ನಿಯಮವನ್ನು ರಾಜ್ಯ ಸರ್ಕಾರವು ರಸ್ತೆ ಸಾರಿಗೆ ಸಂಸ್ಥೆಗಳ ಅಧಿನಿಯಗಳು 1950 ರ ನಿಯಮ 3(2) & 34 ರಲ್ಲಿ ನೀಡಲಾದ ಅಧಿಕಾರವನ್ನು ಬಳಸಿ, ಆಗಿದ್ದ ಕೈಗಾರಿಕಾ ಒಪ್ಪಂದ ಈ ನಿಯಮವನ್ನು ರದ್ದು ಪಡಿಸಿ ಸುತ್ತೋಲೆ 1274 ದಿನಾಂಕ 10-04-2002ನ್ನು ಜಾರಿಗೆ ತಂದು ಉಪಧನ ಕಾಯ್ದೆ 1972 ರಂತೆ ಕೇವಲ ಅರ್ಧ ಉಪಧನ ಪಾವತಿಸುವ ನಿಯಮವನ್ನು ಜಾರಿಗೆ ತರಲಾಗಿದೆ.

ರಾಜ್ಯ ಸರ್ಕಾರಕ್ಕೆ ಇರುವ ಈ ಅಧಿಕಾರವನ್ನೆ ಬಳಸಿ, ಸಾರಿಗೆ ನೌಕರರಿಗೆ ವೇತನ ಆಯೋಗದನ್ವಯ ವೇತನ ಪದ್ಧತಿಯನ್ನು ಜಾರಿಗೆ ತರುವ ಸಂಪೂರ್ಣ ಅಧಿಕಾರವನ್ನು ಸರ್ಕಾರ ಹೊಂದಿದೆ ಎಂಬ ಸತ್ಯವನ್ನು ಮುಚ್ಚಿಟ್ಟು, ನೌಕರರಿಗೆ ವೇತನ ಆಯೋಗದಂತೆ ವೇತನ ನೀಡಲು ಸಾಧ್ಯವೇ ಇಲ್ಲಾ & ಕಾನೂನಿನಲ್ಲಿ ಅವಕಾಶವೇ ಇಲ್ಲ ಎಂದು ಸುಳ್ಳು ಹೇಳುತ್ತಿರುವುದು ನಿಮಗೆ ಭೂಷಣವೇ…?

ನಿಮ್ಮ ನಿಲುವು ಕೈಗಾರಿಕಾ ಒಪ್ಪಂದದಂತೆ ವೇತನ ಪರಿಷ್ಕರಣೆಯಾಗಬೇಕು ಎಂದಾದರೆ, ಸಾರಿಗೆ ನೌಕರರಿಗೆ ವೇತನ ಒಪ್ಪಂದದಿಂದ ಹೆಚ್ಚು ಆರ್ಥಿಕ ಲಾಭವೋ..? ಅಥವಾ ವೇತನ ಆಯೋಗದಿಂದ ಹೆಚ್ಚು ಆರ್ಥಿಕ ಲಾಭವೋ..? ನಿಮ್ಮ ನಿಲುವಿನಂತೆ ಕೈಗಾರಿಕಾ ಒಪ್ಪಂದದಿಂದ ಹೆಚ್ಚು ಲಾಭವೆನ್ನುವುದಾದರೆ 1962 ರಿಂದ 2016 ರವರೆಗೆ ಒಟ್ಟು 12 ಬಾರಿ ಕೈಗಾರಿಕಾ ಒಪ್ಪಂದದಿಂದಾದ ಸಾರಿಗೆ ನೌಕರರಿಗೆ ಹೆಚ್ಚಾದ ವೇತನಕ್ಕೂ ಹಾಗೂ ಸರ್ಕಾರಿ ನೌಕರರಿಗೆ ಇದುವರೆಗೆ ಕೇವಲ 6 ಬಾರಿ ಮಾತ್ರ ವೇತನ ಆಯೋಗದಂತೆ ವೇತನ ಹೆಚ್ಚಳಕ್ಕೂ ಹೊಲಿಸಿದಲ್ಲಿ ಸಾರಿಗೆ ನೌಕರರ ವೇತನವು 27% ರಿಂದ 44% ರಷ್ಟು ಕಡಿಮೆಯಾಗಲು ಕಾರಣವೇನು..? ಇದರ ಕುರಿತು ನಿಮ್ಮ ನಿಲುವೇನು..? ತಿಳಿಸಿರಿ.

ಈ ಮೇಲಿನ ಎಲ್ಲ ಕಾನೂನಾತ್ಮಕ ಅವಕಾಶ ಹಾಗೂ ಸಾಕ್ಷ್ಯವನ್ನು ಗಮನಿಸಿಯೂ ತಾವು ವೇತನ ಒಪ್ಪಂದ ಎಂಬ ಅವೈಜ್ಞಾನಿಕ ಪದ್ಧತಿಗೆ ಜೋತುಬಿದ್ದಲ್ಲಿ, ತಮ್ಮ ನಡೆಯನ್ನು…. ಮಾನಸಿಕ ಬಡತನವೋ ಅಥವಾ ಮೊಂಡುತನವೋ ಅಥವಾ ಅಜ್ಞಾನದ ಪರಮಾವಧಿಯೋ ಎಂದು ಸಾರಿಗೆ ನೌಕರರು ತಿಳಿದುಕೊಳ್ಳುತ್ತಾರೆ ಯೋಚಿಸಿರಿ ನೂರು ಬಾರಿ ಯೋಚಿಸಿರಿ……!!!!

l ಹೆಸರು ಬೇಡ, ಸಾರಿಗೆ ನೌಕರ

Leave a Reply

error: Content is protected !!

Discover more from VIJAYAPATHA.IN

Subscribe now to keep reading and get access to the full archive.

Continue reading

LATEST
ಕ್ರೀಡಾಪಟುಗಳಿಗೆ ಕೊಡುವ ಏಕಲವ್ಯ ಪ್ರಶಸ್ತಿ ಮುಂದುವರಿಸಲಿ: ಶೋಭಾ ನಾರಾಯಣ್ ಬಿಡದಿಯಿಂದ ಹೆದ್ದಾರಿಯಲ್ಲೇ ಮುಂದೆ ಬಂದರೆ ನಿಮಗೆ ಟೋಲ್‌ ಬರೆ ಗ್ಯಾರಂಟಿ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಹೊತ್ತಿ ಉರಿದ ಸ್ಕಾರ್ಪಿಯೋ ಕಾರು KSRTC ಕನಕಪುರ ಬಸ್‌ ನಿಲ್ದಾಣದಲ್ಲಿ ವಿಕಲ ಚೇತನರಿಂದ ₹700 ವಸೂಲಿ, ಕಂಡಕ್ಟರ್ಸ್‌ ಕೊಡಬೇಕು ₹10 : ಟಿಸಿಗೆ ಡಿಎಂ ಸಾಥ್... ಹೆಚ್ಚುವರಿ ಬಡ್ಡಿ ವಿಧಿಸುವ ನೋಂದಾಯಿತ ಲೇವಾದೇವಿಸಂಸ್ಥೆಗಳ ವಿರುದ್ಧ ದೂರು ನೀಡಿ KSRTC: 38+13 ತಿಂಗಳ ವೇತನ ಹಿಂಬಾಕಿ ಯಾವಾಗ ಬರುತ್ತದೆ ಒಕ್ಕೂಟದ ವಿರುದ್ಧ ನೌಕರರು ಕಿಡಿ BMTC: ಅಪಘಾತದಲ್ಲಿ ಮೃತಪಟ್ಟ ನೌಕರರ ಕುಟುಂಬಕ್ಕೆ ₹1 ಕೋಟಿ ಪರಿಹಾರ ಚೆಕ್‌ ವಿತರಿಸಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸಾರಿಗೆ ನಿವೃತ್ತ ನೌಕರರಿಗೆ ಮತ್ತೊಮ್ಮೆ ಮೊಗದೊಮ್ಮೆ ನಿರಾಸೆ: ಭಾರಿ ಆಕ್ರೋಶಗೊಂಡ EPS ನಿವೃತ್ತರು ಕಾರು ಡೋರ್‌ಗೆ ಬೈಕ್‌ ಗುದ್ದಿ ಕೆಳಗೆ ಬಿದ್ದ ಮಹಿಳೆ ಮೇಲೆ ಹರಿದ ಬಿಎಂಟಿಸಿ ಬಸ್‌ ನಾಟಿ ಕೋಳಿ ಸಾರಿನ ಜತೆ ರಾಗಿಮುದ್ದೆ ನುಂಗಿದವರಿಗೆ ಗೊತ್ತು ಅದರ ಗಮ್ಮತ್ತು