NEWSಉದ್ಯೋಗನಮ್ಮಜಿಲ್ಲೆ

ಸ್ವಂತ ಇವಿಗಳೊಂದಿಗೆ ಬೆಂಗಳೂರಿನಲ್ಲಿ ಟ್ಯಾಕ್ಸಿ ಸೇವೆಗೆ ಕ್ವಿಕ್ ರೈಡ್ ಚಾಲನೆ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಭಾರತ – ದೇಶದ ಪ್ರಮುಖ ಕಾರ್ ಪೂಲಿಂಗ್ ವೇದಿಕೆಯಾಗಿರುವ ಕ್ವಿಕ್ ರೈಡ್ (Quick Ride), ಬೆಂಗಳೂರಿನಲ್ಲಿ ಸ್ವಂತ ಎಲೆಕ್ಟ್ರಿಕ್ ವಾಹನಗಳ (ಇವಿ) ಟ್ಯಾಕ್ಸಿ ಸೇವೆಯನ್ನು ಪರಿಚಯಿಸುವುದಾಗಿ ಘೋಷಿಸಿದೆ.

ಈ ಮೂಲಕ ಅಸ್ತಿತ್ವದಲ್ಲಿರುವ ಕಾರ್ ಪೂಲಿಂಗ್ ಸೌಲಭ್ಯದ ಜೊತೆಗೆ, ಸುಸ್ಥಿರ ಸಾರಿಗೆ ಪರಿಹಾರಗಳ ವಲಯದಲ್ಲಿ ಕ್ವಿಕ್ ರೈಡ್ ಪ್ರಮುಖ ಸಂಸ್ಥೆಯಾಗಲಿದೆ. ಅತ್ಯಾಧುನಿಕ ಟಾಟಾ ಟಿಗೊರ್ ಇವಿ ಮಾಡೆಲ್‌ನ 100ಕ್ಕೂ ಹೆಚ್ಚು ಕಾರುಗಳೊಂದಿಗೆ ಈ ಉಪಕ್ರಮಕ್ಕೆ ಚಾಲನೆ ನೀಡಲಾಗುತ್ತಿದ್ದು, ಇದು ಕಂಪನಿಗೆ ಒಂದು ಪ್ರಮುಖ ಮೈಲುಗಲ್ಲಾಗಲಿದೆ.

ಬಾಡಿಗೆ ಚಾಲಕ ಪಾಲುದಾರರ ಸಹಯೋಗದಲ್ಲಿ ಸ್ವಂತ ಎಲೆಕ್ಟ್ರಿಕ್ ವಾಹನ (Own electric vehicle) ಗಳನ್ನು ನಿರ್ವಹಿಸುವ ಮೂಲಕ ಕ್ವಿಕ್ ರೈಡ್ ಇತರ ಕ್ಯಾಬ್ ಅಗ್ರಿಗೇಟರ್ ಸೇವೆಗಳಿಂದ ಭಿನ್ನವಾಗಿರುತ್ತದೆ. ಬೆಂಗಳೂರಿನ ಪ್ರಮುಖ ಸ್ಥಳಗಳಲ್ಲಿ ಎಲೆಕ್ಟ್ರಿಕ್ ಚಾರ್ಜಿಂಗ್ ಸ್ಟೇಷನ್‌ಗಳನ್ನು ಕ್ವಿಕ್ ರೈಡ್ ಹೊಂದಿದೆ.

“ಹೆಚ್ಚು ಪರಿಸರ ಸ್ನೇಹಿ ಸಾರಿಗೆಯ ನಮ್ಮ ದೃಷ್ಟಿಗೆ ಎಲೆಕ್ಟ್ರಿಕ್ ವಾಹನಗಳ ಅಳವಡಿಕೆಯು ಮಹತ್ವದ್ದಾಗಿದೆ. ಕಾರ್‌ ಪೂಲ್ ಅಥವಾ ಹೊಸ ಯೋಜನೆಯಾದ ಎಲೆಕ್ಟ್ರಿಕ್ ಟ್ಯಾಕ್ಸಿಗಳೊಂದಿಗೆ, ಪರಿಸರ-ಸ್ನೇಹಿ ಹಾಗೂ ಗುಣಮಟ್ಟದ ಪ್ರಯಾಣದ ಆಯ್ಕೆಗಳನ್ನು ನಮ್ಮ ಗ್ರಾಹಕರಿಗೆ ಒದಗಿಸಲು ನಾವು ಆದ್ಯತೆ ನೀಡುತ್ತಿದ್ದೇವೆ” ಎಂದು ಕ್ವಿಕ್ ರೈಡ್‌ ಸಿಇಒ ಮತ್ತು ಸಂಸ್ಥಾಪಕ ಕೆ.ಎನ್‌.ಎಂ. ರಾವ್ ಹೇಳಿದರು.

ತನ್ನ ಗ್ರಾಹಕರಿಗೆ ಪ್ರೀಮಿಯಂ ರೈಡ್ ಅನುಭವವನ್ನು ಒದಗಿಸಲು ಕಂಪನಿಯು ಬದ್ಧವಾಗಿದೆ. ಸಕಾಲದ ಸೇವೆ ಮತ್ತು ನಿಗದಿತ ರೈಡ್‌ಗಳಿಗೆ ಯಾವುದೇ ರದ್ದತಿ ಇಲ್ಲದಿರುವ ಭರವಸೆಯನ್ನು ಕ್ವಿಕ್ ರೈಡ್ ನೀಡುತ್ತದೆ. ಎಲ್ಲ ಸವಾರಿಗಳೂ ಎಸಿ ಸೌಲಭ್ಯ ಹೊಂದಿರುತ್ತವೆ. ಗ್ರಾಹಕರಿಗೆ ಉತ್ತಮ ಸೇವೆ ಸಲ್ಲಿಸಲು ತರಬೇತಿ ಪಡೆದ ವೃತ್ತಿಪರ ಚಾಲಕರನ್ನು ನಿಯೋಜಿಸಲಾಗುತ್ತದೆ.

ಅಸಾಧಾರಣ ಗ್ರಾಹಕ ಅನುಭವದ ಜತೆಗೆ, ತನ್ನ ಚಾಲಕ ಪಾಲುದಾರರಿಗೆ ಅಂತರ್ಗತ ಮತ್ತು ಸಮಾನವಾದ ಆರ್ಥಿಕ ಅವಕಾಶಗಳನ್ನು ರಚಿಸಲು ಕ್ವಿಕ್ ರೈಡ್ ಬದ್ಧವಾಗಿದೆ. ಕಾರು ಖರೀದಿಸುವ ಒತ್ತಡವಿಲ್ಲದೆ ವಾಹನ ಚಲಾಯಿಸಲು ಮತ್ತು ಆದಾಯ ಗಳಿಸಲು ಕಂಪನಿಯು ಅವರಿಗೆ ಅವಕಾಶ ನೀಡುತ್ತದೆ. ಚಾಲಕರು ಯಾವುದೇ ಹೊರೆಗಳಿಲ್ಲದೆ ತಿಂಗಳಿಗೆ ರೂ. 30 ಸಾವಿರ ತನಕ ಗಳಿಸಬಹುದು.

ಬೆಸ್ಟ್ ಟ್ಯಾಕ್ಸಿ @ ಬೆಸ್ಟ್ ಫೇರ್” ತತ್ತ್ವದಿಂದ ಮಾರ್ಗದರ್ಶಿತವಾಗಿ ಕ್ವಿಕ್ ರೈಡ್ ದರ ನಿಗದಿ ಮತ್ತು ನಿರ್ವಹಣೆ ವ್ಯವಸ್ಥೆಯಲ್ಲಿ ಪಾರದರ್ಶಕತೆಯನ್ನು ಕಾಪಾಡಿಕೊಳ್ಳಲಿದೆ. ವಿಪರೀತ ಏರಿಕೆಗಳಿಲ್ಲದೆ ದರಗಳು ಸ್ಥಿರವಾಗಿರುತ್ತವೆ. ಎಲ್ಲರಿಗೂ ಸುಲಭ ಲಭ್ಯ ರೈಡ್-ಶೇರಿಂಗ್ ಸೇವೆಗಳನ್ನು ಒದಗಿಸಲು ಕಂಪನಿಯು ಬದ್ಧವಾಗಿದೆ. ಇವಿಗಳನ್ನು ಪರಿಚಯಿಸುತ್ತಿರುವ ಕಾರಣ ವೆಚ್ಚವು ಕಡಿಮೆಯಾಗಿ, ರೈಡ್-ಶೇರಿಂಗ್ ಇನ್ನಷ್ಟು ಸುಲಭವಾಗುತ್ತದೆ ಎಂದು ನಿರೀಕ್ಷಿಸಲಾಗಿದೆ.

ಸಹ-ಸಂಸ್ಥಾಪಕಿ ಶೋಭನಾ ಬಿ.ಎನ್. ತಾಂತ್ರಿಕ ಅಂಶಗಳ ಕುರಿತು ಮಾತನಾಡಿ, ಎಲೆಕ್ಟ್ರಿಕ್ ವಾಹನ ಸೇವೆಯ ಬಳಕೆಯನ್ನು ಉತ್ಕೃಷ್ಟಗೊಳಿಸಲು ತಂತ್ರಜ್ಞಾನದ ಶಕ್ತಿಯನ್ನು ಕ್ವಿಕ್ ರೈಡ್ ಬಳಸಿಕೊಂಡಿದೆ. ಪ್ರತಿ ಪ್ರವಾಸವನ್ನು ಅತ್ಯುತ್ತಮ ಅನುಭವವನ್ನಾಗಿ ಮಾಡಲು ಪ್ರತಿಯೊಂದು ವಾಹನದ ಚಾರ್ಜ್‌ನ ಸ್ಥಿತಿಗತಿ, ಪಾಳಿ ಸಮಯಗಳು, ಪಿಕ್-ಅಪ್ ಪಾಯಿಂಟ್ ಮುಂತಾದ ಅಂಶಗಳನ್ನು ನಮ್ಮ ಅಲ್ಗಾರಿದಮ್‌ಗಳು ಎಚ್ಚರಿಕೆಯಿಂದ ಪರಿಗಣಿಸುತ್ತವೆ.

ಪ್ರತಿ ಸವಾರಿಯನ್ನೂ ನಮ್ಮ ತಂತ್ರಜ್ಞಾನವು ನಿರಂತರವಾಗಿ ಮೇಲ್ವಿಚಾರಣೆ ಮಾಡುತ್ತಿದ್ದು, ಯಾವುದೇ ಸಂಭಾವ್ಯ ಅಪಾಯಗಳ ಬಗ್ಗೆ ನಿರ್ವಾಹಕರನ್ನು ತಕ್ಷಣವೇ ಎಚ್ಚರಿಸುತ್ತದೆ. ಕ್ವಿಕ್ ರೈಡ್ ಗ್ರಾಹಕ-ಕೇಂದ್ರಿತವಾಗಿದ್ದು, ಬುಕಿಂಗ್ ಸಮಯದಲ್ಲಿ ರೈಡರ್‌ಗಳು ತಮ್ಮ ಆದ್ಯತೆಯ ಮಾರ್ಗವನ್ನು ಆಯ್ಕೆ ಮಾಡಲು, ನಿರ್ದಿಷ್ಟ ಅಗತ್ಯಗಳಿಗೆ ಹೊಂದಿಸಲು ಮತ್ತು ದರವನ್ನು ನಿಗದಿಗೊಳಿಸಲೂ ಅವಕಾಶ ನೀಡುತ್ತದೆ ಎಂದರು.

ಸಹ ಸಂಸ್ಥಾಪಕ ವಿಶಾಲ್ ಮಾತನಾಡಿ, ನಾವು ಪ್ರಯಾಣಿಕರು ಮತ್ತು ಸಹಯೋಗಿ ಚಾಲಕರಿಂದ ಉತ್ತಮ ಪ್ರತಿಕ್ರಿಯೆಯನ್ನು ಪಡೆಯುತ್ತಿದ್ದೇವೆ. ನಮ್ಮ ಸ್ವಂತ ಎಲೆಕ್ಟ್ರಿಕ್ ವಾಹನ ಸೇವೆಯು ಬೆಂಗಳೂರಿನಲ್ಲಿ 12,000ಕ್ಕೂ ಹೆಚ್ಚು ಟ್ಯಾಕ್ಸಿ ಚಾಲಕರೊಂದಿಗೆ ಸಹಯೋಗವನ್ನು ಹೊಂದಿದೆ. ಬೇರೆ ಟ್ಯಾಕ್ಸಿ ಕಂಪನಿಗಳಿಗಿಂತ ಭಿನ್ನವಾಗಿ, ನಮ್ಮ ಕಡಿಮೆ ಮೊತ್ತದ ಕಮಿಷನ್ ಉಳಿಸಿಕೊಂಡು ಸಹಯೋಗಿ ಚಾಲಕರಿಗೆ ಪ್ರಯಾಣ ದರದ 90% ಮೊತ್ತಪನ್ನು ಪಾವತಿಸುತ್ತೇವೆ.

ಟ್ರಿಪ್ ಪೂರ್ಣಗೊಂಡ ಕೂಡಲೇ ಅವರಿಗೆ ಹಣವನ್ನು ಪಾವತಿಸಲಾಗುತ್ತದೆ. ಇದರಿಂದ ಚಾಲಕರೂ ಸಂತೋಷಗೊಂಡು, ಗ್ರಾಹಕರಿಗೆ ಉತ್ತಮ ಸೇವೆ ನೀಡುತ್ತಾರೆ. ಪ್ರಮುಖ ಬುಕಿಂಗ್ ವೇದಿಕೆಗಳಲ್ಲಿ 60 ಮತ್ತು 4.7ಕ್ಕಿಂತ ಹೆಚ್ಚಾಗಿರುವ NPS, ಸೇವೆ ಮತ್ತು ಗುಣಮಟ್ಟಕ್ಕೆ ನಮ್ಮ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ ಎಂದರು.

Leave a Reply

error: Content is protected !!

Discover more from VIJAYAPATHA.IN

Subscribe now to keep reading and get access to the full archive.

Continue reading

LATEST
ನಾನು ಕಾದು ಕುಳಿತಿದ್ದರೂ ಬಸ್‌ ನಿಲ್ಲಿಸಿಲ್ಲ - ಚಾಲಕ, ಕಂಡಕ್ಟರ್‌ ತಿಂಗಳ ಸಂಬಳ ನನಗೆ ನಷ್ಟಪರಿಹಾರ ಕೊಡಿ: ವಕೀಲನ ಒತ್ತ... ಕೆಎಂಎಫ್ ಸಿಬ್ಬಂದಿಗೆ 7ನೇ ವೇತನ ಆಯೋಗ ಜಾರಿ- 2024ರ ಆ.1ರಿಂದಲೇ ಪೂರ್ವಾನ್ವಯ KSRTC ಏಕಸ್ವಾಮ್ಯಕ್ಕೆ ಮೂಗುದಾರ ಹಾಕಿ- ಸರ್ಕಾರದ ಕಾಯ್ದೆ ಸರಿ ಎಂದ ಕೋರ್ಟ್ ಸ್ಮಶಾನ ಜಾಗ ಭೂಗಳ್ಳನಿಗೆ ಬಿಟ್ಟುಕೊಡಲು ಟಿಪ್ಪಣಿ ಮಂಡಿಸಿರುವ ಭ್ರಷ್ಟ ಅಧಿಕಾರಿಗಳು: ಎನ್.ಆರ್.ರಮೇಶ್ ಆರೋಪ ಕ್ರೀಡಾಪಟುಗಳಿಗೆ ಕೊಡುವ ಏಕಲವ್ಯ ಪ್ರಶಸ್ತಿ ಮುಂದುವರಿಸಲಿ: ಶೋಭಾ ನಾರಾಯಣ್ ಬಿಡದಿಯಿಂದ ಹೆದ್ದಾರಿಯಲ್ಲೇ ಮುಂದೆ ಬಂದರೆ ನಿಮಗೆ ಟೋಲ್‌ ಬರೆ ಗ್ಯಾರಂಟಿ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಹೊತ್ತಿ ಉರಿದ ಸ್ಕಾರ್ಪಿಯೋ ಕಾರು KSRTC ಕನಕಪುರ ಬಸ್‌ ನಿಲ್ದಾಣದಲ್ಲಿ ವಿಕಲ ಚೇತನರಿಂದ ₹700 ವಸೂಲಿ, ಕಂಡಕ್ಟರ್ಸ್‌ ಕೊಡಬೇಕು ₹10 : ಟಿಸಿಗೆ ಡಿಎಂ ಸಾಥ್... ಹೆಚ್ಚುವರಿ ಬಡ್ಡಿ ವಿಧಿಸುವ ನೋಂದಾಯಿತ ಲೇವಾದೇವಿಸಂಸ್ಥೆಗಳ ವಿರುದ್ಧ ದೂರು ನೀಡಿ KSRTC: 38+13 ತಿಂಗಳ ವೇತನ ಹಿಂಬಾಕಿ ಯಾವಾಗ ಬರುತ್ತದೆ ಒಕ್ಕೂಟದ ವಿರುದ್ಧ ನೌಕರರು ಕಿಡಿ