ಹನೂರು : ಹನೂರಿನ ಕ್ರಿಕೆಟ್ ಇತಿಹಾಸದಲ್ಲಿಯೇ ತಾಲೂಕು ಕೇಂದ್ರದಲ್ಲಿ ಮೊದಲ ಬಾರಿಗೆ ಹನೂರು ತಾಲೂಕು ಕ್ರಿಕೆಟ್ ಕ್ಲಬ್ ರಚನೆಯಾಗಿದೆ.
ಗೌರವಾಧ್ಯಕ್ಷರಾಗಿ ಮನ್ಸೂರ್ ಬಾಷಾ, ಅಧ್ಯಕ್ಷರಾಗಿ ಅಭಿಲಾಷ್ ಗೌಡ, ಉಪಾಧ್ಯಕ್ಷರಾಗಿ ಕುಮಾರ್ , ಕಾರ್ಯದರ್ಶಿಯಾಗಿ ರಿಜ್ವಾನ್ ಪಾಷಾ, ಖಜಾಂಜಿಯಾಗಿ ರಿಯಾಜ್ ಪಾಷಾ ಸೇರಿದಂತೆ ಪವನ್, ಶಿವುಕುಮಾರ್, ಇಧ್ರೀಸ್ ಪಾಷಾ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.
ಕ್ಲಬ್‌ನ ಅಧ್ಯಕ್ಷ ಅಭಿಲಾಷ್ ಗೌಡ ಮಾತನಾಡಿ, ನಾವು ಹನೂರು ತಾಲೂಕು ಕೇಂದ್ರದಲ್ಲಿ ಹಲವು ವರ್ಷಗಳ ಕಾಲ ಕ್ರಿಕೆಟ್ ಟೂರ್ನಿಗಳನ್ನು ಆಯೋಜಿಸಿದ್ದೇವೆ. ಆದರೆ ಟೂರ್ನಿಗಳನ್ನು ಆಯೋಜಿಸಿದ್ದರೆ ಮಾತ್ರ ಸಾಲದು ಶಾಶ್ವತವಾಗಿ ಕ್ರಿಕೆಟ್ ಕ್ಲಬ್ ತೆರೆದು
ಯುವ ಕ್ರಿಕೆಟ್ ಪಟುಗಳಿಗೆ ಉತ್ತಮ ವೇದಿಕೆಯನ್ನು ನಿರ್ಮಿಸಬೆಕೆಂಬುದು ನಮ್ಮೆಲ್ಲರ ಕನಸ್ಸಾಗಿತ್ತು. ಅದು ಎಲ್ಲರ ಸಹಕಾರದಿಂದ ಪ್ರಸ್ತುತ ಈಡೇರಿದೆ ಎಂದರು.
ಮುಂದಿನ ದಿನಗಳಲ್ಲಿ ಎಲ್ಲ ಸದಸ್ಯರ ಅಭಿಪ್ರಾಯಗಳಂತೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಿ ಕ್ರಿಕೆಟ್ ಪಟುಗಳಲ್ಲಿ ಸುಪ್ತವಾಗಿ ಅಡಗಿರುವ ಪ್ರತಿಭೆಯನ್ನು ಹೊರಹಾಕಲು ಸೂಕ್ತ ವೇದಿಕೆಯನ್ನು ಕಲ್ಪಿಸಿಕೊಡುತ್ತೇವೆ ಎಂದು ಭರವಸೆಯ ನುಡಿಗಳನ್ನಾಡಿದರು.
ಗೌರವ ಅಧ್ಯಕ್ಷ ಮನ್ಸೂರ ಭಾಷಾ ಮಾತನಾಡಿ, ಹನೂರಿನಲ್ಲಿ ಕ್ರಿಕೆಟ್ ಕ್ಲಬ್ ತೆರೆದಿರುವುದು ಒಂದು ಒಳ್ಳೆಯ ಬೆಳವಣಿಗೆ ಉತ್ತಮ ಗುರಿಯೊಂದಿಗೆ ಏನೆ ಅಡೆತಡೆ ಬಂದರೂ ಯಶಸ್ವಿಯತ್ತ ಸಾಗಲಿ ಎಂದು ಶುಭ ಕೋರಿದರು.
![](https://vijayapatha.in/wp-content/uploads/2024/02/QR-Code-VP-1-1-300x62.png)