ಯಾದಗಿರಿ: ಕೊರೊನಾ ವೈರಸ್ ಸೋಂಕು ಹರಡದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಲಾಕ್‍ಡೌನ್ ಅವಧಿಯು ಮೇ 17ರವರೆಗೆ ವಿಸ್ತರಿಸಿದ್ದು ಹಾಗೂ 2020-21ನೇ ಸಾಲಿನ ಅಂಗನವಾಡಿ ಕೇಂದ್ರದ ಬೇಸಿಗೆ ರಜೆಯು ಮೇ 30ರವರೆಗೆ ಘೋಷಿಸಲಾಗಿರುತ್ತದೆ.
ಈ ರಜೆ ಅವಧಿಯಲ್ಲಿ ಅಂಗನವಾಡಿ ಕೇಂದ್ರದ ಫಲಾನುಭವಿಗಳಿಗೆ ಬಳಸುವ ಆಹಾರ ಪದಾರ್ಥಗಳನ್ನು ಲೆಕ್ಕ ಹಾಕಿ ಮನೆಗೆ ವಿತರಿಸಲು ನಿರ್ದೇಶಿಸಲಾಗಿದೆ. ಅದರಂತೆ 6 ತಿಂಗಳಿಂದ 6 ವರ್ಷದೊಳಗಿನ ಮಕ್ಕಳಿಗೆ ಮತ್ತು ಗರ್ಭಿಣಿ, ಬಾಣಂತಿಯರಿಗೆ ಆಹಾರ ಪದಾರ್ಥಗಳನ್ನು ಮನೆಗೆ ಬಾಗಿಲಿಗೆ ವಿತರಿಸಲು ಆದೇಶಿಸಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಪ್ರಭಾಕರ ತಿಳಿಸಿದ್ದಾರೆ.
ಆದೇಶದ ಪ್ರಕಾರ 6 ತಿಂಗಳಿಂದ 3 ವರ್ಷದೊಳಗಿನ ಮಕ್ಕಳಿಗೆ ನ್ಯೂಟ್ರಿಮಿಕ್ಸ್, ಹಾಲಿನಪುಡಿ, ಸಕ್ಕರೆ, ಸಾಧಾರಣಾ ಮತ್ತು ತೀವ್ರ ಅಪೌಷ್ಟಿಕ ಮಕ್ಕಳಿಗೆ ಮೊಟ್ಟೆ, 3ರಿಂದ 6 ವರ್ಷದೊಳಗಿನ ಮಕ್ಕಳಿಗೆ ಗೋಧಿ ಸಜ್ಜಿಗೆ ಪುಡಿ, ಬೆಲ್ಲಾ, ಶೇಂಗಾ, ಹೆಸರು ಕಾಳು, ಅಕ್ಕಿ, ತೊಗರಿ ಬೇಳೆ, ಹಾಲಿಪುಡಿ, ಸಕ್ಕರೆ, ಮೊಟ್ಟೆ ಹಾಗೂ ಗರ್ಭಿಣಿ ಮತ್ತು ಬಾಣಂತಿಯರಿಗೆ ಬೆಲ್ಲಾ, ಶೇಂಗಾ, ಅಕ್ಕಿ, ತೊಗರಿ ಬೇಳೆ, ಹಾಲಿನಪುಡಿ, ಸಕ್ಕರೆ, ಮೊಟ್ಟೆಗಳನ್ನು ಫಲಾನುಭವಿಗಳ ಮನೆ ಬಾಗಿಲಿಗೆ ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರ ಮೂಲಕ ವಿತರಿಸಲು ಸೂಚಿಸಲಾಗಿದೆ.
ಆಹಾರ ಸಾಮಗ್ರಿಗಳು ತಲುಪದಿರುವ ಫಲಾನುಭವಿಗಳು ಸಮೀಪದ ಅಂಗನವಾಡಿ ಕೇಂದ್ರದ ಕಾರ್ಯಕರ್ತೆಯನ್ನು ಸಂಪರ್ಕಿಸಲು ತಿಳಿಸಿದ್ದಾರೆ.
ಆಹಾರ ಸಾಮಗ್ರಿಗಳು ತಲುಪದಿರುವ ಫಲಾನುಭವಿಗಳು ಸಮೀಪದ ಅಂಗನವಾಡಿ ಕೇಂದ್ರದ ಕಾರ್ಯಕರ್ತೆಯನ್ನ ಭೇಟಿ ಮಾಡಿ ಉಪಯೋಗ ಪಡೆಯಿರಿ