ಬೆಂಗಳೂರು: ರಾಜ್ಯದಲ್ಲಿ ಬೆಳಗ್ಗೆ 8 ಪ್ರಕರಣ ಪತ್ತೆಯಾಗಿತ್ತು ಮತ್ತೆ ಸಂಜೆವೇಳೆಗೆ ಮೂವರಿಗೆ ಕೋವಿಡ್-19 ಸೋಂಕು ಇರುವುದು ದೃಢಪಟ್ಟಿದ್ದು, ಈ ಮೂಲಕ ಹೊಸದಾಗಿ 11 ಪ್ರಕರಣಗಳು ಇಂದು ಪತ್ತೆಯಾಗಿದ್ದು ಸೋಂಕಿತರ ಸಂಖ್ಯೆ 523ಕ್ಕೆ ಏರಿಕೆಯಾಗಿದೆ.
ಬೆಳಗ್ಗೆ ಎಂಟು ಪ್ರಕರಣಗಳು ಪತ್ತೆಯಾಗಿದ್ದವು ಇದೀಗ ಬಾಗಲಕೋಟೆಯಲ್ಲಿ 3 ಪ್ರಕರಣಗಳು ಪತ್ತೆಯಾಗಿದ್ದು ಒಟ್ಟಾರೆ ಇಂದು ಒಂದೇ ದಿನ 11 ಪ್ರಕರಣಗಳು ಪತ್ತೆಯಾಗಿವೆ.
ಬೆಳಗ್ಗೆ ಕಲಬುರಗಿಯಲ್ಲಿ 6, ಬೆಂಗಳೂರು ಮತ್ತು ಗದಗದಲ್ಲಿ ತಲಾ ಒಂದು ಪ್ರಕರಣ ಪತ್ತೆಯಾಗಿತ್ತು. ಇದೀಗ ಬಾಗಲಕೋಟೆಯಲ್ಲಿ 3 ಪ್ರಕರಣ ಪತ್ತೆಯಾಗಿವೆ.
ರೋಗಿ ಸಂಖ್ಯೆ 521 – 20 ಯುವತಿಯಲ್ಲಿ ಕೊರೊನಾ ಸೋಂಕು ಪತ್ತೆಯಾಗಿದ್ದು ರೋಗಿ ಸಂಖ್ಯೆ 523, 22 ವರ್ಷದ ಯುವಕ. ಇವರಿಬ್ಬರಿಗೂ ರೋಗಿ ಸಂಖ್ಯೆ 381ರ ಸಂಪರ್ಕದಿಂದ ತಲುಗಿದೆ.
ರೋಗಿ ಸಂಖ್ಯೆ 522 – 11 ವರ್ಷದ ಬಾಲಕ. ಇತನಿಗೆ ರೋಗಿ ಸಂಖ್ಯೆ 456ರಿಂದ ಸೋಂಕು ತಗುಲಿದೆ. ರಾಜ್ಯದಲ್ಲಿ ಕೊರೋನಾ ಸೋಂಕಿಗೆ ಇಲ್ಲಿಯವರೆಗೂ 20 ಮಂದಿ ಬಲಿಯಾಗಿದ್ದಾರೆ. ಇನ್ನು 207 ಮಂದಿ ಗುಣಮುಖರಾಗಿದ್ದಾರೆ.