ಬೀಜಿಂಗ್: ಕೊರೊನಾ ವೈರಸ್ನಂತೆ ಚೀನಾದಲ್ಲಿ ಮತ್ತೊಂದು ವೈರಸ್ಗೆ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಯುನ್ನಾನ್ ಪ್ರಾಂತದಲ್ಲಿ ನಡೆದಿದೆ.
ಕೊವಿಡ್-19 ಕೊರೊನಾ ಸೋಂಕು ಈಗಾಲೇ ವಿಶ್ವಾದ್ಯಂತ ಸುಮಾರು 16 ಸಾವಿರ ಮಂದಿಯನ್ನು ಬಲಿ ತೆಗೆದುಕೊಂಡಿದ್ದು, ಅದರ ಬೆನ್ನಲೇ ಈ ಹೊಸ ವೈರಸ್ ಕಾಡಿಸಿಕೊಂಡಿರುವುದು ಮತ್ತೆ ಇಡೀ ಪ್ರಪಂಚವನ್ನೇ ರೋಗದ ಬಾಧೆಗೆ ಇನ್ನಷ್ಟು ನೂಕುತ್ತಿದೆ.
ಇನ್ನೂ ಕೊರೊನಾದಿಂದ ಎಚ್ಚೆತ್ತುಕೊಳ್ಳಲಾಗದೆ ಎಲ್ಲಾ ಕೆಲಸಗಳಿಗೂ ವಿರಾಮ ನೀಡಿ ಮನೆಯಿಂದ ಹೊರಬರದಿದ್ದರೂ ಬಾಧಿಸುತ್ತಿರುವ ಕೊರೊನಾದಿಂದ ವಿಶ್ವದ 180 ದೇಶದ ಜನ ತತ್ತರಿಸಿ ಹೋಗುತ್ತಿದ್ದಾರೆ. ಈ ನಡುವೆ ಹೊಸ ಹ್ಯಾಂಟ ವೈರಸ್ ಕಾಣಿಸಿಕೊಂಡಿದ್ದು, ಈ ವೈರಸ್ಗೆ ಬಸ್ನಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿ ಬಲಿಯಾಗಿದ್ದಾನೆ.
ಕೆಲಸ ನಿಮಿತ್ತ ಯುನ್ನಾನ್ ಪ್ರಾಂತ್ಯಂದಿದ ಶಂಡಾಂಗ್ ಪ್ರಾಂತ್ಯಕ್ಕೆ ಪ್ರಯಾಣ ಬೆಳೆಸುತ್ತಿದ್ದಾಗ ಬಸ್ನಲ್ಲಿ ಮೃತಪಟ್ಟಿದ್ದಾನೆ. ಈತನಿಗೆ ಇದ್ದ ವೈರಸ್ ಬಸ್ನಲ್ಲಿ ಪ್ರಯಾಣಿಸುತ್ತಿದ್ದ ಇತರ 30 ಮಂದಿ ಪ್ರಯಾಣಿಕರಿಗೂ ಈ ವೈರಸ್ ಸೋಂಕಿರುವ ಶಂಕೆ ವ್ಯಕ್ತವಾಗಿದೆ.
ಹ್ಯಾಂಟ (Hanta virus) ವೈರಸ್ ಸಾಮಾನ್ಯವಾಗಿ ಇಲಿಯಿಂದ ಬರುತ್ತದೆ ಎಂದು ವೈದ್ಯರು ಹೇಳಿದ್ದು, ಇದು ಮನುಷ್ಯರಿಂದ ಮನುಷ್ಯರಿಗೆ ಹರಡುವುದಿಲ್ಲ. ಆದರೆ ಇಲಿಗಳ ಮಲ ಮೂತ್ರ ಲಾಲಾರಸ ಸ್ಪರ್ಶಿಸಿ ನಂತರ ಕಣ್ಣು, ಕಿವಿ, ಮೂಗು, ಬಾಯಿ ಮುಟ್ಟಿಕೊಂಡರೆ ಬರುತ್ತದೆ ಎಂದು ತಿಳಿಸಿದ್ದಾರೆ.
ಈ ಸೋಂಕು ತಗುಲಿದರೆ ಜ್ವರ, ತಲೆನೋವು, ಸ್ನಾಯು ಸೆಳೆತ, ಹೊಟ್ಟೆನೋವು,ತಲೆತಿರುಗುವಿಕೆ , ಶೀತ, ವಾಕರಿಕೆ ಮತ್ತು ವಾಂತಿ ಇತರ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ.
ನಂತರದ ದಿನಗಳಲ್ಲಿ ಉಸಿರಾಟದ ತೊಂದರೆ, ಶ್ವಾಸಕೋಶಕ್ಕೆ ನೀರು ತುಂಬಿಕೊಳ್ಳುವುದು. ಇದನ್ನು ಆರಂಭದಲ್ಲೇ ನಿವಾರಿಸಲು ಸಾಧ್ಯವಿದೆ ಎಂದು ವೈದ್ಯರು ಹೇಳಿದ್ದಾರೆ. ಆದರ ಜತೆಗೆ ಇದನ್ನು ಆರಂಭದಲ್ಲಿ ನಿಖರವಾಗಿ ಪತ್ತೆಹಚ್ಚುವ ಕೆಲಸ ಆಗಬೇಕಿದೆ.